Breaking News

Monthly Archives: ಏಪ್ರಿಲ್ 2024

ಕಾಗವಾಡ | ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಭೇಟಿ

ಕಾಗವಾಡ: ತಾಲ್ಲೂಕಿನ ವಿವಿಧ ಚೆಕ್‌ಪೋಸ್ಟ್‌ಗಳಿಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಚಿಕ್ಕೋಡಿ ಉಪವಿಭಾಗಾಧಿಕಾರಿ ಮೆಹಬೂಬಿ ಭೇಟಿ ನೀಡಿ, ಮಹಾರಾಷ್ಟ್ರದಿಂದ ಬರುವ ಖಾಸಗಿ ವಾಹನ ಮತ್ತು ಸರ್ಕಾರಿ ಬಸ್‌ಗಳನ್ನು ತಡೆದು, ಪರಿಶೀಲನೆ ನಡೆಸಿದರು.   ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 20 ಲಕ್ಷಕ್ಕಿಂತ ಹೆಚ್ಚು ನಗದು ಜಪ್ತಿಯಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ವೆಬ್‌ಕಾಸ್ಟ್ ಕ್ಯಾಮೆರಾ, ಕುಡಿಯುವ ನೀರಿನ ವ್ಯವಸ್ಥೆ, ದೀಪದ ವ್ಯವಸ್ಥೆ …

Read More »

ಜಗದೀಶ ಶೆಟ್ಟರ್‌ ಹೊರಗಿನವರಲ್ಲ; ರಮೇಶ ಜಾರಕಿಹೊಳಿ

ರಾಮದುರ್ಗ: ಜಗದೀಶ ಶೆಟ್ಟರ್‌ ಹೊರಗಿನವರಲ್ಲ. ಅವರು ಮುಖ್ಯಮಂತ್ರಿಯಾದವರು, ನಮ್ಮ ಏಳ್ಗೆಗಾಗಿ ಶ್ರಮಿಸಿದವರು. ಅವರನ್ನು ನಾವು ಎಂದಿಗೂ ಬೇರೆಯವರು ಎಂದು ಬಿಂಬಿಸಬಾರದು ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಕಟಕೋಳ ಗ್ರಾಮ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಿ, ಚುನಾವಣೆ ವೇಳೆಯಲ್ಲಿ ಕೆಲವರು ಜಾತಿ ವಿಷಬೀಜ ಬಿತ್ತಲು ಹೊರಟಿದ್ದಾರೆ ಎಂದರು. ನರೇಂದ್ರ ಮೋದಿ ಪ್ರಧಾನಿಯಾದರೆ ಬೆಳಗಾವಿಯಿಂದ ಗೆಲ್ಲುವ ಜಗದೀಶ ಶೆಟ್ಟರ್‌ ಅವರು ಕೇಂದ್ರ ಮಂತ್ರಿಯಾಗುತ್ತಾರೆ. ಅವರಿಂದ ಈ ಭಾಗದ ನೀರಾವರಿ …

Read More »

ಶೆಟ್ಟರ್‌ರನ್ನು ಕೀಳಾಗಿ ಕಾಣಬೇಡಿ: ಬಾಲಚಂದ್ರ

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರನ್ನು ಯಾರೂ ಕೀಳಾಗಿ ಕಾಣಬಾರದು’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಶೆಟ್ಟರ್ ಅವರು ಅರಭಾವಿ ಮತ್ತು ಗೋಕಾಕ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ, ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ. ವಿವಿಧ ಮಠಾಧೀಶರ ಆಶೀರ್ವಾದ ಪಡೆದಿದ್ದಾರೆ. ನಾನು, ಶಾಸಕ ರಮೇಶ ಜಾರಕಿಹೊಳಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದೇವೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ನಮ್ಮನ್ನು …

Read More »

ಇನ್ಮುಂದೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳು ಇರೋದು ಇಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿ

ನವದೆಹಲಿ: ಭಾರತವನ್ನು ಹಸಿರು ಆರ್ಥಿಕತೆಯನ್ನಾಗಿ ಮಾಡುವ ಮಹತ್ವಾಕಾಂಕ್ಷೆಯ ಭಾಗವಾಗಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್ಟಿಯನ್ನು ಕಡಿತಗೊಳಿಸಲು ಬಯಸಿದ್ದಾರೆ ಮತ್ತು 36 ಕೋಟಿಗೂ ಹೆಚ್ಚು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ದೇಶವನ್ನು ಸಂಪೂರ್ಣವಾಗಿ ತೊಡೆದುಹಾಕುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಭಾರತಕ್ಕೆ ಸಾಧ್ಯವೇ ಎಂದು ಕೇಳಿದಾಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಗಡ್ಕರಿ ಅವರು “ನೂರು ಪ್ರತಿಶತ” …

