Breaking News

Daily Archives: ಅಕ್ಟೋಬರ್ 12, 2024

6ರಿಂದ ಬೆಳಗಾವಿ-ಮನಗೂರು ರೈಲು ಸಂಚಾರ : ಈರಣ್ಣ ಕಡಾಡಿ

ಮೂಡಲಗಿ: ‘ಬೆಳಗಾವಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ-ಮನಗೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರವು ಅಕ್ಟೋಬರ್‌ 16ರಿಂದ ಪ್ರಾರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.   ಹಬ್ಬದಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸುವ ಉದ್ದೇಶದಿಂದ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಂಚಾರಕ್ಕೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಬೆಳಗಾವಿ-ಮನಗೂರು (07335) ಎಕ್ಸ್‌ಪ್ರೆಸ್‌ ಅ.16ರಿಂದ 2025ರ ಮಾರ್ಚ್‌ 30ರವರೆಗೆ ವಾರದಲ್ಲಿ ನಾಲ್ಕು ಬಾರಿ (ಭಾನುವಾರ, …

Read More »

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಈ ಬಾರಿ ಸಂಭ್ರಮದಿಂದ ನಡೆದ ದಸರಾ ಉತ್ಸವ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಈ ಬಾರಿ ಸಂಭ್ರಮದಿಂದ ನಡೆದ ದಸರಾ ಉತ್ಸವ ಶನಿವಾರ ಸಂಪನ್ನಗೊಂಡಿತು. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಳೆದ ವರ್ಷ ದಸರೆ ಕಳೆಗುಂದಿತ್ತು. ಈ ವರ್ಷ ಉತ್ತಮ ಮಳೆ-ಬೆಳೆ ಹಿನ್ನೆಲೆಯಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿತ್ತು. ಶುಕ್ರವಾರ ಆಯುಧ ಪೂಜೆ ಮತ್ತು ಶನಿವಾರ ವಿಜಯದಶಮಿ ಕಾರ್ಯಕ್ರಮ ನೆರವೇರಿದವು. ಹಬ್ಬದ ಪ್ರಯುಕ್ತ ನಗರದ ವಿವಿಧ ದೇವಸ್ಥಾನಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಮಕ್ಕಳು, ಯುವಜನರು, ಮಹಿಳೆಯರು ಸೇರಿ ಎಲ್ಲ ಭಕ್ತರು ಬೆಳಿಗ್ಗೆಯಿಂದಲೇ ದೇಗುಲಗಳತ್ತ ಹೆಜ್ಜೆಹಾಕಿ, …

Read More »

ಅರಮನೆಗೆ ಜನರ ಲಗ್ಗೆ

ಮೈಸೂರು: ವಿಜಯದಶಮಿ ಮೆರವಣಿಗೆ ವೀಕ್ಷಣೆ ಪಾಸ್‌ ಇದ್ದವರನ್ನು ಅರಮನೆ ಆವರಣದೊಳಗೆ ಬಿಡಲು ಸಾಕಷ್ಟು ಹೊತ್ತು ಕಾಯಿಸಿದ್ದಲ್ಲದೆ, ಎಲ್ಲ ಆಸನಗಳು ಭರ್ತಿಯಾಗಿವೆ ಎಂದು ಗೇಟ್‌ನಲ್ಲಿನ ಸಿಬ್ಬಂದಿ ತಿಳಿಸಿದ್ದರಿಂದ ಇಲ್ಲಿನ ವರಾಹ ದ್ವಾರದ ಬಳಿ ಶನಿವಾರ ಜನರು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.   ಪ್ರವೇಶ ಗೊಂದಲದಿಂದ ಆಕ್ರೋಶಗೊಂಡ ಜನರು ವರಾಹ ದ್ವಾರದ ಗೇಟ್‌ ತಳ್ಳಿ ಒಳ ನುಗ್ಗಿದರು. ಅರಮನೆ ಉದ್ಯಾನದ ಗುಲಾಬಿ ತೋಟದಲ್ಲೆಲ್ಲಾ ಅಡ್ಡಾದಿಡ್ಡಿಯಾಗಿ ಓಡಾಡಿದರು. ಭದ್ರತಾ ಸಿಬ್ಬಂದಿಯೂ …

Read More »

