Breaking News

Uncategorized

ಸೋಂಕಿತರ ಸಂಖ್ಯೆ 4 ಲಕ್ಷಕ್ಕೆ : ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖ

ಬೆಂಗಳೂರು  : ರಾಜ್ಯದಲ್ಲಿ ಭಾನುವಾರ ದಾಖಲೆಯ ಸಂಖ್ಯೆಯಲ್ಲಿ ಕೋವಿಡ್‌ ರೋಗಿಗಳು ಗುಣಮುಖರಾಗಿದ್ದರೆ, ಮತ್ತೆ 9,319 ಮಂದಿ ಕೊರೋನಾ ಸೋಂಕಿತರಾಗುವ ಮೂಲಕ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ ಒಂದು ಲಕ್ಷದ ಸಮೀಪಕ್ಕೆ ಬಂದಿದೆ. ರಾಜ್ಯದಲ್ಲಿ ಶನಿವಾರವಷ್ಟೆ9,102 ಮಂದಿ ಕೊರೋನಾ ಸೋಂಕಿನಿಂದ ಮುಕ್ತರಾಗಿ ದಾಖಲೆ ನಿರ್ಮಾಣವಾಗಿತ್ತು. ಭಾನುವಾರ ಆ ದಾಖಲೆ ಇನ್ನಷ್ಟುಉತ್ತಮಗೊಂಡು 9,575 ಮಂದಿ ಕೊರೋನಾವನ್ನು ಜಯಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ಕೊರೋನಾ ಗೆದ್ದವರ ಸಂಖ್ಯೆ 2.92 ಲಕ್ಷಕ್ಕೇರಿದೆ. ಇದೇ ವೇಳೆ ಮತ್ತೆ …

Read More »

ನೆರೆ ಹಾನಿ ಅಧ್ಯಯನಕ್ಕೆ ಕೇಂದ್ರ ತಂಡ ಆಗಮನ

ಬೆಂಗಳೂರು  : ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾನಿ ಸಂಬಂಧ ಅಧ್ಯಯನಕ್ಕಾಗಿ ಕೇಂದ್ರದ ಅಧಿಕಾರಿಗಳ ತಂಡ ಸೋಮವಾರ ರಾಜ್ಯಕ್ಕೆ ಆಗಮಿಸಲಿದೆ. ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ವಿ. ಪ್ರತಾಪ್‌ ಅವರ ನೇತೃತ್ವದ ಎನ್‌ಡಿಆರ್‌ಎಫ್‌ ತಂಡ ಎರಡು-ಮೂರು ದಿನಗಳ ಕಾಲ ರಾಜ್ಯದಲ್ಲೇ ಉಳಿದುಕೊಂಡು ನೆರೆಯಿಂದ ಉಂಟಾದ ಹಾನಿ ಬಗ್ಗೆ ಅಧ್ಯಯನ ನಡೆಸುವ ಸಾಧ್ಯತೆ ಇದೆ. ಸೋಮವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳು …

Read More »

ಕೊರೋನಾ ಹೊಡೆತಕ್ಕೆ ಕುಸಿದ ಹೊಸ ಕಟ್ಟಡ ನಿರ್ಮಾಣ

ಬೆಂಗಳೂರು : ಕೊರೋನಾ ಸೋಂಕಿನ ಹೊಡೆತಕ್ಕೆ ಬೆಂಗಳೂರಿನಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಕ್ಷೇತ್ರ ಸಂಪೂರ್ಣವಾಗಿ ಕುಸಿದಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ 13 ಹೊಸ ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯಲಾಗಿದೆ. ಮಹಾಮಾರಿ ಕೊರೋನಾ ಸೋಂಕಿನ ಭೀತಿಗೆ ಕಟ್ಟಡ ನಿರ್ಮಾಣಕ್ಕೆ ನೆಲಕಚ್ಚಿದೆ. ಇದರಿಂದ ಬಿಬಿಎಂಪಿಗೆ ಸಂಪನ್ಮೂಲ ಕ್ರೋಢಿಕರಣದ ಮೇಲೆಯೂ ಭಾರೀ ಹೊಡೆದ ಬಿದ್ದಿದ್ದು, ಪ್ರತಿ ವರ್ಷ ಬಿಬಿಎಂಪಿ ನಗರದಲ್ಲಿ ಸುಮಾರು 130ಕ್ಕೂ ಹೆಚ್ಚು ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ …

Read More »

