ಬೆಳಗಾವಿ :ಅತ್ತ ಕೊರೊನಾ ಬಿಟ್ಟು ಬಿಡದೇ ಕಾಡುತ್ತಿದೆ. ಇತ್ತ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಜನ ಇದ್ದಾರೆ. ಇದರ ನಡುವೆ ಒಂದೊಂದೆ ಬೆಲೆ ಏರಿಕೆಗಳು ಜನರ ಕೈ ಸುಡುತ್ತಿವೆ. ಇದರ ಮಧ್ಯೆ ತರಕಾರಿ ಬೆಲೆಗಳು ಗಗನಕ್ಕೇರುತ್ತಿವೆ. ಮೊದಲೇ ದುಡಿಮೆ ಇಲ್ಲದೆ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತಿರುವ ಬೆನ್ನಲ್ಲೇ ಇದೀಗ ತರಕಾರಿಗಳ ಬೆಲೆಗಳು ಗಗನಕ್ಕೇರಿರುವುದರಿಂದ ಜನ ತತ್ತರಿಸಿ ಹೋಗಿದ್ದಾರೆ.
ಹೌದು, ಉತ್ತರ ಕರ್ನಾಟಕದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ನಾಶವಾಗುತ್ತಿವೆ. ಹೀಗಾಗಿ ತರಕಾರಿಗಳ ಬೆಲೆ ಏರಿಕೆ ಉಂಟಾಗುತ್ತಿದೆ. ಇದರ ಮಧ್ಯೆ ಆಮದು ಮಾಡಿಕೊಳ್ಳುವ ವಸ್ತುಗಳಲ್ಲಿಯೂ ಕೊರತೆ ಉಂಟಾಗುತ್ತಿರೊದ್ರಿಂದ ಬೆಲೆ ಏರಿಕೆಯಾಗುತ್ತಿದೆ. ಈರುಳ್ಳಿ, ಟಮೋಟೋ, ಬೀನ್ಸ್, ಕ್ಯಾರೆಟ್ ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ. ಬೆಲೆ ಏರಿಕೆ ಬಡವರ ಇಂದಿನ ಪರಿಸ್ಥಿತಿಗೆ ಮತ್ತಷ್ಟು ಬರೆ ಇಟ್ಟಂತಾಗಿದೆ.
ಇನ್ನು ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗುತ್ತಿದೆ.
ಒಟ್ನಲ್ಲಿ ಕೊರೊನಾ ಒಂದು ಕಡೆ ಜೀವನ ಬೀದಿಗೆ ಬೀಳುವ ಹಂತಕ್ಕೆ ತೆಗೆದುಕೊಂಡು ಹೋಗಿದ್ದರೆ, ಮಳೆರಾಯ ಕೂಡ ಬಡವರ ಜೀವನವನ್ನು ಬೀದಿಗೆ ತಂದು ನಿಲ್ಲಿಸುತ್ತಿದೆ. ಹೀಗೆ ಬೆಲೆ ಏರಿಕೆ ಮುಂದುವರೆದರೆ ಹಸಿವಿನಿಂದಲೇ ಜನ ಸಾಯುವ ಪರಿಸ್ಥಿತಿಗೂ ತಲುಪಬಹುದು.