Breaking News

Monthly Archives: ಮಾರ್ಚ್ 2024

ಅಪಾಯಕಾರಿ ಕಾಟನ್ ಕ್ಯಾಂಡಿ,ಗೋಬಿ ಮಂಚೂರಿಯನ್ನು ಮಾರಾಟ ಮಾಡುವಂತಿಲ್ಲ: ದಿನೇಶ್ ಗುಂಡೂರಾವ್

ಬೆಂಗಳೂರು : ಅಪಾಯಕಾರಿ ಕಾಟನ್ ಕ್ಯಾಂಡಿ,ಗೋಬಿ ಮಂಚೂರಿಯನ್ನು ಮಾರಾಟ ಮಾಡುವಂತಿಲ್ಲ ಎಂದು ಆರೋಗ್ಯ ಸಚಿವ‌ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ವಿಧಾನಸೌಧ ದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವರು,ಗೋಬಿ ಮಂಚೂರಿ, ಕಾಟನ್ ಕ್ಯಾಂಡಿಯಲ್ಲಿ ಅಪಾಯಕಾರಿ ಕೃತಕ ಬಣ್ಣ ಬಳಕೆ ಹೆಚ್ಚಾಗಿರುವುದು ಆಹಾರ ತಪಾಸಣೆಯಲ್ಲಿ ಕಂಡು ಬಂದಿದೆ ಎಂದು ಹೇಳಿದರು. ಒಂದು ವೇಳೆ ಯಾರಾದರೂ ಇವುಗಳನ್ನು ಮಾರಾಟ ಮಾಡಿದರೆ ಅಥವಾ ಅಪಾಯಕಾರಿ ಕೃತಕ ಬಣ್ಣ ಬಳಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ …

Read More »

ಮೈಸೂರಿನಿಂದ ಯದುವೀರ್ ಒಡೆಯರ್ ಕಣಕ್ಕೆ

ಮೈಸೂರು: ಬಹುನಿರೀಕ್ಷಿತ 2024ರ ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ಬಿಜೆಪಿ ಜತೆ ಜೆಡಿಎಸ್​ ಮೈತ್ರಿ ಮಾಡಿಕೊಂಡಿದೆ. ಗೆಲ್ಲೋ ಕುದುರೆಗಳಿಗೆ ಮಾತ್ರ ಟಿಕೆಟ್​ ಎಂದು ರಾಜ್ಯ ಬಿಜೆಪಿ ನಾಯಕರು ಈಗಾಗಲೇ ಘೋಷಣೆ ಮಾಡಿದ್ದಾರೆ. ಇಂದು ಕೂಡ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ಹೈವೋಲ್ಟೇಜ್​​ ಮೀಟಿಂಗ್​ ನಡೆಸಿದೆ. ಸದ್ಯದ ಮೂಲಗಳ ಪ್ರಕಾರ ಎರಡು ಹಂತಗಳಲ್ಲಿ ಬಿಜೆಪಿ ಟಿಕೆಟ್​ ಘೋಷಣೆ ಆಗಲಿದೆ ಎಂದು ತಿಳಿದು ಬಂದಿದೆ. ಇನ್ನೂ, ರಾಜ್ಯದಲ್ಲಿ ಭಾರೀ …

Read More »

ಚುನಾವಣೆ ಬಿಸಿ ಏರತೊಡಗಿದ್ದು ದಿನ ಕಳೆದಂತೆ ವಿಭಿನ್ನ ಲೆಕ್ಕಾಚಾರ

ಬೆಳಗಾವಿ : ಲೋಕಸಭಾ ಚುನಾವಣೆ ಬಿಸಿ ಏರತೊಡಗಿದ್ದು ದಿನ ಕಳೆದಂತೆ ವಿಭಿನ್ನ ಲೆಕ್ಕಾಚಾರ ಹೊರಬರುತ್ತಿವೆ. ಈ ನಡುವೆ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಬಿಜೆಪಿ ಟಿಕೆಟ್ ಯಾರಿಗೆ ಎಂಬ ಚರ್ಚೆ ಜೋರಾಗಿದೆ. ಸಧ್ಯ ಮೂಲಗಳ ಪ್ರಕಾರ ಬೆಳಗಾವಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅದವರನ್ನೇ ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾಂಗ್ರೆಸ್ ಸೇರಿ ಬಿಜೆಪಿಗೆ ಹೊಡೆತ ನೀಡಿದ್ದ ಶೆಟ್ಟರ್ ಅವರಿಗೆ …

Read More »

