Breaking News

Uncategorized

ಬೆಂಗಳೂರು ಗಲಭೆ ಪ್ರಕರಣ: ಆರೋಪಿಗಳಿಗಿಲ್ಲ ಜಾಮೀನು

ಬೆಂಗಳೂರು: ನಗರದ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಡಲು ಪ್ರಚೋದಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಅರುಣ್‌ ಮನೋಜ್‌ ಸೇರಿ ಇತರೆ ಮೂವರು ಆರೋಪಿಗಳಿಗೆ ಜಾಮೀನು ನೀಡಲು ನಗರದ 66ನೇ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ನಿರಾಕರಿಸಿದೆ. ಆರೋಪಿಗಳಾದ ಅರುಣ್‌ ಮನೋಜ್‌, ಸಂತೋಷ್‌ಕುಮಾರ್‌, ಲಿಯಾಖತ್‌ ಮತ್ತು ರೆಹಮಾನ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಘಟನೆಗೆ …

Read More »

ಕಚೇರಿ ಹಾನಿ: 2 ಕೋಟಿ ರೂ. ಪರಿಹಾರ ಕೇಳಿದ ಕಂಗನಾ

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಮ್ಮ ಕಚೇರಿ ಹಾನಿ ಮಾಡಿದ್ದಕ್ಕೆ 2 ಕೋಟಿ ರೂ. ಪರಿಹಾರ ಕೋರಿ ಮುಂಬೈ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಸೆಪ್ಟೆಂಬರ್ 9 ರಂದು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಕಂಗನಾ ಅವರ ಮುಂಬೈನ ಬಾಂದ್ರಾದಲ್ಲಿರುವ ಪಾಲಿ ಹಿಲ್ ಬಂಗಲೆಯನ್ನು ಅಕ್ರಮ ಕಟ್ಟಡ ಎಂದು ಪರಿಗಣಿಸಿ ತೆರವು ಕಾರ್ಯಾಚರಣೆ ಮಾಡಿತ್ತು. ಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಕಂಗನಾ ಅವರು, ಬಿಎಂಸಿ ಈಗಾಗಲೇ ಬಂಗಲೆಗೆ ಶೇ.40ರಷ್ಟು ಹಾನಿ …

Read More »

ದೇಶದಲ್ಲೀಗ 50 ಲಕ್ಷ ಕೊರೋನಾ ಸೋಂಕಿತರು!

ನವದೆಹಲಿ : ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ಕೊರೋನಾ ವೈರಸ್‌ ಪ್ರಕರಣಗಳು ಭಾರತದಲ್ಲಿ ಮಂಗಳವಾರ 50 ಲಕ್ಷದ ಗಡಿ ದಾಟಿವೆ. ಈ ಮೂಲಕ ಅಮೆರಿಕ ಬಳಿಕ 50 ಲಕ್ಷ ಪ್ರಕರಣಗಳು ದಾಖಲಾದ ಎರಡನೇ ದೇಶ ಭಾರತವಾಗಿದೆ. ಮಂಗಳವಾರ 90,417 ಕೊರೋನಾ ವೈರಸ್‌ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 50.05 ಲಕ್ಷಕ್ಕೆ ಏರಿಕೆ ಆಗಿದೆ. 67.54 ಲಕ್ಷ ಸೋಂಕಿತರೊಂದಿಗೆ ಅಮೆರಿಕ ಅಗ್ರ ಸ್ಥಾನದಲ್ಲಿದೆ. ಇನ್ನು ಸೋಂಕಿನಿಂದ ಭಾರತದಲ್ಲಿ ಮಂಗಳವಾರ …

Read More »

ದುಷ್ಕರ್ಮಿಗಳು 2 ಎಕರೆ ಟೊಮೆಟೊ ತೋಟಕ್ಕೆ ಕಳೆ ನಾಶಕ ಸಿಂಪಡಣೆ ಮಾಡಿ ವಿಕೃತಿ ಮೆರೆದಿದ್ದಾರೆ

ಕೋಲಾರ: ಹಳೆ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು 2 ಎಕರೆ ಟೊಮೆಟೊ ತೋಟಕ್ಕೆ ಕಳೆ ನಾಶಕ ಸಿಂಪಡಣೆ ಮಾಡಿ ವಿಕೃತಿ ಮೆರೆದಿದ್ದಾರೆ. ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಫಸಲಿಗೆ ಬಂದಿದ್ದ ಟೊಮೆಟೊ ಬೆಳೆ ನಾಶವಾಗಿದೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಎಳೆಸಂದ್ರ ಗ್ರಾಮದ ರೈತ ಅರ್ಜುನಪ್ಪ ಎಂಬವರ ಟೊಮೆಟೊ ತೋಟಕ್ಕೆ ಕಿಡಿಗೇಡಿಗಳು ಕಳೆದ ರಾತ್ರಿ ಕಳೆ ನಾಶಕ ಸಿಂಪಡಣೆ ಮಾಡಿದ್ದಾರೆ. ಪರಿಣಾಮ 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸುಮಾರು 10 ಸಾವಿರ ಟೊಮೆಟೊ …

