Breaking News

Daily Archives: ಮಾರ್ಚ್ 18, 2026

ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ನೀಡಬೇಕು

ಖಾನಾಪುರ: ದೇಶದ ಭವಿಷ್ಯ ಕಟ್ಟುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ನೀಡುವಂತೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಹೇಳಿದರು. ಯಮಕನಮರಡಿ ಮತಕ್ಷೇತ್ರದ ಅಲದಾಳ ಗ್ರಾಮದಲ್ಲಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ೨೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸಚಿವ ಸತೀಶ ಜಾರಕಿಹೊಳಿ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು  ಆದ್ಯತೆ ನೀಡಿದ್ದಾರೆ. ಪಾಲಕರು ಸರ್ಕಾರಿ ಸೌಲಭ್ಯಗಳ ಸದುಪಯೋಗ …

Read More »

ಚುನಾವಣೆ ಎದುರಿಸಲು ಪಕ್ಷವನ್ನು ತಳಮಟ್ಟದಿಂದಲೇ ಸಂಘಟಿಸಬೇಕು

ಬೆಳಗಾವಿ: ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಚುನಾವಣೆ ಎದುರಿಸಲು ಪಕ್ಷವನ್ನು ತಳಮಟ್ಟದಿಂದಲೇ ಸಂಘಟಿಸಬೇಕು ಎಂದು ಕರ್ನಾಟಕ ಕಾಂಗ್ರೆಸ್ ಪ್ರದೇಶ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ  ವಿನಯಕುಮಾರ ಸೊರಕೆ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಳಗಾವಿ, ಗ್ರಾಮೀಣ ಜಿಲ್ಲಾ ಪ್ರಚಾರ ಸಮಿತಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದೆ ಎಂದು ನಿರ್ಲಕ್ಷಿಸಬಾರದು. ಪದಾಧಿಕಾರಿಗಳು, ಕಾರ್ಯಕರ್ತರು ಅಧಿಕಾರದ ಬದಲಾಗಿ ಪಕ್ಷಕ್ಕಾಗಿ ದುಡಿಯುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು …

Read More »

ಬೆಳಗಾವಿ:15 ದಿನ ಮಗು ಅನುಮಾಸ್ಪದ ಸಾವು:ತಂದೆಯೇ ಮಗುವಿಗೆ ವಿಷ ಪ್ರಾಶನ ಶಂಕೆ

ಬೆಳಗಾವಿ: 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಏಕಾಏಕಿ ಸಾವನ್ನಪ್ಪಿದ್ದು, ತಂದೆ ಮೇಲೆ ಅನುಮಾನ ವ್ಯಕ್ತವಾಗಿದೆ. ಬೆಳಗಾವಿ  ತಾಲೂಕಿನ ಉಕ್ಕಡ ಗ್ರಾಮದಲ್ಲಿ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಪ್ರಿಯಾಂಕಾ ಇಂದು (ಮಾರ್ಚ್ 17) ಏಕಾಏಕಿ ಸಾವನ್ನಪ್ಪಿದ್ದು, ತಂದೆಯೇ ಮಗುವಿಗೆ ವಿಷ ಪ್ರಾಶನ ಮಾಡಿರುವ ಆರೋಪ ಕೇಳಿಬಂದಿದೆ. ಬಿಮ್ಸ್ ಆಸ್ಪತ್ರೆ ಮುಂದೆ ಮಗುವಿನ ಶವವಿಟ್ಟುಕೊಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮತ್ತೊಂದೆಡೆ ಮಗುವಿನ ತಂದೆ ಭೀಮರಾಯ ತಲೆಮರೆಸಿಕೊಂಡಿದ್ದಾನೆ. ಬಿಮ್ಸ್ ಆಸ್ಪತ್ರೆಗೆ ಡಿಸಿಪಿ …

Read More »

ಉತ್ತರ ಕೊಡದ ಇಲಾಖೆಗಳು – ಸಚಿವರಿಗೆ ಸಿಎಂ ಪತ್ರ, ಖಡಕ್ ವಾರ್ನಿಂಗ್, ವಿಧಾನಸಭೆಯಲ್ಲಿ ಪಟ್ಟಿ ಓದಿದ ಸ್ಪೀಕರ್

