Breaking News

Uncategorized

ಕೊರೊನಾ ಭಯ- ನೋಟ್‍ಗಳನ್ನು ವಾಶಿಂಗ್ ಮಶೀನ್‍ಗೆ ಹಾಕಿದ್ರು

ಸಿಯೋಲ್: ಕೊರೊನಾ ಜನರನ್ನು ಯಾವ ಮಟ್ಟಿಗೆ ಭಯಪಡಿಸಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದ್ದು, ಸೋಂಕು ತಗುಲುವ ಭಯದಲ್ಲಿ ಇಲ್ಲೊಬ್ಬರು ನೋಟುಗಳನ್ನೇ ವಾಶಿಂಗ್ ಮಶೀನ್‍ಗೆ ಹಾಕಿ ತೊಳೆದಿದ್ದಾರೆ.ದಕ್ಷಿಣ ಕೋರಿಯಾದ ಸಿಯೋಲ್‍ನಲ್ಲಿ ವ್ಯಕ್ತಿಯೊಬ್ಬರು ಈ ರೀತಿ ಮಾಡಿದ್ದು, ಅವರು ಪುರುಷನೋ ಮಹಿಳೆಯೋ ಎಂಬುದು ತಿಳಿದು ಬಂದಿಲ್ಲ. ಕೊರೊನಾ ವೈರಸ್ ತಗುಲುವುದರಿಂದ ತಪ್ಪಿಸಿಕೊಳ್ಳಲು 50,000 ವೋನ್(3,137 ರೂಪಾಯಿ)ನ್ನು ವಾಶಿಂಗ್ ಮಶೀನ್‍ಗೆ ಹಾಕಿ ತೊಳೆದಿದ್ದಾರೆ ಎಂದು ವರದಿಯಾಗಿದೆ. ಕುಟುಂಬದವರು ನಿಧನರಾಗಿದ್ದಾಗ ಸಂಬಂಧಿಕರು ಹಾಗೂ ಸ್ನೇಹಿತರು ವ್ಯಕ್ತಿಗೆ …

Read More »

ಅಯೋಧ್ಯೆ ಭೂಮಿ ಪೂಜೆಗೆ ತಯಾರಾಗ್ತಿದೆ 1.25 ಲಕ್ಷ ಮಣ್ಣಿನ ಹಣತೆಗಳು!

ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದ್ದು, ಸಿದ್ಧತೆಗಳು ಕೂಡ ಭರದಿಂದ ಸಾಗಿವೆ. ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆಗೆ 1.25 ಲಕ್ಷದ ಮಣ್ಣಿನ ಹಣತೆಗಳು ತಯಾರಾಗುತ್ತಿವೆ.ಈ ಸಂಬಂಧ ಮಣ್ಣಿನ ಮಡಿಕೆ ತಯಾರಕರು ಮಾತನಾಡಿ, 1.25 ಲಕ್ಷ ಮಣ್ಣಿನ ಹಣತೆಗಳನ್ನು ಮಾಡಿಕೊಡುವಂತೆ ಆರ್ಡರ್ ಬಂದಿದೆ. ಈ ಗ್ರಾಮದಲ್ಲಿ ಸುಮಾರು 40 ಕುಟುಂಬಗಳಿವೆ. ಸದ್ಯ ನಾವು ಹಣತೆಗಳನ್ನು ಮಾಡುವ ಬ್ಯುಸಿಯಲ್ಲಿದ್ದೇವೆ ಎಂದು ಹೇಳಿದ್ದಾರೆ. ಇತ್ತ ಭಾನುವಾರ ಸಿಎಂ ಆದಿತ್ಯನಾಥ್ ಭೇಟಿ ನೀಡಲಿದ್ದಾರೆ. …

Read More »

