ಚಿಕ್ಕಮಗಳೂರು: ಕೆರೆ ಹಾವೊಂದು ಅತ್ತಿಂದಿತ್ತ ಓಡಾಡಿ ಸಿಬ್ಬಂದಿಗಳಲ್ಲಿ ಆತಂಕ ಹುಟ್ಟಿಸಿದ್ದ ಪ್ರಸಂಗ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಆವರಣದ ಮಧ್ಯದಲ್ಲಿ ಗಾಂಧಿ ಪ್ರತಿಮೆ ಸುತ್ತಲೂ ಇರೋ ಹುಲ್ಲು ಹಾಸಿನ ಮೇಲೆ ಕೆರೆ ಹಾವನ್ನ ಕಂಡು ಸಿಬ್ಬಂದಿಗಳು ಹಾಗೂ ಕೆಲಸಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಜನಸಾಮಾನ್ಯರು ಗಾಬರಿಯಾಗಿದ್ದರು.
ಒಂದು ಆಫೀಸಿನಿಂದ ಮತ್ತೊಂದು ಆಫೀಸ್ ಗೆ ಹೋಗುವಾಗ ಹಾವನ್ನ ಕಂಡ ಸಿಬ್ಬಂದಿಗಳು ಗಾಬರಿಗೊಂಡಿದ್ದರು. ಅತ್ಯಂತ ವೇಗವಾಗಿ ಓಡುವ ಕೆರೆ ಹಾವು ಸಿಬ್ಬಂದಿಗಳ ಜೊತೆ ಕಣ್ಣಾಮುಚ್ಚಾಲೆ ಆಟವಾಡ್ತ ನೋಡ-ನೋಡ್ತಿದ್ದಂತೆ ಮಾಯವಾಗ್ತಿತ್ತು.
ಇದರಿಂದ ಸಿಬ್ಬಂದಿಗಳ ಭಯ ಮತ್ತಷ್ಟು ಹೆಚ್ಚಾಗಿತ್ತು. ಸಿಬ್ಬಂದಿಗಳ ಜೊತೆ ಕಣ್ಣಾಮುಚ್ಚಾಲೆ ಆಟವಾಡಿದ ಕೆರೆ ಹಾವು ಬಳಿಕ ಪೈಪ್ ಒಳಗೆ ಸೇರಿತ್ತು.
ಸೆರೆ ಹಿಡಿದ ಹಾವನ್ನ ಕೈಯಲ್ಲಿ ಹಿಡಿದು ಖುಷಿ ಪಟ್ಟ ಸಿಬ್ಬಂದಿ
ಕೂಡಲೇ ಡಿಸಿ ಕಚೇರಿ ಸಿಬ್ಬಂದಿಗಳು, ಸ್ನೇಕ್ ನರೇಶ್ ಗೆ ವಿಷಯ ಮುಟ್ಟಿಸಿದ್ರು. ಸ್ಥಳಕ್ಕೆ ಬಂದ ಉರಗಪ್ರಿಯ ಸ್ನೇಕ್ ನರೇಶ್ ಅರ್ಧ ಗಂಟೆಗಳ ಕಾಲ ಹಾವನ್ನ ಹುಡುಕಿದರು. ಕೊನೆಗೆ ಪೈಪನ್ನ ಮೇಲೆತ್ತುತ್ತಿದ್ದಂತೆ ನಿಧಾನವಾಗಿ ಹೊರ ಬಂದ ಹಾವನ್ನ ಕಂಡು ನರೇಶ್, ಕೆರೆ ಹಾವು ಏನೂ ಮಾಡಲ್ಲ. ಅದಕ್ಕೆ ನಿಮಗಿಂತ ಭಯ ಹೆಚ್ಚು ಎಂದು ತನ್ನ ಮೈಮೇಲೆ ಕೆರೆ ಹಾವನ್ನು ಹಾಕಿಕೊಂಡರು.
ಆ ಬಳಿಕ ಹಾವನ್ನ ನೋಡಿ ಗಾಬರಿಯಾಗಿದ್ದ ಸಿಬ್ಬಂದಿಗಳ ಕೈಯಲ್ಲೂ ಅದೇ ಹಾವನ್ನ ಹಿಡಿಸಿದರು. ಭಯದಲ್ಲೇ ಹಾವನ್ನ ಹಿಡಿದ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳು ಕೊನೆಗೆ ಸಂತೋಷಪಟ್ರು. ಉರಗ ಪ್ರಿಯ ನರೇಶ್ ಈವರೆಗೆ ಸುಮಾರು 35000ಕ್ಕೂ ಅಧಿಕ ಹಾವುಗಳನ್ನ ಸೆರೆ ಹಿಡಿದಿದ್ದಾರೆ.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??
ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ: 8123967576
Laxmi News