Breaking News

Uncategorized

ರಾಜ್ಯದ ಎರಡನೇಯ ರಾಜಧಾನಿಯನ್ನಾಗಿ ಮಾಡಲು ಸರ್ಕಾರ 500 ಕೋಟಿ….?

ಬೆಳಗಾವಿ- ಬೆಳಗಾವಿ ರಾಜ್ಯದ ಎರಡನೇಯ ರಾಜಧಾನಿಯನ್ನಾಗಿ ಮಾಡಲು ಸರ್ಕಾರ 500 ಕೋಟಿ ಖರ್ಚು ಮಾಡಿ ಸುವರ್ಣ ವಿಧಾನ ಸೌಧ ಕಟ್ಟಡವನ್ನು ನಿರ್ಮಿಸಿದ್ದು,ಸುವರ್ಣ ಸೌಧಕ್ಕೆ ಜಿಲ್ಲಾ ಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡಬಾರದು,ರಾಜ್ಯ ಮಟ್ಟದ ಕಚೇರಿಗಳನ್ನು ಮಾತ್ರ ಸ್ಥಳಾಂತರ ಮಾಡಬೇಕೆಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ. ಕನ್ನಡ ಸಂಘಟನೆಗಳ ಕ್ರೀಯಾ ಸಮೀತಿಯ ಅದ್ಯಕ್ಷ ಅಶೋಕ ಚಂದರಗಿ ಅವರ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಿವಿಧ ಕನ್ನಡಪರ ಸಂಘಟನೆಗಳು,ಬೆಳಗಾವಿಯ ಸುವರ್ಣ ಸೌಧಕ್ಕೆ ಜಿಲ್ಲಾ …

Read More »

ಗ್ರಾಮೀಣ ವಸತಿ ನಿಗಮನಿಂದ ಕೂಡಲೇ ಹಣ ಬಿಡುಗಡೆಗೊಳಿಸಬೇಕೆಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾದವ ಅವರಿಗೆ ಮನವಿ ಸಲ್ಲಿಸಿದರು.

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಗ್ರಾಮಸ್ಥರಿಂದ ರಾಜೀವಗಾಂಧೀ ಗ್ರಾಮೀಣ ವಸತಿ ನಿಗಮನಿಂದ ಕೂಡಲೇ ಹಣ ಬಿಡುಗಡೆಗೊಳಿಸಬೇಕೆಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾದವ ಅವರಿಗೆ ಮನವಿ ಸಲ್ಲಿಸಿದರು. ರಬಕವಿಯಲ್ಲಿ ಸುಮಾರು 224 ಫಲಾನುಭವಿಗಳಿಗೆ ರಾಜೀವಗಾಂಧೀ ಗ್ರಾಮೀಣ ವಸತಿ ನಿಗಮ ದಿಂದ ಬರಬೇಕಾದ ಹಣವು ಮೂರು ವರ್ಷಗಳ ಕಳೆದರೂ ಹಣ ಬಂದಿಲ್ಲ ಬಡ ಫಲಾನುಭವಿಗಳ ಪರಿಸ್ಥಿತಿ ಕಂಗಾಲಾಗಿದೆ. ನಮಗೆ ಬರಬೇಕಾದ ಹಣ ಕೊಡಿ ಸ್ವಾಮಿ ನಮ್ಮ ಪರಿಸ್ಥಿತಿ ಹದಗೆಟ್ಟು …

Read More »

ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆತರುವ ಕೆಲಸ ನಿರ್ವಹಿಸಿದ ಸಾರಿಗೆ ಇಲಾಖೆಯ ಸಿಬ್ಬಂದಿಗಳಿಗೆ ಬಡಸ ಹಾಗೂ ಬೆಂಡಿಗೇರಿ ಗ್ರಾಮದ ವಿದ್ಯಾರ್ಥಿಗಳು ಶುಕ್ರವಾರ ಸನ್ಮಾನಿಸಿ, ಗೌರವಿಸಿದ್ದಾರೆ…

ಬೆಳಗಾವಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆತರುವ ಕೆಲಸ ನಿರ್ವಹಿಸಿದ ಸಾರಿಗೆ ಇಲಾಖೆಯ ಸಿಬ್ಬಂದಿಗಳಿಗೆ ಬಡಸ ಹಾಗೂ ಬೆಂಡಿಗೇರಿ ಗ್ರಾಮದ ವಿದ್ಯಾರ್ಥಿಗಳು ಶುಕ್ರವಾರ ಸನ್ಮಾನಿಸಿ, ಗೌರವಿಸಿದ್ದಾರೆ. ಕೊರೊನಾ ಆತಂಕದ ನಡುವೆಯೇ ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಪರೀಕ್ಷೆ ಕೇಂದ್ರಕ್ಕೆ ತೆರಳಲು ಸಹಕಾರಿಯಾದ ಸಾರಿಗೆ ಇಲಾಖೆಯ ಸಿಬ್ಬಂದಿಗಳ ಕಾರ್ಯವನ್ನು ಗ್ರಾಮಸ್ಥರು, ವಿದ್ಯಾರ್ಥಿಗಳು ಬಣ್ಣಿಸಿ, ಸನ್ಮಾನಿಸಿದ್ದರು. ಈ ವೇಳೆ ಮಾಸ್ಕ್, ಸ್ಯಾನಿಟೈಸರ್ ಬಳಸುವ ಮೂಲಕ ಸರ್ಕಾರದ ನಿಯಮಗಳನ್ನು …

Read More »

ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಯೋಧ ಚಿಕಿತ್ಸೆ ಫಲಕಾರಿಯಾಗದೆ ನಿಧನ

ಬೆಳಗಾವಿ/ಚಿಕ್ಕೋಡಿ: ಅಸ್ಸಾಂ ಗಡಿಯಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಸುನೀಲ ಸದಾಶಿವ ಖಿಲಾರೆ (36) ಮೃತ ಯೋಧ. ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದವರಾಗಿದ್ದು, ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಬಳಿಕ ಇವರನ್ನು ಗುವಾಹಾಟಿಯ ಆರ್ಮಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಸುನೀಲ ಸದಾಶಿವ ಖಿಲಾರೆ ವಿಧಿವಶರಾಗಿದ್ದಾರೆ. ಕಳೆದ 17 ವರ್ಷಗಳಿಂದ ಸೈನಿಕ ಸೇವೆಯಲ್ಲಿದ್ದ ಇವರು ಕೊರೊನಾ ಹೆಮ್ಮಾರಿ ಹಿನ್ನೆಲೆಯಲ್ಲಿ ಕಳೆದ 3 …

Read More »

ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯೋಧ

ಬೆಳಗಾವಿ: ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಸಾಂಬ್ರಾದಲ್ಲಿರುವ ಏರ್ ಫೋರ್ಸ್ ನ ಟ್ರೇನಿಂಗ್ ಸ್ಕೂಲ್ ನಲ್ಲಿ ನಡೆದಿದೆ. ಹರಿಯಾಣ ಮೂಲದ ಅಮೀರ್ ಖಾನ್(24) ಆತ್ಮಹತ್ಯೆ  ಮಾಡಿಕೊಂಡ ಯೋಧ. ಇನ್ಸಾಸ್ ರೈಫಲ್‌ನಿಂದ ಗುರುವಾರ ಬೆಳಿಗ್ಗೆ ತಾನೇ ಶೂಟ್ ಮಾಡಿಕೊಂಡಿದ್ದಾರೆ.  ತಕ್ಷಣ ಅಲ್ಲಿನ ಹಿರಿಯ ಅಧಿಕಾರಿಗಳು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದ್ರೆ ಚಿಕಿತ್ಸೆಗೂ ಮುನ್ನ ಯೋಧ ಮೃತಪಟ್ಟಿದ್ದಾರೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ತನ್ನ ಹಳೇ ಶಿಷ್ಯನ ಪರವಾಗಿ ಬ್ಯಾಟಿಂಗ್ ಮಾಡಿದ ಸಿದ್ದು,

ಬೆಂಗಳೂರು: ಸಿಎಂ ಫಂಡ್‍ಗೆ ಬಂದ 290 ಕೋಟಿಯಲ್ಲಿ ಒಂದು ರೂಪಾಯಿಯನ್ನಾದರೂ ಖರ್ಚು ಮಾಡಿದ್ದೀರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪನವರಿಗೆ ಪ್ರಶ್ನೆ ಮಾಡಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಾಕ್‍ಡೌನ್‍ಗಿಂತ ಮುಂಚಿತವಾಗಿ ನಮ್ಮ ದೇಶದಲ್ಲಿ ಕಡಿಮೆ ಸೋಂಕಿತ್ತು. ಕಡಿಮೆ ಸೋಂಕು ಇದ್ದಾಗ ನಮಗೆ ಸಿದ್ಧತೆ ಮಾಡಿಕೊಳ್ಳಲು ದೇಶದಲ್ಲಿ ಮತ್ತು ರಾಜ್ಯದಲ್ಲಿ ಸಮಯ ಇತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ, ತಪ್ಪು ನಿರ್ಧಾರಗಳಿಂದ …

Read More »

ಟಿಕ್‍ಟಾಕ್‍ನಿಂದ ಪಿಎಂ ಕೇರ್ಸ್ ಫಂಡ್‍ಗೆ 30 ಕೋಟಿ ಬಂದಿದೆ: ಖಾದರ್

ಮಂಗಳೂರು: ಚೀನಾದ 59 ಆ್ಯಪ್ ಗಳನ್ನು ಬ್ಯಾನ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಶಾಸಕ ಯು.ಟಿ ಖಾದರ್ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಆ್ಯಪ್ ಬಂದ್ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಚೈನಾಗೆ ಆ್ಯಪ್‍ನಿಂದ ನಷ್ಟ ಇಲ್ಲ. ಭಾರತಕ್ಕೆ ಆ್ಯಪ್ ಬ್ಯಾನ್‍ನಿಂದ ಲಾಭ ಇಲ್ಲ. ಪಿಎಂ ಕೇರ್ಸ್ ಫಂಡ್‍ಗೆ ಟಿಕ್‍ಟಾಕ್‍ನಿಂದ 30 ಕೋಟಿ ಬಂದಿದೆ. ಆ ಹಣವನ್ನು ಸರ್ಕಾರ ವಾಪಸ್ ಕೊಡಲಿ. ಸರ್ಕಾರಕ್ಕೆ …

Read More »

ಬೆಳಗಾವಿ ನಗರದ ಕ್ಯಾಂಪ್ ಪೋಲೀಸರು ಬಂಧಿಸಿದ ಕುಖ್ಯಾತ ರೌಡಿಗೆ ಕೊರೋನಾ ಸೊಂಕಿನ ಶಂಕೆ ಹಿನ್ನಲೆಯಲ್ಲಿ, ಹಿಂಡಲಗಾ ಜೈಲು ಮತ್ತು ಕ್ಯಾಂಪ್ ಪೋಲೀಸ್ ಠಾಣೆಯಲ್ಲಿ ಭೀತಿ ಶುರುವಾಗಿದೆ.