ಬೆಂಗಳೂರು: ಸ್ಪೀಕರ್ ಖಾದರ್  ಖದರ್‌ಗೆ ಸರ್ಕಾರ ಬೆಚ್ಚಿಬಿದ್ದಿದೆ. ಸ್ಪೀಕರ್ ಸಭಾತ್ಯಾಗದ ಅಪರೂಪದ ಘಟನೆಯಿಂದ ಸರ್ಕಾರಕ್ಕೆ ಮುಜುಗರ ಆಗಿದೆ. ಹಾಗಾಗಿಯೇ ತಮ್ಮದೇ ಸಂಪುಟದ ಸಚಿವರಿಗೂ ಸಿಎಂ ಪತ್ರ ಬರೆದು ವಾರ್ನಿಂಗ್ ಮಾಡಿದ್ದಾರೆ. ಸರ್ಕಾರಕ್ಕೆ ಮುಜಗರ, ಶಾಸಕರ ಹಕ್ಕಿಗೆ ಚ್ಯುತಿ ಆಗಿದೆ ಎಂದು ಖಾರವಾಗಿ ಪತ್ರ ಬರೆದಿದ್ದಾರೆ. ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಸದನದಲ್ಲಿ ಉತ್ತರಿಸಲು ಬಾಕಿ ಇರುವ ಪ್ರಶ್ನೆಗಳಿಗೆ ಉತ್ತರ ಕಳುಹಿಸಿಲ್ಲ. ಇದುವರೆಗೂ ಉತ್ತರ ಕಳುಹಿಸದೇ ಇರುವುದು ಶಾಸಕರುಗಳಿಗೆ ಸದನದಲ್ಲಿ ಅನಾನುಕೂಲ ಆಗಿದೆ. …

Read More »

ಬೆಳಗಾವಿಯಲ್ಲಿ ಐಟಿ, ಸೆಮಿಕಂಡಕ್ಟರ್ ಪಾರ್ಕ್‌ ಸ್ಥಾಪಿಸಲು ಕ್ರಮ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ರಾಜ್ಯದ ಎರಡನೇ ರಾಜಧಾನಿಯೆಂದೇ ಘೋಷಣೆಗೊಂಡಿರುವ ಹಾಗೂ ರಾಜ್ಯದ ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ  ಐ.ಟಿ ಪಾರ್ಕ್ , ಸೆಮಿಕಂಡಕ್ಟರ್ ಪಾರ್ಕ್‌ಗಳನ್ನು  ನಿರ್ಮಿಸಿ ಅಭಿವೃದ್ಧಿ ಪರ ರಾಜ್ಯವನ್ನಾಗಿ ಮಾಡುವ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಸರ್ಕಾರಕ್ಕೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ  ಅವರು ತಿಳಿಸಿದರು. ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ವಿಧಾನಸಭಾ ಸದಸ್ಯರಾದ ಅಭಯ್‌ …

Read More »

SSLC ಪರೀಕ್ಷೆಗೆ ಹಾಜರಾಗುತ್ತಿರುವ ಮಕ್ಕಳಿಗೆ ಶುಭಕೋರಿದ ಸಿಎಂ

ಬೆಂಗಳೂರು: 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.18ರಿಂದ ಪ್ರಾರಂಭವಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಶುಭಾಶಯ ಕೋರಿದರು. ಪ್ರಸ್ತುತ ಸಾಲಿನಲ್ಲಿ 8,65,968 ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ  ಹಾಜರಾಗುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದ್ದು, ಮೂರು ಹಂತದಲ್ಲಿ ಪರೀಕ್ಷೆಗಳು ನಡೆಯುತ್ತವೆ. ಒಂದು ವೇಳೆ ಮೊದಲ ಹಂತದ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾಗ್ಯೂ ಎರಡನೇ ಹಂತ, ಮೂರನೇ ಹಂತದಲ್ಲಿ ಪರೀಕ್ಷೆಗೆ ಅವಕಾಶ ಇರುವುದರಿಂದ ಯಾವುದೇ ವಿದ್ಯಾರ್ಥಿಗಳು ಆತಂಕಗೊಳ್ಳದೇ ಪರೀಕ್ಷೆಯನ್ನು ಎದುರಿಸುವಂತೆ …

Read More »

ವ್ಯಕ್ತಿಯ ಸಜೀವ ದಹನ – ಇಬ್ಬರಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ: ವ್ಯಕ್ತಿಯ ಮೇಲೆ ಪೆಟ್ರೋಲ್‌ ಎರಚಿ ಬೆಂಕಿ ಹಚ್ಚಿ ಕೊಂದಿದ್ದ ಇಬ್ಬರು ಅಪರಾಧಿಗಳಿಗೆ ಶಿವಮೊಗ್ಗ  ನ್ಯಾಯಾಲಯ  ಜೀವಾವಧಿ ಶಿಕ್ಷೆ ವಿಧಿಸಿದೆ. ಶಿವಮೊಗ್ಗ ತಾಲೂಕಿನ ಬೆಳಲಕಟ್ಟೆ ಗ್ರಾಮದ ಮಹೇಶಪ್ಪ ಮತ್ತು ಅಪರಾಧಿಗಳಾದ ಕುಮಾರ್ (57) ಹಾಗೂ ಕಾರ್ತಿಕ್ (28) ನಡುವೆ ಜಮೀನಿನ ವಿಚಾರವಾಗಿ ಈ ಹಿಂದೆ ಗಲಾಟೆಗಳು ನಡೆದಿದ್ದವು. ಇದೇ ದ್ವೇಷದ ಹಿನ್ನೆಲೆಯಲ್ಲಿ 03-12-2023ರಂದು ಇಬ್ಬರು ಸೇರಿ ಹನಸವಾಡಿ ಸರ್ಕಲ್ ಬಳಿ ಹೊಂಚು ಹಾಕಿ ಕುಳಿತಿದ್ದರು. ಈ ವೇಳೆ ಸ್ಕೂಟಿಯಲ್ಲಿ ಬರುತ್ತಿದ್ದ …

