ಹುಬ್ಬಳ್ಳಿ: ‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಭೇಟಿಯಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದೇನೆ. ಟಿಕೆಟ್ ನನಗೆ ನೀಡಲು ತೀರ್ಮಾನವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ’ ಎಂದು ಜಗದೀಶ ಶೆಟ್ಟರ್ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬೆಳಗಾವಿಯಿಂದ ಸ್ಪರ್ಧಿಸುವಂತೆ ವರಿಷ್ಠರು ಸೂಚಿಸಿದ್ದರು. ಇದಲ್ಲದೇ, ಬೆಳಗಾವಿ ನಾಯಕರ ಜೊತೆ ಚರ್ಚಿಸಿದ ನಂತರ ಸ್ಪರ್ಧಿಸಲು …
Read More »Daily Archives: ಮಾರ್ಚ್ 15, 2024
ಈಶ್ವರಪ್ಪಗೆ ತಾಕತ್ತಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿ: ಆಯನೂರು
ಶಿವಮೊಗ್ಗ: ಕೆ.ಎಸ್ ಈಶ್ವರಪ್ಪ ಹೇಳುತ್ತಿರುವುದು ಎಲ್ಲಾ ಸುಳ್ಳು. ಈಶ್ವರಪ್ಪ ಬ್ಲ್ಯಾಕ್ ಮೇಲ್ ರಾಜಕಾರಣಿ. ಈಶ್ವರಪ್ಪ ಅವರಿಗೆ ಯಾರೂ ಟಿಕೆಟ್ ತಪ್ಪಿಸಲಿಲ್ಲ. 40% ಗೆ ಅವರೇ ಬಲಿದಾನ ಮಾಡಿಕೊಂಡಿದ್ದಾರೆ. ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ವಿಧಾನಸಭೆ, ಲೋಕಸಭೆ ಕೇಳಿದ್ದರು, ಎರಡೂ ತಪ್ಪಿ ಹೋಯ್ತು. ಈಗ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರ ಕೇಳುತ್ತಿದ್ದಾರೆ. ಅದು ಸಿಗಲಿಲ್ಲವಾದರೆ ಜಿ.ಪಂ. ಇದೆಯಲ್ಲಾ. ಅದಕ್ಕಾಗಿ ಈ ರೀತಿ ಮಾತನಾಡ್ತಿದ್ದಾರೆ. ಈಶ್ವರಪ್ಪ ಖಂಡಿತವಾಗಿ ಪಕ್ಷೇತರವಾಗಿ ಸ್ಪರ್ಧೆ ಮಾಡುವುದಿಲ್ಲ. ಅವರಿಗೆ ಖಂಡಿತವಾಗಿ …
Read More »ಬೇರೆ ಪಕ್ಷಕ್ಕೆ ಹೋಗುವುದಿಲ್ಲ: ಸಂಗಣ್ಣ ಕರಡಿ ಸ್ಪಷ್ಟನೆ
ಕೊಪ್ಪಳ: ನಾನು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ನ ಕೆಲವರು ನನ್ನ ಜೊತೆ ಸೌಜನ್ಯಕ್ಕಾಗಿ ಮಾತನಾಡಿದ್ದಾರೆ. ಆದರೆ ಪಕ್ಷ ಸೇರುವ ಬಗ್ಗೆ ಮಾತನಾಡಿಲ್ಲ. ನಾನು ಪಕ್ಷದಲ್ಲಿಯೇ ಇರುತ್ತೇನೆ. ಕೆಆರ್ಪಿಪಿ ಪಕ್ಷಕ್ಕೆ ಹೋಗುವೆ ಎನ್ನುವ ವಿಚಾರ ಎಲ್ಲವೂ ಊಹಾಪೋಹ. ನಾನು ಈಗಲೇ ಎಲ್ಲವೂ ನಿರ್ಧಾರ ಮಾಡಿಲ್ಲ ಎಂದು ಕೊಪ್ಪಳದಲ್ಲಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಹೇಳಿದರು. ಮುಂದಿನ ಲೋಕಸಭೆ ಚುನಾವಣೆಗೆ ಅವರಿಗೆ ಟಿಕೆಟ್ ತಪ್ಪಿದ ಬಳಿಕ ಬೆಂಬಲಿಗರು ಪಕ್ಷದ …
Read More »ಅಮಿತ್ ಶಾ ಭೇಟಿಯಾದ ಗಾಲಿ ಜನಾರ್ದನ ರೆಡ್ಡಿ
