Daily Archives: ನವೆಂಬರ್ 6, 2024

ಲೋಕಾಯುಕ್ತರ ಜೊತೆ ಮ್ಯಾಚ್ ಫಿಕ್ಸಿಂಗ್ ಆರ್ .ಅಶೋಕ ಆರೋಪಕ್ಕೆ ಡಿಕೆ ಶಿವಕುಮಾರ್ ಗರಂ ಒಳಗಡೆ ಏನ ಪ್ರಶ್ನೆ ಕೇಳಿದಾರೇ ಏನ ಉತ್ತರ ಕೊಟ್ಟಿದಾರೆ ಅನ್ನೋದು ಅವರಿಗೆ ಮಾತ್ರ ಗೊತ್ತು. ಅದರ ಬಗ್ಗೆ ನಿಮಗೇನು ಗೊತ್ತು . ವಾಪಸ್ ವಿಚಾರಣೆಗೆ ಕರಿಯಬಹುದು. ಬಿಜೆಪಿ ಲೋಕಾಯುಕ್ತರ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿದಾರಾ ಅನ್ನೋ ಹೇಳಿಕೆಗೆ ಡಿಕೆ ಗರಂ ಆಗಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರವ ಕೊಟ್ಟು ಲೋಕಾಯುಕ್ತ ಕಚೇರಿಗೆ ಸಿಎಮ್ ಹಾಜರಾಗಿದ್ದರೆ ಗೌರವಾನ್ವಿತ ಮುಖ್ಯಮಂತ್ರಿಗಳಿದಾರೆ ಅನ್ನೋದಕ್ಕೆ ನೀವೆಲ್ಲಖುಷಿ ಪಡಬೇಕು.ಲೋಕಾಯುಕ್ತರನ್ನು ನೇಮಕ ಮಾಡಿದ್ದು ಬಿಜೆಪಿ ಕಾಲದಲ್ಲಿ.ಅಶೋಕ ಮ್ಯಾಚ್ ಫಿಕ್ಸಿಂಗ್ ಪದ ಬಳಕೆ ಮಾಡಿದ್ದು ನ್ಯಾಯಾಲಯಕ್ಕೆ ನ್ಯಾಯಾಲಾಯದ ಪೀಠಕ್ಕೆ ಮಾಡಿರೋ ಅವಮಾನ..ನ್ಯಾಯಾಲಯಗಳ ಮೇಲೆ ಆ ರೀತಿ ಮಾಡಿರೋದು ದೊಡ್ಡ ಅಪಮಾನ. ರಾಜಕಾರಣಿಗಳು ನೇಮಕ ಮಾಡಿರೋ ಪೋಸ್ಟ್ ಅಲ್ಲ ಅದು.ಸಂವಿಧಾನ ನೇಮಕ ಮಾಡಿರೋದು,ಲೋಕಾಯುಕ್ತ ಅಧಿಕಾರಿಗಳು ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು. ಉಪಚುನಾವಣೆ ಹಿನ್ನಲೆ ಇಂದು ಶಿಗ್ಗಾಂವಿ ಗೆ ಹೋಗತೀದ್ದೇನೆ. ಇಗಾಗಲೇ ಸಂಡೂರ, ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿದ್ದೇನೆ..ಮೂರು ಕ್ಷೇತ್ರದಲ್ಲಿ ಒಳ್ಳೆ ವಾತಾವರಣ ಇದೆ..ರಾಜ್ಯದ ಆಡಳಿತ ಜನ ನೋಡಿದ್ದಾರೆ. ಮೂರು ಕ್ಷೇತ್ರದಲ್ಲಿ ಅಭ್ಯರ್ಥಿ ಗಳಿದ್ದಾರೆ..ಶಿಗ್ಗಾಂವಿ ಯಲ್ಲಿ ನಾನು ಕಾರ್ಯಕರ್ತರ ಜೊತೆ ಚರ್ಚೆ ಮಾಡಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ನಮಗೆ ಲೀಡ್‌ ಬಂದಿದೆ. ನಾನು ಶಿಗ್ಗಾಂವಿ ಗೆಳ್ತಿವಿ.ಬೊಮ್ಮಾಯಿ ವಿರುದ್ಧ ಆಕ್ರೋಶ ಇದೆಯಂತೆ..ಕಾರ್ಯಕರ್ತರಿಗೆ ಸೀಟ್ ಕೊಡ್ತೀನಿ ಅಂದು ಕೊಟ್ಟಿಲ್ಲವಂತೆ.ಹೀಗಾಗಿ ನಾವ ಗೆಲೀವಿ ಎಂದ ಡಿಕೆ.ಬೆಳಗಾವಿಯಲ್ಲಿ SDA ಆತ್ಮಹತ್ಯೆ ಪ್ರಕರಣ. ಸಚಿವರ ಆಪ್ತರಾಗಲಿ ಯಾರೇ ಆಗಲಿ ಕ್ರಮ ಆಗತ್ತೆ.ಚುನಾವಣೆ ಸಮಯದಲ್ಲಿ ಈ ತರಹದ ಆರೋಪ ಇರೋದೆ .ಕೆಲವರು ಚುನಾವಣೆ ಸಂದರ್ಭಗಳಲ್ಲಿ ಇಂತಹದ್ದು ತರ್ತಾರೆ..ಕಾನೂನಿನ ಪ್ರಕಾರ ತನಿಖೆ ಆಗತ್ತೆ ಎಂದರು.

