ಬೆಂಗಳೂರು: ಕೊರೊನಾ ಅಟ್ಟಹಾಸ, ಡಿಜೆ ಹಳ್ಳಿ ಗಲಾಟೆ, ಡ್ರಗ್ಸ್ ರಂಪಾಟದ ನಡುವೆ ರಾಜ್ಯ ರಾಜಕಾರಣದಲ್ಲಿ ಸೈಲೆಂಟ್ ಆಗಿ ವಿದ್ಯಮಾನಗಳು ಚುರುಕು ಪಡೆದಿವೆ. ಸಂಪುಟ ಪುನಾರಚನೆಯ ಚರ್ಚೆಗಳು ಜೋರಾಗಿ ಕೇಳಿಬರುತ್ತಿವೆ. ಈ ಬೆನ್ನಲ್ಲೇ ಸೋಮವಾರ ಸಂಜೆ 6 ಗಂಟೆಗೆ ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಸಂಪುಟ ಸಭೆ ಕರೆದಿದ್ದಾರೆ. ಮುಂದಿನ ವಾರ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಸಂಪುಟ ಸಭೆ ಮಹತ್ವ ಪಡೆದುಕೊಂಡಿದೆ. ಸಂಪುಟ ಪುನಾರಚನೆಯಾದರೆ …
Read More »ಡಾ. ಪಂ. ಪುಟ್ಟರಾಜ ಗವಾಯಿಗಳವರ ಬಸ್ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಪ್ರತಿಭಟನೆ : ಪೂಜಾ ಕಾರ್ಯ ಮುಂದಕ್ಕೆ
ಗದಗ : ನಗರದ ನವೀಕರಣಗೊಂಡ ಹಳೆ ಬಸ್ ನಿಲ್ದಾಣಕ್ಕೆ ಪಂ.ಪುಟ್ಟರಾಜ ಗವಾಯಿಗಳ ಹೆಸರನ್ನು ನಾಮಕರಣ ಮಾಡುವಂತೆ ಆಗ್ರಹಿಸಿ ಹೋರಾಟ ಮುಂದುವರೆಸಿದ್ದರಿAದ ಶಾಸಕ ಎಚ್.ಕೆ.ಪಾಟೀಲ ಅವರು ಭರವಸೆ ನೀಡಿದ್ದರಿಂದ ಸಾರಿಗೆ ಅಧಿಕಾರಿಗಳು ಭಾನುವಾರ ಬಸ್ ನಿಲ್ದಾಣಕ್ಕೆ ಸಾಂಕೇತಿಕವಾಗಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮವನ್ನು ಮುಂದೂಡಿದ್ದಾರೆ. ನಗರದಲ್ಲಿ ನವೀಕರಣವಾಗುತ್ತಿರುವ ಹಳೆ ಬಸ್ ನಿಲ್ದಾಣಕ್ಕೆ ಡಾ. ಪಂ. ಪುಟ್ಟರಾಜ ಬಸ್ ನಿಲ್ದಾಣ ಎಂದು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಸ್ನೇಹ ಬಳಗ, ಕ್ರಾಂತಿ ಸೇನಾ ಹಾಗೂ ವಿವಿಧ …
Read More »ಕೊರೊನಾ ವೈರಸ್ ಭಾದಿತ ಕಾರ್ಮಿಕರಿಗೆ 28 ದಿನಗಳ ವೇತನ ಸಹಿತ ರಜೆ
ಬೆಂಗಳೂರು: ಕೊರೊನಾ ವೈರಸ್ ಭಾದಿತ ಕಾರ್ಮಿಕರಿಗೆ ವೇತನ ಸಹಿತ 28 ದಿನಗಳ ಕಾಲ ರಜೆ ನೀಡಬೇಕೆಂದು ರಾಜ್ಯ ಸರ್ಕಾರ ಆದೇಶಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯು ಸೂಕ್ತ ಕ್ರಮವಹಿಸುವ ಅಗತ್ಯಯಿದೆ. ಹೀಗಾಗಿ ಕೊರೊನಾ ವೈರಸ್ ಭಾದಿತ ಕಾರ್ಮಿಕರು ತಮ್ಮ ಹತ್ತಿರದ ಇಎಸ್ಐ ಆಸ್ಪತ್ರೆಗಳಿಗೆ ತೆರಳಿ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕು. ಈ ರೀತಿ ಪ್ರಮಾಣ ಪತ್ರ …
Read More »ರಸ್ತೆ ಒತ್ತುವರಿ ತೆರವುಗೊಳಿಸಲು ಶಾಸಕರಿಗೆ ಮನವಿ
ಕೋಲಾರ, (ಹಿ.ಸ): ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಎತೂರು ಗ್ರಾಮದಿಂದ ನಕ್ಕನಹಳ್ಳಿ ಗಡಿಗೆ ಹೋಗುವ ಬಂಡಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ದಲಿತ ಜನ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಶಾಸಕಿ ರೂಪಕಲಾ ಶಶಿಧರ್‍ರವರಿಗೆ ಮನವಿ ಸಲ್ಲಿಸಿದರು. ಎತೂರುನಿಂದ ನಕ್ಕನಹಳ್ಳಿ ಗಡಿಗೆ ಹೋಗುವ ಬಂಡಿ ರಸ್ತೆ ಸರ್ವೇ ನೋ 52, 63/1, 62 ಹಾದು ಹೋಗುವ ರಸ್ತೆ ಈಗಲೇ ಸರ್ವೇ ಕಾರ್ಯ …
