Breaking News

ಅಶೋಕ ಚಂದರಗಿ ವಿಧಾನಪರಿಷತ್‍ಗೆ ನಾಮನಿರ್ದೇಶನ ಮಾಡಬೇಕೆಂದು ಒತ್ತಾಯ…………

Spread the love

ಬೆಳಗಾವಿ: ಬೆಳಗಾವಿಯ ಕನ್ನಡಪರ ಹೋರಾಟಗಾರರು, ಹಿರಿಯ ಪತ್ರಕರ್ತರು, ಸಾಮಾಜಿಕ ಚಿಂತಕರಾದ ಅಶೋಕ ಚಂದರಗಿ ಅವರನ್ನು ಸರಕಾರದಿಂದ ವಿಧಾನಪರಿಷತ್‍ಗೆ ನಾಮನಿರ್ದೇಶನ ಮಾಡಬೇಕೆಂದು ಆಗ್ರಹಿಸಿ ಕನ್ನಡಪರ ಹೋರಾಟಗಾರ ಮೆಹಬೂಬ್ ಮಕಾನಂದಾರ ಅವರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.

ಬೆಳಗಾವಿಯ ಜಿಪಂ ಸಭಾಂಗಣದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾದ ಮೆಹಬೂಬ್ ಮಕಾನಂದಾರ ಅಶೋಕ ಚಂದರಗಿ ಅವರು, ಹಲವಾರು ದಶಕಗಳಿಂದ ಕನ್ನಡ ಪರ ಹೋರಾಟ ಮಾಡುತ್ತ ಬಂದಿದ್ದಾರೆ. ಹಿರಿಯ ಪತ್ರಕರ್ತರಾಗಿರುವ ಅವರು, ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದ್ದು, ಸಾಮಾಜಿಕ ಚಿಂತಕರಾಗಿರುವ ಅವರನ್ನು ಚಿಂತಕರ ಚಾವಡಿಯಾದ ವಿಧಾನ ಪರಿಷತ್‍ಗೆ ನಾಮನಿರ್ದೇಶನ ಮಾಡಬೇಕೆಂದು ಒತ್ತಾಯಿಸಿದರು.

ಸರಕಾರಗಳು ಉತ್ತರ ಕರ್ನಾಟಕ ಭಾಗದ ಸಾಹಿತಿಗಳನ್ನು, ಚಿಂತಕರನ್ನು, ಇಲ್ಲಿಯವರೆಗೆ ವಿಧಾನಪರಿಷತ್‍ಗೆ ನಾಮನಿರ್ದೇಶನ ಮಾಡಿಲ್ಲ. ಉತ್ತರ ಕರ್ನಾಟಕ ಭಾಗದ ಸಾಮಾಜಿಕ ಚಿಂತಕರಾಗಿರುವ ಅಶೋಕ ಚಂದರಗಿ ಅವರನ್ನು ಈ ಭಾರಿಯಾದರೂ ನೇಮಕ ಮಾಡುವಂತೆ ಸಿಎಂ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಪಡಿಸಿದರು.

ಅಶೋಕ ಚಂದರಗಿ ಅವರನ್ನು ವಿಧಾನಪರಿಷತ್‍ಗೆ ನಾಮನಿರ್ದೇಶನ ಮಾಡುವ ಕುರಿತು ಬೆಳಗಾವಿಯ ಕನ್ನಡಪರ ಹೋರಾಟಗಾರರು ಶೀಘ್ರದಲ್ಲಿಯೇ ಬೆಂಗಳೂರಿಗೆ ನಿಯೋಗ ಕೊಂಡೊಯ್ಯುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಗಮನಕ್ಕೆ ತರಲಾಯಿತು.


Spread the love

About Laxminews 24x7

Check Also

ಪಾರ್ಟಿ ಮಾಡಲು ಕುರಿ ಕೊಡದ ಕುರಿಗಾಯಿಗಳ ಮೇಲೆ ಮಾರಣಾಂತಿಕ ಹ*ಲ್ಲೆ

Spread the loveಪಾರ್ಟಿ ಮಾಡಲು ಕುರಿ ಕೊಡದ ಕುರಿಗಾಯಿಗಳ ಮೇಲೆ ಮಾರಣಾಂತಿಕ ಹಲ್ಲೆ! ಮೂವರು ಕುರಿಗಾರರ ಮೇಲೆ ಹ*ಲ್ಲೆ ಏಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