ಬೆಂಗಳೂರು: ಸರ್ಕಾರಕ್ಕೆ ತೆರಿಗೆ ಕಟ್ಟದೇ ವಂಚಿಸಿ ಓಡಾಡುತ್ತಿದ್ದ 7 ಅಕ್ರಮ ಐಶಾರಾಮಿ ಬಸ್‍ಗಳನ್ನು ಕರ್ನಾಟಕ ಆರ್.ಟಿ.ಓ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಅನಧಿಕೃತವಾಗಿ ಸಂಚರಿಸುತಿದ್ದ ಬಸ್ಸುಗಳನ್ನು ಆರ್.ಟಿ.ಓ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ಎರಡು ಬಸ್ಸುಗಳು ಒಂದೇ ನಂಬರ್, ಒಂದೇ ಕಲ್ಲರ್, ಒಂದೇ ಬಸ್ ವಿನ್ಯಾಸ ಹೊಂದಿದ್ದು, ಸರ್ಕಾರಕ್ಕೆ ಲಕ್ಷ ಲಕ್ಷ ವಂಚನೆ ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಬಸ್‍ಗಳನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.
ನೆಲಮಂಗಲ ಹಾಗೂ ಯಶವಂತಪುರ ಆರ್.ಟಿ.ಓ ಅಧಿಕಾರಿಗಳ ಜಂಟಿ ಕಾರ್ಯಚರಣೆ ಮಾಡಿ ರಾಜ್ಯದಲ್ಲಿ ಅನಧಿಕೃತವಾಗಿ ಓಡಾಡುತ್ತಿದ್ದ ಏಳು ಬಸ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಈ ಬಸ್ ಮಾಲೀಕರು ಒಂದು ವರ್ಷಕ್ಕೆ ಸರ್ಕಾರಕ್ಕೆ 41 ಲಕ್ಷ ತೆರಿಗೆ ವಂಚಿಸುತ್ತಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಸಾರಿಗೆ ಆಯುಕ್ತ ಶಿವಕುಮಾರ್ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ.