Breaking News

CHIKKODI

ಒಂದು ತಿಂಗಳ ಅಂತರದಲ್ಲಿ ಮೂರನೇ ಬಾರಿಗೆ ಚಿಕ್ಕೋಡಿಯ 8 ಸೇತುವೆಗಳು ಜಲಾವೃತ

ಚಿಕ್ಕೋಡಿ(ಬೆಳಗಾವಿ): ವಾಡಿಕೆಯಂತೆ ಮಹಾರಾಷ್ಟ್ರ ಪಶ್ಚಿಮಘಟ್ಟದ ಹಾಗೂ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿರುವ ಪಂಚ ನದಿಗಳು ಮೈದುಂಬಿ ಹರಿಯುತ್ತಿವೆ. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ ಕೆಳಹಂತದ ಎಂಟು ಸೇತುವೆಗಳು ಹಾಗೂ ನದಿ ಪಾತ್ರದ ಕೆಲವು ದೇವಸ್ಥಾನಗಳು ಜಲಾವೃತಗೊಂಡಿವೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರ ಕೃಷ್ಣಾ ನದಿ ನೀರಿನಿಂದ ಜಲಾವೃತಗೊಂಡಿದೆ. ಈ ಹಿನ್ನೆಲೆ‌ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಸ್ಥಗಿತಗೊಂಡಿದೆ. ನದಿ ಪಾತ್ರದ ಜಮೀನುಗಳಿಗೆ …

Read More »

ಹಾರೂಗೇರಿ : ಕಬ್ಬು ತುಂಬಿದ ಟ್ರ್ಯಾಕ್ಟ‌ರ್ ಪಲ್ಟಿ ; ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ರಾಯಬಾಗ : ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಗೂಡಂಗಡಿಗಳ ಮೇಲೆ ಪಲ್ಟಿ ಆಗಿರುವ ಘಟನೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.   ಸಕ್ಕರೆ ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟ‌ರ್ ಪಲ್ಟಿ ಆಗಿದೆ. ಹಾರೂಗೇರಿ – ರಾಯಬಾಗ ರಸ್ತೆಯ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.   ಘಟನೆಯಲ್ಲಿ ಟ್ರ್ಯಾಕ್ಟ‌ರ್ ಚಾಲಕನ ಅಜಾಗರೂಕತೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, …

Read More »

ಸಿದ್ದಿ ಸಾಧನೆಗಾಗಿ ಬಬಲಾದಿ ಅಜ್ಜನವರು ಮದ್ಯವನ್ನು ಸೇವಿಸುತ್ತಿದ್ದರು,ಆದರೆ ಯಾರು ಕೂಡಾ ಮದ್ಯವನ್ನು ಸೇವಿಸಬಾರದು:ಗುರು ಸಿದ್ದರಾಮಯ್ಯ ಅಜ್ಜನವರು

ಚಿಕ್ಕೋಡಿ:ಬಬಲಾದಿಯ ಸದಾಶಿವ ಅಜ್ಜನವರು ಮುಂದೆ ಆಗುವುದನ್ನು ಹೇಳಿದ್ದಾರೆ. ಹಿಂದೆ ಆಗಿ ಹೋಗಿದ್ದನ್ನು ಬರೆದಿಟ್ಟಿದ್ದಾರೆ. ಅವರ ಕಾರ್ಯಸಿದ್ದಿಗಾಗಿ ಮದ್ಯವನ್ನು ಸೇವಿಸುತ್ತಿದ್ದರು. ಆದರೆ ಯಾರು ಕೂಡಾ ಮದ್ಯವನ್ನು ಸೇವಿಸಬಾರದೆಂದು ಮೂಲಮಹಾ ಸಂಸ್ಥಾನ ಮಠದ ಬಬಲಾದಿಯ ಒಡೆಯರಾದಂತಹ ಶ್ರೀಗುರು ಸಿದ್ದರಾಮಯ್ಯ ಅಜ್ಜನವರು ಹೇಳಿದರು. ಅವರು ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ರುದ್ರ ಭೂಮಿಯ ಉದ್ಘಾಟನೆ ಹಾಗೂ ಬಿಲ್ವಪತ್ರೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಲಕ್ಷ್ಮೀದೇವಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ಸದ್ಯದ ಪ್ರಪಂಚದಲ್ಲಿ ಒಂದು …

Read More »