Breaking News

ಲಿಂಗಾಯತ ಎಂಬುದು ಜಾತಿಯಲ್ಲ, ಜಾತಿಗಳ ಸಮೂಹವೂ ಅಲ್ಲ, ನಮ್ಮದು ಪ್ರತ್ಯೇಕ ಧರ್ಮ. :

Spread the love

ಲಿಂಗಾಯತ ಎಂಬುದು ಜಾತಿಯಲ್ಲ, ಜಾತಿಗಳ ಸಮೂಹವೂ ಅಲ್ಲ, ನಮ್ಮದು ಪ್ರತ್ಯೇಕ ಧರ್ಮ. ನಾವು ಹಿಂದೂ ಧರ್ಮದ ಭಾಗವಲ್ಲ, ಅದೇ ರೀತಿ ನಾವು ಹಿಂದೂ ಧರ್ಮದ ವಿರೋಧಿಗಳು ಅಲ್ಲ ಎಂಬ ಅರಿವು ಇತ್ತಿಚಿನ ವರ್ಷಗಳಲ್ಲಿ ಲಿಂಗಾಯತರಿಗೆ ಬಂದಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿಗಳು, ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಜಾಮದಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜಾಗತಿಕ ಲಿಂಗಾಯತ ಮಹಾಸಭೆ, ರಾಷ್ಟ್ರೀಯ ಬಸವಸೇನೆ ಜಿಲ್ಲಾ ಘಟಕದಿಂದ ಮಾಸಿಕ ಅನುಭಾವ ಸತ್ಸಂಗ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ವ್ಹಿ.ಬಿ.ಮಡಿವಾಳ ಅವರು ರಚಿಸಿರುವ ಮಡಿವಾಳ ಮಾಚಿದೇವ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಬೆಳಗಾವಿಯ ಮಹಾಂತ ಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಶಿವಾನಂದ ಜಾಮದಾರ್ ಅವರು ಬಸವತ್ವ, ವಚನ ಸಾಹಿತ್ಯ, ಶರಣರ ಜೀವನ ಚರಿತ್ರೆಗಳು, ನಮ್ಮ ಸಂಸ್ಕಾರ, ಆಚರಣೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಲಿಂಗಾಯತ ಧರ್ಮದ ಬಗ್ಗೆ ಹಾಗೂ ಲಿಂಗಾಯತರು ಯಾರು ಎನ್ನುವ ಅರಿವು ಬಗ್ಗೆ ಗೊತ್ತಿಲ್ಲದ ಪರಿಸ್ಥಿತಿಯಲ್ಲಿ ನಮ್ಮ ಸಮಾಜ ಬದುಕಿತ್ತು. ಈಗ್ಗೆ ಸರಿಯಾಗಿ 100 ವರ್ಷಗಳ ಹಿಂದೆ ಫ.ಗು.ಹಳಕಟ್ಟಿ ಅವರು ವಚನಗಳ ಪುನರ್ ಸಂಸ್ಕರಣ ಆರಂಭಿಸಿದರು. ಅಂದಿನಿಂದ ಇಂದಿನವರೆಗೂ 21 ಸಾವಿರಕ್ಕೂ ಹೆಚ್ಚು ವಚನಗಳು ನಮಗೆ ಲಭ್ಯವಾಗಿವೆ. 15 ಸಂಪುಟಗಳಲ್ಲಿ ಮೂರು ಬಾರಿ ಕರ್ನಾಟಕ ಸರ್ಕಾರ ಪ್ರಕಟ ಮಾಡಿದೆ. ಬಸವ ಸಮಿತಿ ಮೂಲಕ 24 ಭಾಷೆಗಳಲ್ಲಿ ವಚನಗಳನ್ನು ತರ್ಜುಮೆ ಮಾಡಲಾಗಿದೆ. ದೇಶದ ದೊಡ್ಡ ದೊಡ್ಡ ನಗರಗಳು, ಪ್ರತಿಯೊಂದು ಹಳ್ಳಿಗಳಲ್ಲಿಯೂ ಬಸವಣ್ಣನವರ ಚಿಂತನೆಗಳು, ಪ್ರತಿಮೆಗಳು ರಾರಾಜಿಸುತ್ತಿವೆ. ಇದು ಜನರಲ್ಲಿ ಅರಿವು ಮೂಡಿಸುತ್ತಿರುವ ಸಂಕೇತವಾಗಿದೆ. ಹಿಂದೆ ಮಠಗಳಲ್ಲಿ ನಡೆಯುತ್ತಿದ್ದ ಪುರಾಣಗಳ ಬದಲಾಗಿ ಇಂದು ವಚನ ಸಾಹಿತ್ಯ, ಬಸವಾದಿ ಶರಣರ ಜೀವನ ಚರಿತ್ರೆಗಳ ಬಗ್ಗೆ ಪ್ರವಚನ ನಡೆಯುತ್ತಿದೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಲಿಂಗಾಯತ ಧರ್ಮದ ಪರವಾಗಿ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಯುತ್ತಿದೆ. ಕರ್ನಾಟಕದಲ್ಲಿ ಲಿಂಗಾಯತ ಧರ್ಮದ ಹೋರಾಟ ಆರಂಭವಾಗಿ ಎರಡ್ಮೂರು ವರ್ಷ ಆಗಿಲ್ಲ. ಹೋರಾಟಕ್ಕೆ 135 ವರ್ಷಗಳ ಇತಿಹಾಸವಿದೆ. ಅದರ ಒಂದು ಭಾಗವಾಗಿ ಈ ಸಂಘಟನೆ ಕೆಲಸ ಮಾಡುತ್ತಿದೆ ಎಂದರು. ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವ ಕರ್ತವ್ಯಗಳು ಲಿಂಗಾಯತ ಧರ್ಮದಲ್ಲಿವೆ. ಹೀಗಾಗಿ ಲಿಂಗಾಯತ ಧರ್ಮವನ್ನು ಆಚರಿಸಿದ್ರೆ ನಿಜವಾಗಿ ನಾವು ಈ ದೇಶದ ಸಂವಿಧಾನಕ್ಕೆ ಬೆಲೆ ಕೊಟ್ಟಂತೆ ಆಗುತ್ತದೆ. ದೇಶದ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವಸೇನೆಯ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ಶಂಕರ್ ಗುಡಸ, ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜ್ ರೊಟ್ಟಿ ಅವರನ್ನು ಇದೇ ವೇಳೆ ಘೋಷಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯ್ ದೇವರಾಜ್ ಅರಸ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ದಿವ್ಯ ಸಾನಿಧ್ಯವನ್ನು ಕಡೋಲಿಯ ದುರದುಂಡೇಶ್ವರ ಮಠದ ಶ್ರೀ ಗುರು ಬಸವಲಿಂಗ ಸ್ವಾಮೀಜಿ ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀಕಾಂತ ಶಾನವಾಡ, ಮಲ್ಲಪ್ಪ ಗೌಡಪ್ಪನವರ, ಚಂದ್ರಪ್ಪ ಬೂದಿಹಾಳ, ಎಸ್.ಜಿ.ಸಿದ್ನಾಳ, ರಾಮಣ್ಣ ಪಟ್ಟಣಶೆಟ್ಟಿ, ಬಸವರಾಜ್ ಸುಲ್ತಾಪುರಿ, ಶಿವಾ ವಾಗರವಾಡಿ, ರಾಜು ಪದ್ಮನ್ನವರ, ಸತೀಶ ಚೌಗುಲಾ, ಶಿವಾನಂದ ಮೇಟ್ಯಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಯುಪಿಎಸ್​​ಸಿ ಪರೀಕ್ಷೆಯಲ್ಲಿ ಹಾಸನದ ಕೆ.ಎಸ್. ಧನ್ಯಗೆ 982ನೇ ರ‍್ಯಾಂಕ್

Spread the loveಹಾಸನ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​​ಸಿ) ಈ ಸಾಲಿನ ಪರೀಕ್ಷೆಯಲ್ಲಿ ಸಕಲೇಶಪುರ ಪಟ್ಟಣದ ಮಲ್ಲಿಕಾರ್ಜುನನಗರದ ನಿವಾಸಿ ಕೆ.ಎಸ್.ಧನ್ಯ 982ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