Read More »ಸುವರ್ಣಸೌಧ ಮುಂದೆ ರಾಯಣ್ಣ, ಚೆನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ಆಗ್ರಹಿಸಿ ಸಂಕಲ್ಪ ಯಾತ್ರೆ
ಬೆಳಗಾವಿ : ಸುವರ್ಣ ಸೌಧದ ಮುಂದೆ ರಾಯಣ್ಣ ಪ್ರತಿಷ್ಠಾಪನೆ ವಿಚಾರವಾಗಿ ಬೆಳಗಾವಿಯಲ್ಲಿ ಮೂಡಲಗಿಯ ಶ್ರೀಮಂತ ಶಿವಯೋಗಿ ನೇತೃತ್ವದಲ್ಲಿ ಗೋಕಾಕ್ ತಾಲೂಕು ಮೂಡಲಗಿಯಿಂದ ನಂದಗಡದ ರಾಯಣ್ಣ ಸಮಾಧಿವರೆಗೆ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ. ಸುವರ್ಣಸೌಧದ ಮುಂಭಾಗ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ರಾಯಣ್ಣನ ಪ್ರತಿಮೆ ಸ್ಥಾಪನೆ ಮಾಡುವಂತೆ ಸಂಕಲ್ಪ ಯಾತ್ರೆಯಲ್ಲಿ ಯಾತ್ರಾರ್ಥಿಗಳು ಆಗ್ರಹ ಮಾಡಿದ್ದಾರೆ. ಯಾತ್ರೆಯ ವೇಳೆ ಬೆಳಗಾವಿಯ ಚೆನ್ನಮ್ಮ ಪುತ್ಥಳಿ ಹಾಗೂ ಪೀರನವಾಡಿಯ ಸಂಗೊಳ್ಳಿರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದಾರೆ.
Read More »ಮರು ಮೌಲ್ಯಮಾಪನ ಮಾಡ್ಸಿ ರಾಜ್ಯಕ್ಕೆ ಸೆಕೆಂಡ್ ಬಂದ SSLC ವಿದ್ಯಾರ್ಥಿನಿ: ಇದು ಕಾನ್ಫಿಡೆಂಟ್ ಅಂದ್ರೆ
ಶಿವಮೊಗ್ಗ(ಸೆ: ಎಸ್‌ಎಸ್‌ಎಲ್‌ಸಿ ಮರು ಮೌಲ್ಯಮಾಪನದಲ್ಲಿ ಬಂದ ಅಂಕಗಳಿಂದ ಶಿವಮೊಗ್ಗದ ವಿದ್ಯಾರ್ಥಿನಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಶಿವಮೊಗ್ಗ ನಗರದ ಕಲ್ಲಹಳ್ಳಿ ಬಡಾವಣೆಯ ಪ್ರಿಯದರ್ಶಿನಿ ಶಾಲೆಯ ಕಾವ್ಯ ಆರ್. ಮರು ಮೌಲ್ಯಮಾಪನದಿಂದ ರಾಜ್ಯಕ್ಕೆ ಸೆಕೆಂಡ್ ಬಂದ ವಿದ್ಯಾರ್ಥಿನಿ. ಇತ್ತೀಚೆಗೆ ಪ್ರಕಟಗೊಂಡಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಈಕೆಗೆ 625ಕ್ಕೆ 620 ಅಂಕಗಳು ಬಂದಿದ್ದವು. ಇಷ್ಟು ಬಂದಿದ್ದರೂ ಕಾವ್ಯಗೆ ಸಮಾಧಾನ ಆಗಿರಲಿಲ್ಲ. ಇನ್ನೂ ಅಂಕಗಳು ಬರಬೇಕೆಂಬ ಲೆಕ್ಕಾಚಾರ ಹಾಕಿ ಕೊನೆಗೆ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಳು. …
Read More »ಮಾಜಿ ಶಾಸಕರ ಪುತ್ರ ಕೊರೋನಾ ಸೋಂಕಿಗೆ ಬಲಿ
ಬೀದರ್ : ಔರಾದ ತಾಲೂಕಿನ ಸಂತಪೂರ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಮಾಜಿ ಶಾಸಕ ಗುಂಡಪ್ಪ ವಕೀಲ ಅವರ ಪುತ್ರ ಅನೀಲ್ ಗುಂಡಪ್ಪ ಬಿರಾದಾರ (47) ಹೆಮ್ಮಾರಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅನೀಲ್ ಇಂದು (ಭಾನುವಾರ) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕೋವಿಡ್ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ಬೀದರಿನಲ್ಲಿ ಆರಂಭಿಕ ಚಿಕಿತ್ಸೆ ಪಡೆದು, ನಂತರ ಕಳೆದ 10 ದಿನಗಳಿಂದ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ …
