ಹುಕ್ಕೇರಿ : ಡ್ರಗ್ಸ್ ದಂಧೆ ಜಾಲದಲ್ಲಿ ನಟಿ ಸಂಜನಾ ಜೊತೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಹೆಸರು ಕೇಳಿ ಬಂದಿರುವ ವಿಚಾರವಾಗಿ ಶಾಸಕ ಸತೀಶ್ ಜಾರಕಿಹೊಳಿ ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆಯಲ್ಲಿ ಜಮೀರ್ ಇಲ್ಲ. ಹೀಗಾಗಿ ಅವರೊಂದಿಗೆ ಹೊಲಿಕೆ ಮಾಡುವುದು ಸರಿಯಲ್ಲ. ನಟಿ ಸಂಜನಾ ಜತೆ ಶಾಸಕ ಜಮೀರ್ ಅಹಮ್ಮದ್ ಪಾರ್ಟಿಗೆ ಹೋದರೆ ಅಥವಾ ತಿರುಗಾಡಿದ್ರೆ ಏನೂ ಸಂಬಂಧವಿಲ್ಲ. ಡ್ರಗ್ಸ್ ತೆಗೆದುಕೊಂಡರೆ, ಮಾರಾಟ ಮಾಡಿದರೆ ಅದು ತಪ್ಪು. ಅವರ ಜತೆಗೆ ಹೋಗಿದ್ದಕ್ಕೆ ಅವರ ಹೆಸರು ತರೋದು ಸೂಕ್ತವಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಈಗ ಡ್ರಗ್ಸ್ ಪ್ರಕರಣ ಸುದ್ದಿಯಲ್ಲಿದೆ. ಡ್ರಗ್ಸ್ ದಂಧೆಗೆ ಇವತ್ತಿನ ಸರ್ಕಾರ ಮಾತ್ರವಲ್ಲ. ಎಲ್ಲ ಸರ್ಕಾರದಲ್ಲೂ ಡ್ರಗ್ಸ್ ಗೆ ಪುಷ್ಟಿ ಸಿಕ್ಕಿದೆ. ಡ್ರಗ್ಸ್ ಎಂಬುದು ಭಯೋತ್ಪಾದನೆಗಿಂತ ಕೆಟ್ಟ ವಿಷಯವಾಗಿದೆ. ಇನ್ನೂ ಬೆಳಗಾವಿ ಸೇರಿದಂತೆ ದೇಶಾದ್ಯಂತ ಡ್ರಗ್ಸ್ ದಂಧೆ ವ್ಯಾಪ್ತಿಸಿದೆ. ಮೇಡಿಕಲ್, ಎಂಜಿನಿಯರ್ ವಿದ್ಯಾರ್ಥಿಗಳೇ ಡ್ರಗ್ಸ್ ಹೆಚ್ಚು ಬಲಿಯಾಗುತ್ತಿದ್ದಾರೆ. ಆದ ಕಾರಣ ಸರ್ಕಾರ, ಜಿಲ್ಲಾಡಳಿತ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
Laxmi News 24×7