ಕೊಪ್ಪಳ : ಕೆಆರ್ ಪಿಪಿ ಪಕ್ಷದ ಸಂಸ್ಥಾಪಕ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರುವಾರ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ರೆಡ್ಡಿ ಅವರ ನಡೆ ಕುತೂಹಲ ಮೂಡಿಸಿದ್ದು ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಲೋಕಸಭಾ ಚುನಾವಣೆಗೆ ಕೆಆರ್ ಪಿಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದ್ದ ರೆಡ್ಡಿ ಅವರು …
Read More »ಜಮೀನು ಮಾರಾಟದ ಹಣಕ್ಕಾಗಿ ತಂದೆಯನ್ನೇ ಕೊಂದ ಮಕ್ಕಳು
ಗದಗ: ಜಮೀನು ಮಾರಾಟದಿಂದ ಸಿಕ್ಕ ಹಣವನ್ನು ಸಮನಾಗಿ ಹಂಚಿಕೆ ಮಾಡಿಲ್ಲ ಎಂಬ ವಿಚಾರಕ್ಕೆ ಮಕ್ಕಳೇ ತಂದೆಯನ್ನು ರಾಡ್‌ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಗುರುವಾರ ನಡೆದಿದೆ. ವಿವೇಕಾನಂದ ಕರಿಯಲ್ಲಪ್ಪ (65) ಕೊಲೆಯಾದ ವ್ಯಕ್ತಿ. ವಿವೇಕಾನಂದ ಅವರ ಮೊದಲನೇ ಪತ್ನಿ ಕಸ್ತೂರಿ ಅವರ ಮಕ್ಕಳಾದ ಮಲ್ಲೇಶ ಮತ್ತು ಪ್ರಕಾಶ ಆರೋಪಿಗಳು. ವಿವೇಕಾನಂದ ಅವರು ಪಿತ್ರಾರ್ಜಿತವಾಗಿ ಬಂದಿದ್ದ ಆರು ಎಕರೆ ಜಮೀನಿನಲ್ಲಿ ಮೂರು ಎಕರೆಯನ್ನು ಮಾರಾಟ ಮಾಡಿದ್ದರು. ಅದರಿಂದ ಬಂದ …
Read More »ತಮ್ಮ ಹೆಸರಿನ ರಸ್ತೆ ತಾವೇ ಉದ್ಘಾಟಿಸಿದ ಕೋವಿಂದ್!
ಹೊಸದಿಲ್ಲಿ: ರಾಷ್ಟ್ರಪತಿ ಭವನ ಎಸ್ಟೇಟ್‌ನಲ್ಲಿ ತಮ್ಮ ಹೆಸರಿನಲ್ಲಿ ನಿರ್ಮಿಸಲಾದ ರಸ್ತೆಯನ್ನು ಮಾಜಿ ರಾಷ್ಟ್ರ ಪತಿ ರಾಮನಾಥ್ ಕೋವಿಂದ್ ತಾವೇ ಖುದ್ದಾಗಿ ಲೋಕಾರ್ಪಣೆಗೊಳಿಸಿದ್ದಾರೆ. ತಮ್ಮ ನೇತೃತ್ವದ ಸಮಿ ತಿಯ “ಒಂದು ದೇಶ, ಒಂದು ಚುನಾವಣೆ’ ವರದಿ ಯನ್ನು ರಾಷ್ಟ್ರಪತಿಗೆ ಹಸ್ತಾಂತರಿಸಲು ಕೋವಿಂದ್ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. “ಅನಿರೀಕ್ಷಿತವಾದ ಈ ಘಟನೆ ನನ್ನ ಪಾಲಿನ ವಿಧಿ ಆಗಿದ್ದಿರಬಹುದು. ಅಚ್ಚರಿಯ ಅವಕಾಶವನ್ನು ನೀಡಿದ ರಾಷ್ಟ್ರಪತಿ ಭವನಕ್ಕೆ ಕೃತಜ್ಞ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
Read More »PSI ಹಗರಣ ಎಸ್‌ಐಟಿ ತನಿಖೆಗೆ: ಸಿಎಂ ನೇತೃತ್ವದ ಸಚಿವ ಸಂಪುಟ ಸಭೆ ತೀರ್ಮಾನ
ಬೆಂಗಳೂರು: ಲೋಕಸಭಾ ಚುನಾ ವಣೆಯ ಹೊಸ್ತಿಲಲ್ಲಿ ಬಿಜೆಪಿ ವಿರುದ್ಧ ಮತ್ತೂಂದು ತನಿಖಾಸ್ತ್ರ ಬಳಕೆಗೆ ಕಾಂಗ್ರೆಸ್ ಮುಂದಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಪಿಎಸ್‌ಐ ನೇಮಕ ಹಗರಣದ ಬಗ್ಗೆ ವಿಶೇಷ ತನಿಖಾ ಸಮಿತಿ (ಎಸ್‌ಐಟಿ) ರಚಿಸಿ ತನಿಖೆ ನಡೆಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಿಎಂ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯವೂ ಸೇರಿ ಒಟ್ಟು 48 ವಿಷಯಗಳಿಗೆ ಅನುಮೋದನೆ ನೀಡಲಾಗಿದೆ. ಈ ಬಗ್ಗೆ ಕಂದಾಯ …
