Breaking News

ಎಲ್ಲರ ಚಿತ್ತ ಬಿಎಸ್‌ವೈ-ಅರುಣ್ ಸಿಂಗ್ ಭೇಟಿಯತ್ತ!

Spread the love

ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯ ಬಿಜೆಪಿ ನಾಯಕರ ಮಧ್ಯೆದ ಸಂಘರ್ಷ ತಾರಕಕ್ಕೇರುತ್ತಿದೆ‌. ಚುನಾವಣೆಗೆ ಒಂದು ವರ್ಷ ಬಾಕಿ ಉಳಿದಿದೆ. ಕಮಲ ನಾಯಕರ ಈ ಕಲಹ ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿದೆ‌. ಕತ್ತಿ-ಸವದಿ ಹಾಗೂ ಜಾರಕಿಹೊಳಿ‌ ಬ್ರದರ್ಸ್ ಮಧ್ಯೆದ ವೈಮನಸ್ಸು ದಿನ ಕಳೆದಂತೆ ಬಿಗಡಾಯಿಸುತ್ತಿದೆ. ಭಿನ್ನಮತ ಶಮನಕ್ಕೆ ಸ್ವತಃ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ನಾಳೆಯಿಂದ ಎರಡು ದಿನಗಳ ಕಾಲ ಬೆಳಗಾವಿಯಲ್ಲೇ ಠಿಕಾಣಿ ಹೂಡಲಿದ್ದಾರೆ.

ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರವನ್ನು ಬೆಳಗಾವಿ ಹೊಂದಿದೆ. ಈ ಮೊದಲು ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಯ ಪ್ರಭಾವಳಿ ಹೆಚ್ಚು ವರ್ಕೌಟ್ ಆಗುತ್ತಿತ್ತು. ಆದರೆ, ಕಳೆದೊಂದು ದಶಕದಿಂದ ಬೆಳಗಾವಿ ಬಿಜೆಪಿಯ ಭದ್ರ ಕೋಟೆಯಾಗಿದೆ. ಅತಿಹೆಚ್ಚು ಸ್ಥಾನ ಗೆಲ್ಲುವ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಎಂಬ ಮಾತುಗಳು ಸಹ ಇವೆ. ಈ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಜಾಣ ನಡೆ ಅನುಸರಿಸುತ್ತಿದೆ.

ಬಿಜೆಪಿ ನಾಯಕರ ಮಧ್ಯೆದ ಭಿನ್ನಾಭಿಪ್ರಾಯ ಬಗೆಹರಿಸಬೇಕು ಹಾಗೂ ಭಿನ್ನಮತ ಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂಬ ನಿಟ್ಟಿನಲ್ಲಿ ಸ್ಥಳೀಯ ನಾಯಕರಿಗೆ ಈ ಉಭಯ ನಾಯಕರು ಪಾಠ ಮಾಡಲಿದ್ದಾರೆ. ಜಿಲ್ಲೆಯ ಮೇಲೆ ಹಿಡಿತ ಸಾಧಿಸಲು ಕತ್ತಿ-ಸವದಿ ಹಾಗೂ ಜಾರಕಿಹೊಳಿ‌ ಬ್ರದರ್ಸ್ ಮಧ್ಯೆ ಪೈಪೋಟಿ ‌ನಡೆಯುತ್ತಿದೆ. ಬಿಜೆಪಿ ನಾಯಕರ ಬೆಳಗಾವಿ ಪ್ರವಾಸ ಯಶಸ್ವಿ ಆಗುವುದೇ ಎಂಬುವುದೇ ಸದ್ಯದ ಕುತೂಹಲ.

ಮನಸ್ಸಿಗೆ ಕಾರಣಗಳೇನು?: ಜಿಲ್ಲಾ ರಾಜಕಾರಣದಲ್ಲಿ ದಶಕಗಳಿಂದ ಜಾರಕಿಹೊಳಿ ಹಾಗೂ ಕತ್ತಿ ಕುಟುಂಬ ಒಂದೇ ಬಣದಲ್ಲಿತ್ತು. ಆದರೆ, ಕಳೆದ ವರ್ಷ ಡಿಸಿಸಿ ಬ್ಯಾಂಕ್ ಚುನಾವಣೆಯಿಂದ ಆರಂಭವಾದ ಎರಡು ಕುಟುಂಬಗಳ ಮಧ್ಯೆದ ಮುಸುಕಿನ ಗುದ್ದಾಟ ಇತ್ತೀಚೆಗೆ ಮುಗಿದ ಎಂಎಲ್‍ಸಿ ಚುನಾವಣೆಯಲ್ಲಿ ಸ್ಫೋಟಗೊಂಡಿತ್ತು.

ಹೀಗಾಗಿ, ಜಾರಕಿಹೊಳಿ ಬಣದೊಂದಿಗಿದ್ದ ಕತ್ತಿ ಸಹೋದರರು ಲಕ್ಷ್ಮಣ ಸವದಿ ಜೊತೆಗೂಡಿದ್ದಾರೆ. ಪರಿಣಾಮ ಉಮೇಶ ಕತ್ತಿ ಸಹೋದರ ರಮೇಶ ಕತ್ತಿ ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ಆದರೆ, ಡಿಸಿಸಿ ಬ್ಯಾಂಕ್ ನೌಕರರನ್ನು ಹಾಗೂ ನಿರ್ದೇಶಕರನ್ನು ರಮೇಶ ಕತ್ತಿ ವಿರುದ್ಧ ಎತ್ತಿಕಟ್ಟುತ್ತಿರುವ ಆರೋಪಕ್ಕೆ ಜಾರಕಿಹೊಳಿ ಸಹೋದರರು ಗುರಿಯಾಗಿದ್ದಾರೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