Breaking News

Daily Archives: ನವೆಂಬರ್ 16, 2024

ಎರಡು ಪ್ರತ್ಯೇಕ ಬೈಕ್ ಅಪಘಾತ ಪ್ರಕರಣ; ಇಬ್ಬರ ಸಾವು

ಲಕ್ಷ್ಮೇಶ್ವರ: ಎರಡು ಪ್ರತ್ಯೇಕ ಬೈಕ್ ಅಪಘಾತ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಬಾಲಕ ತೀವ್ರವಾಗಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಪಟ್ಟಣದ ಹೊರವಲಯದಲ್ಲಿ ಬೈಕ್ ಸವಾರನೊಬ್ಬ ನೀರು ತರುವ ದೂಡುವ ಗಾಡಿಗೆ ಡಿಕ್ಕಿ ಹೊಡೆದು, ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಪರಿಣಾಮ ಬೈಕ್ ಸವಾರ ಲಕ್ಷ್ಮೇಶ್ವರ ಪಟ್ಟಣದ ಕಲ್ಮೇಶ ಶೇಖಪ್ಪ ಬೆಂಗೇರಿ (24) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.   ಇನ್ನೊಂದು ಬೈಕ್ ಅಪಘಾತ ಪ್ರಕರಣದಲ್ಲಿ ಸಮೀಪದ ಗೊಜನೂರ ಹತ್ತಿರ …

Read More »

ರಾಜ್ಯ ಸರ್ಕಾರ ನಿಷ್ಕ್ರೀಯ: ಸಿ.ಸಿ.ಪಾಟೀಲ

ನರಗುಂದ: ‘ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರೀಯವಾಗಿದೆ. ಮುಡಾ ಹಗರಣ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯಿಂದ ₹50 ಕೋಟಿಗೆ ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಸಂಚು ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದು ಸರಿಯಲ್ಲ. ಇದು ನಿಜವಿದ್ದರೆ ತಮ್ಮದೇ ಸರ್ಕಾರವಿದೆ, ತನಿಖೆ ನಡೆಸಲಿ’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.   ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಶನಿವಾರ ನಡೆದ ರೈತ ಸಂಪರ್ಕ ಕೇಂದ್ರದ ಗೋದಾಮು ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಬಳಿಕ …

Read More »

ಕಾಗವಾಡ ಮತಕ್ಷೇತ್ರದಲ್ಲಿ ಶಾಸಕ ರಾಜು ಕಾಗೆ ಇವರಿಂದ ಸುಮಾರು ೪ ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿದ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ

ಕಾಗವಾಡ :ಕಾಗವಾಡ ಮತಕ್ಷೇತ್ರದ ಜೂಗುಳ, ಉಗಾರ ಬುದ್ರುಕ, ಮೋಳೆ ಗ್ರಾಮಗಳಲ್ಲಿ ಚರಂಡಿಯ ಅಶುದ್ದ ನೀರು ಸ್ವಚ್ಛಗೋಳಿಸುವ ಆನಲೈಸ್ ಚರಂಡಿ ಯೋಜನೆ ಮುಖ್ಯ ಮಂತ್ರಿಗಳ ಎಸ್.ಡಿ.ಎಮ್.ಯೋಜನೆ ಅಡಿಯಲ್ಲಿ ೨ ಕೋಟಿ ೪೩ ಲಕ್ಷ ರೂಪಾಯಿ ಮತ್ತು ಜೂಗುಳ ಕಾಗವಾಡ, ಮೋಳವಾಡ ಗ್ರಾಮದ ಶ್ರೀ ಲಕ್ಷಿö್ಮÃ ಮಂದಿರದ ರಸ್ತೆ ಅಭಿವೃದ್ದಿಗೊಳಿಸಲು ೧ ಕೋಟಿ ೬೦ ಲಕ್ಷ ಸುಮರು ೪ ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿಗಳು ಕೈಗೊಂಡಿದ್ದು ಇದರ ಭೂಮಿ ಪೂಜೆ ಶಾಸಕ ರಾಜು …

Read More »