ಆಗಸ್ಟ್​ ಬಂದರೂ ಸುರಿಯುತ್ತಿಲ್ಲ ಮಳೆ; ಇಂದಿನ ಜಲಾಶಯಗಳ ನೀರಿನ ಮಟ್ಟ ಹೀಗಿದೆ

ಬೆಂಗಳೂರು : ಆಗಸ್ಟ್​ ತಿಂಗಳು ಆರಂಭಗೊಂಡಿದೆ. ಕಳೆದ ವರ್ಷ ಈ ಹೊತ್ತಿಗೆ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ , ಈ ಬಾರಿ ಮಳೆ ಇಲ್ಲದೆ ಜನ ಕಂಗಾಲಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬೇಸಿಗೆ ಸಮಯದಲ್ಲಿ ನೀರಿಗೆ ಹಾಹಾಕಾರ ಏಳುವುದು ಗ್ಯಾರಂಟಿ . ಏಕೆಂದರೆ ಈಗ ಅಂದುಕೊಂಡ ಮಟ್ಟಕ್ಕೆ ಜಲಾಶಯಗಳು ತುಂಬುತ್ತಿಲ್ಲ. ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಜೂನ್​ ಹಾಗೂ ಜುಲೈ ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗಿತ್ತು. ಆದರೆ, ನಂತರ ಮಳೆ ಆಗಲೇ ಇಲ್ಲ. …

Read More »

ಪಿಪಿಇ ಕಿಟ್​ ಧರಿಸದೇ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಗುಂಪಾಗಿ ಸೇರಿದ ಸಂಬಂಧಿಕರು

ಬೆಳಗಾವಿ: ಕೊರೊನಾ ಸೋಂಕಿತರ ಅಂತ್ಯಸಂಸ್ಕಾರದ ವೇಳೆ ಸಂಬಂಧಿಕರು ಸೋಂಕಿನ ಭಯ ಮೆರತು ‌ ಸ್ಮಶಾನದೊಳಗೆ‌ ನುಗ್ಗಿದ ಘಟನೆ ಜಿಲ್ಲೆಯ ಸದಾಶಿವ‌ನಗರದ ಸ್ಮಶಾನದಲ್ಲಿ ನಡೆದಿದೆ. ನಿನ್ನೆ ಸಂಜೆ ನಗರ ಪಾಲಿಕೆ ಸಿಬ್ಬಂದಿ ಕೊರೊನಾ ಸೋಂಕಿತರೊಬ್ಬರ ಅಂತ್ಯಕ್ರಿಯೆ ನಡೆಸಲು ಸದಾಶಿವ‌ನಗರದ ಸ್ಮಶಾನಕ್ಕೆ ಮೃತದೇಹ ತಂದಿದ್ದಾರೆ. ಈ ವೇಳೆ ಸೋಂಕಿತರ ಸಂಬಂಧಿಕರು ಪಿಪಿಇ‌ ಕಿಟ್ ಇಲ್ಲದೇ, ಶವದ ಅಕ್ಕಪಕ್ಕ ಓಡಾಡಿದ್ದಾರೆ. ಅಲ್ಲದೇ ಅಂತ್ಯಸಂಸ್ಕಾರದ ವೇಳೆ‌ ಬೆಂಕಿ‌ ಸರಿಪಡಿಸಲು ಪಾಲಿಕೆ ಸಿಬ್ಬಂದಿ ಕೂಡ ಪಿಪಿಇ‌ ಕಿಟ್ …

Read More »

ಬೆಳಗಾವಿ | ಕಾಣೆಯಾದ ಬೆಳಗಾವಿಯ ಜಡಿಮಳೆ..!

ಬೆಳಗಾವಿ: ಮಳೆಗಾಲ ಆರಂಭದ ಮೊದಲ ತಿಂಗಳು, ಕಳೆದ ಜೂನ್‌ನಲ್ಲಿ ಜಿಲ್ಲೆಯಲ್ಲಿ ಅಬ್ಬರಿಸಿದ್ದ ಮಳೆರಾಯ ಜುಲೈನಲ್ಲಿ ತಣ್ಣಗಾಗಿದ್ದಾನೆ. ಪ್ರತಿವರ್ಷ ಜೂನ್‌ಗಿಂತಲೂ ಜುಲೈನಲ್ಲಿಯೇ ಹೆಚ್ಚು ಮಳೆಯಾಗುತ್ತಿತ್ತು. ವಾರಗಟ್ಟಲೆ ಜಿಟಿಜಿಟಿ ಸುರಿಯುತ್ತಿತ್ತು. ಆದರೆ, ಈ ಸಲ ಬೆಳಗಾವಿಯ ಜಡಿಮಳೆ ಕಾಣೆಯಾಗಿದೆ. ವಾಡಿಕೆಗಿಂತ ಶೇ 20ರಷ್ಟು ಕಡಿಮೆ ಮಳೆಯಾಗಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿದೆ. ಜೂನ್‌ನಲ್ಲಿ 180.9 ಸೆಂ.ಮೀ ವಾಡಿಕೆ ಮಳೆಗೆ ಹೋಲಿಸಿದರೆ 228.4 ಸೆಂ.ಮೀ.ನಷ್ಟು (ಶೇ 25ರಷ್ಟು ಹೆಚ್ಚು) ಮಳೆಯಾಗಿತ್ತು. ಅದೇ ರಭಸ ಜುಲೈನಲ್ಲಿ ಕಂಡುಬರಲಿಲ್ಲ. ಮೊದಲ …

