Breaking News

Monthly Archives: ಏಪ್ರಿಲ್ 2024

ತೆಲಂಗಾಣ ಔಷಧ ಘಟಕ ಸ್ಫೋಟ

ಹೈದರಾಬಾದ್: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಔಷಧ ಕಂಪನಿ ಘಟಕದ ರಾಸಾಯನಿಕ ರಿಯಾಕ್ಟರ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಜಿಲ್ಲೆಯ ಹತ್ತನೂರ ಮಂಡಲದ ಚಂದಾಪುರ ಗ್ರಾಮದಲ್ಲಿರುವ ಎಸ್‌ಬಿ ಆರ್ಗಾನಿಕ್ಸ್ ಲಿಮಿಟೆಡ್‌ನ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದರು. ಗುರುವಾರ ಕಾರ್ಖಾನೆಯ ಆವರಣದಲ್ಲಿ ಅವಶೇಷಗಳಡಿ ಒಬ್ಬ ಕಾರ್ಮಿಕನ ಶವ ಪತ್ತೆಯಾಗಿದ್ದು, ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿ ಬುಧವಾರ ರಾತ್ರಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ …

Read More »

ಬಂತು.. ಬಂತು.. ಮಳೆ ಬಂತು!

ಮಳೆ.. ಮಳೆ.. ಮಳೆ.. ಹೀಗೆ ಮಳೆಗಾಗಿ ಕಾದು ಕುಳಿತಿದ್ದ ಕನ್ನಡಿಗರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ. ನಿನ್ನೆ ಕೊಡಗು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬಿದ್ದಿದೆ. ಹಾಗೇ ಇದೇ ಸಮಯದಲ್ಲಿ ಮುಂದಿನ ಕೆಲವೇ ದಿನದಲ್ಲಿ ಮಳೆ ವಿಚಾರದಲ್ಲಿ ಭರ್ಜರಿ ಸಿಹಿಸುದ್ದಿ ಸಿಗುವುದು ಪಕ್ಕಾ ಆಗಿದೆಹಾಗಾದ್ರೆ ಏನದು ಸಿಹಿಸುದ್ದಿ..? ಕರ್ನಾಟಕದ ಯಾವ ಯಾವ ಜಿಲ್ಲೆಯಲ್ಲಿ ಭರ್ಜರಿ ಮಳೆ ಬೀಳಲಿದೆ? ಬನ್ನಿ ಪೂರ್ತಿ ಮಾಹಿತಿ ತಿಳಿಯೋಣ. ಅಂತೂ ಕರ್ನಾಟದಲ್ಲಿ ಮಳೆಯ …

Read More »

ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮೀ 3 ಸಾವಿರ,ಗೃಹಜ್ಯೋತಿ 300 ಯುನಿಟ್‌ಗೆ ಹೆಚ್ಚಳ?

ಲಿಂಗಸುಗೂರು:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮೀ ಯೋಜನೆ 3 ಸಾವಿರ ರೂ.ಗೆ ಹೆಚ್ಚಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜ್‌ ಭರವಸೆ ನೀಡಿದರು. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳು ಜಾರಿಗೊಂಡು ಮಹಿಳೆಯರು, ಬಡವರು, ನಿರುದ್ಯೋಗಿಗಳಿಗೆ ಆಸರೆಯಾಗಿವೆ. ಕಳೆದ ಎಂಟು ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳಿಗೆ 36 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಈ ವರ್ಷ 56 ಸಾವಿರ ಕೋಟಿ ರೂ. …

Read More »

