ಧಾರವಾಡ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಗಳಿಸಿದ್ದು ಸಾರ್ವಜನಿಕರ ಹಣ. ಅವರ ಮೇಲೆ ಎಫ್‍ಐಆರ್ ದಾಖಲಿಸಬೇಕು. ಅವರ ಮನೆ ಮೇಲೆ ಸಿಬಿಐ ದಾಳಿ ಮಾಡಿದ್ದು ಸ್ವಾಗತಾರ್ಹ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಹೇಳಿದರು.ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಮೇಲೆ ಎಫ್‍ಐಆರ್ ದಾಖಲಿಸಿ ಬೇರೆ ಯಾರೂ ಇಂತಹ ಕೆಲಸ ಮಾಡದಂತೆ ಮಾಡಬೇಕು. ಅವರ ಅಕ್ರಮ ಸಂಪಾದನೆ ಮೇಲೆ ಸಿಬಿಯ ದಾಳಿ ಮಾಡಿರುವುದು ಬಹಳ ಮಹತ್ವದ …
Read More »ಕೋವಿಡ್ ತಡೆಗಟ್ಟಲು ಕ್ರಮ ಕೈಗೊಂಡ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಹಿರಿಯ ಅಧಿಕಾರಿಗಳ ಸಭೆ
ಬೆಳಗಾವಿ: ಕೋವಿಡ್ ಸೋಂಕು ಹಾಗೂ ಮರಣ ಪ್ರಮಾಣ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಕೋವಿಡ್ ತಡೆಗಟ್ಟಲು ಕ್ರಮ ಕೈಗೊಂಡ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು. ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ನಿಯಮ ಉಲ್ಲಂಘಿಸುವವರ ಮೇಲೆ ದಂಡ ವಿಧಿಸುವ ಮೂಲಕ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಸಾಮಾಜಿಕ …
Read More »ಮಾಹಿತಿ ಹಕ್ಕು ಆಯುಕ್ತ ಕೆ.ಪಿ. ಮಂಜುನಾಥ್, ಕೆಪಿಎಸ್‍ಸಿಗೆ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಬೆಂಗಳೂರು: ಹಲವು ಬಾರಿ ಅಕ್ರಮಗಳ ಆರೋಪಗಳಿಗೆ ಗುರಿಯಾಗಿರುವ ಕೆಪಿಎಸ್‌ಸಿ ಈಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಮಾಹಿತಿ ಹಕ್ಕು ಕಾಯ್ದೆ ಅನ್ವಯ ಮಾಹಿತಿ ಒದಗಿಸದ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಮಾಹಿತಿ ಹಕ್ಕು ಆಯೋಗ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶ ಮಾಡಿದೆ. ದಂಡದ ಹಣವನ್ನು ಮಾಹಿತಿ ಕೇಳಿರುವ ಅರ್ಜಿದಾರರಿಗೆ ನೀಡುವಂತೆ ಸೂಚಿಸಿದೆ. ಸುಧನ್ವ ಭಂದೋಲ್ಕರ್ ಎನ್ನುವವರು 2015ರ ಕೆಪಿಎಸ್‌ಸಿ ಪ್ರೊಬೇಷನರಿ ಹುದ್ದೆಯ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು …
Read More »ಮುನಿರತ್ನಗೆ ಟಿಕೆಟ್ ಕೊಡಿಸಲು ಅಖಾಡಕ್ಕಿಳಿದ ರಮೇಶ್ ಜಾರಕಿಹೊಳಿ..!
