ಬೆಳಗಾವಿ: ಬಿಜೆಪಿ ಅತೃಪ್ತ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ ಜಿಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯ ಮಹಾನ್ ನಾಯಕರು ಅವರ ಬಗ್ಗೆ ಗೌರವವಿದೆ, ಅವರ ಬಗ್ಗೆ ಮಾತನಾಡಲ್ಲ, ಸಿದ್ದರಾಮಯ್ಯ ಕಣ್ಣು ಹಳದಿ ಇದೆ ಅವರು ಹಾಗೇ ನೋಡಲಿ ಬಿಡಿ ಎಂದು ಟೀಕಿಸಿದರು.
ಇನ್ನು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಜಾಗ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಹಿಂದೆ ಗಡಿಬಿಡಿಯಲ್ಲಿ ಈ ಕುರಿತು ಆರ್ಡರ್ ಪಾಸ್ ಮಾಡಲಾಗಿತ್ತು. ಆ ಆರ್ಡರ್ ಹಿಂದಕ್ಕೆ ಪಡೆದಿದ್ದೇವೆ. ಹೈವೇ ಪಕ್ಕದಲ್ಲಿ ಹೊಸ ಜಾಗ ಕೊಡ್ತೇವಿ,ಈ ಕುರಿತು ಹೊಸ ಆರ್ಡರ್ ಪಾಸ್ ಮಾಡ್ತೀವಿ ಎಂದು ಭರವಸೆ ನೀಡಿದರು.