ಬೆಂಗಳೂರು: ವ್ಯಕ್ತಿಯನ್ನು ಬಂಧಿಸಿ ಹಣಕ್ಕೆ (Money) ಬೇಡಿಕೆ ಇಟ್ಟಿದ್ದ ಕೆಆರ್ ಪುರ ಪೋಲಿಸರು (KR Pura Police) ಲೋಕಾಯುಕ್ತ (Lokayukta) ಬಲೆಗೆ ಬಿದ್ದ ಘಟನೆ ನಡೆದಿದೆ. ಕೆಆರ್ ಪುರ ಠಾಣಾ ಇನ್ಸ್‌ಪೆಕ್ಟರ್ ವಜ್ರಮುನಿ ಹಾಗೂ ಸಬ್ ಇನ್ಸ್‌ಪೆಕ್ಟರ್ ರಮ್ಯಾ ಹಣಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸರು. ಶ್ರೀರಾಮ್ ಎನ್ನುವವರನ್ನು 420 ಕೇಸ್‌ನಲ್ಲಿ ಬಂಧಿಸಿದ್ದ ರಮ್ಯಾ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ರಾತ್ರೋ ರಾತ್ರಿ 50 ಸಾವಿರ ರೂ. ಪಡೆದು ಶ್ರೀರಾಮ್‌ನನ್ನು …
Read More »Daily Archives: ಮಾರ್ಚ್ 14, 2024
ವಿದೇಶಿ ಕಾರಿಗೆ ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಸ್ವಾಗತ: ಬೆಲೆ 10 ಕೋಟಿ ಇರಲಿ ಪೂಜೆ ಕಡ್ಡಾಯ!
ಭಾರತದಲ್ಲಿ ವಾಹನಗಳನ್ನು ಖರೀದಿಸಿದಾಗ, ಮೊದಲು ದೇವಾಲಯಕ್ಕೆ ಹೋಗುತ್ತಾರೆ. ವಾಹನಕ್ಕೆ ಪೂಜೆ ನೆರವೇರಿಸದ ಬಳಿಕವಷ್ಟೆ ಕುಟುಂಬವೆಲ್ಲ ಓಡಾಡುತ್ತಾರೆ. ಇದು ಹಿಂದೂ ಸಾಂಪ್ರದಾಯವಾಗಿದ್ದು, ಬಹುಕೋಟಿ ಐಷಾರಾಮಿ ಬೆಂಟ್ಲೆ ಎಸ್‌ಯುವಿ ಖರೀದಿಸಿದ ಮಾಲೀಕರೊಬ್ಬರು ಪೂಜೆ ನೆರವೇರಿಸಿ ಇದೀಗ ವೈರಲ್ ಆಗಿದ್ದಾರೆ. ಈ ಕುರಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬೆಂಟ್ಲಿ ಬೆಂಟೈಗಾ ಎಸ್‌ಯುವಿಯನ್ನು ವ್ಯಕ್ತಿಯೊಬ್ಬರು ಖರೀದಿಸಿದ್ದು, ಬೆಂಗಳೂರಿನ ಎಕ್ಸ್ ಶೋರೂಂ ಪ್ರಕಾರ ಇದರ ಬೆಲೆಯು ರೂ. 5 ಕೋಟಿಯಿಂದ ಪ್ರಾರಂಭವಾಗಿ ರೂ. 7 …
Read More »ಪಶ್ಚಿಮ ಬಂಗಾಳ ಸಿಎಂ ‘ಮಮತಾ ಬ್ಯಾನರ್ಜಿ’ಗೆ ಗಂಭೀರ ಗಾಯ,
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಎಂಸಿ ತನ್ನ ಎಕ್ಸ್ ಹ್ಯಾಂಡಲ್ನಲ್ಲಿ ಈ ಮಾಹಿತಿಯನ್ನ ನೀಡಿದ್ದು, ನಮ್ಮ ಅಧ್ಯಕ್ಷರು ಗಂಭೀರ ಗಾಯದಿಂದ ಬಳಲುತ್ತಿದ್ದಾರೆ ಎಂದು ಟಿಎಂಸಿ ಬರೆದಿದೆ. ಅವರಿಗಾಗಿ ಪ್ರಾರ್ಥಿಸಿ ಎಂದಿದ್ದಾರೆ. ಸಿಎಂ ಮಮತಾ ಅವರ ಚಿತ್ರವೂ ಹೊರಬಂದಿದ್ದು, ಅದರಲ್ಲಿ ಅವರ ಹಣೆಯಿಂದ ರಕ್ತ ಹೊರಬರುತ್ತಿರುವುದನ್ನ ಕಾಣಬಹುದು. ಅವರನ್ನ ಕೋಲ್ಕತ್ತಾದ ಎಸ್‌ಎಸ್ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
Read More »CAA: ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಅಮಿತ್ ಶಾ