ಮತ್ತೆ ಲಂಪಿ ಸ್ಕಿನ್ ಡಿಸಿಜ್ ಕಂಟಕ;ಸಾವಿರಾರು ಜಾನುವಾರುಗಳ ಸಾವಿಗೆ ಪರಿಹಾರ ಸಿಕ್ಕಿದ್ದೆಷ್ಟು

  ಅಥಣಿ :ತಾಲೂಕಿನಲ್ಲಿ ಒಕ್ಕರಿಸಿದ ಲಂಪಿ ಸ್ಕಿನ್ ಡಿಸಿಜ್ ಮಹಾಮಾರಿಯಿಂದ ಸಾಲು ಸಾಲು ಜಾರುವರುಗಳ ಮಾರಣ ಹೋಮ ನಡೆಯುತ್ತಿದೆ.ಆದ್ರೆ ಪಶು ಇಲಾಖೆ ವೈದ್ಯಧಿಕಾರಿಗಳು ಮಾತ್ರ ಕಾಟಾಚಾರದ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಜಾನುವಾರುಗಳ ರೋಗ ಹತೋಟಿಗೆ ಬರದೆ ಸೂಕ್ತ ಚಿಕಿತ್ಸೆ ಸಿಗದೆ ದಿನನಿತ್ಯ ಜಾನುವಾರುಗಳು ಸಾವನಪ್ಪುತ್ತಿವೆ.ತಾಲೂಕಿನ ಪ್ರತಿ ಗ್ರಾಮಗಳಲ್ಲು ನೂರಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಮತ್ತೆ ಈಗ ಗಡಿ ಗ್ರಾಮಗಳಲ್ಲಿ ಮಹಾಮಾರಿ ಲಂಪಿ ಬೇನೆಯು ಮರಣ ಮೃದಂಗ ಬಾರಿಸುತ್ತಿದೆ. …

Read More »

ಯುವಕ,ಯುವತಿಯರಿಗೆ ಉದ್ಯೋಗ ಮಾಡುವ ಮನಸ್ಸು ಇರಬೇಕು – ಚಂದ್ರಶೇಖರ ಮಹಾಸ್ವಾಮಿಗಳು.

ಹುಕ್ಕೇರಿ : ಯುವಕ,ಯುವತಿಯರಿಗೆ ಉದ್ಯೋಗ ಮಾಡುವ ಮನಸ್ಸು ಇರಬೇಕು – ಚಂದ್ರಶೇಖರ ಮಹಾಸ್ವಾಮಿಗಳು. ನಮ್ಮ ಯುವಕ, ಯುವತಿಯರಿಗೆ ಉದ್ಯೋಗ ಮಾಡುವ ಮನಸ್ಸು ಇರಬೇಕು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು. ಹುಕ್ಕೇರಿ ನಗರದ ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆ ,ಸಿ ಆರ್ ಶೇಟ್ಟಿ ಫೌಂಡೇಶನ್ ಮತ್ತು ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಹಾಗೂ ಹುಕ್ಕೇರಿ ಗೆಳೆಯರ ಬಳಗ ವತಿಯಿಂದ ಬೃಹತ್ ಉಚಿತ ಉದ್ಯೋಗ ಮೇಳವನ್ನು ಹುಕ್ಕೇರಿ …

Read More »

ಚಿಕ್ಕೋಡಿಯಲ್ಲಿ ವಿಜೃಂಭಣೆಯಿಂದ ಜರುಗಿದ ಮೇದಾರ ಕೇತಯ್ಯಾ ಜಯಂತಿ

ಚಿಕ್ಕೋಡಿಯಲ್ಲಿ ವಿಜೃಂಭಣೆಯಿಂದ ಜರುಗಿದ ಮೇದಾರ ಕೇತಯ್ಯಾ ಜಯಂತಿ ಚಿಕ್ಕೋಡಿ: ಪಟ್ಟಣದಲ್ಲಿ ಇವತ್ತು ಶಿವಶರಣ ಮೇದಾರ ಕೇತಯ್ಯಾನವರ 894 ನೇ ಜಯಂತೋತ್ಸವ ವಿಜೃಂಭಣೆಯಿಂದ ಜರುಗಿತು. ಪ್ರಾರಂಭದಲ್ಲಿ ಮೇದಾರ ಕೇತಯ್ಯ ಅವರ ಭಾವಚಿತ್ರದ ಮೆರವಣಿಗೆಯು ಸಕಲ ವಾದ್ಯ ಮೇಳದೊಂದಿಗೆ,ಸುಮಂಗಲಿಯರ ಕುಂಭದೊಂದಿಗೆ ಚಿಕ್ಕೋಡಿ ಪಟ್ಟಣದ್ಯಾಂತ ಜರುಗಿತು. ಮೇದಾರ ಕೇತಯ್ಯಾ ಭವನದಿಂದ ಪ್ರಾರಂಭವಾದ ಮೆರವಣಿಗೆಯು ಅಂಕಲಿಕೂಟ, ಗುರುವಾರ ಪೇಟ, ಪುರಸಭೆ, ಬಸವೇಶ್ವರ ವೃತ್ತದವರೆಗೆ ಅತ್ಯಂತ ವಿಜೃಂಭಣೆಯಿಂದ ಸಾಗಿತು. ಬಳಿಕ ಬಸವಣ್ಣನವರ ಹಾಗೂ ಮೇದಾರ ಕೇತಯ್ಯಾನವರ ಭಾವಚಿತ್ರಕ್ಕೆ …

Read More »

ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಸುಟ್ಟು ಭಸ್ಮವಾದ ಕಿರಾಣಿ ಅಂಗಡಿ;ಓರ್ವನಿಗೆ ಗಾಯ

ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಸುಟ್ಟು ಭಸ್ಮವಾದ ಕಿರಾಣಿ ಅಂಗಡಿ;ಓರ್ವನಿಗೆ ಗಾಯ ಅಥಣಿ :ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಿರಾಣಿ ಅಂಗಡಿ ಸುಟ್ಟು ಭಸ್ಮವಾದ ಘಟನೆ ಅಥಣಿ ತಾಲೂಕಿನ ಅಡಳ್ಳಿ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ನಂದಿಸಲು ಹೋದ ಇಬ್ಬರಿಗೆ ಗಾಯಗಳಾಗಿವೆ ಓರ್ವ ಬಾಲಕನಿಗೆ ಬೆಂಕಿ ತಿವ್ರತೆಗೆ ಸುಟ್ಟ ಗಾಯಗಳಾಗಿದ್ದು.ಅಪಾರ ಪ್ರಾಮಾನದ ವಸ್ತುಗಳು ನಾಶವಾಗಿವೆ.ಸುಭಾಸ್ ಮಹಾನಿಂಗ ಸೂರ್ಯವಂಶಿ ಮಾಲೀಕತ್ವದ ಅಪ್ಪಾಜಿ …

Read More »

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಪರಿಶಿಷ್ಟರನ್ನು ಸಮಾಜದ‌‌ ಮುನ್ನೆಲೆಗೆ ತರುವ ಕಾರ್ಯವಾಗಬೇಕು : ಪಿ.ಎಂ.ನರೇಂದ್ರ‌ಸ್ವಾಮಿ

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಪರಿಶಿಷ್ಟರನ್ನು ಸಮಾಜದ‌‌ ಮುನ್ನೆಲೆಗೆ ತರುವ ಕಾರ್ಯವಾಗಬೇಕು : ಪಿ.ಎಂ.ನರೇಂದ್ರ‌ಸ್ವಾಮಿ ಬೆಳಗಾವಿ: ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು, ದುರ್ಬಲ ವರ್ಗಕ್ಕೆ ಉತ್ತಮವಾದಂತಹ ಯೋಜನೆ ನಿರ್ಮಿಸುವುದರ ಮೂಲಕ ಪರಿಶಿಷ್ಟರನ್ನು ಸಮಾಜದ‌ ಮುನ್ನೆಲೆಗೆ ತರಬಹುದಾಗಿದೆ. ಅಧಿಕಾರಿಗಳು ಇದನ್ನು ಅರಿತುಕೊಂಡು ಶ್ರಮಿಸಬೇಕು ಎಂದು ಕರ್ನಾಟಕ ವಿಧಾನ ಮಂಡಳ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು …

Read More »

ಜಮೀರ್ ಹೇಳಿದ್ದು ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ- ಡಿಸಿಎಂ ಡಿ.ಕೆ. ಶಿವಕುಮಾರ್

ಕುಮಾರಸ್ವಾಮಿಯವರನ್ನು ಕರಿಯ ಎಂದು ಕರೆದ ಜಮೀರ್ ಅಹ್ಮದ್… ಜಮೀರ್ ಹೇಳಿದ್ದು ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ- ಡಿಸಿಎಂ ಡಿ.ಕೆ. ಶಿವಕುಮಾರ್ ಕುಮಾರಸ್ವಾಮಿಯವರನ್ನು ಕರಿಯ ಎಂದು ಕರೆದ ಜಮೀರ್ ಅಹ್ಮದ್… ಜಮೀರ್ ಹೇಳಿದ್ದು ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಚನ್ನಪಟ್ಟಣ ಉಪಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಕರಿಯ …

Read More »

ಹ್ಯಾಪಿ ಸ್ಕೂಲ್ ಯೋಜನೆ: ವಿದ್ಯಾರ್ಥಿಗಳಿಗೆ ಸೌಕರ್ಯ

ಗೋಕಾಕ: ಶಾಲೆಗಳು ದೇವಾಲಯಗಳಾಗಿದ್ದು, ಮಕ್ಕಳನ್ನು ದೇವರಂತೆ ಕಾಣಬೇಕು. ಅವರ ಸೇವೆ ಮಾಡುವುದು ಪುಣ್ಯದ ಕಾರ್ಯ ಎಂದು ಇನ್ನರ್‌ವ್ಹೀಲ್ ಸಂಸ್ಥೆಯ ಜಿಲ್ಲಾ ಪ್ರಾಂತಪಾಲೆ ಜ್ಯೋತಿ ದಾಸ್ ಹೇಳಿದರು. ಶುಕ್ರವಾರ ತಾಲ್ಲೂಕಿನ ದುಂಡಾನಟ್ಟಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನರವ್ಹೀಲ್ ಸಂಸ್ಥೆಯ ಹ್ಯಾಪಿ ಸ್ಕೂಲ್ ಕಾರ್ಯಕ್ರಮದ ಅಡಿ ಶಾಲೆಗೆ ಕಲ್ಪಿಸಲಾದ ವಿವಿಧ ಸವಲತ್ತು, ಸೌಕರ್ಯ ಮತ್ತು ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿದರು.   ಇನ್ನರವ್ಹೀಲ್ ಸಂಸ್ಥೆಯು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಸೌಲಭ್ಯಗಳನ್ನು …

Read More »