ಬೆಂಗಳೂರು: ಉದ್ಯಾನ ನಗರಿಯ ಹಲವೆಡೆ ವರುಣನ ಸಿಂಚನವಾಗಿದ್ದು, ಸುಮಾರು ಅರ್ಧ ಗಂಟೆಗಳ ಕಾಲ ಮಳೆಯಾಗಿದೆ.
ನಗರದ ಯಶವಂತಪುರ, ಪೀಣ್ಯ, ಮಲ್ಲೇಶ್ವರ ಸೇರಿದಂತೆ ಹಲವೆಡೆ ಸುಮಾರು ಅರ್ಧ ಗಂಟೆಗಳ ಕಾಲ ಮಳೆಯಾಗಿದೆ. ಮಳೆಯಿಂದಾಗಿ ಟ್ರಾಫಿಕ್ ಜಾಮ್ ಸಂಭವಿಸಿದ್ದು ವಾಹನ ಸವಾರರು ಪರದಾಡುವಂತಾಯಿತು. ಬೆಳಗಿನಿಂದಲೂ ಶೆಖೆ ವಾತಾವರಣವಿತ್ತು. ಅಲ್ಲದೆ ಮಧ್ಯಾಹ್ನ ಸಹ ಸ್ವಲ್ಪ ಪ್ರಮಾಣದಲ್ಲಿ ಬಿಸಿಲು ಇತ್ತು. ಆದರೆ ಸಂಹೆ ನಾಲ್ಕು ಗಂಟೆ ಸುಮಾರಿಗೆ ವರಣ ಸಿಂಚನವಾಗಿದೆ.

ಮಳೆಯಿಂದಾಗಿ ತುಮಕೂರು ರಸ್ತೆ, ಯಶವಂತಪುರ, ಮಲ್ಲೇಶ್ವರ ಭಾಗಗಳಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿತ್ತು. ವಾಹನ ಸವಾರರು ಪರದಾಡುವಂತಾಯಿತು. ಶೆಖೆಯಿಂದ ಕೂಡಿದ್ದ ಬೆಂಗಳೂರಿಗೆ ವರುಣ ತಂಪೆರೆದಿದ್ದಾನೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಸಿಲಿಕಾನ್ ಸಿಟಿಯಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಲ್ಲಿಂದು ಗರಿಷ್ಟ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಟ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
Laxmi News 24×7