ಕೊರೋನಾ ಮಧ್ಯೆ ಇಂದಿನಿಂದ ಮೆಟ್ರೋ ಸಂಚಾರ ಶುರು

ಬೆಂಗಳೂರು : ಬರೋಬ್ಬರಿ ಐದು ತಿಂಗಳ ನಂತರ ನಮ್ಮ ಮೆಟ್ರೋ ರೈಲು ಸಂಚಾರ ಸೋಮವಾರ ಮತ್ತೆ ಆರಂಭವಾಗಲಿದೆ. ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಮೆಟ್ರೋ ರೈಲು ಸಂಚಾರ ಮತ್ತೆ ಆರಂಭಿಸಲು ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರದ ಮಾರ್ಗಸೂಚಿಯಂತೆ ಬಿಎಂಆರ್‌ಸಿಲ್‌ ಸಕಲ ಸಿದ್ಧತೆ ಮಾಡಿಕೊಂಡಿದೆ. ಕೇಂದ್ರ ಸರ್ಕಾರ ಮೆಟ್ರೋ ಸೇವೆ ಆರಂಭಿಸಲು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಸತತ ಐದು ದಿನಗಳಿಂದ ನಮ್ಮ ಮೆಟ್ರೋ ರೈಲುಗಳನ್ನು ರಾಸಾಯನಿಕ ಬಳಸಿ ಸ್ವಚ್ಛತಾ ಮತ್ತು ಸ್ಯಾನಿಟೈಸರ್‌ ಸಿಂಪಡಣೆ …

Read More »

ಅರ್ಜಿ ಹಾಕಿದ್ದ ಅಭ್ಯರ್ಥಿಗಳಿಗೆ ಗುಡ್‌ ನ್ಯೂಸ್: 1,40 ಲಕ್ಷ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶುರು

ನವದೆಹಲಿ, : ಭಾರತೀಯ ರೈಲ್ವೆಯಲ್ಲಿನ ನೇಮಕಾತಿ ಪ್ರಕ್ರಿಯೆ ಡಿಸೆಂಬರ್ 15ರಿಂದ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಲು ಪ್ರಾರಂಭಿಸಲಿದೆ. ಈ ಕುರಿತು ರಾಷ್ಟ್ರೀಯ ಸಾರಿಗೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ತಿಳಿಸಿದ್ದಾರೆ. ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 1,40,640 ಹುದ್ದೆಗಳಿಗೆ ಕೊರೋನಾ ಭೀತಿ ಶುರುವಾಗುವ ಮುನ್ನ ಅರ್ಜಿ ಆಹ್ವಾನಿಸಲಾಗಿತ್ತು. ಬಳಿಕ ಕೊರೋನಾ ಸಂಕಷ್ಟದಿಂದಾಗಿ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿತ್ತು. ಇದೀಗ ಅವುಗಳ ನೇಮಕಾತಿ ಪ್ರಕ್ರಿಯೆ ಇದೇ ಡಿ.15ರಿಂದ ಆರಂಭವಾಗಲಿದೆ. …

Read More »

ಪತಿಯನ್ನು ಕೊಲೆಗೈದು ಹೂತು ಹಾಕಿದ್ದ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಬೆಳಗಾವಿ : ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಪತಿಯನ್ನು ಕೊಲೆ ಮಾಡಿದ ಪತ್ನಿಯು ಜೆಸಿಬಿ ಮೂಲಕ ಗುಂಡಿ ತೋಡಿಸಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಪ್ಪಾಣಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ನಿ ಅನಿತಾ ಸಚಿನ್ ಭೋಪಳೆ (35), ಕೃಷ್ಣಾ ಅಲಿಯಾಸ್ ಪಿಂಟು ರಾಜಾರಾಮ್ ಘಾಟಗೆ (26), ವನಿತಾ ಚವ್ಹಾಣ (29), ಗಣೇಶ ರೇಡೇಕರ (21) ಬಂಧಿತ ಆರೋಪಿಗಳು. ಸೆಪ್ಟಂಬರ್​ 3 ರಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹಂಚನಾಳ ಗ್ರಾಮದಲ್ಲಿ …

Read More »

ಶೀಘ್ರ ಬಿಎಸ್‍ವೈ ಸಂಪುಟ ಪುನಾರಚನೆ?ಪ್ರಹ್ಲಾದ್ ಜೋಷಿ ರಮೇಶ್ ಜಾರಕಿಹೊಳಿ ಭೇಟಿ ಊಹಾಪೋಹಗಳಿಗೆ ಎಡೆ

ಬೆಂಗಳೂರು: ಕೊರೊನಾ ಅಟ್ಟಹಾಸ, ಡಿಜೆ ಹಳ್ಳಿ ಗಲಾಟೆ, ಡ್ರಗ್ಸ್ ರಂಪಾಟದ ನಡುವೆ ರಾಜ್ಯ ರಾಜಕಾರಣದಲ್ಲಿ ಸೈಲೆಂಟ್ ಆಗಿ ವಿದ್ಯಮಾನಗಳು ಚುರುಕು ಪಡೆದಿವೆ. ಸಂಪುಟ ಪುನಾರಚನೆಯ ಚರ್ಚೆಗಳು ಜೋರಾಗಿ ಕೇಳಿಬರುತ್ತಿವೆ. ಈ ಬೆನ್ನಲ್ಲೇ ಸೋಮವಾರ ಸಂಜೆ 6 ಗಂಟೆಗೆ ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಸಂಪುಟ ಸಭೆ ಕರೆದಿದ್ದಾರೆ. ಮುಂದಿನ ವಾರ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಸಂಪುಟ ಸಭೆ ಮಹತ್ವ ಪಡೆದುಕೊಂಡಿದೆ. ಸಂಪುಟ ಪುನಾರಚನೆಯಾದರೆ …

