Breaking News

Uncategorized

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ

ದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶರಾಗಿದ್ದಾರೆ. 84 ವರ್ಷದ ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಳದ ಬಿರ್​ಬೂಮ್ ಜಿಲ್ಲೆಯ ಮಿರತಿಯಲ್ಲಿ ಜನಿಸಿದ್ದರು. ಕಿಂಕರ್ ಮುಖರ್ಜಿ ಹಾಗೂ ರಾಜಲಕ್ಷ್ಮೀ ದಂಪತಿಗೆ 1935ರ ಡಿಸೆಂಬರ್ 11ರಂದು ಜನಿಸಿದ ಪ್ರಣಬ್ ದಾ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಮಾಜಿ ರಾಷ್ಟ್ರಪತಿ ಪ್ರಣಬ್​ರಿಗೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಜೊತೆಗೆ, ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ, ಪ್ರಣಬ್ ಮುಖರ್ಜಿ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು ಎಂದು ತಿಳಿದುಬಂದಿದೆ. …

Read More »

ಈ ವರ್ಷ ಜನಗಣತಿ, NPR‌ ಪರಿಷ್ಕರಣೆ ಇಲ್ಲ

ಹೊಸದಿಲ್ಲಿ: ಕೋವಿಡ್ 19 ಭೀತಿಯಿಂದಾಗಿ ಈ ವರ್ಷ ನಡೆಯಬೇಕಿದ್ದ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪರಿಷ್ಕರಣೆಗಳನ್ನು ವರ್ಷದ ಮಟ್ಟಿಗೆ ಮುಂದೂಡಲಾಗಿದೆ. ಕೋವಿಡ್ 19 ಕಾಲದಲ್ಲಿ ಜನಗಣತಿ ಸರಿಯಲ್ಲ. ಗಣತಿ ಒಂದು ವರ್ಷ ತಡವಾಗಿ ನಡೆದರೆ ತೊಂದರೆಯೇನೂ ಇಲ್ಲ ಎಂದು ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.   2021ರಲ್ಲಿ ಯಾವಾಗ ಜನಗಣತಿ ನಡೆಸಲಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿಲ್ಲ. ಈ ವರ್ಷ ಗಣತಿ ನಡೆಸುವುದು ಬೇಡ ಎಂದಷ್ಟೇ ನಿರ್ಧರಿಸಲಾಗಿದೆ …

Read More »

ನೀರಾವರಿ ಯೋಜನೆಗಳ ಶೀಘ್ರ ಜಾರಿಗೆ ಮನವಿ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ 11 ಏತ ನೀರಾವರಿ ಯೋಜನೆ ಜಾರಿಗೆ ಕರ್ನಾಟಕ ನೀರಾವರಿ ನಿಗಮ ಅನುಮತಿ ನೀಡಿದೆ. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಯೋಜನೆಗಳು ಶೀಘ್ರ ಅನುಷ್ಠಾನವಾದರೆ ಇದೊಂದು ಇತಿಹಾಸ ಎಂದು ಹಿರಿಯ ಮುಖಂಡ ಬಿ.ಆರ್‌.ಸಂಗಪ್ಪಗೋಳ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ 11 ಏತ ನೀರಾವರಿ ಯೋಜನೆಯಿಂದ ಎರಡು ಲಕ್ಷ ಎಕರೆಗೂ ಅಧಿ ಕ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ. …

Read More »

ಸೈನಿಕ ತರಬೇತಿಗೆ ಶೀಘ್ರ ಕೇಂದ್ರ ಸ್ಥಾಪನೆ

ಯಮಕನಮರಡಿ: ಪೊಲೀಸ್‌, ಸೇನೆ ಸೇರುವ ಇಚ್ಛೆಯುಳ್ಳ ಜಿಲ್ಲೆಯ ಹಾಗೂ ಮತಕ್ಷೇತ್ರದ ಯುವಕರಿಗೆ ಉಚಿತ ತರಬೇತಿ ನೀಡಲು ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ವ್ಯಾಪ್ತಿಯಲ್ಲಿ 10 ಎಕರೆ ಜಮೀನಿನಲ್ಲಿ ಒಂದು ತರಬೇತಿ ಕೇಂದ್ರವನ್ನು ತೆರೆದು ಮಾಜಿ ಸೈನಿಕರಿಂದ ತರಬೇತಿ ನೀಡಲಾಗುವುದು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಅವರು ರವಿವಾರ ಹುಕ್ಕೇರಿ ತಾಲೂಕಿನ ಬರಗನಾಳ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗ್ರಾಮೀಣ ಅಭಿವೃದ್ಧಿ ಸಂಘ ಹಾಗೂ ಶ್ರೀ ಅಕ್ಕಮಹಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ …

Read More »

