ತುಮಕೂರು: ಭಾನುವಾರ ರಾತ್ರಿ ತುಮಕೂರು ಗ್ರಾಮಾಂತರದ ನಾಗವಲ್ಲಿಯಲ್ಲಿರುವ ಕೇಂದ್ರ ಬ್ಯಾಂಕ್ನಲ್ಲಿ ವಾಚ್ ಮ್ಯಾನ್ ಕೊಲೆ ಮಾಡಿ ದರೋಡೆ ಮಾಡಲಾಗಿದೆ. ಸಿದ್ದಪ್ಪ ಕೊಲೆಯಾದ ದುರ್ದೈವಿ. ಕಳೆದ ರಾತ್ರಿ 9.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಸೊಸೈಟಿಯಲ್ಲಿದ್ದ ಹಣ ಒಡವೆ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಸದ್ಯ ಸ್ಥಳಕ್ಕೆ ತುಮಕೂರು ಜಿಲ್ಲಾ ಎಎಸ್ಪಿ ಉದೇಶ್, ಎಸ್ಪಿ ರಾಹುಲ್ ಕುಮಾರ್ ಭೇಟಿ ನೀಡಿದ್ದಾರೆ. ಇನ್ನು ಇವರ ಜೊತೆಗೆ ಶ್ವಾನದಳ, ಬೆರಳಚ್ಚು ತಂಡ ಕೂಡ ಆಗಮಿಸಿ …
Read More »ಐಎಂಡಿಬಿ ಪಟ್ಟಿಯಲ್ಲಿ ‘ಶಾವ್ಶಾಂಕ್ ರಿಡೆಂಪ್ಶನ್’ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ‘ಜೈಭೀಮ್ ‘
ಚೆನ್ನೈ: ನಟ ಸೂರ್ಯ, ಲಿಜೋ ಮೋಲ್ ಜೋಸ್ ಮತ್ತು ಮಣಿಕಂದನ್ ಅವರನ್ನೊಳಗೊಂಡ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ‘ಜೈ ಭೀಮ್’ ಸಿನಿಮಾ ಹಾಲಿವುಡ್ ನ ಕಲ್ಟ್ ಕ್ಲಾಸಿಕ್ ದಿ ರಿಡೆಂಪ್ಶನ್’ ಅನ್ನು ಹಿಂದಿಕ್ಕಿದ್ದು, 250ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಜ್ಞಾನವೇಲ್ ನಿರ್ದೇಶನದ ಸೂರ್ಯ ಅವರ 2 ಡಿ ಎಂಟರ್ ಟೈನ್ ಮೆಂಟ್ ನಿರ್ಮಾಣದ ಜೈ ಭೀಮ್ ಚಿತ್ರ 9.6 ರೇಟಿಂಗ್ ನೆರವಿನೊಂದಿಗೆ ಅಗ್ರಸ್ಥಾನದಲ್ಲಿದೆ. ಶಾವ್ಶಾಂಕ್ ರಿಡೆಂಪ್ಶನ್’ 9.3 ರೇಟಿಂಗ್ ನೊಂದಿಗೆ …
Read More »ಸೋದರ ಲಖನ್ ಜಾರಕಿಹೊಳಿಗೆ ಬಿಜೆಪಿ ಟಿಕೆಟ್ ಗೆ ಬೇಡಿಕೆ ಇಟ್ಟ ಶಾಸಕ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಅವರಿಗೆ ಬಿಜೆಪಿಯಿಂದ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡಿದ ಅವರು, ಲಖನ್ ಜಾರಕಿಹೊಳಿ ಅವರಿಗೆ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಲ್ಲಿ ಬಿಜೆಪಿ 2 ಸ್ಥಾನಗಳಲ್ಲಿಯೂ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲಖನ್ ಜಾರಕಿಹೊಳಿ ಅವರನ್ನು ಎರಡನೇ ಅಭ್ಯರ್ಥಿಯನ್ನಾಗಿ …
Read More »ಬಿಜೆಪಿ ಜೊತೆಗೆ ನಮ್ಮ ಸಂಘಟನೆಗೆ ಸೇರಿರುವ ಅಭ್ಯರ್ಥಿಯನ್ನು ಗೆಲ್ಲಿಸಬೇಕು’: ಬಾಲಚಂದ್ರ ಜಾರಕಿಹೊಳಿ
ಗೋಕಾಕ: ‘ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನಪರಿಷತ್ ಚುನಾವಣೆಯಲ್ಲಿ ಈಗಿರುವ ಮಾಹಿತಿಯಂತೆ ಬಿಜೆಪಿಯಿಂದ ಒಬ್ಬರನ್ನು ಅಭ್ಯರ್ಥಿಯನ್ನಾಗಿ ಮಾಡಬಹುದೆಂಬ ಲೆಕ್ಕಾಚಾರವಿದೆ. ಪಕ್ಷದ ಮುಖಂಡರು ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ’ ಎಂದು ಕೆಎಂಎಫ್ ಅಧ್ಯಕ್ಷರೂ ಅಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಹೊರವಲಯದಲ್ಲಿರುವ ಬಸವೇಶ್ವರ ಸಭಾಭವನದಲ್ಲಿ ಶುಕ್ರವಾರ ನಡೆದ ಅರಭಾವಿ ಮತಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿಗಳ ಸದಸ್ಯರು ಹಾಗೂ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ‘ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಜೊತೆಗೆ …
Read More »ಪ್ರಯಾಣಿಕರೇ ಎಚ್ಚರ…ಇನ್ಮುಂದೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಜೋರಾಗಿ ಶಬ್ದ ಮಾಡುವಂತಿಲ್ಲ..!