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಎಂದಿಗೂ ಹಿಂಪಡೆಯುವುದಿಲ್ಲ ಮತ್ತು ಬಿಜೆಪಿ ನೇತೃತ್ವದ ಸರ್ಕಾರವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ. “ನಮ್ಮ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಚಿತಪಡಿಸಿಕೊಳ್ಳಲು ಇದು ನಮ್ಮ ಸಾರ್ವಭೌಮ ಹಕ್ಕು, ನಾವು ಅದರಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಸಿಎಎ ಅನ್ನು ಎಂದಿಗೂ ಹಿಂತೆಗೆದುಕೊಳ್ಳುವುದಿಲ್ಲ” ಎಂದು ಬಿಜೆಪಿಯ ಹಿರಿಯ ನಾಯಕ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ವಿವಾದಾತ್ಮಕ ಪೌರತ್ವ …
Read More »‘KSRTC’ ಮುಡಿಗೆ ಪ್ರತಿಷ್ಠಿತ 5 ರಾಷ್ಟ್ರೀಯ, 1 ಅಂತಾರಾಷ್ಟ್ರೀಯ ಪ್ರಶಸ್ತಿ
ಬೆಂಗಳೂರು : ಕೆಎಸ್‌ಆರ್ಟಿಸಿಗೆ (KSRTC) ಐದು ರಾಷ್ಟ್ರೀಯ ಮತ್ತು ಒಂದು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ಬಸ್ ಬ್ರ್ಯಾಂಡ್ ನಿರ್ವಹಣೆಗಾಗಿ ದಕ್ಷಿಣ ಆಫ್ರಿಕಾ ನಾಯಕತ್ವ ಪ್ರಶಸ್ತಿ, ಮಾನವ ಸಂಪನ್ಮೂಲ ಉಪಕ್ರಮಕ್ಕಾಗಿ ಪಂಜಾಬ್ ನಾಯಕತ್ವ ಪ್ರಶಸ್ತಿ, ಅತ್ಯುತ್ತಮ ಗ್ರಾಹಕ ಸೇವಾ ಉಪಕ್ರಮಕ್ಕಾಗಿ ಸ್ಟಾರ್ ಆಫ್ ಎಕ್ಸಲೆನ್ಸ್ ಪ್ರಶಸ್ತಿ, ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಸತತ ವಿನೂತನ ಉಪಕ್ರಮಗಳಿಗಾಗಿ ರಾಷ್ಟ್ರೀಯ ಅತ್ಯುತ್ತಮ ಉದ್ಯೋಗ ಬ್ರ್ಯಾಂಡ್ ಪ್ರಶಸ್ತಿ, ಮಾನವ ಸಂಪನ್ಮೂಲ ಉಪಕ್ರಮ ಸಾಧನೆಗಾಗಿ ʼಗೌವರ್ನೆನ್ಸ್ ನೌʼ 10ನೇ …
Read More »B.J.P.ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದೆಂದರೆ ಭೂತದ ಬಾಯಿಯಲ್ಲಿ ಭಗವದ್ಗೀತೆ ಉಲಿದಂತೆ:ಶಂಕರಗೌಡ ಪಾಟೀಲ
ಬೆಳಗಾವಿ : ಬೆಳಗಾವಿ : ಭಾರತೀಯ ಜನತಾ ಪಾರ್ಟಿಯವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದೆಂದರೆ ಭೂತದ ಬಾಯಿಯಲ್ಲಿ ಭಗವದ್ಗೀತೆ ಉಲಿದಂತೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ ಹೇಳಿದ್ದಾರೆ. ಕುಟುಂಬ ರಾಜಕಾರಣ ಕುರಿತಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಫ್ಲೆಕ್ಸ್ ಅಳವಡಿಸುತ್ತಿರುವ ಕುರಿತು ಹೇಳಿಕೆ ನೀಡಿರುವ ಅವರು, ರಾಷ್ಟ್ರ ರಾಜಕಾರಣದಿಂದ ಹಳ್ಳಿ ರಾಜಕಾರಣದವರೆಗೂ ಕುಟುಂಬ ರಾಜಕಾರಣವನ್ನೇ ಮಾಡಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಈ ಬಗ್ಗೆ ಮಾತನಾಡಲು ಯಾವ ನೈತಿಕತೆ …
Read More »ವಾಹನ ಸವಾರ’ರಿಗೆ ಗುಡ್ ನ್ಯೂಸ್: ‘ಪೆಟ್ರೋಲ್, ಡೀಸೆಲ್ ದರ’ ಪ್ರತಿ ಲೀಟರ್ ಗೆ 2 ರೂ ಇಳಿಕೆ
