ಬೆಂಗಳೂರು: ಕೊರೊನಾ ಕಾಟಕ್ಕೆ ಬೆಂಗಳೂರು ನಲುಗಿ ಹೋಗಿದೆ. ಸರ್ಕಾರ ಲಾಕ್ಡೌನ್ ಮಾಡಲಿಲ್ಲ ಅಂದರೂ ನಾವೇ ಸ್ವಯಂ ಲಾಕ್ಡೌನ್ ಮಾಡಿಕೊಳ್ಳುತ್ತೇವೆ ಅಂತ ಬೆಂಗಳೂರಿನ ಕಮರ್ಷಿಯಲ್ ಏರಿಯಾದ ಜನ ಮುಂದಾಗಿದ್ದಾರೆ. ಲಾಕ್ಡೌನ್ ಸಮಯದಲ್ಲಿ ದಿನಕ್ಕೆ ನಾಲ್ಕೈದು ಪ್ರಕರಣಗಳು ಬರುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಲಾಕ್ಡೌನ್ ಸಡಿಲಿಕೆ ಬಳಿಕ ಸೆಂಚುರಿ ಮೇಲೆ ಸೆಂಚುರಿ ಬಾರಿಸಿದ್ದ ಕೊರೊನಾ ಈಗ ದಿನಕ್ಕೆ 800ರ ಬಳಿ ಬಂದಿದೆ. ಹೀಗೆ ಹೋದರೆ ಬೆಂಗಳೂರು ಮತ್ತೊಂದು ಮುಂಬೈ ನಗರ ಆಗುವುದರಲ್ಲಿ ಅನುಮಾನವೇ ಇಲ್ಲ. …
Read More »ಶಾಸಕರಿಗೆಕಾಲು ತೊಳೆದು, ಹೂವು ಹಾಕಿ ಬೆಂಬಲಿಗರು ಪಾದಪೂಜೆ ಮಾಡಿ ಗೌರವಿಸಿದ್ದಾರೆ.
ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಕಾಲು ತೊಳೆದು, ಹೂವು ಹಾಕಿ ಬೆಂಬಲಿಗರು ಪಾದಪೂಜೆ ಮಾಡಿವ ಮೂಲಕ ಅಂಧಾಭಿಮಾನ ಮೆರೆದಿದ್ದಾರೆ. ಚಾಮರಾಜಪೇಟೆಯಲ್ಲಿ ಬಂಗಾರದ ಮನುಷ್ಯ ಜಮೀರಣ್ಣ ಅಭಿಮಾನಿಗಳ ಬಳಗದಿಂದ ಕಾರ್ಯಕ್ರಮ ಆಯೋಜಿಸಿ, ಪಾದಪೂಜೆ ಮಾಡಿ ಗೌರವಿಸಿದ್ದಾರೆ. ಲಾಕ್ಡೌನ್ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಮರೆತು ಒಟ್ಟೊಟ್ಟಾಗಿ ನಿಂತು ಪಾದಪೂಜೆ ಮಾಡಿದ್ದಾರೆ. ಅಲ್ಲದೆ ಬಂಗಾರದ ಮನುಷ್ಯ ಜಮೀರಣ್ಣ ಎಂಬ ಕಟೌಟ್ನ್ನು ಶಾಸಕ ಜಮೀರ್ ಅಹ್ಮದ್ ಕಡೆಯಿಂದಲೇ ಬಿಡುಗಡೆ ಮಾಡಿಸಿದ್ದಾರೆ. ಈ ವೇಳೆ …
Read More »ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಸರ್ಕಾರದ ತೀರ್ಮಾನದಿಂದ ಇಡೀ ಪಟ್ಟಣದ ಜನರೇ ಬೀದಿಗೆ ಬರುವ ಸ್ಥಿತಿ
ಚಿಕ್ಕೋಡಿ(ಬೆಳಗಾವಿ): ಒಂದು ಕಡೆ ಆ ಗ್ರಾಮಸ್ಥರಿಗೆ ಸರ್ಕಾರನೇ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ ಅಲ್ಲದೇ ಸರ್ಕಾರದ ಯೋಜನೆಯಡಿ ಆಶ್ರಯ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಆದರೆ ಈಗ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಸರ್ಕಾರದ ತೀರ್ಮಾನದಿಂದ ಇಡೀ ಪಟ್ಟಣದ ಜನರೇ ಬೀದಿಗೆ ಬರುವ ಸ್ಥಿತಿ ಬಂದಿದೆ. ಕಳೆದ 40 ವರ್ಷಗಳಿಂದ ನೆಮ್ಮದಿಯಿಂದ ಇದ್ದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕನವಾಡಿ ಗ್ರಾಮಸ್ಥರ ಜನರ ಪರಿಸ್ಥಿತಿ ಈಗ ಸರ್ಕಾರದ ಒಂದು …