Read More »

ಶಾರ್ಜಾ ತಲುಪಿದ ಬಿಸಿಸಿಐ ಬಿಗ್ ಬಾಸ್ ಸೌರವ್ ಗಂಗೂಲಿ

ದುಬೈ,  ಐಪಿಎಲ್ ಪಂದ್ಯಗಳು ಸುಲಲಿತವಾಗಿ ನಡೆಯುವ ನಿಟ್ಟಿನಲ್ಲಿ ಎಲ್ಲ ತಯಾರಿಗಳ ನಡುವೆಯೇ ನಾಲ್ಕು ದಿನ ಮುಂಚಿತವಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶಾರ್ಜಾಗೆ ಬಂದಿಳಿದಿದ್ದಾರೆ. ಭಾರತ ಕ್ರಿಕೆಟ್ ತಂಡದ ಆಟಗಾರನಾಗಿ, ನಾಯಕನಾಗಿ ಹಲವು ಕೀರ್ತಿ ಸಾಸಿದ ಮತ್ತು ಐಪಿಎಲ್‍ನಲ್ಲೂ ತನ್ನ ಖದರ್ ತೋರಿಸಿದ್ದ ಸೌರವ್ ಗಂಗೂಲಿ ಈಗ ಭಾರತ ಕ್ರಿಕೆಟ್‍ನ ಬಿಗ್‍ಬಾಸ್. ಮೈದಾನದಿಂದ ಹೊರಗೆ ಆಡಳಿತ ನಡೆಸುವ ಚಾಕಚಕ್ಯತೆಯನ್ನು ಕಲಿಯುತ್ತಿರುವ ಗಂಗೂಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ತಮ್ಮ ಛಾಪು ಒತ್ತಲು …

Read More »

ಸಿಗರೇಟು ಸೇದುವ ಚಟಕ್ಕೆ ಜೀವ ಕಳೆದುಕೊಂಡ ಬಾಲಕರು..!

ಕುಣಿಗಲ್,  ಕದ್ದುಮುಚ್ಚಿ ಸಿಗರೇಟ್ ಸೇದಲು ಹೋದ ಬಾಲಕರ ಮೇಲೆ ಇಟ್ಟಿಗೆ ಗೂಡು ಕುಸಿದು ಸಾವನ್ನಪ್ಪಿರುವ ಘಟನೆ ಅಮೃತೂರು ಪೊಲೀಸ್ ಠಾಣಾವ್ಯಾಪ್ತಿಯ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ, ಸೂಯಾನ್(15) ಹಾಗೂ ಪರ್ವೆಜ್(17) ಮೃತಪಟ್ಟ ಬಾಲಕರು. ಗ್ರಾಮದ ಹೊರವಲಯಲ್ಲಿರುವ ಇಟ್ಟಿಗೆ ಗೂಡಿನಲ್ಲಿ ಯಾರಿಗೂ ಕಾಣದಂತೆ ಸಿಗರೇಟ್ ಸೇದಲು ಹೋಗಿದ್ದು, ಇಟ್ಟಿಗೆ ಗೂಡಿನೊಳಗೆ ಸಿಗರೇಟ್ ಸೇದುತ್ತಿದ್ದ ಸಂದರ್ಭದಲ್ಲಿ ಮಳೆಯಿಂದ ತೇವವಾಗಿದ್ದ ಉಳಿದ ಇಟ್ಟಿಗೆಗಳು ಬಾಲಕರ ಮೇಲೆ ಕುಸಿದು ಬಿದ್ದಿವೆ. ಪರಿಣಾಮ ಇಟ್ಟಿಗೆಗಳ ಮಧ್ಯೆ ಸಿಲುಕಿ ಉಸಿರು …

Read More »

ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಸದಾಶಿವ್ ಪಾಟೀಲ್ ನಿಧನ

ನವದೆಹಲಿ: ಟೀಂ ಇಂಡಿಯಾ ಮಾಜಿ ಆಲ್‌ರೌಂಡರ್ ಸದಾಶಿವ್ ಪಾಟೀಲ್(86) ಅವರು ಕೊಲ್ಹಾಪುರದ ತಮ್ಮ ನಿವಾಸದಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ವೇಗದ ಬೌಲಿಂಗ್ ಆಲ್‌ರೌಂಡರ್ ಸದಾಶಿವ್ ಅವರು 1955ರ ಡಿಸೆಂಬರ್‌ನಲ್ಲಿ ಬಾಂಬೆಯಲ್ಲಿ(ಈಗಿನ ಮುಂಬೈ) ನ್ಯೂಜಿಲೆಂಡ್ ವಿರುದ್ಧ ಭಾರತದ ಪರ ಏಕೈಕ ಟೆಸ್ಟ್ ಆಡಿದರು. ಇದರಲ್ಲಿ ಅವರು ಒಟ್ಟು 51 ರನ್‌ಗಳಿಗೆ ಎರಡು ವಿಕೆಟ್ ಪಡೆದರು ಮತ್ತು 14 ರನ್ ಬಾರಿಸಿದರು. ಇದರ ನಂತರ ಅವರು ಮತ್ತೆ ಭಾರತ …

