Breaking News

ಯುವತಿಯರಿಬ್ಬರು ಮದುವೆ ಆಗುವ ಮೂಲಕ ಪೋಷಕರಿಗೆ ಶಾಕ್

Spread the love

ಪಾಟ್ನಾ: ಯುವತಿಯರಿಬ್ಬರು ಮದುವೆ ಆಗುವ ಮೂಲಕ ಪೋಷಕರಿಗೆ ಶಾಕ್ ನೀಡಿರುವ ಘಟನೆ ಬಿಹಾರದ ಬೇತಿಯಾ ಜಿಲ್ಲೆಯಲ್ಲಿ ನಡೆದಿದೆ. ಒಂದೇ ಲಿಂಗದವರು ಮದುವೆಗಳು ನಗರ ಪ್ರದೇಶಗಳಲ್ಲಿ ನಡೆದಿರೋದು ಆಗಾಗ್ಗೆ ವರದಿಯಾಗುತ್ತಿದ್ದವು. ಗ್ರಾಮೀಣ ಭಾಗದಲ್ಲಿ ಸಲಿಂಗಿಗಳ ಮದುವೆ ನೋಡಿ ಗ್ರಾಮಸ್ಥರು ಆಶ್ಚರ್ಯ ಚಕಿತರಾಗಿದ್ದಾರೆ.

ಬೇತಿಯಾ ನಗರದ ಇಶರತ್ (ಪತ್ನಿ), ರಾಮನಗರದ ನಿವಾಸಿ ನಗ್ಮಾ ಖಾತೂನ್ (ಪತಿ) ಮದುವೆಯಾದ ಜೋಡಿ. ಆದ್ರೆ ಕುಟುಂಬಸ್ಥರು ಇಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಜೋಡಿ ತಾವಿಬ್ಬರೂ ಕಾನೂನುಬದ್ಧವಾಗಿ ಜಲಂಧರ್ ನ್ಯಾಯಾಲಯದಲ್ಲಿ ಮದುವೆ ಆಗಿರುವ ವಿಚಾರವನ್ನ ತಿಳಿಸಿದ್ದಾರೆ.

ಪತಿ ನಗ್ಮಾ ಖಾತೂನ್ ನಿವಾಸಕ್ಕೆ ಬಂದ ಪತ್ನಿ ಇಶರತ್ ಖುಷಿಯಲ್ಲಿ ಎಲ್ಲರನ್ನ ಪರಿಚಯ ಮಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರಿಗೂ ಸಿಹಿ ತಿನಿಸುವ ಮೂಲಕ ತಮ್ಮ ಮದುವೆ ವಿಷಯವನ್ ಗ್ರಾಮಸ್ಥರ ಮುಂದೆ ಹೇಳಿಕೊಂಡಿದ್ದಾರೆ.


Spread the love

About Laxminews 24x7

Check Also

ಮೇಕೆದಾಟು ಯೋಜನೆ ಜಾರಿ ಮಾಡುವುದು ರಾಜ್ಯ ಕಾಂಗ್ರೆಸ್​ಗೆ 5 ನಿಮಿಷದ ಕೆಲಸ: ಬೊಮ್ಮಾಯಿ

Spread the loveಮೇಕೆದಾಟು ಯೋಜನೆ ಜಾರಿ ಮಾಡುವುದು ರಾಜ್ಯ ಕಾಂಗ್ರೆಸ್​ಗೆ 5 ನಿಮಿಷದ ಕೆಲಸ: ಬೊಮ್ಮಾಯಿ ಹಾವೇರಿ: “ಮೇಕೆದಾಟು ಯೋಜನೆ ಜಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