ಲೋಕಾಯುಕ್ತರ ಜೊತೆ ಮ್ಯಾಚ್ ಫಿಕ್ಸಿಂಗ್ ಆರ್ .ಅಶೋಕ ಆರೋಪಕ್ಕೆ ಡಿಕೆ ಶಿವಕುಮಾರ್ ಗರಂ ಒಳಗಡೆ ಏನ ಪ್ರಶ್ನೆ ಕೇಳಿದಾರೇ ಏನ ಉತ್ತರ ಕೊಟ್ಟಿದಾರೆ ಅನ್ನೋದು ಅವರಿಗೆ ಮಾತ್ರ ಗೊತ್ತು. ಅದರ ಬಗ್ಗೆ ನಿಮಗೇನು ಗೊತ್ತು . ವಾಪಸ್ ವಿಚಾರಣೆಗೆ ಕರಿಯಬಹುದು. ಬಿಜೆಪಿ ಲೋಕಾಯುಕ್ತರ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿದಾರಾ ಅನ್ನೋ ಹೇಳಿಕೆಗೆ ಡಿಕೆ ಗರಂ ಆಗಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರವ ಕೊಟ್ಟು ಲೋಕಾಯುಕ್ತ ಕಚೇರಿಗೆ ಸಿಎಮ್ ಹಾಜರಾಗಿದ್ದರೆ …

Read More »

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ; ಜಿಲ್ಲಾ ಮಟ್ಟದ ಸಮನ್ವಯ/ಪ್ರಗತಿ ಪರಿಶೀಲನಾ ಸಭೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ; ಜಿಲ್ಲಾ ಮಟ್ಟದ ಸಮನ್ವಯ/ಪ್ರಗತಿ ಪರಿಶೀಲನಾ ಸಭೆ ಮಹಿಳೆಯರ ಮೇಲಿನ ದೌರ್ಜನ್ಯತಡೆಗಟ್ಟಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ : ಮಹಿಳೆಯರ ಸುರಕ್ಷತೆ-ಸಬಲೀಕರಣಕ್ಕೆ ವಿಶೇಷ ಗಮನ ನೀಡಬೇಕು. ಮಹಿಳಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಸಹಾಯವಾಣಿ, ಬಾಲ್ಯ ವಿವಾಹ, ಮತ್ತು ಪೋಕ್ಸೋ ಕಾಯ್ದೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ …

Read More »

ರಷಿಯಾದಲ್ಲಿ ವಿಶ್ವ ಕಿರಿಯರ ವೀರಾಗ್ರಣಿ ಕರಾಟೆ ಸ್ಪರ್ಧೆ ಅಕ್ಕತಂಗೇರಹಾಳ ವೈಷ್ಣವಿ ನಿರ್ವಾಣಿ ಗೆ ವಿಶ್ವ ಕರಾಟೆ ವೀರಾಗ್ರಣಿ ಪಟ್ಟ

ಬೆಳಗಾವಿ – ರಷಿಯಾದ ಉಜ್ಬೇಕಿಸ್ಥಾನ ದಲ್ಲಿ ಮಂಗಳವಾರ ಜರುಗಿದ ಅಂತರ್ರಾಷ್ಟ್ರೀಯ ವಿಶ್ವ ಕಿರಿಯರ ವೀರಾಗ್ರಣಿ ಕರಾಟೆ ಸ್ಪರ್ಧೆ ಯಲ್ಲಿ ಕರ್ನಾಟಕ ಪ್ರತಿನಿಧಿಸಿ ಪಾಲ್ಗೊಂಡಿದ್ದ ಗೋಕಾಕ ನಾಡಿನ ಅಕ್ಕತಂಗೇರಹಾಳ ಗ್ರಾಮದ ಪ್ರತಿಭಾವಂತ ಕರಾಟೆ ಪಟು, ೧೬ ರ ಬಾಲಕಿ, ವೈಷ್ಣವಿ ಶಿವನಗೌಡಾ ನಿರ್ವಾಣಿ ಸ್ವರ್ಣ ಪಡೆದು ವಿಶ್ವ ವೀರಾಗ್ರಣಿ ಪಟ್ಟ ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಇಂಟರ್ ನ್ಯಾಶನಲ್ ಜೀತ್ ಕುನೆದೊ ಫೆಡರೇಶನ್ ನಿಂದ ಮಂಗಳವಾರ ದಿನಾಂಕ ೦೫ ರಂದು ರಷಿಯಾದ ಉಜಕಿಸ್ಥಾನ ದಲ್ಲಿ …

Read More »

ಬಡ ವಿದ್ಯಾರ್ಥಿಗಳಿಗೆ ಮೋದಿ ಸರ್ಕಾರದ ಬಿಗ್ ಗಿಫ್ಟ್ !