Read More »

63,922 ಪಡಿತರ ಕಾರ್ಡ್‌ ರದ್ದು: ಗಡಾದ

ಮೂಡಲಗಿ: ರಾಜ್ಯದಲ್ಲಿ ಒಟ್ಟು 1,27,00,451 ಪಡಿತರ ಕಾರ್ಡ್‌ಗಳು ಇದ್ದು ಇವುಗಳಲ್ಲಿ 63,922 ಕಾರ್ಡ್‌ಗಳನ್ನು ಅನರ್ಹ ಪಡಿತರ ಕಾರ್ಡ್‌ಗಳೆಂದು ಗುರುತಿಸಿ ರದ್ದು ಪಡಿಸಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, 43,138 ಕಾರ್ಡ್‌ಗಳನ್ನು ಬಿಪಿಎಲ್‌ದಿಂದ ಎಪಿಎಲ್‌ಗೆ ಪರಿವರ್ತಿಸಲಾಗಿದೆ ಮತ್ತು ಅಕ್ರಮ ಬಿಪಿಎಲ್‌ ಕಾರ್ಡ್‌ಗಳನ್ನು ವಾಪಸ್‌ ಪಡೆಯುವಾಗ ಕಾರ್ಡ್‌ದಾರರಿಂದ ದಂಡದ ರೂಪದಲ್ಲಿ ಒಟ್ಟು 96,27,961 ರೂ. ಖಜಾನೆಗೆ ಪಾವತಿಸಿಕೊಳ್ಳಲಾಗಿರುವ ಅಂಶವು ಮಾಹಿತಿ ಹಕ್ಕಿನಿಂದ ಬೆಳಕಿಗೆ …

Read More »

ಚಿಕ್ಕೋಡಿಯ ಗಣ್ಯ ವ್ಯಕ್ತಿರೋರ್ವರಿಗೆ ಕೋವಿಡ್ ಪಾಸಿಟಿವ್: ಬೆಚ್ಚಿಬೀಳಿಸಿದ ಟ್ರಾವೆಲ್ ಹಿಸ್ಟರಿ

ಚಿಕ್ಕೋಡಿ: ನಗರದಲ್ಲಿ ಸಕ್ರಿಯವಾಗಿದ್ದ ಗಣ್ಯ ವ್ಯಕ್ತಿಯೋರ್ವರಿಗೆ ಕೋವಿಡ್-19 ಸೋಂಕು ತಗುಲಿದ್ದು, ಚಿಕ್ಕೋಡಿ ನಗರದ ಜನರನ್ನು ಬೆಚ್ಚಿ ಬೀಳಿಸಿದೆ. ಚಿಕ್ಕೋಡಿ ನಗರದ ಸಾಯಿ ಮಂದಿರ ಹತ್ತಿರ ಇರುವ ಓರ್ವ ಗಣ್ಯ ವ್ಯಕ್ತಿಗೆ ಶುಕ್ರವಾರ ಕೋವಿಡ್ ಪಾಸಿಟಿವ್ ಆಗಿರುವುದು ದೃಢವಾಗಿದೆ. ಪಾಸಿಟಿವ್ ಬಂದಿರುವ ಈ ವ್ಯಕ್ತಿ ಕಳೆದ ಎರಡು ದಿನಗಳ ಹಿಂದೆ ಪುರಸಭೆ ಆವರಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ನಗರದ ಜನ ಮತ್ತಷ್ಟು ಭೀತಿಗೆ ಒಳಗಾಗಿದ್ದಾರೆ. ಹಾಲಿ ಪುರಸಭೆ ಸದಸ್ಯರು, ಪುರಸಭೆ ಅಧಿಕಾರಿಗಳು …