10ರಂದು ಮರಾಠ ಸಮಾಜದ ಶಕ್ತಿ ಪ್ರದರ್ಶನ: ಪದ್ಮಾಕರ ಪಾಟೀಲ

ಬೀದರ್‌: ‘ಏ.10ರಂದು ಭಾಲ್ಕಿ ಪಟ್ಟಣದಲ್ಲಿ ಮರಾಠ ಸಮಾಜದ ಶಕ್ತಿ ಪ್ರದರ್ಶನ ಹಾಗೂ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಸಮಾಜದ ಮುಖಂಡರೂ ಆದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪದ್ಮಾಕರ ಪಾಟೀಲ ತಿಳಿಸಿದರು. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕಲ ಮರಾಠ ಸಮಾಜದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಅಂದಿನ ಸಮಾವೇಶದಲ್ಲಿ ಸುಮಾರು 1 ಲಕ್ಷ ಮರಾಠ ಸಮುದಾಯದವರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು. ಸಮಾಜವು ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, 2ಎ ಮೀಸಲಾತಿ ಕಲ್ಪಿಸುವುದು, …

Read More »

ಬೆಂಗಳೂರಲ್ಲಿ ‘KSRTC’ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ವೃದ್ದೆ ಸಾವು..!

ಬೆಂಗಳೂರು : ಬೆಂಗಳೂರಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ವೃದ್ದೆ ಸಾವನ್ನಪ್ಪಿದ ಘಟನೆ ಇಂದು ಬೆಂಗಳೂರಲ್ಲಿ ನಡೆದಿದೆ. ಮೃತರನ್ನು ಗಂಗಾರೆಡ್ಡಿ(85) ಎಂದು ಗುರುತಿಸಲಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ರಸ್ತೆ ದಾಟುತ್ತಿದ್ದಾಗ ಬಸ್ ಡಿಕ್ಕಿ ಹೊಡೆದು ವೃದ್ದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Read More »

ಏಪ್ರಿಲ್ 6 ರಿಂದ ನಾಲ್ಕು ದಿನ ಮಳೆ!

ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟಿರುವ ಕರ್ನಾಟಕದ (Karnataka) ಜನತೆಗೆ ಸಿಹಿ ಸುದ್ದಿ. ಇನ್ನು ಮೂರು ದಿನಗಳಲ್ಲಿ ಕರ್ನಾಟಕದಲ್ಲಿ ಮಳೆಯಾಗುವ (Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.ಇದೇ ಏಪ್ರಿಲ್ 6 ರಿಂದ ನಾಲ್ಕು ದಿನ ಸಾಧಾರಣ ಮಳೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 6 ರಂದು ದಕ್ಷಿಣ‌ಕನ್ನಡ , ಬೀದರ್ ,ಕಲಬುರಗಿ, ಕೊಡಗು, ಮಂಡ್ಯ, ಮತ್ತು ಮೈಸೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಏಪ್ರಿಲ್ 7ರಂದು‌, ಬೆಂಗಳೂರು, …

Read More »

ಮತ್ತೋಮ್ಮೆ ಮಾನವಿಯತೆ ಮೇರದ ಸತೀಶ್ ಜಾರಕಿಹೊಳಿ ಫೌಂಡೇಶನ್..!

ಮಾನ್ಯ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರು ಮತ್ತೋಮ್ಮೆ ಮಾನವಿಯತೆ ಮೇರದಿದಾರೆ ಬಡ ರೋಗಿಗಳಿಗೆ ಆಸರೆಯಾದ ಅವರ ಸತೀಶ್ ಜಾರಕಿಹೊಳಿ ಫೌಂಡೇಶನ್..! ಬೆಳಗಾವಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಮಾರನಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಜಿಲ್ಲೆಯ ಬಡ ರೋಗಿಗಳಿಗೆ ವಿವಿಧ ಶಸ್ತ್ರ ಚಿಕಿತ್ಸೆಗಳನ್ನು ಉಚಿತ ಮಾಡಿಸುವ ಮೂಲಕ ಆಸರೆಯಾಗಿದೆ.   ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಕರ್ನಾಟಕ ರಾಜ್ಯದ ಹಾಗೂ ಮಹಾರಾಷ್ಟ್ರದ ಗಡಿಭಾಗದ “ಸೂಪರ್ ಸ್ಪೆಷಾಲಿಟಿ”ಆಸ್ಪತ್ರೆಗಳಲ್ಲಿ …

