ಬೆಳಗಾವಿ: ಇಲ್ಲಿನ ಬಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಗುಂಪೊಂದು ಕಲ್ಲುತೂರಾಟ ನಡೆಸಿದ್ದನ್ನು ಖಂಡಿಸಿ ಮತ್ತು ತಮಗೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ವೈದ್ಯಕೀಯ ಸಿಬ್ಬಂದಿ ಗುರುವಾರ ಪ್ರತಿಭಟಿಸಿದರು. ಬೆಳಿಗ್ಗೆಯೇ ಬಿಮ್ಸ್ ಕಾಲೇಜಿನ ಆವರಣದಲ್ಲಿ ಜಮಾಯಿಸಿದ ಅವರು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ‘ಯಾವುದಾದರೂ ವ್ಯಕ್ತಿಗೆ ಕೊರೊನಾ ಬಂದಿದೆ ಎಂದಾಕ್ಷಣ ಜನರು ದೂರ ಹೋಗುತ್ತಿರುವ ಸಂದರ್ಭವಿದು. ಆದರೆ, ವೈದ್ಯರು ಹಾಗೂ ವೈದ್ಯಕೀಯ …
Read More »ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿ ಸ್ಥಳಾಂತರಿಸಿ: ಭಾರತೀಯ ಕೃಷಿಕ ಸಮಾಜ
ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಸಂಘಟನೆ ನೇತೃತ್ವದಲ್ಲಿ ರೈತರು ಮತ್ತು ಮುಖಂಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ವ್ಯಾಪಕ ಪ್ರತಿರೋಧ ನಡೆಯೂ ರಾಜ್ಯ ಸರ್ಕಾರವು ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುತ್ತಿರುವುದು ರೈತರ ಮರಣ ಶಾಸನ ಬರೆದಂತಾಗಿದೆ. ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕು. ಕೊರೊನಾ ವೈರಸ್ …
Read More »ಐಪಿಎಲ್ 2020ರ ಆವೃತ್ತಿಗೆ ಮನೆಯಿಂದಲೇ ಕಾಮೆಂಟರಿ!
ಮುಂಬೈ: ಕೊರೊನಾ ವೈರಸ್ ಕಾರಣದಿಂದ ಕ್ರಿಕೆಟ್ನಲ್ಲಿ ಸಾಕಷ್ಟು ಬದಲಾವಣೆಗಳಿಗೆ ಅವಕಾಶ ನೀಡಲಾಗುತ್ತಿದೆ. ಕ್ರೀಡಾಂಗಣದಲ್ಲಿ ಆಟಗಾರರು ಚೆಂಡಿಗೆ ಎಂಜಲು ಉಜ್ಜುವುದನ್ನು ಐಸಿಸಿ ನಿಷೇಧ ಮಾಡಿತ್ತು. ಅಲ್ಲದೇ ಆಟಗಾರರು ಹ್ಯಾಂಡ್ ಶೇಕ್ ಮಾಡುವುದರಿಂದಲೂ ದೂರ ಉಳಿದಿದ್ದರು. ಸದ್ಯ ಐಪಿಎಲ್ ಟೂರ್ನಿಗೆ ಮನೆಯಿಂದಲೇ ಕಾಮೆಂಟರಿ ನೀಡುವ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಚಿಂತನೆ ನಡೆಸಿದೆ. ದುಬೈನಲ್ಲಿ ಸೆ.26ರಿಂದ ನ.08ರ ಅವಧಿಯಲ್ಲಿ ಐಪಿಎಲ್ ನಡೆಯುವ ಸೂಚನೆಗಳು ಲಭಿಸುತ್ತಿವೆ. 44 ದಿನಗಳ ಅವಧಿಯಲ್ಲಿ 60 ಪಂದ್ಯ ಆಯೋಜಿಸಲು ಸಿದ್ಧತೆ …
Read More »ಕರ್ಮ ಹಿಂದಿರುಗುತ್ತದೆ’- ಕಂಗನಾ ರನೌತ್ ಹೋರಾಟಕ್ಕೆ ಟೀಂ ಇಂಡಿಯಾ ಆಟಗಾರನ ಬೆಂಬಲ
ಮುಂಬೈ: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ಸಾವನ್ನಪ್ಪಿದ ಬಳಿಕ ಬಾಲಿವುಡ್ನಲ್ಲಿ ನೆಪೋಟಿಸಂ ಕುರಿತು ಮತ್ತೊಮ್ಮೆ ಭಾರೀ ಚರ್ಚೆ ನಡೆಯುತ್ತಿದೆ. ನಟಿ ಕಂಗನಾ ರನೌಟ್ ಹಲವು ಬಾಲಿವುಡ್ನ ಕೆಲ ಗಣ್ಯರ ಮೇಲೆ ವಿಮರ್ಶೆಗಳನ್ನು ಮಾಡಿದ್ದರು. ಸದ್ಯ ರಂಗನಾ ಅವರಿಗೆ ಟೀಂ ಇಂಡಿಯಾ ಕ್ರಿಕೆಟಿಗ ಮನೋಜ್ ತಿವಾರು ಬೆಂಬಲ ನೀಡಿ ಟ್ವೀಟ್ ಮಾಡಿದ್ದಾರೆ. ಸುಶಾಂತ್ ಸಿಂಗ್ ಸಾವಿಗೆ ಬಾಲಿವುಡ್ನಲ್ಲಿರುವ ನೆಪೋಟಿಸಂ ಕಾರಣ ಎಂದು ರಂಗನಾ ಆರೋಪಿಸಿದ್ದರು. ಇದಕ್ಕೆ ಬಾಲಿವುಡ್ನ ಹಲವರು ಬೆಂಬಲ …