ಬೆಳಗಾವಿ- ಇತ್ತೀಚಿಗಷ್ಟೆ ಬೆಳಗಾವಿ ನಗರದ ಕ್ಯಾಂಪ್ ಪೋಲೀಸರು ಬಂಧಿಸಿದ ಕುಖ್ಯಾತ ರೌಡಿಗೆ ಕೊರೋನಾ ಸೊಂಕಿನ ಶಂಕೆ ಹಿನ್ನಲೆಯಲ್ಲಿ, ಹಿಂಡಲಗಾ ಜೈಲು ಮತ್ತು ಕ್ಯಾಂಪ್ ಪೋಲೀಸ್ ಠಾಣೆಯಲ್ಲಿ ಭೀತಿ ಶುರುವಾಗಿದೆ. ದರೋಡೆಕೋರನಿಗೆ ಸೋಂಕು ಶಂಕೆ ಹಿಂಡಲಗಾ ಜೈಲಿನಲ್ಲಿ ಆತಂಕ ಸೃಷ್ಠಿಯಾಗಿದೆ. ದರೋಡೆ ಮಾಡುತ್ತಿದ್ದ ವ್ಯಕ್ಯಿಯನ್ನ ಬಂಧಿಸಿದ್ದ ಬೆಳಗಾವಿಯ ಕ್ಯಾಂಪ್ ಪೊಲೀಸರು. ಮೂರು ದಿನಗಳ ಹಿಂದೆ ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದರು. ದರೋಡೆಕೋರನಿಗೆ ಇಂದು ಸೋಂಕಿನ ಶಂಕೆ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿನಲ್ಲಿನ ಕೈದಿ …

Read More »

ಜಿಲ್ಲಾ ಆಸ್ಪತ್ರೆಯ ಕೋವೀಡ್ ಐಸೋಲೇಶನ್ ವಾರ್ಡಿನಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ನರ್ಸಗೂ ಸೊಂಕು ತಗಲಿರುವದು ದೃಡವಾಗಿದೆ.

ಬೆಳಗಾವಿ- ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಕೋವೀಡ್ ಐಸೋಲೇಶನ್ ವಾರ್ಡಿನಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ನರ್ಸಗೂ ಸೊಂಕು ತಗಲಿರುವದು ದೃಡವಾಗಿದೆ. ಹಲವಾರು ದಿನಗಳಿಂದ ಈ ನರ್ಸ್ ಗೆ ಕೋವೀಡ್ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಇವರನ್ನು ಕ್ವಾರಂಟೈನ್ ಮಾಡಲಾಗಿತ್ತು ಇಂದು ಬೆಳಿಗ್ಗೆ ಸೊಂಕು ದೃಡವಾದ ಹಿನ್ನಲೆಯಲ್ಲಿ ರೋಗಿಗಳ ಸೇವೆ ಮಾಡಿದ ನರ್ಸಗೂ ಈಗ ಜಿಲ್ಲಾ ಆಸ್ಪತ್ರೆಯಲ್ಲಿ ಐಸೋಲೇಟ್ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ವೈರಸ್ ಹರಡಿ ಇಂದಿಗೆ ಮೂರು ತಿಂಗಳು ಗತಿಸಿದ್ದು ಇದೇ …

Read More »

ಹೆತ್ತ ತಾಯಿಯ ಪ್ರೇಮ್​ ಕಹಾನಿಗೆ 5 ವರ್ಷ ಹೆಣ್ಮಗು ಬಲಿ!

ಹೈದರಾಬಾದ್​: ಹೆತ್ತ ತಾಯಿಗೂ ಆಕೆಯ ಲವರ್​ಗೂ ಜಗಳ ಆಯಿತು. ಅದು ಅತಿರೇಕಕ್ಕೆ ಹೋಗಿ ಬಲಿಯಾದುದು 5 ವರ್ಷದ ಹೆಣ್ಣು ಮಗು! ಹೈದರಾಬಾದ್​ ಸಮೀಪದ ಘಾಟ್​ಕೇಸ್​ ಎಂಬಲ್ಲಿ ಈ ಘಟನೆ ನಡೆದಿದೆ. ಐದು ವರ್ಷದ ಮಗುವಿನ ತಾಯಿಗೆ 25 ವರ್ಷದ ಯುವಕ ಜತೆಗೆ ಸಂಬಂಧವಿತ್ತು. ಆದರೆ ಅದು ಬಹುಕಾಲ ಬಾಳಲಿಲ್ಲ. ಆಕೆ ಆ ಯುವಕನನ್ನು ದೂರ ಇರಿಸತೊಡಗಿದ್ದಳು. ಆತನ ಆಕೆಯ ಮನೆಗೆ ಹೋದಾಗ ಅಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದುದನ್ನು ಆ ಯುವಕ …

Read More »