Read More »ಶಾಸಕ ದುರ್ಯೋಧನ ಐಹೊಳೆಯನ್ನುಶಾಸಕನ ನಡೆಯಿಂದ ಬೇಸತ್ತುತರಾಟೆಗೆ ತೆಗೆದುಕೊಂಡು, ಘೇರಾವ್ ಹಾಕಿದ್ದಾರೆ.
ಚಿಕ್ಕೋಡಿ: ಜನರ ಸಮಸ್ಯೆ ಕೇಳಲು ಬಂದು ಬೆಂಬಲಿಗರ ಮನೆಯಲ್ಲಿ ಕುಳಿತ ಶಾಸಕನ ನಡೆಯಿಂದ ಬೇಸತ್ತು ಜನರು ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆಯನ್ನು ತರಾಟೆಗೆ ತೆಗೆದುಕೊಂಡು, ಘೇರಾವ್ ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕನವಾಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಗೈರಾಣು ಜಮೀನಿನ ಸಮಸ್ಯೆ ಆಲಿಸಲು ಬಂದಿದ್ದ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಕಂಕನವಾಡಿ ಗ್ರಾಮದ ತಮ್ಮ ಬೆಂಬಲಿಗರ ಮನೆಯಲ್ಲೆ ಕುಳಿತು, ಜನರನ್ನು ಅಲ್ಲಿಗೇ ಕರೆಸಿ ಎಂದಿದ್ದಾರೆ. …
Read More »ಕೊರೊನಾ ವೇಗಕ್ಕೆ ಕಡಿವಾಣ ಹಾಕಬೇಕಾದರೆ ಲಾಕ್ಡೌನ್ ಅನಿವಾರ್ಯ” : ಆರ್.ಅಶೋಕ್
ಬೆಂಗಳೂರು, ಜೂ.30- ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಎಸ್ಎಸ್ಲ್ಸಿ ಪರೀಕ್ಷೆ ಮುಗಿದ ನಂತರ ಮತ್ತೆ ಲಾಕ್ಡೌನ್ ಜಾರಿ ಮಾಡುವ ಸುಳಿವನ್ನು ಸರ್ಕಾರ ನೀಡಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಕಂದಾಯ ಸಚಿವ ಹಾಗೂ ಕೋವಿಡ್ ಉಸ್ತುವಾರಿ ಆರ್.ಅಶೋಕ್, ಕೊರೊನಾ ವೇಗಕ್ಕೆ ಕಡಿವಾಣ ಹಾಕಬೇಕಾದರೆ ಲಾಕ್ಡೌನ್ ಅನಿವಾರ್ಯ ಎಂದು ಪರೋಕ್ಷವಾಗಿ ಮತ್ತೆ ಲಾಕ್ಡೌನ್ ಮಾಡುವ ಸುಳಿವು ಕೊಟ್ಟರು. ರಸ್ತುತ ಎಸ್ಎಸ್ಲ್ಸಿ ಪರೀಕ್ಷೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಾರದೆಂಬ ಏಕೈಕ ಕಾರಣಕ್ಕೆ …
Read More »ಮದ್ವೆಯಾದ ಎರಡೇ ದಿನಕ್ಕೆ ಮದುಮಗಳು ತವರಿಗೆ- ಕಾಡಿ ಬೇಡಿ ವಿವಾಹವಾಗಿ ಕೈಕೊಟ್ಟ ಭೂಪ