ಸಂಭ್ರಮದ ವಿಜಯದಶಮಿ: ರಾವಣನ ಪ್ರತಿಕೃತಿ ದಹನ

ಬೀದರ್: ಶ್ರೀರಾಮಲೀಲಾ ಸೇವಾ ಸಮಿತಿಯಿಂದ ವಿಜಯದಶಮಿ ಅಂಗವಾಗಿ ನಗರದ ಸಾಯಿ ಶಾಲೆಯ ಮೈದಾನದಲ್ಲಿ ಶನಿವಾರ ರಾತ್ರಿ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 40 ಅಡಿ ಎತ್ತರದ ರಾವಣನ ಪ್ರತಿಕೃತಿಗೆ ಬಾಣದಿಂದ ಬೆಂಕಿ ಹೊತ್ತ ಬಿಲ್ಲನ್ನು ಬಿಟ್ಟು ದಹಿಸಲಾಯಿತು. ಎತ್ತರದ ಪ್ರತಿಕೃತಿಯೂ ಪಟಾಕಿಗಳೊಂದಿಗೆ ದಹನಗೊಂಡಿತು. ಜನ ಅದನ್ನು ನೋಡಿ ಸಂಭ್ರಮಿಸಿದರು. ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡರು. ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯ ಜನ ಆಗಮಿಸಿದ್ದರು. ಪ್ರತಿಕೃತಿ ದಹನಕ್ಕೂ ಮುನ್ನ ರಾಮಲೀಲಾ ನಾಟಕ ಪ್ರಸ್ತುತ …

Read More »

ಮುಹೂರ್ತ ಮೀರಿ ಪುಷ್ಪಾರ್ಚನೆ: ಸರ್ಕಾರ-ರಾಜಮನೆತನದ ನಡುವೆ ತಿಕ್ಕಾಟ

ಮೈಸೂರು: ವಿಜಯದಶಮಿ ಮೆರವಣಿಗೆಯಲ್ಲಿ ಅಂಬಾರಿಗೆ ಪುಷ್ಪಾರ್ಚನೆಯು ಮುಹೂರ್ತ ಮೀರಿದ ಬಳಿಕ ಅಂದರೆ ಅರ್ಧ ತಾಸು ತಡವಾಗಿ ನಡೆದಿದ್ದಕ್ಕೆ ಅಂಬಾರಿಯನ್ನು ಸಿದ್ಧಪಡಿಸುವಲ್ಲಿ ಆದ ವಿಳಂಬವೇ ಕಾರಣ ಎಂದು ಹೇಳಲಾಗುತ್ತಿದೆ. ಮುಹೂರ್ತದ ಪ್ರಕಾರ, 4ರಿಂದ 4.30ರೊಳಗೆ ವಿಜಯದಶಮಿ ಮೆರವಣಿಗೆಯನ್ನು ಮುಖ್ಯಮಂತ್ರಿ ಉದ್ಘಾಟಿಸಬೇಕಿತ್ತು. ಆದರೆ, ಅದು ನಡೆದಾಗ 5 ಗಂಟೆ 2 ನಿಮಿಷ ಆಗಿತ್ತು. ಇದಕ್ಕೆ, ರಾಜವಂಶಸ್ಥರಿಂದ ಅಂಬಾರಿಯು ವಿಳಂಬವಾಗಿ ದೊರೆತಿದ್ದು ಕಾರಣ ಎಂದು ಹೇಳಲಾಗುತ್ತಿದೆ. ಅಂಬಾರಿಯು ರಾಜವಂಶಸ್ಥರ ಸುಪರ್ದಿಯಲ್ಲಿರುತ್ತದೆ. ಅದನ್ನು ಸಾಮಾನ್ಯವಾಗಿ ವಿಜಯದಶಮಿ ಮೆರವಣಿಗೆಯ …

Read More »

ಕೇಸ್‌ಗೆ ಹೆದರಲ್ಲ, ಕೋರ್ಟ್‌ನಲ್ಲೇ ಉತ್ತರ ಕೊಡ್ತೀನಿ: ಕುಮಾರಣ್ಣ

ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ಅವರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕುಮಾರಸ್ವಾಮಿ, ಆ ದೂರಿಗೆ ನಾನು ಕಾನೂನು ಪ್ರಕಾರವೇ ಉತ್ತರಿಸುತ್ತೇನೆ ಎಂದಿದ್ದಾರೆ.   ನಾನು ಅವರಿಗೆ ಬೆದರಿಕೆ ಹಾಕಿದ್ದೇನೆ ಎಂದು ದೂರು ನೀಡಿರುವ ಎಡಿಜಿಪಿಯವರು ನನಗೆ ಹೆದರಬೇಕಾದ ಅಗತ್ಯವಿಲ್ಲ. ನಾನು ಅವರಿಗೆ ಬೆದರಿಕೆ ಎಲ್ಲಿ ಹಾಕಿದ್ದೇನೆ? ಎಂದು ಪ್ರಶ್ನಿಸಿದ ಅವರು, ಎಡಿಜಿಪಿ ಅವರಿಗೆ ಸಂಬಂಧಿಸಿ …

Read More »