Read More »

RCB ಟ್ರೋಫಿ ಗೆಲ್ಲದಿರುವುದಕ್ಕೆ ವಿರಾಟ್ ಕೊಹ್ಲಿಯೇ ಕಾರಣ

ಬೆಂಗಳೂರು, – ವಿಶ್ವದ ಅತ್ಯಂತ ಐಷಾರಾಮಿ ಕ್ರಿಕೆಟ್ ಲೀಗ್ (ಐಪಿಎಲ್) ಟೂರ್ನಿಯ 16 ಸೀಸನ್ಗಳು ಕಳೆದಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟ್ರೋಫಿ ಗೆಲ್ಲದೆ ಇರಲು ವಿರಾಟ್ ಕೊಹ್ಲಿಯೇ ಕಾರಣ ಎಂದು ಖ್ಯಾತ ಕ್ರಿಕೆಟಿಗ ಅಂಬಾಟಿ ರಾಯುಡು ಅವರು ತಿಳಿಸಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್ ಜಯಂಟ್ಸ್ ವಿರುದ್ಧ 28 ರನ್ಗಳ ಸೋಲು ಕಂಡಿತು. ಈ ಪಂದ್ಯದಲ್ಲಿ …

Read More »

ಆಸ್ಪತ್ರೆಗೆ ದಾಖಲಾದ ನಟ ದರ್ಶನ್

Actor Darshan : ಸ್ಯಾಂಡಲ್‌ವುಡ್‌ ಚಾಲೆಜಿಂಗ್ ಸ್ಟಾರ್ ದರ್ಶನ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಅವರ ಕೈಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ತಿಳಿದು ಬಂದಿದೆ. ಇನ್ನು ಡಿಬಾಸ್‌ ಆದಷ್ಟು ಬೇಗ ಗುಣಮುಖರಾಗಲಿ ಅಂತ ಅವರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.   ಹೌದು..ʼಡೆವಿಲ್ʼದಚ್ಚು ನಟನೆಯ ಮುಂಬರುವ ಬಹುನಿರೀಕ್ಷಿತ ಸಿನಿಮಾ. ಈ ಚಿತ್ರದ ಶೂಟಿಂಗ್ ವೇಳೆ ಡಿಬಾಸ್‌ ಅವರ ಕೈಗೆ ಪೆಟ್ಟಾಗಿತ್ತು. ಆದರೆ, ಅವರು, ಕೆಲವೊಂದಿಷ್ಟು ಸಿನಿಮಾ ಪ್ರಮೋಶನ್‌ ಮತ್ತು ಸಂಸದೆ …

Read More »

ಫಲಿಸಿತು ಕರುನಾಡ ಪ್ರಾರ್ಥನೆ : ‘ಸಾವು ಗೆದ್ದ ಬಂದ ಸಾತ್ವಿಕ್

ವಿಜಯಪುರ : ಕೊನೆಗೂ ಫಲಿಸಿತು ಕರುನಾಡಿನ ಪ್ರಾರ್ಥನೆ, ಸತತ 22ಗಂಟೆಗಳ ಕಾರ್ಯಾಚರಣೆ ನಂತರ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ಸ್ವಾತ್ವಿಕ್ ರಕ್ಷಣೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಮಗುವನ್ನು ಸತತ 21 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ ಮಾಡಲಾಗಿದ್ದು, ಹೈದರಾಬಾದಿನ ಎಂದ ಎನ್ ಡಿ ಆರ್ ಎಫ್ ತಂಡ ಕಾರ್ಯಾಚರಣೆ ಬಳಿಕ ಮಗುವನ್ನು ಸುರಕ್ಷಿತವಾಗಿ ಕೊಳವೆ ಬಾವಿಯಿಂದ ಹೊರ ತೆಗೆಯಲಾಗಿದೆ. …

Read More »