ಮಂಡ್ಯ: ಲಾಕ್ಡೌನ್ ನಡುವೆ ಲಕ್ಷಾಂತರ ಹಣ ಸಾಲ ಮಾಡಿ ವರದಕ್ಷಿಣೆ ನೀಡಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಸೋದರತ್ತೆ ಮಗನೇ ಯುವತಿಗೆ ವಂಚಿಸಿದ್ದು, ಮದುವೆಯಾದ ಎರಡೇ ದಿನಕ್ಕೆ ತವರಿಗೆ ಕಳುಹಿಸಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಹರೀಶ್ ಮದುವೆಯಾದ ಎರಡು ದಿನಕ್ಕೆ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದಾನೆ. ಈತ ಮೈಸೂರು ಜಿಲ್ಲೆಯ ಬೆಳವಾಡಿ ಗ್ರಾಮದವನು. ಜೂನ್ 1ರಂದು ಜಿಲ್ಲೆಯ KRS ಸಮೀಪದ ಹೊಂಗಹಳ್ಳಿ ನಿವಾಸಿಗಳಾದ ತಾಯಮ್ಮ-ಈರಪ್ಪ ಮಗಳ ಜೊತೆ ವಿವಾಹವಾಗಿದ್ದನು. ಹರೀಶ್ ಮದುವೆಯಾದ …
Read More »ವಿಶಾಖಪಟ್ಟಣಂನಲ್ಲಿ ಮತ್ತೆ ವಿಷಾನಿಲ ಸೋರಿಕೆ- ಇಬ್ಬರು ಸಾವು, ನಾಲ್ವರು ಗಂಭೀರ
ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಕಾರ್ಖಾನೆಯೊಂದರಲ್ಲಿ ಮತ್ತೆ ಗ್ಯಾಸ್ ಲೀಕ್ ಆಗಿದ್ದು, ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಜೊತೆಗೆ ನಾಲ್ವರು ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ವಿಶಾಖಪಟ್ಟಣಂನ ಆರ್.ಆರ್ ವೆಂಕಟಪುರಂನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ಸೋರಿಕೆಯಾಗಿತ್ತು. ಈಗ ಮತ್ತೆ ಇದೇ ವಿಶಾಖಪಟ್ಟಣಂನ ಸೈನರ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಿಂದ ಬೆಂಜಿಮಿಡಾಜೋಲ್ ಅನಿಲ ಸೋರಿಕೆಯಾಗಿದೆ ಎಂದು ರಾಷ್ಟೀಯ ಮಾಧ್ಯಮಗಳು ವರದಿ …
Read More »ರಶ್ಮಿಕಾ ಮಾವಿನಕಾಯಿ, ಮಾವಿನಕಾಯಿ ಉಪ್ಪಿನಕಾಯಿ ಸೇರಿದಂತೆ ಆರ್ಗಾನಿಕ್ ಫುಡ್ಗಳನ್ನು ಉಡುಗೊರೆಯಾಗಿ ಮಹೇಶ್ ಬಾಬು ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಹೈದರಾಬಾದ್: ಸ್ಯಾಂಡಲ್ವುಡ್ ನಟಿ ರಶ್ಮಿಕಾ ಮಂದಣ್ಣ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕೊಡಗಿನ ಕೂರ್ಗ್ನಲ್ಲಿ ಕುಟುಂಬದವರ ಜೊತೆ ಕಾಲಕಳೆಯುತ್ತಿದ್ದಾರೆ. ಇದೀಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಕುಟುಂಬಕ್ಕೆ ಕೊಡಗಿನಿಂದ ವಿಶೇಷವಾದ ಉಡುಗೊರೆಯನ್ನು ಕಳುಹಿಸಿಕೊಟ್ಟಿದ್ದಾರೆ. ನಟಿ ರಶ್ಮಿಕಾ ಮಾವಿನಕಾಯಿ, ಮಾವಿನಕಾಯಿ ಉಪ್ಪಿನಕಾಯಿ ಸೇರಿದಂತೆ ಆರ್ಗಾನಿಕ್ ಫುಡ್ಗಳನ್ನು ಉಡುಗೊರೆಯಾಗಿ ಮಹೇಶ್ ಬಾಬು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಕೊಡಗಿನಿಂದ ಅದರಲ್ಲೂ ಮಳೆಗಾಲದಲ್ಲಿ ಉಡುಗೊರೆ ಕಳುಹಿಸಿಕೊಟ್ಟಿದ್ದಕ್ಕೆ ನಟ ಮಹೇಶ್ ಬಾಬು ಪತ್ನಿ ನಮ್ರತಾ ಅವರು ರಶ್ಮಿಕಾಗೆ …
Read More »ಮಗಳ ಮದುವೆಗೆಂದು ಬಂದಿದ್ದ ತಂದೆ ಕೊರೊನಾಗೆ ವೈರಸ್ ಗೆ ಬಲಿಯಾಗಿರುವ ಘಟನೆ ನಡೆದಿದೆ.
ರಾಯಚೂರು/ಯಾದಗಿರಿ: ಮಗಳ ಮದುವೆಗೆಂದು ಬಂದಿದ್ದ ತಂದೆ ಕೊರೊನಾಗೆ ವೈರಸ್ ಗೆ ಬಲಿಯಾಗಿರುವ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ವನಕೇರಿ ಮೂಲದ ವ್ಯಕ್ತಿ(45) ರಾಯಚೂರಿನ ಸಿರವಾರ ಪಟ್ಟಣದ ವಿದ್ಯಾನಗರದಲ್ಲಿ ನಡೆದಿದ್ದ ಮದುವೆಗೆ ಆಗಮಿಸಿದ್ದರು. ಮಗಳ ಮದುವೆ ಮುಗಿಸಿದ್ದ ವ್ಯಕ್ತಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಕೂಡಲೇ ಅವರನ್ನು ಸಿರವಾರ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ರಾಯಚೂರು ರಿಮ್ಸ್ ಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಹಾಗೆಯೇ ರಿಮ್ಸ್ ಗೆ ಕರೆದುಕೊಂಡು ಹೋಗುತ್ತಿರುವಾಗಲೇ …
Read More »ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 14,295 ತಲುಪಿದ್ದು, ಈವರೆಗೆ 226 ಮಂದಿ ಮೃತಪಟ್ಟಿದ್ದಾರೆ.
ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಭಾರತದಲ್ಲಿ ಅಬ್ಬರಿಸುತ್ತಿದ್ದು, ಈವರೆಗೆ 16,796 ಮಂದಿ ಮೃತಪಟ್ಟಿದ್ದಾರೆ. ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈಗ ಒಟ್ಟು ಸೋಂಕಿತರ ಸಂಖ್ಯೆ 5,62,198 ಕ್ಕೆ ತಲುಪಿದೆ. ಸೋಂಕು ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಕೆಲ ರಾಜ್ಯಗಳ ವಿವರ ಇಂತಿದೆ. ಮಹಾರಾಷ್ಟ್ರದಲ್ಲಿ 1,69,883 ಮಂದಿ ಸೋಂಕು ಪೀಡಿತರಿದ್ದು, ಈವರೆಗೆ 7,610 ಮಂದಿ ಮೃತಪಟ್ಟಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 83,077 ಮಂದಿ …
Read More »