ಸವದತ್ತಿ: ಮನೆಯಿಂದ ನಾಪತ್ತೆಯಾಗಿದ್ದ ಸ್ಥಳೀಯ ನಿವಾಸಿ ವಜ್ರವ್ವ ಮಲ್ಲಿಕಾರ್ಜುನ ಉಪ್ಪಾರಟ್ಟಿ (58) ಮೃತದೇಹ ಮಂಗಳವಾರ ಜೋಗುಳಬಾವಿ ಸಮೀಪದ ಮಲಪ್ರಭಾ ಬಲದಂಡೆ ಕಾಲುವೆಯಲ್ಲಿ ಪತ್ತೆಯಾಗಿದೆ.
ಸೋಮವಾರದಿಂದ ಕಾಣೆಯಾಗಿದ್ದ ವಜ್ರವ್ವಳ ಹುಡುಕಾಟ ಆರಂಭಿಸಿದಾಗ ಜೋಗುಳಬಾವಿ ಹತ್ತಿರ ಕಾಲುವೆ ದಂಡೆಯ ಮೇಲೆ ಚಪ್ಪಲಿ ಪತ್ತೆಯಾಗಿದ್ದವು.
ಬಳಿಕ ಅಗ್ನಿಶಾಮಕ ದಳದೊಂದಿಗೆ ಮಲಪ್ರಭಾ ನದಿ ಕಾಲುವೆಯಲ್ಲಿ ಶೋಧ ಕಾರ್ಯ ಆರಂಭಿಸಿದಾಗ ಹಂಚಿನಾಳ ಸಮೀಪದ ಕಾಲುವೆಯಲ್ಲಿ ಶವ ಪತ್ತೆಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಸವದತ್ತಿ ಠಾಣೆ ಪೊಲೀಸರು ತಿಳಿಸಿದ್ದಾರೆ.
Laxmi News 24×7