Breaking News

ಚಾರ್ಮಾಡಿಯಲ್ಲಿ ಕಾರ್ ಪಲ್ಟಿ- ಐವರು ಪ್ರಾಣಾಪಾಯದಿಂದ ಪಾರು

Spread the love

ಚಿಕ್ಕಮಗಳೂರು: ರಸ್ತೆಯಲ್ಲಿ ತೀವ್ರ ಮಂಜು ಕವಿದಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಶಿಫ್ಟ್ ಕಾರು ಪಲ್ಟಿಯಾಗಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ಭಾರೀ ಪ್ರಮಾಣದ ಮಂಜು ಕವಿದಿದ್ದ ಕಾರಣ ಚಾರ್ಮಾಡಿ ಘಾಟಿಯ ಸೋಮನಕಾಡು ಎಂಬಲ್ಲಿ ಈ ಅಪಘಾತ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು ಜಲಪಾತದತ್ತ ಮುನ್ನಗ್ಗಿ ಮುಗುಚಿಕೊಂಡು ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.ದಾವಣಗೆರೆ ಮೂಲದ ಶಿಫ್ಟ್ ಕಾರಿನಲ್ಲಿ ಐವರು ಚಾರ್ಮಾಡಿ ಘಾಟ್ ಮುಖಾಂತರ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಐವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ಜಲಪಾತದ ಬಳಿ ಮಗುಚಿ ಬಿದ್ದ ಕಾರನ್ನ ಸ್ಥಳಿಯರು ಹಾಗೂ ಬಣಕಲ್ ಪೊಲೀಸರು ಸಹಕಾರದೊಂದಿಗೆ ಹಿಟಾಚಿ ಮೂಲಕ ಮೇಲೆತ್ತಿದ್ದಾರೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಜಲಜೀವನ್​​​ ಮಿಷನ್​​​ ಯೋಜನೆ ಅನುಷ್ಠಾನದಲ್ಲಿನ ತಪ್ಪುಗಳ ಬಗ್ಗೆ ತನಿಖೆ ?

Spread the loveಬೆಂಗಳೂರು: ತುಮಕೂರು ಜಿಲ್ಲೆಯ ಜಲಜೀವನ್​​ ಮಿಷನ್​​ ಯೋಜನೆ ಅನುಷ್ಠಾನದಲ್ಲಿ ನಾನಾ ತಪ್ಪುಗಳಾಗಿದ್ದು, ಸರ್ಕಾರ ತನಿಖೆ ನಡೆಸಿ ವರದಿ ನೀಡಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