Breaking News

Uncategorized

ಶಾಸಕ ಕಂಪ್ಲಿ ಗಣೇಶ್ ಸಮಯ ಪ್ರಜ್ಞೆಯಿಂದ ಬದುಕಿತು ಬಡಜೀವ

ಬಳ್ಳಾರಿ: ಹೃದಯಾಘಾತದಿಂದ ರಸ್ತೆ ಪಕ್ಕದಲ್ಲಿ ಬಿದ್ದು ಹೊರಳಾಡುತ್ತಿದ್ದ ವ್ಯಕ್ತಿಯನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಸೇರಿಸುವ ಮೂಲಕ ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಶಾಸಕ ಸಮಯ ಪ್ರಜ್ಞೆ ಮೆರೆದಿದ್ದಾರೆ.ಕೆಲಸದ ನಿಮಿತ್ತವಾಗಿ ಕಂಪ್ಲಿಯಿಂದ ಕರುಗೋಡ ಕಡೆಗೆ ಪ್ರಯಾಣ ಮಾಡುತ್ತಿದ್ದಾಗ, ಕುರುಗೋಡಿನ ಅಗ್ನಿಶಾಮಕ ದಳ ಕಛೇರಿ ಬಳಿ ಪಕ್ಕಿರಪ್ಪ ಎಂಬ ವ್ಯಕ್ತಿ, ಹೃದಯಾಘಾತವಾಗಿ ರಸ್ತೆ ಪಕ್ಕದಲ್ಲಿ ಬಿದ್ದಿದ್ದರು. ಅದನ್ನು ಗಮನಿಸಿದ ಶಾಸಕ ಗಣೇಶ್ ಕೂಡಲೇ ಅಂಬುಲೆನ್ಸ್ ಕರೆಸಿ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ …

Read More »

ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ.

ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.[೧] ಮಥುರಾ ಕೃಷ್ಣನ ಜನ್ಮಸ್ಥಳ. …

Read More »

ರೌಡಿಗಳ ಚಳಿ ಬಿಡಿಸಿದ ರವಿ ಚೆನ್ನಣ್ಣನವರ್

ಬೆಂಗಳೂರು: ಹವಾ ಮಾಡ್ತೀವಿ, ರೌಡಿಸಂ ಮಾಡ್ತೀವಿ, ಹೆಸರು ಮಾಡ್ತೀವಿ, ನಂದೆ ಹವಾ ಇರ್ಬೇಕು ಎಂದು ಓಡಾಡುತ್ತಿದ್ದವರಿಗೆ ಆನೇಕಲ್ ಉಪ ವಿಭಾಗದ ಪೊಲೀಸರು ಚಳಿ ಬಿಡಿಸಿದ್ದು, ಖಡಕ್ ವಾರ್ನಿಂಗ್ ನೀಡಿದ್ದಾರೆ. ಆನೇಕಲ್ ಉಪವಿಭಾಗದ ಏಳು ಠಾಣೆಯ ಪೋಲಿಸರು ಭಾನುವಾರ ಸ್ಪೆಷಲ್ ಡ್ರೈವ್ ಮಾಡಿ ರೌಡಿ ಶೀಟರ್ಸ್ ಗಳ ಮನೆಗಳಿಗೆ ತೆರಳಿ ರೈಡ್ ಮಾಡಿ ಸುಮಾರು ನೂರಕ್ಕು ಹೆಚ್ಚು ರೌಡಿ ಶೀಟರ್ ಗಳನ್ನು ಠಾಣೆಗೆ ಕರೆಸಿದ್ದಾರೆ. ಇಂದು ಎಸ್‍ಪಿ ರವಿ.ಡಿ.ಚೆನ್ನಣ್ಣನವರ್ ನೇತೃತ್ವದಲ್ಲಿ ಎಲ್ಲ …

Read More »

ಕಲಾವಿದರೊಬ್ಬರು ಗಣೇಶನನ್ನು ಕೊರೊನಾ ವಾರಿಯರ್ ಆಗಿ ರೂಪಿಸಿದ್ದಾರೆ

ಚೆನ್ನೈ: ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಹಬ್ಬ ಬರಲಿದ್ದು, ಈ ಬಾರಿ ಕೊರೊನಾ ವೈರಸ್ ಕಾಟದಿಂದ ಜನ ಹಬ್ಬಗಳನ್ನು ಸರಳವಾಗಿ ಆಚರಿಸುತ್ತಿದ್ದಾರೆ. ಅಂತೆಯೇ ಈ ಬಾರಿ ಮೂರ್ತಿ ತಯಾರಕರು ಕೂಡ ಗಣೇಶನನ್ನು ಸ್ವಲ್ಪ ವಿಭಿನ್ನವಾಗಿ ರೂಪಿಸುತ್ತಿದ್ದಾರೆ. ಹೌದು. ಕೊಯಂಬತ್ತೂರು ಮೂಲದ ಕಲಾವಿದರೊಬ್ಬರು ಗಣೇಶನನ್ನು ಕೊರೊನಾ ವಾರಿಯರ್ ಆಗಿ ರೂಪಿಸಿದ್ದಾರೆ. ಗಣೇಶ ಬಂದು ಕೊರೊನಾವನ್ನು ಹೊಡೆದು ಸಾಯಿಸುವಂತೆ ಮೂರ್ತಿಯನ್ನು ತಯಾರಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ರಾಜಾ, ಮಹಾಮಾರಿ ಕೋವಿಡ್ 19 …

Read More »

ರಾಜ್ಯಾದ್ಯಂತ ಇನ್ನೂ ಮೂರು ದಿನ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: ಮಹಾ ಮಳೆಗೆ ಈಗಾಗಲೇ ರಾಜ್ಯದ ಬಹುತೇಕ ಭಾಗಗಳಲ್ಲಿ ನೆರೆ ಸಂಭವಿಸಿದ್ದು, ಇದೀಗ ಹವಾಮಾನ ಇಲಾಖೆ ಇನ್ನೂ ಮೂರು ದಿನ ಭಾರೀ ಮಳೆಯಾಗಲಿದೆ ಎಂಬ ಆಘಾತಕಾರಿ ಮಾಹಿತಿ ನೀಡಿದೆಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಆಗಸ್ಟ್ 13 ರವರೆಗೆ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಅಲ್ಲದೆ ಉತ್ತರ ಒಳನಾಡಿನಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲೂ ಆಗಸ್ಟ್ 9 ರಿಂದ 13ರವರೆಗೆ ವರುಣ ಅಬ್ಬರಿಸಲಿದ್ದಾನೆ. ಶಿವಮೊಗ್ಗ, ಚಿಕ್ಕಮಗಳೂರು, …

Read More »

ಗೋಕಾಕ: ನಗರಸಭೆ ಹಿರಿಯ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಶೇಖ್ ಫತೆವುಲ್ಲಾ .ಎ.ಖೋತವಾಲ (ಗೌಡರು) ಅವರು ಇಂದು ನಿಧನರಾಗಿದ್ದಾರೆ.

ಗೋಕಾಕ: ನಗರಸಭೆ ಹಿರಿಯ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಶೇಖ್ ಫತೆವುಲ್ಲಾ .ಎ.ಖೋತವಾಲ (ಗೌಡರು) ಅವರು ಇಂದು ನಿಧನರಾಗಿದ್ದಾರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗೋಕಾಕ ನಗರಸಭೆಗೆ 8 ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಂಜುಮನ್ ಇಸ್ಲಾಂ ಕಮಿಟಿ ಗೋಕಾಕ ಮತ್ತು ತಂಜೀಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ‌ ಮತ್ತು ಗ್ರಾಮ ದೇವತೆ …

Read More »

ನಗರಸಭೆ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಎಸ್ ಎ ಕೋತ್ವಾಲ್ ಗೌಡರು ನಿಧನ : ಸಚಿವ ರಮೇಶ ಜಾರಕಿಹೊಳಿ ಸಂತಾಪ.