ಲಂಚಕ್ಕೆ ಬೇಡಿಕೆ: ಎಫ್‌ಡಿಸಿಗೆ ಮೂರು ವರ್ಷ ಜೈಲು

ಕಾರವಾರ: ಹಕ್ಕುಪತ್ರ ವಿತರಣೆಗೆ ರೈತರೊಬ್ಬರಿಂದ ಲಂಚ ಪಡೆದಿದ್ದ ಅಂಕೋಲಾ ತಹಶೀಲ್ದಾರ ಕಚೇರಿಯ ಪ್ರಥಮ ದರ್ಜೆ ಸಹಾಯಕರೊಬ್ಬರಿಗೆ (ಎಫ್‌ಡಿಸಿ) ಮೂರು ವರ್ಷ ಜೈಲು ಶಿಕ್ಷೆ ಮತ್ತು ₹15 ಸಾವಿರ ದಂಡ ವಿಧಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಶಬ್ಬೀರ್ ಖಾಸಿಮ್ ಶೇಖ್ ಶಿಕ್ಷೆಗೆ ಗುರಿಯಾದವರಾಗಿದ್ದಾರೆ.ಅಂಕೋಲಾ ತಾಲ್ಲೂಕಿನ ಬೊಬ್ರುವಾಡಾದ ಗಣೇಶ ನಾಯ್ಕ ಅವರ ಜಮೀನಿನ ಪಹಣಿ ಪತ್ರದ 9ನೇ ಕಾಲಂನಲ್ಲಿ ಕರ್ನಾಟಕ ಸರ್ಕಾರದ ಹಕ್ಕು ಕಡಿಮೆ ಮಾಡಿ ಅವರ ತಾಯಿ ಶಾರದಾ ನಾಯ್ಕ …

Read More »

ವೃದ್ಧ ಮಾವನಿಗೆ ವಾಕಿಂಗ್ ಸ್ಟಿಕ್​​ನಿಂದ ಹೊಡೆದ ಸೊಸೆ,

ಮಂಗಳೂರು, ಮಾರ್ಚ್​ 11: ವೃದ್ಧ ಮಾವ (father-in-law) ನಿಗೆ ವಾಕಿಂಗ್ ಸ್ಟಿಕ್​​ನಲ್ಲಿ ಸೊಸೆ ಹೊಡೆದಿರುವಂತಹ ಅಮಾನವೀಯ ಘಟನೆಯೊಂದು ನಗರದಲ್ಲಿ ನಡೆದಿದೆ. ಮಾರ್ಚ್ 9 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಉಮಾಶಂಕರಿ ಎಂಬುವವರಿಂದ ಕೃತ್ಯವೆಸಲಾಗಿದೆ. ಮಾವ ಪದ್ಮನಾಭ ಸುವರ್ಣ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಲಾಗಿದೆ. ಪತಿ ವಿದೇಶದಲ್ಲಿದ್ದು ಮನೆಯಲ್ಲಿ ಮಾವ ಅತ್ತೆ ಮಾತ್ರ ಇದ್ದರು. ಸಿಸಿಟಿವಿ ಆಧರಿಸಿ ಪತಿ ಠಾಣೆಗೆ ದೂರು ನೀಡಿದ್ದು, ಕಂಕನಾಡಿ ಪೊಲೀಸರಿಂದ ಉಮಾಶಂಕರಿಯನ್ನು ಬಂಧಿಸಲಾಗಿದೆ. …

Read More »

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ   ಇನ್ನು ಅಥಣಿ, ಬೈಲಹೊಂಗಲ, ರಾಮದುರ್ಗ ತಾಲೂಕುಗಳ 3 ಸ್ಥಾನಗಳಿಗೆ ಬರುವ ಭಾನುವಾರದಂದು ಚುನಾವಣೆ ಪಕ್ಷಾತೀತ, ಜಾತ್ಯತೀತವಾಗಿ ಅವಿರೋಧವಾಗಿ ಆಯ್ಕೆಯಾಗಲು ಬೆಂಬಲಿಸಿ ಸಹಕರಿಸಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದ ಶಾಸಕ, ಅವಿರೋಧ ಆಯ್ಕೆಯ ರೂವಾರಿ ಬಾಲಚಂದ್ರ ಜಾರಕಿಹೊಳಿ   ಬೆಳಗಾವಿ: ಬರುವ ದಿನಾಂಕ 17 ರಂದು ಜರುಗುವ ಬೆಳಗಾವಿ …

Read More »

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಾಂಬರ್ ಯಾರೆಂಬುದು ಗೊತ್ತಾಗಿದೆ: ಗೃಹಸಚಿವ ಪರಮೇಶ್ವರ್