ನವದೆಹಲಿ : ಮಧ್ಯಮ ವರ್ಗ ಅಥವಾ ಆರ್ಥಿಕವಾಗಿ ದುರ್ಬಲ ಜನರು ಹಣಕಾಸಿನ ಅಡಚಣೆಗಳಿಂದ ತಮ್ಮ ಅಧ್ಯಯನವನ್ನ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಮತ್ತು ಅವರ ಕನಸುಗಳನ್ನ ಈಡೇರಿಸಿಕೊಳ್ಳಲು ವಿಫಲರಾಗುತ್ತಾರೆ. ಈ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.   ಬುಧವಾರ, ಸಚಿವ ಸಂಪುಟವು ಪ್ರಧಾನಮಂತ್ರಿ ವಿದ್ಯಾ ಲಕ್ಷ್ಮಿ ಶಿಕ್ಷಣ ಯೋಜನೆ ಎಂಬ ಯೋಜನೆಗೆ ಅನುಮೋದನೆ ನೀಡಿದ್ದು, ಇದರ ಅಡಿಯಲ್ಲಿ ಕುಟುಂಬದ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ …

Read More »

ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಬೆಳಗಾವಿ ಎಪಿಎಂಸಿ ಪೊಲೀಸರು ಬಂಧಿಸಿ ಆತನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡ ಘಟನೆ ನಡೆದಿದೆ

ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಬೆಳಗಾವಿ ಎಪಿಎಂಸಿ ಪೊಲೀಸರು ಬಂಧಿಸಿ ಆತನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡ ಘಟನೆ ನಡೆದಿದೆ ವೈಭವ ನಗರದ ವಿವಿಧ ಮನೆಗಳ್ಳತನ ಮಾಡಿದ್ದ ಮಸ್ತಾನ್ ಅಲಿ ಶೇಖ್ ಎಂಬ ಆರೋಪಿಯನ್ನು ಬಂಧಿಸಿರುವ ಎಪಿಎಂಸಿ ಪೊಲೀಸರು ಆತನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡು ಚಿನ್ನಾಭರಣ ಕಳೆದುಕೊಂಡು ದೂರು ನೀಡಿದ ಶಿವಪ್ಪ ಛತ್ರಪ್ಪ ಪೂಜಾರಿ ಗ ಹಸ್ತಾಂತರ ಪ್ರಕ್ರಿಯೆ ನಡೆಸಲಿದ್ದಾರೆ. ನಗರ ಪೊಲೀಸ್ ಆಯುಕ್ತ ಯಡಾ …

Read More »

ಡೊನಾಲ್ಡ್‌ Trumpಗೆ‌ ಮತ್ತೊಮ್ಮೆ‌ ಅಧ್ಯಕ್ಷ ಪಟ್ಟ; ಪ್ರಧಾನಿ ಮೋದಿ ಅಭಿನಂದನೆ

ವಾಷಿಂಗ್ಟನ್:‌ ಇಡೀ ಜಗತ್ತಿನ ಕುತೂಹಲಕ್ಕೆ ಕಾರಣವಾಗಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ರಿಪಬ್ಲಿಕನ್‌ ಪಕ್ಷ ಜಯಭೇರಿ ಬಾರಿಸಿರುವುದಾಗಿ ಬುಧವಾರ (ನ.06) ಘೋಷಿಸುವ ಮೂಲಕ ಟ್ರಂಪ್‌ 2ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.   ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ 270ಕ್ಕೂ ಅಧಿಕ ಎಲೆಕ್ಟ್ರೊರಲ್‌ ಮತ ಪಡೆದು ಜಯಭೇರಿ ಬಾರಿಸಿದ್ದು, ಕಮಲಾ ಹ್ಯಾರಿಸ್‌ 224 ಸ್ಥಾನ ಪಡೆದು ಪರಾಜಯಗೊಳ್ಳುವ ಮೂಲಕ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆಯಾಗಬೇಕೆಂಬ …

Read More »