ಬೆಂಗಳೂರು,ಅ.7-ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮಾಜಿ ಶಾಸಕ ಮುನಿರತ್ನ ಅವರಿಗೆ ಟಿಕೆಟ್ ನೀಡಲೇಬೇಕೆಂದು ಸಚಿವ ರಮೇಶ್ ಜಾರಕಿಹೊಳಿ ಅಖಾಡಕ್ಕಿಳಿದಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಇಂದು ಕಾವೇರಿ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಮತ್ತು ಮುನಿರತ್ನ ಭೇಟಿಯಾಗಿ ಮಾತುಕತೆ ನಡೆಸಿದರು. ಬೆಳಗಾವಿಗೆ ತೆರಳುತ್ತಿದ್ದ ಸಿಎಂ ಅವರನ್ನು ಭೇಟಿಯಾಗಿ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಉಭಯ ನಾಯಕರು ಟಿಕೆಟ್ ಸಂಬಂಧ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಯಾವುದೇ …
Read More »ಸುರೇಶ ಅಂಗಡಿ ಅವರ ಮನೆಗೆb.s.y.ಭೇಟಿ ,ಟಿಕೆಟ್ಬಿಜೆಪಿ ಯುವ ನಾಯಕರು ಲಾಭಿ ನಡೆಸ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿ: ದಿ.ಸುರೇಶ ಅಂಗಡಿ ನಿಧನ ಹಿನ್ನೆಲೆ ಖಾಲಿ ಇರುವ ಬೆಳಗಾವಿ ಲೋಕಸಭಾ ಕ್ಷೇತ್ರ ಚುನಾವಣೆಗೆ ದಿನಾಂಕ ಘೋಷಣೆ ಯಾಗುವ ಮುನ್ನವೇ ಮಾಜಿ ಶಾಸಕ , ಬಿಜೆಪಿ ನಾಯಕರು ಟಿಕೆಟ್‍ಗಾಗಿ ಲಾಭಿ ನಡೆಸಿದ್ದಾರೆ. ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಲು ಬೆಳಗಾವಿಗೆ ಆಗಮಿಸಿದ್ದಾರೆ. ಇದರ ಮಧ್ಯದಲ್ಲಿಯೇ ಚುನಾವಣೆ ದಿನಾಂಕ ಘೋಷಣೆ ಮುನ್ನವೇ ಬಿಜೆಪಿ ನಾಯಕರ ಟಿಕೆಟ್‍ಗಾಗಿ ಕಸರತ್ತು ಜೋರಾಗಿ ನಡೆಸಿದ್ದಾರೆ. ಮಾಜಿ …
Read More »ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡವಾಗಿರುವ ಬುರ್ಜ್ ಖಲೀಫಾ
ಮರಳುಗಾಡಿನ ಮಧ್ಯೆ ವಿಶ್ವದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಪರಿಣಮಿಸಿರುವ ನಗರವೆಂದರೆ ಅದು ದುಬೈ. ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡವಾಗಿರುವ ಬುರ್ಜ್ ಖಲೀಫಾವನ್ನು ಹೊಂದಿರುವ ಖ್ಯಾತಿ ಸಹ ದುಬೈ ಪಡೆದಿದೆ. ಇದೀಗ, ಇದೇ ದುಬೈ ನಗರ ಮತ್ತೊಂದು ದಾಖಲೆ ಸೃಷ್ಟಿಸಲು ಮುಂದಾಗಿದೆ. ಹೌದು, ಇದೇ ಅಕ್ಟೋಬರ್ 22ರಂದು ದುಬೈ ಪ್ರಪಂಚದ ಅತಿದೊಡ್ಡ ಕಾರಂಜಿಯನ್ನು ಲೋಕಾರ್ಪಣೆ ಮಾಡಲಿದೆ. ಈ ಮೂಲಕ ಪ್ರಪಂಚದ ಅತಿದೊಡ್ಡ ಕಾರಂಜಿ ಎಂಬ ಗಿನ್ನಿಸ್ ದಾಖಲೆ ರಚಿಸಲು ಮುಂದಾಗಿದೆ. …
Read More »ಕೊರೋನಾ ಆತಂಕದ ನಡುವೆಯೂ ತಿಮ್ಮಪ್ಪನ ಹುಂಡಿಯಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹ
ತಿರುಪತಿ,ಅ.6- ಕೆಲವು ಮುಂಜಾಗ್ರತಾ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ವಿಶ್ವ ಪ್ರಸಿದ್ದ ತಿರುಪತಿ ದೇವಾಲಯವನ್ನು ಮತ್ತೆ ತೆರೆದಿರುವುದರಿಂದ ಭಾರೀ ಪ್ರಮಾಣದ ಭಕ್ತರು ಆಗಮಿಸುತ್ತಿದ್ದು, ಇದರಿಂದ ತಿಮ್ಮಪ್ಪನ ಹುಂಡಿಯಲ್ಲಿ ದಾಖಲೆ ಪ್ರಮಾಣದಲ್ಲಿ ಕಾಣಿಕೆಗಳು ಸಂಗ್ರಹವಾಗುತ್ತಿದೆ. ವಿಶ್ವ ಪ್ರಸಿದ್ದ ತಿರುಪತಿ ಶ್ರೀ ವೆಂಕಟೇಶ್ವರನಿಗೆ ಅಪಾರ ಸಂಖ್ಯೆಯ ಭಕ್ತರು ಇದ್ದಾರೆ. ದೇಶ ಮಾತ್ರವಲ್ಲದೇ ವಿದೇಶಗಳಿಂದಲೂ ಸಹ ತಿಮ್ಮಪ್ಪನ ದರ್ಶನ ಪಡೆಯಲು ಆಗಮಿಸುತ್ತಾರೆ. ಅಕ್ಟೋಬರ್ 2ರಂದು ಗಾಂ ಜಯಂತಿಗೆ ರಜೆ ಇದ್ದ ಕಾರಣ ಅಸಂಖ್ಯಾತ ಭಕ್ತರು ದೇವಾಲಯಕ್ಕೆ …
Read More »ಮಧ್ಯಾಹ್ನ ಟಿಕೆಟ್ ಘೋಷಣೆ – ಶಿರಾ ಜೆಡಿಎಸ್ ಅಭ್ಯರ್ಥಿಗೆ ಕೊರೊನಾ ಪಾಸಿಟಿವ್
ತುಮಕೂರು: ಉಪಚುನಾವಣೆಯಲ್ಲಿ ಶಿರಾ ಜೆಡಿಎಸ್ ಅಭ್ಯರ್ಥಿಯಾಗಿರುವ ಅಮ್ಮಾಜಮ್ಮ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇಂದು ಮಧ್ಯಾಹ್ನವೇ ಜೆಡಿಎಸ್ ಪಕ್ಷದ ವರಿಷ್ಠರಾದ ದೇವೇಗೌಡರು, ದಿವಂಗತ ಶಾಸಕ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಅವರಿಗೆ ಜೆಡಿಎಸ್ ಪಕ್ಷದಿಂದ ಉಪಚುನಾವಣೆಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಆದರೆ ಅಮ್ಮಾಜಮ್ಮ ಅವರಿಗೆ ಇಂದೇ ಕೊರೊನಾ ಪಾಸಿಟಿವ್ ಬಂದಿದೆ. ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕತ್ಸೆ ಪಡೆಯುತ್ತಿದ್ದಾರೆ. ತಾಯಿಗೆ ಕೊರೊನಾ ಬಂದ ವಿಚಾರವಾಗಿ ಮಾತನಾಡಿರುವ ಅಮ್ಮಾಜಮ್ಮ ಪುತ್ರ ಸತ್ಯ ಪ್ರಕಾಶ್, …
Read More »ಮಹದಾಯಿ ನದಿ ನೀರನ್ನು ಕರ್ನಾಟಕ ಅಕ್ರಮವಾಗಿ ತಿರುಗಿಸಿಕೊಳ್ಳುತ್ತಿದೆ:ಗೋವಾ ಸರ್ಕಾರ
ಪಣಜಿ: ಮಹದಾಯಿ ನದಿ ನೀರನ್ನು ಕರ್ನಾಟಕ ಅಕ್ರಮವಾಗಿ ತಿರುಗಿಸಿಕೊಳ್ಳುತ್ತಿದೆ ಎಂಬ ಆರೋಪದ ಮೇಲೆ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದೆ. ಮಹದಾಯಿ ನದಿಯ ನೀರನ್ನು ಹಂಚಿಕೊಳ್ಳುವ ವಿವಾದ ಎರಡೂ ರಾಜ್ಯಗಳ ನಡುವೆ ಸಾಕಷ್ಟು ದೊಡ್ಡ ವ್ಯಾಜ್ಯಕ್ಕೆ ಕಾರಣವಾಗಿದೆ. ಅನುಮತಿಯಿಲ್ಲದೆ ನದಿ ನೀರನ್ನು ಬೇರೆಡೆಗೆ ತಿರುಗಿಸಲು ಕರ್ನಾಟಕ ಕಾಮಗಾರಿಗಳನ್ನು ಕೈಗೊಂಡಿದೆ ಎಂದು ಗೋವಾ ಆರೋಪಿಸಿದೆ. ಸೋಮವಾರ ಈ ಸಂಬಂಧ ಗೋವಾ ಸಿಎಂಸಾವಂತ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗೋವಾ …
Read More »ನಾಳೆ ಬೆಳಗಾವಿಗೆ ಯಡಿಯೂರಪ್ಪ;
ಬೆಳಗಾವಿ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ವಿಶೇಷ ವಿಮಾನದಲ್ಲಿ ಬೆಳಗ್ಗೆ 9.45 ಗಂಟೆಗೆ ಅವರು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಇತ್ತೀಚೆಗೆ ನಿಧನರಾಗಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ವಿಶ್ವೇಶ್ವರ ನಗರದ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಅವರು 11 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಅದೇ ವಿಮಾನದಲ್ಲಿ ನಿರ್ಗಮಿಸುವರು
Read More »