ಬೆಂಗಳೂರು: ವಿದ್ಯಾಗಮ ಯೋಜನೆಯಿಂದ ಸೋಂಕು ಬಂದಿದ್ದರೆ ಅದನ್ನು ನಿಲ್ಲಿಸೋಣ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮಗೆ ಮಕ್ಕಳು, ಶಿಕ್ಷಕರ ಆರೋಗ್ಯ ಮುಖ್ಯವಾಗಿದೆ ಎಂದು ಆತಂಕದಲ್ಲಿದ್ದ ಶಿಕ್ಷಕರು, ಪೋಷಕರಿಗೆ ಸಮಾಧಾನದ ಸುದ್ದಿ ನೀಡಿದ್ದಾರೆ.
ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾಗಮ ಯೋಜನೆಯನ್ನು ನಿಲ್ಲಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ವಿದ್ಯಾಗಮ ಯೋಜನೆ ಕುರಿತಾಗಿ ಸರ್ಕಾರ ಚಿಂತನೆ ನಡೆಸಲಿದೆ. ತಜ್ಞರ ಸಮಿತಿ ವರದಿ ಬಳಿಕ ಯೋಜನೆ ಮುಂದುವರೆಸುವ, ನಿಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ವಿದ್ಯಾಗಮ ಯೋಜನೆ ನಿಲ್ಲಿಸುವುದರಿಂರಿಂದ ಸಮಸ್ಯೆಯಾಗುವುದಿಲ್ಲ.
ಮಕ್ಕಳು, ಶಿಕ್ಷಕರಿಗೆ ವಿದ್ಯಾಗಮ ಯೋಜನೆಯಿಂದ ಸೋಂಕು ಬಂದಿದೆಯೇ? ಇಲ್ಲವೆ? ಎಂಬ ಬಗ್ಗೆ ಅಧಿಕಾರಿಗಳ ವರದಿ ನಂತರ ತೀರ್ಮಾನ ಮಾಡುತ್ತೇವೆ. ತಜ್ಞರ ಸಮಿತಿ ರಚನೆ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.