ಹೊಸ ಹೇರ್​ ಸ್ಟೈಲ್​​ನಲ್ಲಿ ಮಿಂಚಿದ ಕ್ಯಾಪ್ಟನ್​ ಕೂಲ್

ನವದೆಹಲಿ:ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ( MS Dhoni New Look ) ಮೈದಾನದಲ್ಲಿ ಮಾತ್ರವಲ್ಲದೆ ಹೊರಗಡೆಯೂ ಸ್ಟೈಲ್ ಟ್ರೆಂಡ್‌ಸೆಟರ್ ಆಗಿದ್ದಾರೆ. ಇತ್ತೀಚೆಗೆ, ಧೋನಿ ಅವರು ತಮ್ಮ ಪ್ರಸಿದ್ಧ ಕೇಶ ವಿನ್ಯಾಸಕ ಅಲೀಮ್ ಹಕೀಮ್ ಅವರೊಂದಿಗೆ ಸ್ಟೈಲಿಶ್ ಕ್ವಿಫ್ ಕೇಶವಿನ್ಯಾಸವನ್ನು ಮಾಡಿದರು.   ಹೊಸ ಲುಕ್ ನಲ್ಲಿ ಧೋನಿ 25 ವರ್ಷದ ಹುಡುಗನಂತೆ ಕಾಣುತ್ತಿದ್ದು ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ. ಹೇರ್ ಸ್ಟೈಲಿಸ್ಟ್ ಹಕೀಮ್ ನಾಲ್ಕು ತಿಂಗಳ ಹಿಂದೆ …

Read More »

ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಚಾಲನೆ

ಮೈಸೂರು: ವಿಶ್ವ ವಿಖ್ಯಾತ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡ ಅದಿದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಅಂಬಾರಿಯಲ್ಲಿ ವಿರಾಜಮಾನವಾಗಿರುವ ತಾಯಿ ಚಾಮುಂಡಿ ದೇವಿ ವಿಗ್ರಹಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಚಿನ್ನದ ಅಂಬಾರಿಯಲ್ಲಿ ನಾಡ ಅದಿದೇವತೆ ತಾಯಿ ಚಾಮುಂಡೇಶ್ವರಿ ವಿರಾಜಮಾನವಾಗಿದ್ದು, 750ಕೆಜಿ …

Read More »

ನಕಲಿ ಗಾಂಧಿಗಳ ಪಾದ ನೆಕ್ಕಿದವರು ಬಿ.ಕೆ ಹರಿಪ್ರಸಾದ್: ಪ್ರಲ್ಹಾದ ಜೋಶಿ ತಿರುಗೇಟು

ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ನಕಲಿ ಗಾಂಧಿಗಳ ಪಾದ ನೆಕ್ಕಿದವರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ. “ಪ್ರಲ್ಹಾದ ಜೋಶಿ ಇವತ್ತಿಗೂ ಗೋಡ್ಸೆ ಪೂಜೆ ಮಾಡುತ್ತಾರೆ” ಎಂಬ ಹರಿಪ್ರಸಾದ್ ಹೇಳಿಕೆಗೆ ಜೋಶಿ ತಿರುಗೇಟು ಕೊಟ್ಟರು.   ಹುಬ್ಬಳ್ಳಿಯಲ್ಲಿ ಶನಿವಾರ (ಅ.12) ಮಾದ್ಯಮದವರೊಂದಿಗೆ ಮಾತನಾಡುತ್ತ ಹರಿಪ್ರಸಾದ್ ವಿರುದ್ಧ ತೀವ್ರ ಹರಿಹಾಯ್ದರು. ಈಗಿನ ಕಾಂಗ್ರೆಸ್‌ ನಲ್ಲಿ ಇರುವರೆಲ್ಲಾ ನಕಲಿ ಗಾಂಧಿಗಳು. ಇಂಥ ನಕಲಿ ಗಾಂಧಿಗಳ ಪಾದ ನೆಕ್ಕುವ ಹರಿಪ್ರಸಾದ್, ನಮ್ಮ …

Read More »

ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಹೇಳಿಕೆ: ಅ.14 ತರೂರ್‌ ಅರ್ಜಿ ವಿಚಾರಣೆ

ನವದೆಹಲಿ: ತನ್ನ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಸೋಮವಾರ ನಡೆಸಲಿದೆ. ‘ನರೇಂದ್ರ ಮೋದಿ ಶಿವಲಿಂಗದ ಮೇಲೆ ಕುಳಿತ ಚೇಳು ಇದ್ದಂತೆ’ ಎಂದು ಆರ್‌ಎಸ್‌ಎಸ್‌ ನಾಯಕರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ತರೂರ್‌ ಭಾಷಣ ಮಾಡಿದ್ದರು. ಈ ಸಂಬಂಧ ತರೂರ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಸೆ. 10ರಂದು ಸುಪ್ರೀಂಕೋರ್ಟ್‌ ತಡೆಯಾಜ್ಞೆ …

Read More »