Read More »

30 ವರ್ಷಗಳ ಕಾಲ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ಕಡಾಡಿ ಅವರಿಗೆ ರಾಜ್ಯಸಭಾ ಜೊತೆಗೆ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಪಟ್ಟ

ಮೂಡಲಗಿ: ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲು ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕಳೆದ 30 ವರ್ಷಗಳ ಕಾಲ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಮುಖಂಡರಾಗಿ ಪಕ್ಷದ ಸಂಘಟನೆಗೆ ನಿರಂತರ ಶ್ರಮಿಸುತ್ತಾ ಬಂದಿರುವ ನೂತನ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡ ಈರಣ್ಣ ಕಡಾಡಿ ಅವರು, ಈ ಮೊದಲು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ, 2 ಸಲ ಬೆಳಗಾವಿ …

Read More »

ಹುಲಿ ಚರ್ಮ ಸಾಗಿಸುತ್ತಿದ್ದವರ ಬಂಧನ……..

ಮೈಸೂರು : ಹುಲಿ ಚರ್ಮ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಡಿಸಿಎಫ್ ಎ.ಟಿ. ಪೂವಯ್ಯ ಹಾಗೂ ಅಧಿಕಾರಿಗಳಾದ ಲಕ್ಷ್ಮೀಶ್, ಮೋಹನ್, ಸುಂದರ್, ಪ್ರಮೋದ್ ನೇತೃತ್ವದ ತಂಡ ನಡೆಸಿದ ಕಾರ್ಯಚರಣೆಯಲ್ಲಿ ಇವರು ಸಿಕ್ಕಿ ಬಿದ್ದಿದ್ದಾರೆ. ಬಂಧಿತರನ್ನು ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ (KRS) ಬಳಿಯ ಸಂತೆಮಾಳದ ನಿವಾಸಿಗಳಾದ ಆಕಾಶ್ ರಾವ್, ವಿಷ್ಣು ಎಂದು ಗುರುತಿಸಲಾಗಿದೆ. ಶಸ್ತ್ರಚಿಕಿತ್ಸೆ ಮೂಲಕ ಕೃತಕ ಅಂಗ ಪಡೆಯಲಿರುವ ವಿಶ್ವದ ಮೊದಲ ಹುಲಿ  ಹುಲಿ …

Read More »

ಕರೋನಾದೊಂದಿಗೆ ‘ಹೇಗೆ ಬದುಕಬೇಕು’ ಎಂದು ಕಲಿಯಬೇಕು, ದೀರ್ಘಕಾಲೀನ ಲಾಕ್‌ಡೌನ್ ಸರಿಯಲ್ಲ: ಗಡ್ಕರಿ

ಕೋವಿಡ್ -19 ಸಾಂಕ್ರಾಮಿಕ ರೋಗಕ್ಕಿಂತ ದೀರ್ಘಕಾಲದ ಲಾಕ್‌ಡೌನ್ ಹೆಚ್ಚು ಗಂಭೀರ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ವೈರಸ್ ಅನ್ನು ಎದುರಿಸಲು ‘ಹೇಗೆ ಬದುಕಬೇಕು’ ಎಂದು ಕಲಿಯಲು ಅವರು ಸಲಹೆ ನೀಡಿದರು. ಮುಂಬೈ: ದೀರ್ಘಕಾಲದ ಲಾಕ್‌ಡೌನ್ (Lockdown) ಕೋವಿಡ್ -19 ಸಾಂಕ್ರಾಮಿಕ ರೋಗಕ್ಕಿಂತ ಗಂಭೀರ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂದು ತಿಳಿಸಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಕರೋನಾದೊಂದಿಗೆ ‘ಹೇಗೆ ಬದುಕಬೇಕು’ ಎಂದು …

Read More »