ನನ್ನ ಹಿರಿಯ ಸ್ನೇಹಿತ, ಗೋಕಾಕ್ ನಗರಸಭೆಯ ಸದಸ್ಯರಾಗಿದ್ದ *ಶ್ರೀಯುತ ಜನಾಬ್ ಶೇಖ್ ಫತೇವುಲ್ಲಾ ಕೋತ್ವಾಲ್* ಅವರ ಅಕಾಲಿಕ ಮರಣದಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ. *ನನ್ನ ಬಾಲ್ಯದ ಗೆಳೆಯನಾಗಿದ್ದ ಕೋತ್ವಾಲ್* ನನ್ನ ರಾಜಕೀಯ ಪ್ರಗತಿಯಲ್ಲಿ ಹೆಜ್ಜೆ ಹೆಜ್ಜೆಗೂ ನನ್ನೊಂದಿಗೆ ನಿಂತು ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದ್ದರು. ಗೋಕಾಕ್ ನಗರಸಭೆಗೆ ಸತತ *ಆರನೇ ಬಾರಿ ಆಯ್ಕೆ* ಯಾಗಿದ್ದರು ಮತ್ತು ನಗರಸಭೆಯ ಅಧ್ಯಕ್ಷರಾಗಿ ನಗರದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದರು. ಜಾತ್ಯಾತೀತ ವ್ಯಕ್ತಿಯಾಗಿದ್ದ ಕೋತ್ವಾಲ್, ಗೋಕಾಕ್ ನಗರದ *ಅಂಜುಮನ್ …

Read More »

ಕೋವಿಡ್‌: ಸೋಂಕಿತರಿಗಿಂತ ಗುಣಮುಖರಾದವರ ಹೆಚ್ಚಳ

ಬೆಳಗಾವಿ: ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 312 ಜನರಿಗೆ ಕೋವಿಡ್‌-19 ದೃಢಪಟ್ಟಿದೆ. ಇದೇ ವೇಳೆ, 378 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದುವರೆಗೆ ಸೋಂಕು ತಗುಲಿದವರ ಸಂಖ್ಯೆ 5,174ಕ್ಕೆ ತಲುಪಿದೆ. ಇವರಲ್ಲಿ 3,431 ಸಕ್ರಿಯ ಪ್ರಕರಣಗಳಿವೆ. ಬೆಳಗಾವಿ, ಗೋಕಾಕ, ಖಾನಾಪುರ, ಸವದತ್ತಿ, ಚಿಕ್ಕೋಡಿ, ರಾಮದುರ್ಗ, ಹುಕ್ಕೇರಿ, ರಾಯಬಾಗ ಸೇರಿದಂತೆ ಬಹುತೇಕ ಜಿಲ್ಲೆಯ ಎಲ್ಲ ಭಾಗಗಳಲ್ಲೂ ಸೋಂಕು ಕಂಡುಬಂದಿದೆ. ಬೆಳಗಾವಿಯ 60 ವರ್ಷದ ವೃದ್ಧೆಯೊಬ್ಬರು …

Read More »

ನಟ ಸಂಜಯ್ ದತ್ ಆಸ್ಪತ್ರೆಗೆ ದಾಖಲು-

ಮುಂಬೈ: ಎದೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಟ ಸಂಜಯ್ ದತ್ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಸಂಜಯ್ ದತ್ ಅವರನ್ನು ತೀವ್ರನಿಘಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸಂಜಯ್ ದತ್ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸಂಜಯ್ ದತ್ ಅವರನ್ನು ಆಂಟಿಜಿನ್ ಕಿಟ್ ಬಳಸಿ ಕೊರೊನಾ ಪೆರೀಕ್ಷೆಗೆ ಒಳಪಡಿಸಲಾಗಿತ್ತು. ವರದಿ ನೆಗೆಟಿವ್ ಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜುಲೈ …

Read More »

ಕೊರೊನಾ ಕರ್ತವ್ಯಕ್ಕೆ ಬಾರದ ನೌಕರರಿಗೆ ಶಾಕ್

ಬೆಂಗಳೂರು: ಕೊರೋನಾ ಕರ್ತವ್ಯಕ್ಕೆ ನಿಯೋಜಿತರಾದ ನೌಕರರು ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕರು ಕೊರೋನಾ ಕೆಲಸಕ್ಕೆ ಭಯದಿಂದ ಬರುತ್ತಿಲ್ಲ. ಅಂತಹ ನೌಕರರಿಗೆ ನೋಟೀಸ್ ನೀಡಲಾಗಿದ್ದು, ಅವರಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕೊರೋನಾ ಕೆಲಸಕ್ಕೆ ಬಾರದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೊರೋನಾಗೆ ಆತಂಕಪಡುವ ಅಗತ್ಯವಿಲ್ಲ. ಕೊರೋನಾ ವಾರಿಯರ್ಸ್ ಬೇಡಿಕೆಗೆ ಸ್ಪಂದಿಸಲಾಗಿದೆ ಎಂದು ಹೇಳಿದ್ದಾರೆ. …

Read More »