Read More »

ಡಾ. ಪಂ. ಪುಟ್ಟರಾಜ ಗವಾಯಿಗಳವರ ಬಸ್ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಪ್ರತಿಭಟನೆ : ಪೂಜಾ ಕಾರ್ಯ ಮುಂದಕ್ಕೆ

ಗದಗ :  ನಗರದ ನವೀಕರಣಗೊಂಡ ಹಳೆ ಬಸ್ ನಿಲ್ದಾಣಕ್ಕೆ ಪಂ.ಪುಟ್ಟರಾಜ ಗವಾಯಿಗಳ ಹೆಸರನ್ನು ನಾಮಕರಣ ಮಾಡುವಂತೆ ಆಗ್ರಹಿಸಿ ಹೋರಾಟ ಮುಂದುವರೆಸಿದ್ದರಿAದ  ಶಾಸಕ ಎಚ್.ಕೆ.ಪಾಟೀಲ ಅವರು ಭರವಸೆ ನೀಡಿದ್ದರಿಂದ ಸಾರಿಗೆ ಅಧಿಕಾರಿಗಳು ಭಾನುವಾರ ಬಸ್ ನಿಲ್ದಾಣಕ್ಕೆ ಸಾಂಕೇತಿಕವಾಗಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮವನ್ನು ಮುಂದೂಡಿದ್ದಾರೆ. ನಗರದಲ್ಲಿ ನವೀಕರಣವಾಗುತ್ತಿರುವ ಹಳೆ ಬಸ್ ನಿಲ್ದಾಣಕ್ಕೆ  ಡಾ. ಪಂ. ಪುಟ್ಟರಾಜ ಬಸ್ ನಿಲ್ದಾಣ ಎಂದು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಸ್ನೇಹ ಬಳಗ, ಕ್ರಾಂತಿ ಸೇನಾ ಹಾಗೂ ವಿವಿಧ …

Read More »

ಕೊರೊನಾ ವೈರಸ್​ ಭಾದಿತ ಕಾರ್ಮಿಕರಿಗೆ 28 ದಿನಗಳ ವೇತನ ಸಹಿತ ರಜೆ

ಬೆಂಗಳೂರು: ಕೊರೊನಾ ವೈರಸ್​ ಭಾದಿತ ಕಾರ್ಮಿಕರಿಗೆ ವೇತನ ಸಹಿತ 28 ದಿನಗಳ ಕಾಲ ರಜೆ ನೀಡಬೇಕೆಂದು ರಾಜ್ಯ ಸರ್ಕಾರ ಆದೇಶಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೊರೊನಾ ವೈರಸ್​ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯು ಸೂಕ್ತ ಕ್ರಮವಹಿಸುವ ಅಗತ್ಯಯಿದೆ. ಹೀಗಾಗಿ ಕೊರೊನಾ ವೈರಸ್​​ ಭಾದಿತ ಕಾರ್ಮಿಕರು ತಮ್ಮ ಹತ್ತಿರದ ಇಎಸ್​ಐ ಆಸ್ಪತ್ರೆಗಳಿಗೆ ತೆರಳಿ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕು. ಈ ರೀತಿ ಪ್ರಮಾಣ ಪತ್ರ …

Read More »

ರಸ್ತೆ ಒತ್ತುವರಿ ತೆರವುಗೊಳಿಸಲು ಶಾಸಕರಿಗೆ ಮನವಿ

ಕೋಲಾರ,  (ಹಿ.ಸ): ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಎತೂರು ಗ್ರಾಮದಿಂದ ನಕ್ಕನಹಳ್ಳಿ ಗಡಿಗೆ ಹೋಗುವ ಬಂಡಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ದಲಿತ ಜನ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಶಾಸಕಿ ರೂಪಕಲಾ ಶಶಿಧರ್‍ರವರಿಗೆ ಮನವಿ ಸಲ್ಲಿಸಿದರು.   ಎತೂರುನಿಂದ ನಕ್ಕನಹಳ್ಳಿ ಗಡಿಗೆ ಹೋಗುವ ಬಂಡಿ ರಸ್ತೆ ಸರ್ವೇ ನೋ 52, 63/1, 62 ಹಾದು ಹೋಗುವ ರಸ್ತೆ ಈಗಲೇ ಸರ್ವೇ ಕಾರ್ಯ …

Read More »