Read More »

ಕಾಂಗ್ರೆಸ್’ ಗೆ ಕೇಂದ್ರದಿಂದ ಬಿಗ್ ರಿಲೀಫ್ ; ಚುನಾವಣೆ ಮುಗಿಯುವವರೆಗೂ ‘ತೆರಿಗೆ’ ವಸೂಲಿ ಇಲ್ಲ

ನವದೆಹಲಿ : ಕಾಂಗ್ರೆಸ್ ಗೆ ಕೇಂದ್ರದಿಂದ ಬಿಗ್ ರಿಲೀಫ್ ಸಿಕ್ಕಿದ್ದು, ಚುನಾವಣೆ ಮುಗಿಯವರೆಗೂ ತೆರಿಗೆ ವಸೂಲಿ ಇಲ್ಲ ಎಂದು ಹೇಳಿದೆ. ಲೋಕಸಭಾ ಚುನಾವಣೆ ಮುಗಿಯುವರೆಗೂ ಬಾಕಿ ಉಳಿಸಿಕೊಂಡಿರುವ ಸುಮಾರು 3,500 ಕೋಟಿ ರೂ. ತೆರಿಗೆ ವಸೂಲಿ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಭರವಸೆ ನೀಡಿದೆ. ಜುಲೈ 24 ರವರೆಗೆ ಕಾಂಗ್ರೆಸ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ …

Read More »

15 ವರ್ಷಗಳ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಕಡಿತ, ಇಂದಿನಿಂದಲೇ ಜಾರಿ

ಬೆಂಗಳೂರು,- ಹದಿನೈದು ವರ್ಷಗಳ ಬಳಿಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ವಿದ್ಯುತ್ ಬಳಕೆಯ ದರವನ್ನು ಕಡಿತ ಮಾಡಲಾಗಿದ್ದು, ಇಂದಿನಿಂದಲೇ ಜಾರಿಗೆ ಬರಲಿದ್ದು, ಮೇ ತಿಂಗಳಿನಲ್ಲಿ ನೀಡಲಾಗುವ ಬಿಲ್‍ಗಳಿಗೆ ಅನ್ವಯವಾಗಲಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‍ಸಿ) ಕಳೆದ ಜನವರಿ ಮತ್ತು ಫೆಬ್ರವರಿಯಲ್ಲಿ ವಾರ್ಷಿಕ ಪ್ರಕ್ರಿಯೆಗಳನ್ನು ನಡೆಸಿ ಎಸ್ಕಾಂಗಳ ಪ್ರತಿಪಾದನೆ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಫೆ.22ರಂದು ಹೊರಡಿಸಿರುವ ಆದೇಶದ ಪ್ರಕಾರ ಹಿಂದಿನಿಂದ ಗೃಹ ಬಳಕೆಯ ವಿದ್ಯುತ್ ಮೇಲೆ 1 ರೂ. 10 ಪೈಸೆ ಕಡಿತವಾಗಲಿದೆ. ಈ …

Read More »

ಚಂದ್ರು ಆಸ್ತಿ ₹ 410 ಕೋಟಿ, ಯದುವೀರ್‌ ಆಸ್ತಿ ₹ 6 ಕೋಟಿ: ಆದರೂ ಸ್ವಂತ ಕಾರಿಲ್ಲ!

ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ಆಸ್ತಿ ಮೌಲ್ಯ ₹6 ಕೋಟಿ ಇದ್ದರೆ, ಮಂಡ್ಯ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ ದಂಪತಿ ₹410 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಒಂದು ಸಾಮ್ಯತೆ ಎಂದರೆ ಎರಡೂ ಕುಟುಂಬಗಳ ಬಳಿ ಸ್ವಂತ ಕಾರುಗಳಿಲ್ಲ. ಆದರೆ, ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಮೂರು ಟ್ರ್ಯಾಕ್ಟರ್‌ಗಳ ಮಾಲೀಕ. ಯದುವೀರ ಕುಟುಂಬ ಆರೂವರೆ ಕೆ.ಜಿ. ಚಿನ್ನ ಹೊಂದಿದ್ದರೆ, ವೆಂಕಟರಮಣೇಗೌಡ ಪತ್ನಿ ಕುಸುಮಾ 4.2 ಕೆ.ಜಿ …

Read More »

ಕಾರಿನಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3 ಲಕ್ಷ ಹಣ ಸೀಜ್

ಬೀದರ್ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಕ್ರಮ ತಡೆಗಟ್ಟಲು ಪ್ರತಿಯೊಂದು ಸ್ಥಳದಲ್ಲೂ ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಇದೀಗ ಬೀದರ್ ಜಿಲ್ಲೆಯಲ್ಲಿ ಕಾರಿನಲ್ಲಿ ಆಕ್ರಮವಾಗಿ ಸಾಗಿಸುತ್ತಿದ್ದ ಮೂರು ಲಕ್ಷ ರೂಪಾಯಿಗಳನ್ನು ಅಧಿಕಾರಿಗಳು ಸೀಜ್ ಮಾಡಿಕೊಂಡಿದ್ದಾರೆ. ಹೌದು ಕಾರಿನಲ್ಲಿ ಸೂಕ್ತದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಮೂರು ಲಕ್ಷ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮನಹಳ್ಳಿ ಗ್ರಾಮದ …

Read More »

ಬಾಚಿ ಚೆಕ್​ಪೋಸ್ಟ್​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.65 ಲಕ್ಷ ರೂ. ಸೀಜ್​

ಚಿಕ್ಕೋಡಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣಾ ಅಕ್ರಮ ತಡೆಗಟ್ಟಲು ಪ್ರತಿಯೊಂದು ಸ್ಥಳದಲ್ಲೂ ಚೆಕ್ ಪೋಸ್ಟ್​ಗಳನ್ನು ನಿರ್ಮಾಣ ಮಾಡಲಾಗಿದೆ. ಇದೀಗ ಬೆಳಗಾವಿ ಜಿಲ್ಲೆಯಲ್ಲಿ ದಾಖಲೆ ಇಲ್ಲದ 6.65 ಲಕ್ಷ ರೂಪಾಯಿಯನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿಕೊಂಡಿದ್ದಾರೆ. ಮಧ್ಯರಾತ್ರಿ 12.15ಕ್ಕೆ ಬೆಳಗಾವಿ ಗ್ರಾಮಾಂತರ ವಲಯದ ಬಾಚಿ ಚೆಕ್​ಪೋಸ್ಟ್​ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಅಮುಲ್​ ವಿದ್ಯಾಧರ್​ ಎಂಬುವರಿಂದ ಪ್ರಶಾಂತ್​ ದೀಕ್ಷಿತ ನೇತೃತ್ವದ ಎಸ್​ಎಸ್​ಟಿ …

Read More »

ಬರದ ನಾಡಲ್ಲೂ ಬಂಗಾರದಂತ‌ ಬೆಳೆ ಬೆಳೆದ ರೈತ; ಸಮಗ್ರ ಕೃಷಿ ಮೂಲಕ ಲಕ್ಷಾಂತರ ರೂ. ಲಾಭ

ಯಾದಗಿರಿ, ಮಾ.31: ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಅದರಲ್ಲೂ ಮಳೆ ಇಲ್ಲದ್ದಕ್ಕೆ ರೈತರು(Farmer) ಬೆಳೆಯನ್ನ ಕಳೆದುಕೊಂಡು ಕಂಗಲಾಗಿ ಹೋಗಿದ್ದಾರೆ. ಅದರಲ್ಲೂ ಈಗ ಬೇಸಿಗೆ ಆರಂಭವಾಗಿದ್ದರಿಂದ ದಿನೆ ದಿನೆ ತಾಪಮಾನ ಕೂಡ ಹೆಚ್ಚಾಗ ತೊಡಗಿದೆ. ಕೆರೆ ಕಟ್ಟೆಗಳು ಭತ್ತಿ‌ ಹೋಗುತ್ತಿದ್ದು,ಅಂತರ್ಜಲ ಮಟ್ಟಕುಸಿತದಿಂದ ಬೋರವೆಲ್​ಗಳು ಬಂದ್ ಆಗಿ ಹೋಗಿದೆ. ಆದ್ರೆ, ಇಂತಹ ಸಂಕಷ್ಟದ‌ ಸಮಯದಲ್ಲೂ ಜಿಲ್ಲೆಯ ಸುರಪುರ(Surapura) ತಾಲೂಕಿನ ಲಕ್ಷ್ಮಿಪುರ ಗ್ರಾಮದ ರೈತ ಶಿವರಾಜ್ ಭರ್ಜರಿಯಾಗಿ‌ ಬೆಳೆ ಬೆಳೆದಿದ್ದಾನೆ. ತನ್ನ ಒಂಬತ್ತು ಎಕರೆ …

Read More »