Read More »

70,000ಕ್ಕೂ ಅಧಿಕ ಉದ್ಯೋಗ: ನಿರುದ್ಯೋಗಿಗಳಿಗೆ ಇದು ಬಿಗ್​ ​ಡೇಸ್​

ನವದೆಹಲಿ : ಆನ್‌ಲೈನ್ ಗ್ರಾಹಕರು ಪ್ರತಿವರ್ಷವೂ ಕುತೂಹಲದಿಂದ ಕಾಯುವಂತಹ ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​ ಡೇಸ್​ ಸೇಲ್​ ಮತ್ತೆ ಬಂದಿದೆ. ಈ ಸಂದರ್ಭದಲ್ಲಿ ದೇಶಾದ್ಯಂತ 70,000ಕ್ಕೂ ಅಧಿಕ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ. ಇದೇ ಸೆ.18ರಿಂದ 20ರವರೆಗೆ ಬಿಗ್​ ಬಿಲಿಯನ್​ ಡೇಸ್​ ಸೇಲ್​ ಪ್ರಾರಂಭವಾಗುತ್ತಿದ್ದು, ಫ್ಲಿಪ್​ಕಾರ್ಟ್​ ಡೆಲಿವರಿ ಎಕ್ಸಿಕ್ಯೂಟಿವ್​, ಪಿಕ್ಕರ್​, ಪ್ಯಾಕರ್​ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹುಡುಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಿರುದ್ಯೋಗಿಗಳು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ: …

Read More »

ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದ ಅದೃಷ್ಟವೇ ಸರಿ ಇಲ್ಲ ಅನಿಸುತ್ತೆ.

ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದ ಅದೃಷ್ಟವೇ ಸರಿ ಇಲ್ಲ ಅನಿಸುತ್ತೆ. ಕಳೆದ ಮೂರು ತಿಂಗಳಿನಿಂದ ಸರ್ಕಾರದ ವಿರುದ್ಧ ಒಂದಾದ ಮೇಲೊಂದರಂತೆ ಆರೋಪ ಕೇಳಿ ಬರ್ತಿದೆ. ಸುಶಾಂತ್ ಸಿಂಗ್ ಪ್ರಕರಣದಿಂದ ಹಿಡಿದು ನೌಕಾಪಡೆಯ ಮಾಜಿ ಅಧಿಕಾರಿ ಮೇಲಿನ ಹಲ್ಲೆವರೆಗೆ ಸಾಕಷ್ಟು ಘಟನೆಗಳು ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸುವಂತೆ ಮಾಡಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋ ಆರೋಪಗಳನ್ನ ಮಾಡಲಾಗ್ತಿದೆ. ಇದೆಲ್ಲದರ ನಡುವೆ ನೌಕಾಪಡೆಯ ಮಾಜಿ ಅಧಿಕಾರಿ ಮದನ್ ಶರ್ಮಾ ಇವತ್ತು ಮಹಾರಾಷ್ಟ್ರ ರಾಜ್ಯಪಾಲ …

Read More »

ಮನೆಯ ಹಿತ್ತಲಲ್ಲೇ ಅಕ್ರಮ ಗಾಂಜಾ ಗಿಡ ಬೆಳೆಸಿದ ಆರೋಪಿಗಳು: ಓರ್ವನ ಬಂಧನ

ಮಂಡ್ಯ: ತಮ್ಮ ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಇಬ್ಬರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿರುವ ಕೆ.ಆರ್.ಪೇಟೆ ಗ್ರಾಮಾಂತರ ಪೋಲೀಸರು ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಬೂಕನಕೆರೆ ಹೋಬಳಿಯ ಬಳ್ಳೆಕೆರೆ ನಾಟನಹಳ್ಳಿಯ ಜೇಟ್ ಕುಂಟಣ್ಣನ ಬೋರೇಗೌಡರ ಮಗ ಮಂಜೇಗೌಡ(45) ಬಂಧಿತ ಆರೋಪಿಯಾಗಿದ್ದು ಇದೇ ಗ್ರಾಮದ ಮತ್ತೊಬ್ಬ ಆರೋಪಿ ರಾಜೇಗೌಡ ಬಿನ್ ಲೇಟ್ ಈರೇಗೌಡ(58) ತಲೆ ಮರೆಸಿಕೊಂಡಿದ್ದಾನೆ. ಘಟನೆಯ ವಿವರ: ಆರೋಪಿಗಳಾದ ಮಂಜೇಗೌಡ ಮತ್ತು ರಾಜೇಗೌಡ ಅವರು ತಮ್ಮ ವಾಸದ ಮನೆಯ …

Read More »