ಬೆಂಗಳೂರು: ಸರ್ಕಾರಿ ಬಸ್ ಪ್ರಯಾಣದ ವೇಳೆ ಜೋರಾಗಿ ಶಬ್ದ ಮಾಡುವುದನ್ನು ನಿಷೇಧಿಸಿ ಕೆಎಸ್ಆರ್ಟಿಸಿ ಎಂ.ಡಿ ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುವಾಗ ಹಾಡು, ಸಿನಿಮಾ ಮುಂತಾದವುಗಳನ್ನು ಜೋರಾಗಿ ಹಾಕುವಂತಿಲ್ಲ. ಒಂದು ವೇಳೆ ಹಾಕಿದ್ರೂ ಕೂಡ ಮೊದಲು ಬಸ್ ನಿರ್ವಾಹಕ ಪ್ರಯಾಣಿಕರಲ್ಲಿ ಮನವಿ ಮಾಡಿಕೊಳ್ಳಬೇಕು. ಮನವಿ ಕಡೆಗಣಿಸಿದರೆ ಬಸ್ ಅರ್ಧಕ್ಕೆ ನಿಲ್ಲಿಸಿ ಆ ಪ್ರಯಾಣಿಕನನ್ನು ಅಲ್ಲೇ ಇಳಿಸಿ, ಮುಂದುವರೆಯಬೇಕು. ಈ ಬಗ್ಗೆ ಏನಾದರು ಸಮಸ್ಯೆಗಳು ಎದುರಾದರೆ ತಕ್ಷಣವೇ ಸ್ಥಳೀಯ ಪೊಲೀಸ್ …
Read More »ಬಸವರಾಜ್ ಹೊರಟ್ಟಿ ಅವರು ಸುವರ್ಣಸೌಧಕ್ಕೆ ಭೇಟಿ ನೀಡಲಿದ್ದಾರೆ, ಅಧಿವೇಶನ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕಳೆದ ಎರಡು ವರ್ಷಗಳಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆದಿಲ್ಲ. ಆದರೆ ಈ ಬಾರಿ ಬೆಳಗಾವಿಯಲ್ಲಿಯೇ ಚಳಿಗಾಲದ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೌದು ಈ ಭಾಗದ ಜನರ ಒತ್ತಾಯದ ಮೇರೆಗೆ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನ ಕೈಗೊಂಡಿದೆ. ಆದರೆ ಇನ್ನು ಕೂಡ ದಿನಾಂಕ ನಿಗದಿ ಆಗಿಲ್ಲ. ಈ ಮಧ್ಯ ಸೋಮವಾರ ವಿಧಾನಪರಿಷತ್‍ನ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಸುವರ್ಣಸೌಧಕ್ಕೆ ಭೇಟಿ ನೀಡಲಿದ್ದಾರೆ. ಅಗತ್ಯ …
Read More »ಬಿಟ್ ಕಾಯಿನ್ ಕೇಸ್ ವಿಚಾರಣೆ ವೇಳೆ ಪೊಲೀಸರಿಗೆ ಸಿಕ್ತು ಸ್ಪೋಟಕ ಮಾಹಿತಿ
ಬೆಂಗಳೂರು : ಬಿಟ್ ಕಾಯಿನ್ ಕೇಸ್ ನ ಆರೋಪಿ ಶ್ರೀಕಿ ಜೊತೆ ಕಿರಿಕ್ ಮಾಡಿಕೊಂಡು ಬಂಧನಕ್ಕೊಳಗಾಗಿದ್ದ ಭೀಮಾ ಜ್ಯುವೆಲ್ಲರ್ಸ್ ನ ಮಾಲೀಕರ ಮಗ ವಿಷ್ಣುಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ಮುಂದುವರೆಸಿದ್ದು, ಇದೀಗ ಸ್ಪೋಟಕ ಮಾಹಿತಿಯೊಂದು ಲಭ್ಯವಾಗಿದೆ. ಎನ್ ಡಿ ಪಿ ಎಸ್ ಕಾಯಿದೆ ಅಡಿ ಬಂಧನಕ್ಕೊಳಗಾದ ವಿಷ್ಣುಭಟ್ ವಿದೇಶಿ ಪ್ರಜೆ ಜೊತೆ ಪೆಡ್ಲಿಂಗ್ ನಡೆಸುತ್ತಿದ್ದನು ಎನ್ನಲಾಗಿದೆ. ಆದ್ದರಿಂದ ಆತನ ಮನೆ ಮೇಲೆ ದಾಳಿ ನಡೆಸಿದಾಗ ಗಾಂಜಾ ಹಾಗೂ …