ಮನೆಯ ಹಿತ್ತಲಲ್ಲೇ ಜೀವನ ಸಾಗಿಸುತ್ತಿರುವ ಆಧುನಿಕ ಭಗೀರಥ ಕಾಮೆಗೌಡರು

ಮಳವಳ್ಳಿ, ಆ.31- ದೇಶದಾದ್ಯಂತ ಮಹಾಮಾರಿಯಾಗಿ ಜನರ ಜೀವನವನ್ನೆ ತಲ್ಲಣವಾಗಿಸಿದ ಕರೋನ ಹೊಡೆತಕ್ಕೆ ದಾಸನದೊಡ್ಡಿ ಗ್ರಾಮದ ಬಸವಶ್ರೀ ಪುರಸ್ಕøತ ಆಧುನಿಕ ಭಗೀರಥ ಕಲ್ಮನೆ ಕಾಮೆಗೌಡರಿಗೆ ಅತಿ ಹೆಚ್ಚು ಪರಿಣಾಮ ಬೀರಿದೆ. ಘಟನೆ: 16 ಕಟ್ಟೆಗಳನ್ನು ನಿರ್ಮಿಸಿ ಅಂತರ್ಜಲವೃದ್ದಿಯಲ್ಲಿ ದೇಶದ ಗಮನ ಸೆಳೆದಿರುವ ಕಲ್ಮನೆ ಕಾಮೆಗೌಡರನ್ನು ಪ್ರದಾನಿ ಮೋದಿಯವರ ಪ್ರಶಂಸೆಯ ನಂತರ ಅತಿ ಹೆಚ್ಚಿನ ಅಭಿಮಾನಿಗಳು ಅಗಮಿಸಿ ಕಾಮೆಗೌಡರ ಕಟ್ಟೆಗಳನ್ನು ನೋಡಿ ಸಂತಸ ಪಟ್ಟು ಗೌಡರನ್ನು ಅಭಿನಂಧಿಸಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ತಮ್ಮ …

Read More »

ಜಿಲ್ಲೆಯ ಪ್ರತಿಯೊಂದು ಇಲಾಖೆಗಳ ವಸತಿ ನಿಯಲಗಳನ್ನು ಪುನರ್ ಪ್ರಾರಂಭಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಬಿಎಸ್ ವೈಗೆ ಪತ್ರ ಬರೆದ ಶಾಸಕ ಸತೀಶ್ ಜಾರಕಿಹೊಳಿ

ಬೆಂಗಳೂರು: ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ಸ್ಯಾನಿಟೈಸರ್ ದಿಂದ ಶುಚಿತ್ವಗೊಳಿಸಿ ಪುನರ್ ಪ್ರಾರಂಭಿಸುವಂತೆ ಒತ್ತಾಯಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ, ಸತೀಶ್ ಜಾರಕಿಹೊಳಿ ಅವರು ಮನವಿ ಸಲ್ಲಿಸಿದ್ದಾರೆ. ಕೋವಿಡ್ -19 ರ ಹೆಚ್ಚಳದಿಂದಾಗಿ ರಾಜ್ಯದಲ್ಲಿನ ಮೆಟ್ರಿಕ್ ನಂತರದ ಎಲ್ಲ ವಸತಿ ನಿಲಯಗಳನ್ನು ಕೋವಿಡ್ -19 ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಆದರೆ ವಿವಿಧ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳನ್ನು ಸಮೀಪಿಸಿರುವುದರಿಂದ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ವಸತಿ ನಿಲಯಗಳನ್ನು ಆರಂಭಿಸಬೇಕಾಗಿದೆ. ಆದ ಕಾರಣ ವಸತಿ ನಿಲಯಗಳನ್ನು …

Read More »

ಸರ್ಕಾರಿ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಬೆಂಗಳೂರು : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಗ್ರಂಥಾಲಯಗಳನ್ನು ಆಧುನೀಕರಣಗೊಳಿಸುವ ಹಾಗೂ ಗಣಿಕೀಕರಣಗೊಳಿಸಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ. ಕಾಲೇಜು ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲು ಮತ್ತು ನ್ಯಾಕ್‌ ಮಾನ್ಯತೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಗ್ರಂಥಾಲಯ ಗಣಕೀಕರಣಗೊಳಿಸಲು ಇ-ಗ್ರಂಥಾಲಯ ಸಾಫ್ಟ್‌ವೇರ್‌ಗಳನ್ನು ಕಾಲೇಜುಗಳಿಗೆ ಇಲಾಖೆಯಿಂದ ಎನ್‌ಐಸಿ ಸಹಕಾರದೊಂದಿಗೆ ಕಳುಹಿಸಿಕೊಡಲಾಗಿದೆ. 4499 ಹುದ್ದೆಗೆ ಅರ್ಜಿ ಆಹ್ವಾನ: SSLC ಪಾಸಾದವರಿಗೆ ಇದು ಸುವರ್ಣವಕಾಶ.. ಸಂಯೋಜಿತ ಗ್ರಂಥಾಲಯ ನಿರ್ವಹಣೆ ಸಾಫ್ಟ್‌ವೇರ್‌ ಅಳವಡಿಸಲು ಅಗತ್ಯವಿರುವ ಕಂಪ್ಯೂಟರ್‌, ಬಾರ್‌ಕೋಡ್‌ ಪ್ರಿಂಟರ್‌, ಬಾರ್‌ಕೋಡ್‌ …

Read More »

ಶಾಸಕ ಆರಗ ಕಾರು ಚಾಲಕನಿಗೆ ಮಹಾಮಾರಿ ಸೋಂಕು

ತೀರ್ಥಹಳ್ಳಿ  : ಶಾಸಕ ಆರಗ ಜ್ಞಾನೇಂದ್ರ ಅವರ ಕಾರು ಚಾಲಕನಿಗೆ ಕೊರೋನಾ ಸೋಂಕು ತಗುಲಿದ್ದು, ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರು ಚಾಲಕನಿಗೆ ಕಳೆದ ಎರಡು ದಿನಗಳಿಂದ ಜ್ವರ ಕಾಣಿಸಿ ಕೊಂಡಿದ್ದರ ಹಿನ್ನೆಲೆ ಪರೀಕ್ಷೆ ಮಾಡಲಾಯಿತು. ಆಗ ಪಾಸಿಟಿವ್‌ ಬಂದಿದೆ ಎಂದು ಶಾಸಕ ಆರಗ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಆರಗ ಜ್ಞಾನೇಂದ್ರ ಹಾಗೂ ಜೊತೆಯಲ್ಲಿದ್ದ ಆಪ್ತ ಸಹಾಯಕ ಹೊದಲ ಬಸವರಾಜ್‌, ತಾಪಂ ಸದಸ್ಯ ಕುಕ್ಕೆ ಪ್ರಶಾಂತ ಇವರು ಕೂಡಾ ಕೊರೋನಾ ಪರೀಕ್ಷೆ …

Read More »

ಚಾಲೆಂಜಿಂಗ್ ಸ್ಟಾರ್ ದರ್ಶನ್ ಶಿವಶಂಕರಪ್ಪನವರ ಫಾರ್ಮ್ ಹೌಸ್‍ಗೆ ಭೇಟಿ

ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿ ಪ್ರೀತಿ ಇರುವುದು ತಿಳಿದೇ ಇದೆ. ಅದೇ ರೀತಿ ಇದೀಗ ಗೋವು ಸಾಕಣೆ ಹಾಗೂ ಕುದುರೆ ಸಾಕಣೆ ಕುರಿತು ಮಾಹಿತಿ ಪಡೆಯಲು ಶಾಸಕ, ಮಾಜಿ ಸಚಿವ, ಶಾಮನೂರು ಶಿವಶಂಕರಪ್ಪನವರ ಫಾರ್ಮ್ ಹೌಸ್‍ಗೆ ಭೇಟಿ ನೀಡಿದ್ದಾರೆ. ಇಂದು ಮಧ್ಯಾಹ್ನದಿಂದ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿಯಲ್ಲಿನ ಶಾಮನೂರ ಅವರ ತೋಟಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಗೋ ಪಾಲನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ದಾವಣಗೆರೆ …

Read More »

ಭಾರತಲ್ಲಿ 80000 ಕೇಸ್‌: ಒಂದೇ ದಿನ ಯಾವ ದೇಶದಲ್ಲೂ ಇಷ್ಟು ಕೇಸ್‌ ಇಲ್ಲ!

ನವದೆಹಲಿ : ದಾಖಲೆ ಪ್ರಮಾಣದಲ್ಲಿ ನಡೆಯುತ್ತಿರುವ ಪರೀಕ್ಷೆ ಹಾಗೂ ಜನಜೀವನ ಸಹಜ ಸ್ಥಿತಿಯತ್ತ ದಾಪುಗಾಲು ಹಾಕುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ವೈರಸ್‌ ಪೀಡಿತರ ಸಂಖ್ಯೆ ದೇಶದಲ್ಲಿ ಮತ್ತೊಂದು ಹೊಸ ದಾಖಲೆ ನಿರ್ಮಿಸಿದೆ. ಭಾನುವಾರ ಒಂದೇ ದಿನ ದೇಶದಲ್ಲಿ ಬರೋಬ್ಬರಿ 80 ಸಾವಿರ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕೊರೋನಾ ಹಾವಳಿ ಆರಂಭವಾದಾಗಿನಿಂದ ವಿಶ್ವದ ಯಾವುದೇ ದೇಶದಲ್ಲೂ ಒಂದೇ ದಿನ ಇಷ್ಟೊಂದು ಸಂಖ್ಯೆಯ ಕೊರೋನಾ ಪ್ರಕರಣಗಳು ಪತ್ತೆಯಾದ ನಿದರ್ಶನವೇ ಇಲ್ಲ. ಭಾನುವಾರ 80,078 ಮಂದಿಗೆ …

Read More »