Read More »ವಾಯು ಮಾಲಿನ್ಯದಿಂದ ಕೊರೋನ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳ; ಸಮೀಕ್ಷೆ ವರದಿ
ಬೆಂಗಳೂರು, : ರಾಜಧಾನಿಯಲ್ಲಿ ಕೊರೋನ ಸೋಂಕಿನಿಂದ ಮೃತರಾಗುತ್ತಿರುವವರ ಸಂಖ್ಯೆ ಹೆಚ್ಚಳಕ್ಕೆ ವಾಯುಮಾಲಿನ್ಯವು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವುದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಫಿಟ್ ಇಂಡಿಯಾದ 2020ರ ಸಮೀಕ್ಷೆ ಪ್ರಕಾರ ಶೇ.20.8 ಜನರು ತಮ್ಮಲ್ಲಿನ ಕಡಿಮೆ ರೋಗ ನಿರೋಧಕ ಶಕ್ತಿಯ ಕಾರಣಕ್ಕಾಗಿ ರಾಜಧಾನಿಯಲ್ಲಿ ಶೇ.22ರಷ್ಟ್ಟು ಜನರು ವರ್ಷವೊಂದಕ್ಕೆ 3 ಬಾರಿಯಂತೆ ವಿವಿಧ ರೋಗಗಳಿಗೆ ಒಳಗಾಗುತ್ತಿದ್ದಾರೆ. ನಗರವಾರು ಹೋಲಿಸಿದಾಗ ಹೆಚ್ಚು ವಾಯುಮಾಲಿನ್ಯಕ್ಕೆ ಒಳಗಾದ ನಗರಗಳ ಜನರು ಅತ್ಯಂತ ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು …
Read More »ಐಪಿಎಲ್ 2020 ಶೆಡ್ಯೂಲ್ ಬಿಡುಗಡೆಯಾಗಿದೆ, ವೇಳಾಪಟ್ಟಿಯನ್ನು ಇಲ್ಲಿ ಡೌನ್‌ಲೋಡ್ ಮಾಡಿ
ಐಪಿಎಲ್ 2020: ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಬಹುನಿರೀಕ್ಷೆಯ ನಂತರ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂತಿಮವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2020) ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ ಹಲವಾರು ದಿನಗಳಿಂದ ಫ್ರ್ಯಾಂಚೈಸ್ ತಂಡಗಳು ಒತ್ತಡಕ್ಕೆ ಒಳಗಾಗಿದ್ದರಿಂದ, ಕ್ರಿಕೆಟ್ ಅಭಿಮಾನಿಗಳು ಹೆಚ್ಚು ಕಾಯಬೇಕಾಯಿತು, ಮಾಧ್ಯಮಗಳು ಸಹ ಪಂದ್ಯಾವಳಿಯ ಶೆಡ್ಯೂಲ್ ಬಗ್ಗೆ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದವು. ಸದ್ಯ ಕೊನೆಗೂ ಐಪಿಎಲ್ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಮೊದಲ ಪಂದ್ಯ ಸೆಪ್ಟೆಂಬರ್ …
Read More »ಸೆಪ್ಟೆಂಬರ್ 21 ರಂದು ಆರ್‌ಸಿಬಿ ಮೊದಲ ಪಂದ್ಯ, ಎದುರಾಳಿ ಯಾರು ಗೊತ್ತಾ..?
ಬೆಂಗಳೂರು: ಅಂತು ಇಂತು 13ನೇ ಐಪಿಎಲ್ ವೇಳಾಪಟ್ಟಿ ಪ್ರಕಟಗೊಂಡಿದೆ. ಕಳೆದ ಒಂದು ವಾರಗಳ ಊಹಾಪೋಹಗಳಿಗೆ ಬಿಸಿಸಿಐ ತೆರೆ ಎಳೆದಿದೆ. ಲೀಗ್ ಹಂತದ 56 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಪ್ಲೇ-ಆಫ್ ಹಂತದ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಪ್ಟೆಂಬರ್ 21 ರಂದು ಮಾಜಿ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ದುಬೈನಲ್ಲಿ ಎದುರಿಸಲಿದೆ. ಆರ್‌ಸಿಬಿ ತಂಡ 3 ಪಂದ್ಯಗಳನ್ನು ಮಧ್ಯಾಹ್ನದ ವೇಳೆ ಆಡಲಿದೆ. ಭಾರತದಲ್ಲಿ ನಡೆಯುವಂತೆ ಯುಎಇಯಲ್ಲೂ ತವರು ಹಾಗೂ …
Read More »