Read More »

ದರ್ಶನ್ ಒಳಸಂದರ್ಶನಕ್ಕೆ ಕೋರ್ಟ್ ಅಸ್ತು

ಬೆಂಗಳೂರು: ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಳಸಂದರ್ಶನಕ್ಕೆ ಕೋರ್ಟ್ ಅನುಮತಿ ಅಂದಿದ್ದು, ಅಂತಿಮ ನಿರ್ಧಾರ ಜೈಲು ಅಧೀಕ್ಷಕರಿಗೆ ಬಿಟ್ಟಿದೆ. ಜೈಲ್ ಮ್ಯಾನ್ಯುಯಲ್‌ನಲ್ಲಿ ಒಳಸಂದರ್ಶನಕ್ಕೆ ಅವಕಾಶ ಇದ್ರೆ ನೀಡುವಂತೆ ಆದೇಶ ನೀಡಿದ್ದು, ದರ್ಶನ್ ಕುಟುಂಬಸ್ಥರ ಜೊತೆ ಒಳಸಂದರ್ಶನ ನಡೆಸಬಹುದಾ ಎನ್ನುವ ಪ್ರಶ್ನೆ ಹುಟ್ಟಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದರ್ಶನ್‌ಗೆ ಜೈಲಿನ ಒಳಸಂದರ್ಶನಕ್ಕೆ 57ನೇ ಸೆಷನ್ಸ್ ಕೋರ್ಟ್ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ, ಈ ಸಂಬಂಧ ಅಂತಿಮ ನಿರ್ಧಾರ …

Read More »

ಬೆಳಗಾವಿ ಲೋಕಸಭಾ ಕ್ಷೇತ್ರದ 28 ಶಾಲೆಗಳು ಕೇಂದ್ರದ ‘ಪಿಎಂ-ಶ್ರೀ’ ಯೋಜನೆಗೆ ಆಯ್ಕೆ – ಸಂಸದ ಈರಣ್ಣ ಕಡಾಡಿ

ಮೂಡಲಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಪಿಎಂ-ಶ್ರೀ’ ಯೋಜನೆಯಡಿ ಬೆಳಗಾವಿ ಲೋಕಸಭಾ ಕ್ಷೇತ್ರದ 21 ಪ್ರಾಥಮಿಕ, 6 ಪ್ರೌಢ ಶಾಲೆಗಳು ಮತ್ತು 1 ಪದವಿ ಪೂರ್ವ ಸರ್ಕಾರಿ ಶಾಲೆಗಳನ್ನು ಅತ್ಯಾಧುನಿಕ ಹಾಗೂ ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಶಿಕ್ಷಣ ಸಚಿವಾಲಯವು ಆಯ್ಕೆ ಮಾಡಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ತಿಳಿಸಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪಿಎಂ-ಶ್ರೀ’ ಯೋಜನೆಯ ಅನುಷ್ಠಾನದ …

Read More »

ರಾಜ್ಯದಲ್ಲಿ ಮುಂದುವರಿದ ಆಲಿಕಲ್ಲು ಮಳೆಯಬ್ಬರ

ಬೆಂಗಳೂರು: ರಾಜ್ಯದ ಹಲವೆಡೆ ಇಂದೂ ಕೂಡ ಆಲಿಕಲ್ಲು ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ಒಂದು ಗಂಟೆಗೂ ಅಧಿಕ ಹೊತ್ತು ಸುರಿದ ಅಕಾಲಿಕ ಭಾರಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಅಲ್ಲಲ್ಲಿ ಕಾಶ್ಮೀರದಂತ ದೃಶ್ಯ ಕಂಡಿದೆ. ಕಲಘಟಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪಾರ ಮಳೆಯಾಗಿದ್ದು, ಕಾಶ್ಮೀರದಂತ ದೃಶ್ಯ ಕಂಡಿದೆ. ಹುಬ್ಬಳ್ಳಿ ನಗರ ಗೋಕುಲ ರಸ್ತೆಯಲ್ಲಿರುವ ಅರ್ಬನ್ ಓಯಸಿಸ್ ಮಾಲ್‌ನ ಮೇಲ್ಛಾವಣಿ ಕುಸಿದು ಬಿದ್ದಿದೆ. ಭಯದಿಂದ ಗ್ರಾಹಕರು ಮತ್ತು ಮಳಿಗೆಗಳ ವ್ಯಾಪಾರಿ, ಸಿಬ್ಬಂದಿ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ. …

Read More »