Read More »ಅಬಕಾರಿ ಇಲಾಖೆಯಲ್ಲಿ ಜೇಷ್ಠತೆ ಕಡೆಗಣಿಸಿ ಪ್ರಭಾರಿ ಹುದ್ದೆಗಳಿಗೆ ನೇಮಕ
ಬೆಂಗಳೂರು, :- ಅಬಕಾರಿ ಇಲಾಖೆಯಲ್ಲಿ ನಿಯಮ ಬಾಹಿರವಾಗಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ-68ರನ್ವಯ ಜ್ಯೇಷ್ಠತೆಯಲ್ಲಿ ಹಿರಿಯರನ್ನು ಕಡೆಗಣಿಸಿ ಕಿರಿಯ ಅಬಕಾರಿ ಅಧೀಕ್ಷಕರಿಗೆ ಅಬಕಾರಿ ಉಪ ಆಯುಕ್ತರ ಹುದ್ದೆಗೆ ಹೆಚ್ಚುವರಿ ಪ್ರಭಾರಿ ಹುದ್ದೆಗಳನ್ನು ಈ ಹಿಂದೆ ನೀಡಲಾಗಿದೆ. ಶಿವಮೊಗ್ಗ ಮತ್ತು ಗದಗ ಜಿಲ್ಲೆಗಳಲ್ಲಿ ಈಗಾಗಲೇ ಉಪ ಆಯುಕ್ತರು ಹಾಗೂ ಹಿರಿಯ ಅಧೀಕ್ಷಕರು ಇದ್ದರೂ ಕೂಡ ಅತ್ಯಂತ ಕಿರಿಯ ಅಬಕಾರಿ ಅಧೀಕ್ಷಕರಾಗಿದ್ದ ಮೋತಿಲಾಲ್ ಮತ್ತು ಅಜಿತ್ರನ್ನು ಈಗಾಗಲೇ ಹೆಚ್ಚುವರಿ ಪ್ರಭಾರಿಯಾಗಿ ಉಪ …
Read More »ವೈದ್ಯನೊಬ್ಬ ಕೊರೊನಾ ಸೋಂಕಿತೆ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಲಕ್ನೋ: ಕೊರೊನಾ ಸೋಂಕಿತ ರೋಗಿಗಳನ್ನು ಮಹಾಮಾರಿಯಿಂದ ರಕ್ಷಿಸಲು ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ವೈದ್ಯನೊಬ್ಬ ಕೊರೊನಾ ಸೋಂಕಿತೆ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಉತ್ತರ ಪ್ರದೇಶದ ಅಲಿಘಡದಲ್ಲಿ ಈ ನೀಚ ಕೃತ್ಯ ಜರುಗಿದೆ. 28 ವರ್ಷದ ಕೊರೊನಾ ಸೋಂಕಿತೆ ಮೇಲೆ ಆಫ್ ಡ್ಯೂಟಿ ವೈದ್ಯನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸೋಂಕಿತೆ ಮೇಲೆ ಆಸ್ಪತ್ರೆಯಲ್ಲಿಯೇ ಎರಡು ಬಾರಿ ವೈದ್ಯ ಈ ಹೀನಾಯ ಕೃತ್ಯವೆಸೆಗಿದ್ದಾನೆ ಕೊರೊನಾ ಸೋಂಕು ತಗುಲಿ ಮಹಿಳೆ …
Read More »ಐಸಿಯುನಲ್ಲಿದ್ದ ‘ಕೊರೊನಾ’ ರೋಗಿ ಸಾವು : ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಗೆ ಬೆಂಕಿ ಹಚ್ಚಿ ಕುಟುಂಬಸ್ಥರ ಆಕ್ರೋಶ
ಬೆಳಗಾವಿ : ಕೊರೊನಾ ಸೋಂಕಿತ ರೋಗಿಯೊಬ್ಬರು ಚಿಕಿತ್ಸೆ ಸಿಗದೇ ಮೃತಪಟ್ಟ ಹಿನ್ನೆಲೆ ರೊಚ್ಚಿಗೆದ್ದ ಕುಟುಂಬಸ್ಥರು ಆಸ್ಪತ್ರೆ ಮುಂದೆ ಗಲಾಟೆ ನಡೆಸಿದ ಘಟನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಐಸಿಯುನಲ್ಲಿದ್ದ ಕೊರೊನಾ ರೋಗಿ ಮೃತಪಟ್ಟ ಹಿನ್ನೆಲೆ ರೊಚ್ಚಿಗೆದ್ದ ಕುಟುಂಬಸ್ಥರು ಆಸ್ಪತ್ರೆ ಮುಂದೆ ಗಲಾಟೆ ನಡೆಸಿದ್ದಾರೆ, ಆಂಬುಲೆನ್ಸ್ ಗೆ ಬೆಂಕಿ ಹಚ್ಚಿ ಆಸ್ಪತ್ರೆ ಮುಂಭಾಗದ ಗಾಜು ಪುಡಿ ಪುಡಿ ಮಾಡಿದ್ದಾರೆ. ಬಳಿಕ ಆಸ್ಪತ್ರೆಯ ವೈದ್ಯರ ಮೇಲೂ ಕೂಡ ಹಲ್ಲೆ ನಡೆಸಲಾಗಿದೆ. ಘಟನೆ ನಡೆದ …
Read More »ಬೆಳಗಾವಿ ಯಲ್ಲಿ ಒಟ್ಟು 219 ಜನ ಸೊಂಕಿತರು ಪತ್ತೆ..
