Breaking News

Daily Archives: ಅಕ್ಟೋಬರ್ 2, 2024

ಇಂದು ಸಂಭವಿಸಲಿದೆ ಮತ್ತೊಂದು ಖಗೋಳ ವಿಸ್ಮಯ : ಎಲ್ಲೆಲ್ಲೆ ಗೋಚರಿಸಲಿದೆ `ಸೂರ್ಯಗ್ರಹಣ’?

ನವದೆಹಲಿ : ಹಿಂದೂ ಧರ್ಮದಲ್ಲಿ ಜ್ಯೋತಿಷ್ಯದ ಪ್ರಕಾರ, ಸೂರ್ಯಗ್ರಹಣಕ್ಕೆ ವಿಶೇಷ ಮಹತ್ವವಿದೆ. ಸೂರ್ಯಗ್ರಹಣವು ಖಗೋಳ ವಿದ್ಯಮಾನವಾಗಿದೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ಸಮಯದಲ್ಲಿ ಭೂಮಿಯ ಮೇಲಿನ ಸೂರ್ಯನ ಬೆಳಕು ಕಡಿಮೆಯಾಗುತ್ತದೆ ಅಥವಾ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ. ಈ ವಿದ್ಯಮಾನವನ್ನು ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ಸೂರ್ಯಗ್ರಹಣವು ಅಮಾವಾಸ್ಯೆಯ ದಿನದಂದು ಸಂಭವಿಸುತ್ತದೆ. 2024 ರಲ್ಲಿ ಎರಡು ಸೂರ್ಯ ಗ್ರಹಣಗಳು ಮತ್ತು ಎರಡು ಚಂದ್ರ …

Read More »

ನಾಳೆಯಿಂದ ಅ.10 ರವರೆಗೆ ಹೈಕೋರ್ಟ್ ಗೆ ದಸರಾ ರಜೆ : ರಜಾಕಾಲದ ಪೀಠದಿಂದ ಕಾರ್ಯ ನಿರ್ವಹಣೆ

ನಾಳೆಯಿಂದ ಅ.10 ರವರೆಗೆ ಹೈಕೋರ್ಟ್ ಗೆ ದಸರಾ ರಜೆ : ರಜಾಕಾಲದ ಪೀಠದಿಂದ ಕಾರ್ಯ ನಿರ್ವಹಣೆ ಬೆಂಗಳೂರು : ರಾಜ್ಯ ಹೈಕೋರ್ಟ್ ಗೆ ಅ. 3 ರಿಂದ 7 ದಿನಗಳ ಕಾಲ ದಸರಾ ರಜೆ ಇರಲಿದ್ದು, ಹೈಕೋರ್ಟ್ ರಜಾಕಾಲದ ಪೀಠ ಕಾರ್ಯ ನಿರ್ವಹಿಸಲಿದೆ. ಅಕ್ಟೋಬರ್ 11ರಂದು ಆಯುಧಪೂಜೆ, ಅ. 12ರಂದು ವಿಜಯದಶಮಿ, ಎರಡನೇ ಶನಿವಾರ, ಅ. 13 ಭಾನುವಾರ ರಜೆ ಇರುವುದರಿಂದ ಅಕ್ಟೋಬರ್ 14 ರಿಂದ ಕೋರ್ಟ್ ಕಲಾಪಗಳು ಪುನರಾರಂಭ …

Read More »

ಜನಿಸಿದ್ದು ಹೆಣ್ಣು ಮಗು, ಕೊಟ್ಟಿದ್ದು ಗಂಡು ಮಗುವಿನ ಶವ.!

ಕೊಪ್ಪಳ: ಹೆಣ್ಣು ಮಗು ಜನಿಸಿದೆ ಎಂದು ಘೋಷಿಸಿದ್ದ ವೈದ್ಯರು ವಾರದ ನಂತರ ಅನಾರೋಗ್ಯದಿಂದ ಶಿಶು ಮೃತಪಟ್ಟಿದೆ ಎಂದು ಗಂಡು ಮಗುವಿನ ಶವ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯ ಗೌರಿ ಕನಕಗೊಲ್ಲರ ಅವರಿಗೆ ಸೆ. 26ರಂದು ಕೊಪ್ಪಳದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಹೆರಿಗೆ ಮಾಡಿಸಿದ ವೈದ್ಯರು ಮತ್ತು ಸಿಬ್ಬಂದಿ ಹೆಣ್ಣು ಮಗು ಜನಿಸಿದೆ ಎಂದು ತಿಳಿಸಿದ್ದಾರೆ. ಅವಧಿ ಪೂರ್ವವಾಗಿ ಶಿಶು ಜನಿಸಿದ ಕಾರಣ …

Read More »

ಜಮೀನು ವಿಚಾರಕ್ಕೆ ವ್ಯಕ್ತಿಯೊಬ್ಬರ ಬಳಿ ಲಂಚ ಪಡೆದ ಕೆಆರ್ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ಅಮಾನತು

ಚಿತ್ರದುರ್ಗ, ಅಕ್ಟೋಬರ್‌, 2: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೆಆರ್ ಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಾಸೇಗೌಡ ಅವರನ್ನು ಸೋಮವಾರ (ಅಕ್ಟೋಬರ್ 1) ಜಿಲ್ಲಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಲಂಚ ತಗೊಂಡಿದ್ದಾರೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗಿದ್ದು, ಈ ಹಿನ್ನೆಲೆ ಗ್ರಾಮ ಲೆಕ್ಕಾಧಿಕಾರಿ ದಾಸೇಗೌಡ ಅವರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿ …

Read More »

ಸಾಲು ಸಾಲು ರಜೆ; ನವರಾತ್ರಿಗೆ ಬಸ್‌ ಟಿಕೆಟ್‌ ದರ ಬಲು ದುಬಾರಿ !

ನವರಾತ್ರಿ ಹಬ್ಬ ಸನ್ನಿಹಿತವಾಗುತ್ತಿರುವಂತೆ ಖಾಸಗಿ ಬಸ್‌ಗಳ ಪ್ರಯಾಣ ದರ ದುಪ್ಪಟ್ಟಾಗಿದೆ. ಹಬ್ಬಕ್ಕಾಗಿ ದೂರದೂರಿನಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಅದರಲ್ಲೂ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸು ವವರಿಗೆ ಖಾಸಗಿ ಬಸ್‌ನಲ್ಲಿ ಅತೀ ಹೆಚ್ಚಿನ ದರ 3,500 ರೂ. ಇದೆ. ಪ್ರತಿ ಬಾರಿ ಹಬ್ಬದ ಸಮಯದಲ್ಲಿ ಟಿಕೆಟ್‌ ದರ ಏರಿಕೆ ಮಾಮೂಲಿಯಾಗಿದೆ. ಈ ಹಿಂದೆ ಗೌರಿ-ಗಣಪತಿ ಹಬ್ಬದ ಸಮಯದಲ್ಲೂ ಬಸ್‌ ಟಿಕೆಟ್‌ ದರ ಏರಿಕೆ ಮಾಡಲಾಗಿತ್ತು. ಇದೀಗ ನವರಾತ್ರಿ ಹಬ್ಬಕ್ಕೂ …

Read More »