ಬೆಂಗಳೂರು, ಮಾರ್ಚ್​ 11: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameswaram cafe) ಸಂಭವಿಸಿದ್ದ ಸ್ಪೋಟ (Bomb Blast) ಪ್ರಕರಣಕ್ಕೆ ಸಂಬಂಧಿಸಿದ ಬಾಂಬರ್​ ಯಾರೆಂಬುದು ಒಂದು ಹಂತಕ್ಕೆ ಪತ್ತೆ ಆಗಿದೆ. ಅದನ್ನು ದೃಢಪಡಿಸಿಕೊಳ್ಳಬೇಕಿ ಎಂದು ಗೃಹಸಚಿವ ಜಿ ಪರಮೇಶ್ವರ್​ (G Parameshwara) ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಾಂಬರ್ ಯಾರೆಂಬುದು ಬಹುತೇಕ ಪತ್ತೆಯಾಗಿದೆ. ಅದನ್ನು ಸಿಸಿಬಿ, ಎನ್​ಐಎ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಮಾರ್ಚ್ 1ರಂದು ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು. ಏತನ್ಮಧ್ಯೆ, …

Read More »

ಸಂವಿಧಾನ ಬದಲಾವಣೆ ಮಾಡಲು ಹೊರಟರೆ ದೇಶದಲ್ಲಿ ರಕ್ತಪಾತ: ಸಿಎಂ

ಬೆಂಗಳೂರು, ಮಾರ್ಚ್​ 11: ಬಿಜೆಪಿಯವರು ಒಂದು ವೇಳೆ ಸಂವಿಧಾನ ಬದಲಾವಣೆ ಮಾಡುವ ಕೆಲಸಕ್ಕೆ ಹೊರಟರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದರು. ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರ ಸಂವಿಧಾನ ಬದಲಾವಣೆ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹೆಗಡೆ ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಚಿವರಾಗಿದ್ದಾಗಲೂ ಸಂವಿಧಾನ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದರು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದಾಗಲೇ …

Read More »

ಫೆಬ್ರುವರಿಯಲ್ಲಿ ಭಾರತದ ಹಣದುಬ್ಬರ ಎಷ್ಟಿರಬಹುದು?

ನವದೆಹಲಿ, ಮಾರ್ಚ್ 11: ಜನವರಿಯಲ್ಲಿ ಶೇ. 5.1ರಷ್ಟಿರುವ ಹಣದುಬ್ಬರ ಫೆಬ್ರುವರಿಯಲ್ಲೂ ಮುಂದುವರಿದಿರುವ ಸಾಧ್ಯತೆ ಇದೆ ಎಂದು ವಿವಿಧ ಆರ್ಥಿಕ ತಜ್ಞರು (economists poll) ಅಭಿಪ್ರಾಯಪಟ್ಟಿದ್ದಾರೆ. ರಾಯ್ಟರ್ಸ್ ನಡೆಸಿದ 15 ಆರ್ಥಿಕ ತಜ್ಞರ ಸಮೀಕ್ಷೆ ಪ್ರಕಾರ ಫೆಬ್ರುವರಿ ತಿಂಗಳಲ್ಲಿ ಹಣದುಬ್ಬರ (India inflation) ಶೇ. 5.1ರಷ್ಟಿರಬಹುದು ಎನ್ನಲಾಗಿದೆ. ಇದು ನಿಜವೇ ಆದಲ್ಲಿ ಆರ್​ಬಿಐ ನಿಗದಿ ಮಾಡಿರುವ ಹಣದುಬ್ಬರ ತಾಳಿಕೆ ಮಿತಿಯಾದ ( ಶೇ. 6ರ ಒಳಗೆ ಹಣದುಬ್ಬರ ಇರಲಿದೆ. ಮಾರ್ಚ್ 12, ಮಂಗಳವಾರ …

Read More »

ತೋಟದ ಮನೆಯಲ್ಲಿ 25 ಮನುಷ್ಯರ ತಲೆಬುರುಡೆ ಪತ್ತೆ; ಮಾಟ-ಮಂತ್ರ ಶಂಕೆ, ಓರ್ವ ಅರೆಸ್ಟ್

ರಾಮನಗರ, ಮಾರ್ಚ್​.11: ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ 25 ಮನುಷ್ಯರ ತಲೆಬುರುಡೆಗಳು (Human Skulls) ಪತ್ತೆಯಾಗಿವೆ. ಬಲರಾಮ್ ಎಂಬ ವ್ಯಕ್ತಿ ತಲೆ ಬುರುಡೆ ಸಂಗ್ರಹ ಮಾಡುತ್ತಿದ್ದಾನೆ ಎಂಬ ಗಂಬೀರ ಆರೋಪ ಕೇಳಿ ಬಂದಿದೆ. ಬಲರಾಮ್ ತಲೆ ಬುರಡೆಗಳನ್ನು ಸಂಗ್ರಹಿಸಿ ಅವುಗಳಿಂದ ಮಾಟ-ಮಂತ್ರ ಮಾಡುತ್ತಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಮಶಾನದಲ್ಲಿ ಪೂಜೆ ಮಾಡುತ್ತಿದ್ದದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು ಸದ್ಯ ಸ್ಥಳಕ್ಕೆ ಬಂದ ಪೊಲೀಸರು (Bidadi Police) ಬಲರಾಮ್​ನನ್ನು …

Read More »