ಲೈಂಗಿಕ ದೌರ್ಜನ್ಯ ಪ್ರಕರಣ; ʼಪ್ರೇಮಂʼ ನಟ ನಿವಿನ್‌ ಪೌಲಿಗೆ ಕ್ಲೀನ್‌ ಚಿಟ್

ತಿರುವನಂತಪುರ: ಜಸ್ಟೀಸ್‌ ಕೆ. ಹೇಮಾ ಸಮಿತಿ ವರದಿ (Hema Committee Report) ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಹಲವು ಕಲಾವಿದರ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿತ್ತು. ಈ ಪಟ್ಟಿಯಲ್ಲಿ ಮಾಲಿವುಡ್‌ ನಟ “ಪ್ರೇಮಂ’ ಖ್ಯಾತಿಯ ನಿವಿನ್‌ ಪೌಲಿ (Malayalam actor Nivin Pauly) ವಿರುದ್ಧವೂ ದೂರು ದಾಖಲಾಗಿತ್ತು.   ಕೇರಳದ ನೆರಿಯಮಂಗಲಂ ನಿವಾಸಿಯಾಗಿರುವ ದೂರುದಾರೆ ನವೆಂಬರ್ 2023ರಲ್ಲಿ ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದು ನಿವಿನ್‌ ಪೌಲಿ ತಮ್ಮ ಮೇಲೆ ದುಬೈಯ ಹೊಟೇಲ್‌ …

Read More »

ರಾಜ್ಯದಲ್ಲಿ ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ: ಜಮೀರ್

ಹುಬ್ಬಳ್ಳಿ: ಸಂಸತ್ತಿನ ಜಂಟಿ ಸಂಸದೀಯ ಸಮಿತಿ ರಚನೆಯಾಗಿರುವುದು ವಕ್ಫ್ ತಿದ್ದುಪಡಿ ಮಸೂದೆ ಕುರಿತು. ಆದರೆ ಇವರು ವಿಜಯಪುರಕ್ಕೆ ಬರುತ್ತಿರುವುದು ಅನಧಿಕೃತ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಿತಿ ರಚನೆ ಮಾಡುವ ಅಧಿಕಾರ ಕೇಂದ್ರ ಸರಕಾರಕ್ಕಿದೆ. ಆದರೆ ಜೆಪಿಸಿ ರಚಿಸಿರುವುದು ತಿದ್ದುಪಡಿ ಮಸೂದೆಗಾಗಿ ವಿನಃ ಇಲ್ಲಿ ವಕ್ಫ್ ಆಸ್ತಿ ವಿಚಾರವಾಗಿ ಅಲ್ಲ. ಇದರಲ್ಲಿ ಯಾವುದೇ ಗೊಂದಲ ಇರಲಿಲ್ಲ. ರಾಜ್ಯದಲ್ಲಿ ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ. ಇದಕ್ಕೆ …

Read More »

ಯಡವಣ್ಣವರ ಸಾವಿನ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಆಗಲಿ, :ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ: ಬೆಳಗಾವಿಯ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ ಸಾವಿನ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಆಗಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.   ನಗರದಲ್ಲಿ ಬುಧವಾರ(ನ6) ಮಾಧ್ಯಮಗಳೊಂದಿಗೆ ಮಾತನಾಡಿ, ಅವರು, ರುದ್ರಣ್ಣ ಯಡವಣ್ಣವರ ಸಾವಿನ ವಿಷಯ ಅತ್ಯಂತ ದುಃಖ ತರುವಂತಹದು. ಇದೊಂದು ದುರದೃಷ್ಟಕರ ಘಟನೆ. ಇಂತಹ ಘಟನೆಗಳು ನಡೆಯಬಾರದು. ರುದ್ರಣ್ಣವರ ಕುಟುಂಬಕ್ಕೆ ನ್ಯಾಯ ಸಿಗಬೇಕು …

Read More »

ಕಾರು- ಪಿಕಪ್ ಡಿಕ್ಕಿ: ಇಬ್ಬರು ಸಾವು

ಕಲಬುರಗಿ: ರಾಷ್ಟ್ರೀಯ ಹೆದ್ದಾರಿ ಕಲಬುರಗಿ- ಜೇವರ್ಗಿ ನಡುವಿನ ಫರಹತಾಬಾದ್ ನ ಖಣಿ ಬಳಿ ನ.5ರ ಮಂಗಳವಾರ ರಾತ್ರಿ ಕಾರು ಹಾಗೂ ಪಿಕಪ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಕಾರು ಹಾಗೂ ಪಿಕಪ್ ನಲ್ಲಿದ್ದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಕಲಬುರಗಿ ನಗರದ ಜನತಾ ಲೇಔಟ್‌ ನ ನಿವಾಸಿ ಮುರುಗೇಶ ಚಂದ್ರಶೇಖರ ಉಪ್ಪಿನ (42) ಹಾಗೂ ಶಹಾಬಾದ್ ನ ನಿವಾಸಿ ಧೂಳಮ್ಮ ಯಮನಪ್ಪ ಪೂಜಾರಿ …

Read More »