Read More »ಕರ್ನಾಟಕದಲ್ಲಿ ಎನ್‌ಡಿಎ 25; ಬೆಂಗಳೂರು ಭಾಗದಲ್ಲಿ 1 ಕೈಗೆ
ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನ್ಯೂಸ್18 ನಡೆಸಿರುವ ಸಮೀಕ್ಷೆಯ ಪ್ರಕಾರ, ಕರ್ನಾಟಕದ 28 ಕ್ಷೇತ್ರಗಳಲ್ಲಿ ಎನ್‌ಡಿಎ (ಬಿಜೆಪಿ ಮತ್ತು ಜೆಡಿಎಸ್) 25 ಕ್ಷೇತ್ರಗಳನ್ನು ಗೆಲ್ಲಲಿದ್ದು, ಕಾಂಗ್ರೆಸ್ 3 ಸ್ಥಾನಕ್ಕೆ ತೃಪ್ತಿ ಪಡಲಿದೆ. ಹಾಗೆಯೇ, ಎನ್‌ಡಿಎ ಶೇ.58 ಮತ್ತು ಕಾಂಗ್ರೆಸ್ ಶೇ.35 ಮತ ಗಳಿಸಲಿವೆ. ಇನ್ನು ದೇಶಾದ್ಯಂತ ಎನ್‌ಡಿಎ 411, ಇಂಡಿಯಾ ಒಕ್ಕೂಟ 105 ಮತ್ತು ಇತರರು 27 ಸ್ಥಾನಗಳನ್ನು ಜಯಿಸಲಿದ್ದಾರೆ. ಈ ಸಮೀಕ್ಷೆಯ ಪ್ರಕಾರ, 400 ಸೀಟು ಗೆಲ್ಲುವ ತನ್ನ ಗುರಿಯನ್ನು …
Read More »ಇಂದೂ ನಡೆಯದು ಸಭೆ,ಕಾಂಗ್ರೆಸ್ ಪಟ್ಟಿ ವಿಳಂಬ ಸಂಭವನೀಯ ಅಭ್ಯರ್ಥಿಗಳು:
ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ 7 ಕ್ಷೇತ್ರಗಳಿಗೆ ಮೊದಲ ಪಟ್ಟಿ ಬಿಡುಗಡೆ ಮಾಡಿ 8 ದಿನಗಳು ಕಳೆದರೂ ಬಾಕಿ ಉಳಿದಿರುವ 21 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಗ್ರಹಣ ಹಿಡಿದಿದೆ. ಈ ಮಧ್ಯೆ ಶುಕ್ರವಾರ ನಡೆಯಬೇಕಿದ್ದ ಕೇಂದ್ರ ಚುನಾವಣ ಸಮಿತಿ ಸಭೆ ಸೋಮವಾರಕ್ಕೆ ಮುಂದೂಡಿಕೆ ಆಗಿದ್ದು, ಪಟ್ಟಿ ಬಿಡುಗಡೆ ಮತ್ತಷ್ಟು ವಿಳಂಬವಾಗಲಿದೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಮಾರೋಪ ಸಮಾರಂಭವು ರವಿವಾರ ಮುಂಬಯಿಯಲ್ಲಿ ನಡೆಯಲಿರುವುದರಿಂದ ರಾಜ್ಯದಿಂದ …
Read More »ಮಾರ್ಚ್ 16ಕ್ಕೆ ಬಹು ನಿರೀಕ್ಷಿತ ಲೋಕಸಭಾ ಚುನಾವಣಾ ದಿನಾಂಕ ಘೋಷಣೆ
ನವದೆಹಲಿ: ದೇಶದ ಜನರು ಬಹುದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಲೋಕ ಸಭಾ ಚುನಾವಣೆಗೆ ದಿನಾಂಕ ನಿಗದಿಗೊಳಿಸುವ ಸಮಯ ಹತ್ತಿರ ಬಂದಿದೆ. ಹೌದು ಬಹುನಿರೀಕ್ಷಿತ ಲೋಕಸಭಾ ಚುನಾವಣೆಗೆ ನಾಳೆ( ಮಾರ್ಚ್ 16) ಮಧ್ಯಾಹ್ನ ದಿನಾಂಕ ಘೋಷಣೆ ಮಾಡಲಾಗುವುದೆಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಹೊಸದಾಗಿ ಚುನಾಯಿತ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರೊಂದಿಗೆ ನಾಳೆ ಮಧ್ಯಾಹ್ನ 3 ಗಂಟೆಗೆ ದೆಹಲಿಯ ವಿಜ್ಞಾನ …
Read More »