Breaking News

ನಟಿ ರಾಗಿಣಿ ಐ.ಪಿ.ಎಸ್. ಇವಾಗ ಕೈದಿ ನಂಬರ್ ……{ಡ್ರಗ್ ಮಾಫಿಯಾ ಕೇಸಲ್ಲಿ}

Spread the love

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ಮಾಫಿಯಾ ಕೇಸಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಪಾಲಾಗಿದ್ದಾರೆ. ಸಿಸಿಬಿ ಕಸ್ಟಡಿಯ ಅಂತ್ಯವಾದ ಹಿನ್ನೆಲೆಯಲ್ಲಿ ರಾಗಿಣಿಯನ್ನು 1ನೇ ಎಸಿಎಂಎಂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟಿ ರಾಗಿಣಿ ಮೊದಲ ದಿನ ಸರಿಯಾಗಿ ನಿದ್ದಯಿಲ್ಲದೆ ಕಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ

ಜೈಲಿನಲ್ಲಿ ರಾತ್ರಿ ಸಿಸಿಬಿಯವರು ಕೊಟ್ಟಿದ್ದ ರಾತ್ರಿ ಊಟ ತಿಂದಿದ್ದಾರೆ. ರೋಟಿ, ದಾಲ್ ತಿಂದು ಜೈಲು ರಾತ್ರಿಯ ವಾಸ್ತವ್ಯಕ್ಕೆ ನಟಿ ಅಣಿಯಾಗಿದ್ದು, ಮೊದಲ ಬಾರಿ ಜೈಲು ಸೇರಿದ ನಟಿಗೆ ತಡ ರಾತ್ರಿವರೆಗೂ ನಿದ್ದೆ ಬಂದಿಲ್ಲವಂತೆ. ಜೈಲಾಧಿಕಾರಿಗಳು ಜಂಖಾನ, ಒಂದು ಬೆಡ್ ಶೀಟ್ ಮತ್ತು ದಿಂಬು ಕೊಟ್ಟಿದ್ದರು. ಕ್ವಾರೆಂಟೈನ್ ವಾರ್ಡಿನಲ್ಲಿ ಫ್ಯಾನ್ ಬಿಟ್ಟರೆ ಬೇರೆ ಯಾವ ಸವಲತ್ತು ಇಲ್ಲ. ಹೀಗಾಗಿ ನೆಲದ ಮೇಲೆ ಜಂಖಾನ ಹಾಸಿಕೊಂಡು ಮಧ್ಯರಾತ್ರಿಯ ನಂತರ ನಟಿ ರಾಗಿಣಿ ನಿದ್ದೆಗೆ ಜಾರಿದ್ದಾರೆ ಎನ್ನಲಾಗಿದೆ.

ತುಂಬಾ ಸಮಯದವರೆಗೂ ಮಹಿಳಾ ವಾರ್ಡಿನ ಕ್ವಾರೆಂಟೈನ್ ರೂಮಿನಲ್ಲಿ ನಟಿ ರಾಗಿಣಿ ಅಳುತ್ತಿದ್ದರು ಎಂದು ತಿಳಿದುಬಂದಿದೆ. ಬಳಿಕ ಜೈಲಿಗೆ ಬರುವ ಮುನ್ನ ತಂದಿದ್ದ ಪುಸ್ತಕವನ್ನು ಓದಿದ್ದಾರೆ. ತಡರಾತ್ರಿಯ ನಂತರ ನಿದ್ದೆ ಮಾಡಿದ್ದಾರೆ. ಮುಂಜಾನೆ ಆಗುತ್ತಿದ್ದಂತೆ ಕನ್ನಡ, ಇಂಗ್ಲೀಷ್ ಪೇಪರ್ ಓದಿದ್ದಾರೆ. ರಾಗಿಣಿ ಸೆಲೆಬ್ರಿಟಿ ಆಗಿರುವುದರಿಂದ ಜೈಲ್ ಕ್ವಾರಂಟೈನ್‍ನಲ್ಲಿ ಇತರೆ ಆರೋಪಿಗಳು ಅವರನ್ನು ಮಾತನಾಡಿಸಲು ಯತ್ನಿಸಿದ್ದಾರೆ. ಆದರೆ ಜೈಲು ಕ್ವಾರಂಟೈನ್‍ನಲ್ಲಿ ರಾಗಿಣಿ ಹೆಚ್ಚಾಗಿ ಯಾರನ್ನು ಮಾತನಾಡಿಸಿಲ್ಲ ಎಂದು ಹೇಳಲಾಗುತ್ತಿದೆ.

ಕಳೆದ 12 ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿದ್ದ ನಟಿ ರಾಗಿಣಿ ಮುಂದಿನ 14 ದಿನ ಅಂದರೆ ಸೆಪ್ಟೆಂಬರ್ 28ರವರೆಗೆ ಪರಪ್ಪನ ಅಗ್ರಹಾರ ಜೈಲಲ್ಲಿ ಇರಲಿದ್ದಾರೆ. ಸಿಸಿಬಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ಕೇಳದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ರಾಗಿಣಿಯನ್ನು ಪರಪ್ಪನ ಅಗ್ರಹಾರದಲ್ಲಿರೋ ಸೆಂಟ್ರಲ್ ಜೈಲಿಗೆ ಕಳಿಸಿದ್ದಾರೆ. ಮಡಿವಾಳದ ಎಫ್‍ಎಸ್‍ಎಲ್ ಕೇಂದ್ರದಿಂದ ಸೋಮವಾರ ಸಂಜೆ 7 ಗಂಟೆ ಹೊತ್ತಿಗೆ ನಟಿ ರಾಗಿಣಿ ಸೇರಿ ಐವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.


Spread the love

About Laxminews 24x7

Check Also

ಜಲಜೀವನ್​​​ ಮಿಷನ್​​​ ಯೋಜನೆ ಅನುಷ್ಠಾನದಲ್ಲಿನ ತಪ್ಪುಗಳ ಬಗ್ಗೆ ತನಿಖೆ ?

Spread the loveಬೆಂಗಳೂರು: ತುಮಕೂರು ಜಿಲ್ಲೆಯ ಜಲಜೀವನ್​​ ಮಿಷನ್​​ ಯೋಜನೆ ಅನುಷ್ಠಾನದಲ್ಲಿ ನಾನಾ ತಪ್ಪುಗಳಾಗಿದ್ದು, ಸರ್ಕಾರ ತನಿಖೆ ನಡೆಸಿ ವರದಿ ನೀಡಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