ಈಶ್ವರಪ್ಪ ನಾಮಪತ್ರ ಹಿಂದಕ್ಕೆ ಪಡೆಯಲು ಇನ್ನೂ ಅವಕಾಶವಿದೆ, ಕಾದು ನೋಡಿ: ಬಿ.ವೈ.ವಿಜಯೇಂದ್ರ ಬಳ್ಳಾರಿ: ಈಗಲೇ ಅಂತಿಮ ತೀರ್ಮಾನ ಮಾಡಬೇಡಿ, ಇನ್ನೂ ಸಮಯವಿದೆ. ಈಶ್ವರಪ್ಪ ನಾಮಪತ್ರ ಹಿಂದಕ್ಕೆ ಪಡೆಯಲು ಇನ್ನೂ ಅವಕಾಶ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶುಕ್ರವಾರ ಹೇಳಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಶ್ರೀರಾಮುಲು ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿರುವ ಬಿ.ವೈ.ವಿಜಯೇಂದ್ರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಯಡಿಯೂರಪ್ಪ ಆದೇಶದಂತೆ ಬಳ್ಳಾರಿಗೆ ಬಂದಿದ್ದೇನೆ. ಕಾಂಗ್ರೆಸ್ …
Read More »Daily Archives: ಏಪ್ರಿಲ್ 12, 2024
ದಿಂಗಾಲೇಶ್ವರ ಸ್ವಾಮೀಜಿ ನಮ್ಮನ್ನು ಕ್ಷಮಿಸಬೇಕು..: ಮುರುಗೇಶ್ ನಿರಾಣಿ
ಹುಬ್ಬಳ್ಳಿ: ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು ದೊಡ್ಡವರು, ನಮ್ಮಿಂದ ಅಥವಾ ಪ್ರಹ್ಲಾದ್ ಜೋಶಿ ಅವರಿಂದ ಏನೇ ತಪ್ಪಾಗಿದ್ದರೂ ಕ್ಷಮಿಸಬೇಕು. ಆಗಿರುವ ತಪ್ಪನ್ನು ಸರಿ ಮಾಡಿಕೊಳ್ಳುತ್ತೇವೆ. ಕೇಂದ್ರ ಹಾಗೂ ರಾಜ್ಯ ನಾಯಕರು ಶ್ರೀಗಳೊಂದಿಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಂಗಾಲೇಶ್ವರ ಶ್ರೀಗಳ ವಿಚಾರದಲ್ಲಿ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಕೇಂದ್ರದ ನಾಯಕರು ಶ್ರೀಗಳೊಂದಿಗೆ …
Read More »ಮೊದಲಿನ ಗ್ಯಾರಂಟಿಗಳೇ ಕೊಟ್ಟಿಲ್ಲ, ಈಗೇನು ಕೊಡ್ತಾರೆ: ಕೇಂದ್ರಕ್ಕೆ ಖರ್ಗೆ ಪ್ರಶ್ನೆ
ಕಲಬುರಗಿ: ವರ್ಷಕ್ಕೆ ಎರಡು ಕೋಟಿ ಉದ್ಯೋಗ, ರೈತರ ಆದಾಯ ದುಪ್ಪಟ್ಟು, ಎಂಎಸ್ಪಿ ಬೆಲೆ ಹೆಚ್ಚಳದಂತಹ ಗ್ಯಾರಂಟಿಗಳನ್ನೇ ಮಾಡದಿರುವ ಪ್ರಧಾನಿ ನರೇಂದ್ರ ಮೋದಿ ಈಗೇನು ಗ್ಯಾರಂಟಿ ಕೊಡ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು. ಕಲಬುರಗಿ ಲೋಕಸಭಾ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರವಾಗಿ ಆಯೋಜಿಸಲಾ ಕಾಂಗ್ರೆಸ್ ಪಕ್ಷದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅವುಗಳನ್ನು ಈಗಾಗಲೇ ರಾಜ್ಯದಲ್ಲಿ ಕಾರ್ಯಾನುಷ್ಠಾನ ತರಲಾಗಿದೆ. ಆದರೆ ಮೋದಿ ಗ್ಯಾರಂಟಿ ಬರೀ …
Read More »ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೇ ನಾನೇ ಮುಖ್ಯಮಂತ್ರಿ ಆಗುತ್ತೇನೆ: ಯತ್ನಾಳ್
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಪರವಾಗಿ ಮತಯಾಚಿಸಿದ ಬಳಿಕ ಅಥಣಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮುಂದಿನ ಮುಖ್ಯಮಂತ್ರಿ ನಾನೇ ಎಂದಿದ್ದಾರೆ. , : ರಾಜ್ಯದಲ್ಲಿ ಬಿಜೆಪಿ (BJP) ಮತ್ತೆ ಅಧಿಕಾರಕ್ಕೆ ಬಂದರೇ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda …
Read More »ಚುನಾವಣೆಯ ನಂತರ ಮೊಬೈಲ್ ರಿಚಾರ್ಜ್ ಶುಲ್ಕ ಶೇ.17 ಹೆಚ್ಚಳ?
ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಅನಂತರ ಏರ್ಟೆಲ್, ಜಿಯೋ ಮತ್ತು ವಿಐ(ವೋಡೋಫೋನ್ ಐಡಿಯಾ) ಟ್ಯಾರಿಫ್ ಪ್ಲ್ರಾನ್ಗಳ ದರವನ್ನು ಶೇ.15ರಿಂದ 17ರಷ್ಟು ಹೆಚ್ಚಳವಾಗಲಿವೆ ಎಂದು ದೂರಸಂಪರ್ಕ ಕ್ಷೇತ್ರದ ವರದಿಯೊಂದು ಹೇಳಿದೆ. ಜೂ.4ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.ಚುನಾವಣೆ ಬಳಿಕ ಶೀಘ್ರದಲ್ಲೇ ದೂರಸಂಪರ್ಕ ಕಂಪೆನಿಗಳು ದರ ಹೆಚ್ಚಳ ಮಾಡಲಿವೆ. ಟ್ಯಾರಿಫ್ ಪ್ಲ್ರಾನ್ಗಳ ದರದಲ್ಲಿ ಶೇ.15 ರಿಂದ 17ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ. ಭಾರ್ತಿ ಏರ್ಟೆಲ್ ಅತೀ ದೊಡ್ಡ ಫಲಾನುಭವಿಯಾಗಲಿದೆ’ ಎಂದು ಆಂಟಿಕ್ಯು ಸ್ಟಾಕ್ ಬ್ರೋಕಿಂಗ್ ವರದಿ ತಿಳಿಸಿದೆ.
Read More »ಇಂದು ನಾಮಪತ್ರ ಸಲ್ಲಿಕೆ, ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ: ಈಶ್ವರಪ್ಪ
ಶಿವಮೊಗ್ಗ: ಏ.12ರಂದು ನಾಮಪತ್ರ ಸಲ್ಲಿಸುತ್ತೇನೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಠೇವಣಿ ಹಣವಾಗಿ ನಗರದ ಮಹಿಳೆಯರು ಮತ್ತು ಮುತ್ತೆçದೆಯರು ಸೇರಿ 24 ಸಾವಿರ ರೂ.ಮತ್ತು ತೀರ್ಥಹಳ್ಳಿಯ ಭೀಮನಕಟ್ಟೆ ಮಠದ ಶ್ರೀಗಳು 1 ಸಾವಿರ ರೂ. ನೀಡಿ ಹರಿಸಿದ್ದಾರೆ. ನಾಮಪತ್ರದ ಸಲ್ಲಿಕೆಗೆ ಆಗಮಿಸಲು ಯಾವ ದೊಡ್ಡ ನಾಯಕರೂ ನನಗಿಲ್ಲ. ಸಾಮಾನ್ಯ ಕಾರ್ಯಕರ್ತರೇ ನನ್ನ ಸ್ಟಾರ್ ಪ್ರಚಾರಕರು. ಹಿಂದೂ ಭಕ್ತನಿಗೆ ರಾಷ್ಟ್ರಭಕ್ತ ಮುಸಲ್ಮಾನರು …
Read More »ಮತದಾರರಿಗೆ ಹಂಚಲು ಕೊಟ್ಟಿದ್ದ ಹಣ ತಲುಪದ ಕಾರಣ ಸೋತೆ: ಎಂಟಿಬಿ ನಾಗರಾಜ್
ಹೊಸಕೋಟೆ: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಹಲವು ಕಾರಣಗಳಿರಬಹುದು. ಆದರೆ, ಮತದಾರರಿಗೆ ಹಂಚಲು ಕೊಟ್ಟಿದ್ದ ಹಣ ಸರಿಯಾಗಿ ಹಂಚಿಕೆಯಾಗಲಿಲ್ಲ. ಹಾಗಾಗಿ ನಾನು ಸೋಲಬೇಕಾಯಿತು’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ ನಾಗರಾಜ್ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಮತದಾರರಿಗೆ ಹಂಚಿಕೆಯಾಗಬೇಕಿದ್ದ ಹಣ ಅವರನ್ನು ತಲುಪಿಲ್ಲ ಎಂಬ ಕುರಿತು ನನಗೆ ಹಲವು ದೂರು ಬಂದಿದ್ದವು.ಈ ಲೋಕಸಭಾ ಚುನಾವಣೆಯಲ್ಲಿ ಹಾಗೇ …
Read More »ಸಿಡಿಲಿಗೆ ಎಮ್ಮೆ ಸಾವು
ಅಫಜಲಪುರ: ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗುರುವಾರ ಸಂಜೆ ಮಳೆ ಸುರಿಯಿತು. ಬಿಸಿಲಿನ ಧಗೆಯಿಂದ ಕಂಗಲಾಗಿದ್ದ ಜನರಿಗೆ ಮಳೆ ತಂಪು ನೀಡಿತು. ಸಿಡಿಲಿಗೆ ಆನೂರು ಗ್ರಾಮದಲ್ಲಿ ಮನೋಹರ್ ಕಲ್ಲಪ್ಪ ಹಿಪ್ಪರಗಿ ಅವರ ತೋಟದಲ್ಲಿ ಕಟ್ಟಿದ್ದ ಎಮ್ಮೆಯೊಂದು ಮೃತಪಟ್ಟಿದೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ಗ್ರಾಮಗಳಲ್ಲಿ ಬಿರುಗಾಳಿಗೆ ಬಾಳೆ ಗಿಡಗಳು ಮತ್ತು ಮೇವಿನ ಬಣವಿ ಹಾಳಾದ ಬಗ್ಗೆ ವರದಿಯಾಗಿದೆ.ತಾಲ್ಲೂಕಿನ ಆನೂರು ಗ್ರಾಮದ ರೈತ ಮನೋಹರ್ ಕಲ್ಲಪ್ಪ ಹಿಪ್ಪರಗಿ …
Read More »