ನವದೆಹಲಿ: ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಮುನ್ನ ಕೇಂದ್ರ ಸರ್ಕಾರ ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 2 ರೂ.ಗಳಷ್ಟು ಕಡಿತಗೊಳಿಸಿದೆ. ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಮತ್ತು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್ಜಿ) ಬೆಲೆಗಳಲ್ಲಿ ಇತ್ತೀಚಿನ ಕಡಿತದೊಂದಿಗೆ, ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಬಹುದು ಎಂಬ ಊಹಾಪೋಹಗಳು ಹರಡಿವೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು …
Read More »ಮಕ್ಕಳಿಗೆ ಸಂಸ್ಕಾರ-ಸಂಸ್ಕೃತಿ ಕಲಿಸೋಣ: ಹಂಚಲಿ
ಅಡಹಳ್ಳಿ: ಒಂದಿಷ್ಟು ದೇಶಗಳು ಹಣ ಬಲ, ಶಸ್ತ್ರ ಬಲ ಮತ್ತು ಭಯೋತ್ಪಾದನೆಯಿಂದ ಜಗತ್ತನ್ನಾಳಲು ಹೊರಟರೆ, ಆಧ್ಯಾತ್ಮಿಕ ಬಲದಿಂದ ಭಾರತ ವಿಶ್ವವನ್ನೇ ಗೆಲ್ಲಲು ಹೊರಟಿದೆ ಎಂದು ತಾಳಿಕೋಟಿಯ ವಾಗ್ಮಿ ಅಶೋಕ ಹಂಚಲಿ ಹೇಳಿದರು. ಅವರು ಸಮೀಪದ ನದಿ ಇಂಗಳಗಾಂವ ಗ್ರಾಮದಲ್ಲಿ 63ನೇ ಶರಣ ಸಂಸ್ಕೃತಿ ಉತ್ಸವ ನಿಮಿತ್ತ ಮುತ್ತೈದೆಯರಿಗೆ ಉಡಿ ತುಂಬುವ, ಮಹಾಂತ ಅಪ್ಪಗಳ ತೃತೀಯ ಪುಣ್ಯಸ್ಮರಣೋತ್ಸವ ಹಾಗೂ ಶರಣ ದಂಪತಿಗಳ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಸ್ಕೃತಿ ಉಳಿವು ಕುರಿತು ಉಪನ್ಯಾಸ ನೀಡಿ, …
Read More »ಐವರು IAS ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರು, ಮಾರ್ಚ್ 14: ಬಿಸಿಲಿನ ಕಾವು ಜೋರಾಗುತ್ತಿದ್ದಂತೆ ರಾಜ್ಯದಲ್ಲೂ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಸೂಕ್ತ ಅಭ್ಯರ್ಥಿಯ ಹುಡುಕಾಟವನ್ನ ರಾಜಕೀಯ ಪಕ್ಷಗಳು ನಡೆಸಿದಿದ್ದು, ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಹಾಕಲಾಗುತ್ತಿದೆ. ಇನ್ನು ಲೋಕಸಭಾ ಚುನಾವಣೆ ಹಿನ್ನಲೆ ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಐವರು ಐಎಎಸ್ ಅಧಿಕಾರಿಗಳ ವರ್ಗಾವಣೆ1.ಡಾ. ಅಜಯ್ ನಾಗಭೂಷಣ್ ಎಂ.ಎನ್: …
Read More »ಪ್ರತಿಜೀವಕ ಔಷಧ ದುರ್ಬಳಕೆ ತಡೆಗಟ್ಟಿ’
ಚನ್ನಮ್ಮನ ಕಿತ್ತೂರು: ‘ಪ್ರತಿಜೀವಕ (ಆಯಂಟಿ ಬಯೊಟಿಕ್) ಔಷಧಗಳನ್ನು ಹೆಚ್ಚು ಉಪಯೋಗ ಮಾಡುತ್ತಿರುವ ಕ್ರಮದಿಂದಾಗಿ ರೋಗಿಗಳ ಪಾಲಿಗೆ ತಂದೊಡ್ಡುವ ಅಪಾಯ ತಪ್ಪಿಸಬೇಕಿದೆ. ಇವುಗಳ ದುರ್ಬಳಕೆಯನ್ನೂ ತಡೆಗಟ್ಟಬೇಕಿದೆ’ ಎಂದು ಬೆಳಗಾವಿ ವಿಭಾಗದ ಔಷಧ ಉಪನಿಯಂತ್ರಕ ಎಸ್. ನಾಗರಾಜ್ ಸಲಹೆ ನೀಡಿದರು. ತಾಲ್ಲೂಕಿನ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ನಿರಂತರ ಕಲಿಕಾ ಕಾರ್ಯಕ್ರಮದಡಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ‘ಪ್ರತಿಜೀವಕ ಔಷಧಗಳ ದುರುಪಯೋಗ ಪಡೆಯಲು ಔಷಧ ವ್ಯಾಪಾರಿಗಳು ಮತ್ತು ವೈದ್ಯರ ಸಹಕಾರ ಹೆಚ್ಚಾಗಿ …
Read More »