Read More »ವಿದ್ಯುತ್ ಅವಘಡ: ಅಜ್ಜಿಯನ್ನು ರಕ್ಷಣೆ ಮಾಡಲು ಹೋದ ಮೊಮ್ಮಗ ಕೂಡ ಸಾವು
ಚಿಕ್ಕೋಡಿ: ವಿದ್ಯುತ್ ಶಾಕ್ಗೆ ಒಳಗಾಗಿದ್ದ ಅಜ್ಜಿಯನ್ನು ರಕ್ಷಣೆ ಮಾಡಲು ಹೋಗಿದ್ದ ಮೊಮ್ಮಗ ಕೂಡ ಶಾಕ್ ತಗುಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಮಡ್ಡಿ ಗಲ್ಲಿಯಲ್ಲಿ ನಡೆದಿದೆ. ಅಜ್ಜಿ ಶಾಂತವ್ವಾ ಬಸ್ತವಾಡೆ, ಮೊಮ್ಮಗ ಸಿದ್ದಾರ್ಥ ಬಸ್ತವಾಡೆ (24) ಸ್ಥಳದಲ್ಲೇ ಸಾವನ್ನಪ್ಪಿದ ಮೃತ ದುರ್ದೈವಿಗಳು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರೆ ಮತೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಮಳೆ ಸುರಿದ ಹಿನ್ನಲೆ ಹಿತ್ತಲಿನಲ್ಲಿ ಬಟ್ಟೆ ಹಾಕುವ ತಂತಿಗೆ …
Read More »ಆರ್ ಎಸ್ ಎಸ್, ಬಿಜೆಪಿಯವರದ್ದು ತಾಲಿಬಾನ್ ಸಂಸ್ಕೃತಿ:ಸಿದ್ದರಾಮಯ್ಯ
ಬಾದಾಮಿ: ಆರ್ ಎಸ್ ಎಸ್, ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲ, ತಾಲಿಬಾನಿಗಳಿಗೆ ಹೇಗೆ ಮನುಷ್ಯತ್ವ, ಸಂಸ್ಕೃತಿ ಇಲ್ಲವೋ ಅದೇ ರೀತಿ ಆರ್ ಎಸ್ ಎಸ್, ಬಿಜೆಪಿಯವರು ಕೂಡ ತಾಲಿಬಾನಿಗಳಂತೆ ವರ್ತಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟು ಟೀಕೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕ ಸಿ ಟಿ ರವಿಯವರ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ಯಾರಿಗೆ ನಂಬಿಕೆ ಇಲ್ಲವೋ …
Read More »ಅಡುಗೆ ಅನಿಲ ಸಬ್ಸಿಡಿಯನ್ನು ಪುನರಾರಂಭಿಸುವ ಬಗ್ಗೆ ಸರಕಾರ ಚಿಂತನೆ..?
ಹೊಸದಿಲ್ಲಿ: ಅಡುಗೆ ಅನಿಲ ಸಬ್ಸಿಡಿಯನ್ನು ಪುನರಾರಂಭಿಸುವ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಗಂಭೀರ ಚಿಂತನೆ ನಡೆಸಿದ್ದು, ಈ ಸಂಬಂಧ ಸಮೀಕ್ಷೆಯೊಂದನ್ನು ಕೈಗೊಳ್ಳುತ್ತಿದೆ ಎಂದು ಉನ್ನತ ಮೂಲಗಳು ವರದಿ ಮಾಡಿವೆ. ಸಬ್ಸಿಡಿಯನ್ನು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸೀಮಿತಗೊಳಿಸುವ ಚಿಂತನೆಯೂ ಇದೆ ಎನ್ನಲಾಗಿದೆ. ಈ ಹಿಂದೆ ಎಲ್‌ಪಿಜಿ ದರ ಇಳಿಕೆಯಾಗಿದ್ದರಿಂದ 2020ರ ಮೇ ತಿಂಗಳಿ ನಲ್ಲಿ ಸರಕಾರವು ಎಲ್‌ಪಿಜಿ ಸಬ್ಸಿಡಿಯನ್ನು ಹಿಂದೆ ಗೆದುಕೊಂಡಿತ್ತು. ಆಗ ದಿಲ್ಲಿಯಲ್ಲಿ 14.2 ಕೆ.ಜಿ.ಯ ಅಡುಗೆ …
Read More »