ಬೆಳಗಾವಿ ಜಿಲ್ಲೆಯಲ್ಲಿ ಇಂದು ಬುಧವಾರ ಶಾಕಿಂಗ್ ಸುದ್ಧಿ ಹೊರಬಿದ್ದಿದೆ ಇವತ್ತು ಒಂದೇ ದಿನ ಬೆಳಗಾವಿ ಜಿಲ್ಲೆಯಲ್ಲಿ ಬರೊಬ್ಬರಿ 219 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಒಟ್ಟು 219 ಜನ ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಡಬಲ್ ಸಂಚ್ಯುರಿ ಬಾರಿಸಿ 1315 ಕ್ಕೆ ಏರಿಕೆಯಾಗಿದೆ ಬೆಳಗಾವಿ ಜಿಲ್ಲೆಯ 859 ಜನರಲ್ಲಿ ಸೊಂಕು ಸಕ್ರೀಯವಾಗಿದೆ.
Read More »ಬೆಳಗಾವಿ: ನಗರಕ್ಕೆ ಮತ್ತೊಂದು ಉಪ ನೋಂದಣಿ ಕಚೇರಿ ಮಂಜೂರಾಗಿದೆ.
ಬೆಳಗಾವಿ: ನಗರಕ್ಕೆ ಮತ್ತೊಂದು ಉಪ ನೋಂದಣಿ ಕಚೇರಿ ಮಂಜೂರಾಗಿದೆ. ದಕ್ಷಿಣ ಮತಕ್ಷೇತ್ರ ಶಾಸಕ ಅಭಯ ಪಾಟೀಲ್ ಅವರು ಮತ್ತೊಂದು ಉಪ ನೋಂದಣಿ ಆರಂಭಿಸುವಂತೆ ಸಿಎಂ, ಕಂದಾಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ ಸರ್ಕಾರ ನೂತನ ಉಪ ನೋಂದಣಿ ಕಚೇರಿ ಪ್ರಾರಂಭಿಸಲು ಅನುಮತಿ ನೀಡಿದೆ. ಶೀಘ್ರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಕಚೇರಿ ಆರಂಭಿಸಲಾಗುವುದು ಎಂದು ಶಾಸಕ ಅಭಯ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯಲ್ಲಿ ಬೆಳಗಾವಿ ತಾಲೂಕು ದೊಡ್ಡದಾಗಿದೆ. ಪ್ರಸ್ತುತ ಡಿಸಿ ಕಚೇರಿ …
Read More »ಕೋವಿಡ್ 19: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 37,724 ಪ್ರಕರಣ ಪತ್ತೆ, 648 ಮಂದಿ ಸಾವು
ನವದೆಹಲಿ: ದೇಶದಲ್ಲಿ ಕೋವಿಡ್ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ37,724 ಹೊಸ ಕೇಸ್ಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ11,92,915ಕ್ಕೆ ಏರಿಕೆಯಾದ್ರೆ, 648 ಮಂದಿ ಒಂದೇ ದಿನ ಬಲಿಯಾಗಿದ್ದಾರೆ. ಸದ್ಯ ಇಲ್ಲಿಯವರೆಗೆ ಬಲಿಯಾದವರ ಸಂಖ್ಯೆ 28,732ಕ್ಕೆ ಬಂದು ನಿಂತಿದೆ. 11,18,043 ಮಂದಿ ಸೋಂಕಿತರ ಪೈಕಿ ಒಟ್ಟು ಗುಣಮುಖರಾದವರ ಸಂಖ್ಯೆ 7,53,050ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿನ್ನೂ 411133 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ …
Read More »