Breaking News

ಸಮಸ್ಯೆಗೆ ಸ್ಪಂದಿಸುವವರನ್ನು ಆಯ್ಕೆ ಮಾಡಿ; ಹೊಣಕೊಟ್ಟು ಮರಳು ಮಾಡುವವರನ್ನಲ್ಲ : ಸತೀಶ್ ಜಾರಕಿಹೊಳಿ

Spread the love

ಖಾನಾಪುರ: ಕಳೆದ ಬಾರಿ ಗೆಲ್ಲಲ್ಲಿಕ್ಕೆ ಬೇಕಾದ ಮತಗಳಿದ್ರು ಕೂಡಾ ಸೋತಿದ್ದೇವೆ. ಹೀಗಾಗಿ ಆಗಾದ ಅನುಭವ ಈ ಚುನಾವಣೆಯಲ್ಲಿ ಆಗದಿರಿಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಮುಖಂಡರಿಗೆ ತಿಳಿಸಿದರು.

ಖಾನಾಪುರ ಮತಕ್ಷೇತ್ರದ ಬೀಡಿ ಗ್ರಾಮದಲ್ಲಿ ಗುರುವಾರ ನಡೆದ ವಿವಿಧ ಗ್ರಾಮ ಪಂಚಾಯ್ತಿ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಸೋಲು ಅನುಭವಿಸಿದ್ದೇವೆ. ಆ ಅನುಭವ ಈ ಚುನಾವಣೆಯಲ್ಲಿ ಆಗದಿರಲಿ ಎಂಬ ಉದ್ದೇಶದಿಂದ ಎಲ್ಲ ಕಡೆಗಳಲ್ಲಿ ತೆರಳಿ ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಯಾರೋ ರಾತ್ರೋರಾತ್ರಿ ಬಂದು ಆಮಿಷ ನೀಡುತ್ತಾರೆ. ಆದರೆ ಅದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಅದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹೆಚ್ಚು ಮತಗಳಿಂದ ಗೆಲ್ಲಿಸಿದ್ದೇ ಆದ್ರೆ, ಕ್ಷೇತ್ರದ ಜನರು ವಿಶ್ವಾಸ ಇಟ್ಟಿದ್ದಾರೆಂದು ಶಾಸಕರು ಉತ್ಸಾಹದಿಂದ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.

ಕೆಲವರು ಬರುತ್ತಾರೆ, ತಾತ್ಕಾಲಿಕವಾಗಿ ಆಯ್ಕೆ ಆಗಲಿಕ್ಕೆ. ಕಳೆದ ಬಾರಿ ಹಿಂದೆ ಮುಂದೆ ಯೋಚಿಸದೆ ಜಿಲ್ಲೆಯ ಜನ ವಿವೇಕರಾವ್ ಪಾಟೀಲ ಅವರನ್ನು ಬೆಂಬಲಿಸಿದ ಪರಿಣಾಮ ನೀವು ಅವರನ್ನು ನೋಡಲು ಕೂಡಾ ಆಗಿಲ್ಲ. ಯಾವುದೇ ಪಂಚಾಯ್ತಿಗಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿದ್ದನ್ನು ನೋಡಿಲ್ಲ ಎಂದು ಲೇವಡಿ ಮಾಡಿದರು.

ಕ್ಷೇತ್ರದಲ್ಲಿ ರಸ್ತೆ, ಅಂಗನವಾಡಿ, ಶಾಲಾ ಕಟ್ಟಡ ನಿರ್ಮಾಣ, ಕೆರೆ ತುಂಬಿಸುವ ಕಾರ್ಯ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸವನ್ನು ಸ್ಥಳೀಯ ಶಾಸಕರು ಮಾಡಿದ್ದಾರೆ. ವಿಧಾನಸೌಧದಲ್ಲಿ ನಿಮ್ಮ ಪರವಾಗಿ ಧ್ವನಿ ಎತ್ತಿದವರು, ನಿಮ್ಮ ಸಮಸ್ಯೆಗೆ ಸ್ಪಂಧಿಸಿದವರನ್ನು ಆಯ್ಕೆ ಮಾಡಬೇಕು ವಿನಹ, ಹಣ ಕೊಟ್ಟು ಮರಳು ಮಾಡುವವರನ್ನ ಅಲ್ಲ ಎಂದು ಎದುರಾಳಿಗಳನ್ನು ತಿವಿದರು.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