Breaking News

ಲಿಂಗ ವಿವಾಹ.. ಇಂದು ಸುಪ್ರೀಂ ಕೋರ್ಟ್​ನಿಂದ ಮಹತ್ವದ ತೀರ್ಪು

Spread the love

ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಕಾಯ್ದಿರಿಸಿರುವ ತನ್ನ ಬಹುನಿರೀಕ್ಷಿತ ತೀರ್ಪನ್ನು ಇಂದು ಪ್ರಕಟಿಸಲಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಮ್ಯಾರಥಾನ್ ವಿಚಾರಣೆ ಪೂರ್ಣಗೊಳಿಸಿದ ನಂತರ ಮೇ 11 ರಂದು ತೀರ್ಪು ಕಾಯ್ದಿರಿಸಿತ್ತು.

ಮುುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪಂಚಪೀಠ ಈ ಕುರಿತ ತೀರ್ಪು ನೀಡಲಿದೆ. ಕೋರ್ಟ್​ನ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂದು ಕೋರಿ 18 ಸಲಿಂಗಿ ದಂಪತಿಗಳು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ಕೋರ್ಟ್​, ಏಪ್ರಿಲ್ 18 ರಿಂದ ಆರಂಭಿಸಿತ್ತು. ಅರ್ಜಿದಾರರು ಮತ್ತು ಪ್ರತಿವಾದಿಗಳ ದೀರ್ಘ ವಾದ ಆಲಿಸಿದ ಕೋರ್ಟ್​ ಕಡೆಗೆ ಮೇ 11 ರಂದು ವಿಚಾರಣೆ ಪೂರ್ಣಗೊಳಿಸಿತ್ತು.

ಕೋರ್ಟ್​ನಲ್ಲಿ ವಾದಗಳ ಸಂದರ್ಭದಲ್ಲಿ, ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದು, ಯಾವುದೇ ಸಾಂವಿಧಾನಿಕ ಘೋಷಣೆ ಹೊರಡಿಸುವುದು ಸಾಮಾಜಿಕ ಜೀವನದಲ್ಲಿ ಸರಿಯಾದ ಕ್ರಮವಾಗುವುದಿಲ್ಲ. ಇದು ಈಗಿನ ವಿವಾಹ ಪದ್ಧತಿಯನ್ನೇ ಬುಡಮೇಲು ಮಾಡಲಿದೆ ಎಂದು ಕೇಂದ್ರ ಸರ್ಕಾರ ಕೋರ್ಟ್‌ಗೆ ತಿಳಿಸಿತ್ತು. ಹಾಗೊಂದು ವೇಳೆ ಅವಕಾಶ ನೀಡಿದ್ದೇ ಆದಲ್ಲಿ ಮುಂದಾಗುವ ವಿದ್ಯಮಾನಗಳ ಬಗ್ಗೆ ಊಹಿಸಲೂ ಸಾಧ್ಯವಾಗುವುದಿಲ್ಲ. ಸಮಾಜದ ಮೇಲೆ ಕೆಟ್ಟ ಪರಿಣಾಮಗಳು ಬೀರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಆತಂಕ ವ್ಯಕ್ತಪಡಿಸಿತ್ತು.

ರಾಜ್ಯಗಳ ವಿರೋಧ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಕೆಲ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಬಗ್ಗೆ ಕೇಂದ್ರ ಸರ್ಕಾರ ಅಭಿಪ್ರಾಯ ಹಂಚಿಕೊಳ್ಳಲು ರಾಜಸ್ಥಾನ, ಆಂಧ್ರ ಪ್ರದೇಶ ಮತ್ತು ಅಸ್ಸೋಂ ಸೇರಿದಂತೆ 7 ರಾಜ್ಯ ಸರ್ಕಾರಗಳಿಗೆ ಕೋರಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಗಳು ಸಲಿಂಗ ವಿವಾಹಕ್ಕೆ ಅವಕಾಶ ನೀಡಕೂಡದು ಎಂದು ಹೇಳಿವೆ.

ಅರ್ಜಿದಾರರ ವಾದವೇನು?: ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರು, ಭಾರತವು ವಿವಾಹ ಆಧಾರಿತ ಸಂಸ್ಕೃತಿಯಾಗಿದೆ. ವಿಜಾತಿ ದಂಪತಿಗೆ ನೀಡಲಾಗುವ ಸ್ಥಾನಮಾನವನ್ನೇ ಸಲಿಂಗ ದಂಪತಿಗೆ ನೀಡಬೇಕು. ಆರ್ಥಿಕ, ಬ್ಯಾಂಕಿಂಗ್ ಹಾಗೂ ವಿಮಾ, ವೈದ್ಯಕೀಯ, ಜೀವವನ್ನು ಕೊನೆಗಾಣಿಸಿಕೊಳ್ಳುವಿಕೆ, ಪಿತ್ರಾರ್ಜಿತ ಹಾಗೂ ಉತ್ತರಾಧಿಕಾರ ವಿಷಯ, ದತ್ತು ಸ್ವೀಕಾರ ಮತ್ತು ಬಾಡಿಗೆ ತಾಯ್ತನದ ವಿಚಾರಗಳಲ್ಲೂ ಅಂಥದ್ದೇ ಅವಕಾಶ ಮಂಜೂರು ಮಾಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.

ಆದರೆ, ಸಲಿಂಗ ವಿವಾಹಕ್ಕೆ ವೈವಾಹಿಕ ಸ್ಥಾನಮಾನ ನೀಡುವುದರಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ರೂಢಿಗಳೊಂದಿಗೆ ಸಂಬಂಧ ಹೊಂದಿರುವ ಕಾನೂನಾತ್ಮಕ ತೊಡಕು ಎದುರಾಗಲಿದೆ ಎಂದು ವಾದ ಕೇಳಿಬಂದಿತ್ತು.


Spread the love

About Laxminews 24x7

Check Also

ಪ್ರಜಾಪ್ರಭುತ್ವ ಉಳಿವಿಗೆ ದೇಶದ ಜನ ಒಂದಾಗಿ: ಮಲ್ಲಿಕಾರ್ಜುನ ಖರ್ಗೆ

Spread the love ನವದೆಹಲಿ: ಚಳಿಗಾಲದ ಅಧಿವೇಶನದ ವೇಳೆ ಸಂಸತ್ತಿನ ಉಭಯ ಸದನಗಳಿಂದ 146 ಸಂಸದರನ್ನು ಅಮಾನತುಗೊಳಿಸಲಾಗಿದೆ. ಇದು ಕೇಂದ್ರ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