Breaking News

ಹುಬ್ಬಳ್ಳಿ

ಸರ್ಕಾರಕ್ಕೆ ಚಾಟಿ ಬೀಸಿದ ಪ್ರಲ್ಹಾದ್​ ಜೋಶಿ

ಹುಬ್ಬಳ್ಳಿ, ಮೇ 25: ದಾವಣಗೆರೆ ಜಿಲ್ಲೆಯ ಚನ್ನಗಿರಿ (Channagiri) ಠಾಣೆ ಪೊಲೀಸರ ಕಸ್ಟಡಿಯಲ್ಲಿದ್ದ ಆರೋಪಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆ ಮೇಲೆ ಕಲ್ಲು ತೂರಿದ್ದ 10 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದವರಿಗಾಗಿ ಶೋಧ ಮುಂದುವರೆಸಿದ್ದಾರೆ. ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (Pralhad Joshi), ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಹೋದವರ ಮೇಲೆ ಕ್ರಮಕೈಗೊಂಡಿಲ್ಲ ಅದನ್ನು ಬಿಟ್ಟು ಸರ್ಕಲ್ ಇನ್​ಸ್ಪಕ್ಟರ್​ ಮತ್ತು ಡಿವೈಎಸ್​ಪಿಯನ್ನು ಅಮಾನತು ಮಾಡಲಾಗಿದೆ. ಅಂಜಲಿ, ನೇಹಾ …

Read More »

ಚಾಲಕ ಸಿಬ್ಬಂದಿಗಳಿಗೆ ಸಂಸ್ಥೆಯ ಖಡಕ್ ಎಚ್ಚರಿಕೆ

ಹುಬ್ಬಳ್ಳಿ, ಮೇ 24: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಚಾಲಕ ಚಾಲಕ ಕೊಡೆಯನ್ನು ಹಿಡಿದುಕೊಂಡು ವಾಹನ ಚಾಲನೆ ಮಾಡುವ ವಿಡಿಯೋ ಶುಕ್ರವಾರ ವೈರಲ್ ಆಗಿತ್ತು. ಸಿಬ್ಬಂದಿಗಳನ್ನು ಅಮಾನತು ಮಾಡಿ, ಸಂಸ್ಥೆ ಸ್ಪಷ್ಟೀಕರಣವನ್ನು ನೀಡಿತ್ತು. ಈಗ ಪ್ರಕಟಣೆಯೊಂದರಲ್ಲಿ ಪ್ರಿಯಾಂಗ ಎಂ., ವ್ಯವಸ್ಥಾಪಕ ನಿರ್ದೇಶಕರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಂಸ್ಥೆಯ ಎಲ್ಲಾ ಚಾಲನಾ ಸಿಬ್ಬಂದಿಗಳ ಗಮನಕ್ಕೆ ಎಂದು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.

Read More »

ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಉತ್ತರ ಪ್ರದೇಶ ಮಾದರಿಯಲ್ಲಿ ಗೂಂಡಾ ರಾಜ್ಯವಾಗುತ್ತಿದ್ದು, ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಿಸಿದರು. ನಗರದ ವೀರಾಪುರ ಓಣಿ ಕರಿಯಮ್ಮನ ಗುಡಿ ಬಳಿ ಹತ್ಯೆಯಾದ ಅಂಜಲಿ ಅಂಬಿಗೇರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಉತ್ತರ ಪ್ರದೇಶ ಮೊದಲು ಗೂಂಡಾ ರಾಜ್ಯವಾಗಿತ್ತು. ಅಲ್ಲಿ ಯೋಗಿ ಆದಿತ್ಯನಾಥ ಸಿಎಂ ಆದ …

Read More »

ಹಂತಕ ಗಿರೀಶ್ ಗೂ ಅಂಜಲಿಗೂ 15 ದಿನಗಳ ಮೊದಲೇ ಮದುವೆಯಾಗಿತ್ತು!

ಹುಬ್ಬಳ್ಳಿ: ಮೇ 15ರ ನಸುಕಿನ ಜಾವ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ನಡೆದಿದ್ದ ಅಂಜಲಿ ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಗಿರೀಶ್ ಸಾವಂತನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳು ಹೊರಬರುತ್ತಿದೆ. ಮೈಸೂರಿನ ಬಾರ್ ಆಯಂಡ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಗಿರೀಶ ಸಾವಂತ ಮತ್ತು ಹತ್ಯೆಯಾದ ಅಂಜಲಿ ಅಂಬಿಗೇರ ಪರಸ್ಪರ ಪ್ರೀತಿಸುತ್ತಿದ್ದರು. 15 ದಿನಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು ಎನ್ನಲಾಗುತ್ತಿದೆ. ಅಂಜಲಿ ವಾರದ ಮುಂಚೆ …

Read More »

ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್ ಅವರಂತಹ ಸಿಎಂ ಬೇಕಿದೆ: ನೇಹಾ ಹಿರೇಮಠ್ ತಂದೆ ಹೇಳಿಕೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಳೆದ ತಿಂಗಳು ನೇಹಾ ಪಾಟೀಲ್ ಕೊಲೆ ಕೇಸ್ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿಯ ಹತ್ಯೆಯಾಗಿದೆ. ಹುಬ್ಬಳ್ಳಿಯ ದಾಜಿಬಾನಪೇಟೆ ಸಮೀಪದ ವೀರಾಪುರ ಓಣಿಯಲ್ಲಿ ನಿನ್ನೆ ಬುಧವಾರ ಬೆಳಗ್ಗೆ 20 ವರ್ಷದ ಯುವತಿಯನ್ನು 22 ವರ್ಷದ ಯುವಕನೊಬ್ಬ ಕೊಲೆ ಮಾಡಿದ್ದಾನೆ. ಆರೋಪಿ ವಿಶ್ವನಾಥ್ ಅಲಿಯಾಸ್ ಗಿರೀಶ್ ಸಾವಂತ್ ಎಂಬಾತ ಅಂಜಲಿ ಅಂಬಿಗರ ಮನೆಯಲ್ಲಿ ಯುವತಿ ಮೇಲೆ ಹಲ್ಲೆ ನಡೆಸಿ, ಪದೇ ಪದೇ ಚಾಕುವಿನಿಂದ ಇರಿದು ಕತ್ತು ಸೀಳಿ …

Read More »

‘ಬರ ಪರಿಹಾರ ನೀಡದೇ ಕಾಂಗ್ರೆಸ್ ದಿವಾಳಿ’

ಹುಬ್ಬಳ್ಳಿ: ‘ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಯಾವತ್ತು ಹೇಳಿಲ್ಲ. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆಡಳಿತ ಸಹಿಸದ ಕಾಂಗ್ರೆಸ್‌ನವರು ರಾಜಕೀಯ ದುರುದ್ದೇಶದಿಂದ ‘ಇಂಡಿಯಾ’ ಒಕ್ಕೂಟದ ಜೊತೆ ಸೇರಿ ನ್ಯಾಯಾಲಯಕ್ಕೆ ಹೋಗಿದ್ದಾರೆ’ ಎಂದು ಕೇಂದ್ರ ಸಚಿವ, ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ಶನಿವಾರ ಆರೋಪಿಸಿದರು. ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ರಾಜ್ಯ ವಿಪತ್ತು ಸ್ಪಂದನಾ ನಿಧಿಯಲ್ಲಿ ಪರಿವರ್ತನೆ ಮಾಡಿ, ಮುಂಚಿತವಾಗಿ ಹಣ …

Read More »

ಅಖಂಡೇಶ್ವರ ಜಾತ್ರೆಗೆ ಹೋದ ಅತಿಥಿ ಶಿಕ್ಷಕಿಯನ್ನು ಅಪಹರಿಸಿದ ಮುಸ್ಲಿಂ ಯುವಕ

ಹುಬ್ಬಳ್ಳಿ: ಯುವಕನೊರ್ವ ಅತಿಥಿ ಶಿಕ್ಷಕಿಯನ್ನು ಅಪಹರಿಸಿದ್ದಾನೆ (Kidnap Case) ಎಂಬ ಆರೋಪವೊಂದು ಕೇಳಿ ಬಂದಿದೆ. ಮಗಳ ಅಪಹರಣವಾಗಿದೆ ಎಂದು ಶಿಕ್ಷಕಿ ತಂದೆಯಿಂದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ಅಳ್ನಾವರದಲ್ಲಿ ಗ್ರಾಮದೇವಿಯರ ಜಾತ್ರೆ ಪ್ರಯುಕ್ತ ಮೇ 12ರಂದು ಅಂತರರಾಷ್ಟ್ರೀಯ ಮಟ್ಟದ ಮುಕ್ತ ಕುಸ್ತಿ ಟೂರ್ನಿ

ಹುಬ್ಬಳ್ಳಿ: ‘ಧಾರವಾಡ ಜಿಲ್ಲೆ ಅಳ್ನಾವರದಲ್ಲಿ ಗ್ರಾಮದೇವಿಯರ ಜಾತ್ರೆ ಪ್ರಯುಕ್ತ ಮೇ 12ರಂದು ಅಂತರರಾಷ್ಟ್ರೀಯ ಮಟ್ಟದ ಮುಕ್ತ ಕುಸ್ತಿ ಟೂರ್ನಿ ನಡೆಯಲಿದೆ’ ಎಂದು ಟೂರ್ನಿಯ ಆಯೋಜಕ ರಾಜು ಮಾರುತಿ ಪೆಜೋಳೆ ಹೇಳಿದರು. ‘ಇರಾನ್‌ನ ಮಿರ್ಜಾ, ಭಾರತ ಕೇಸರಿ ಜಸ್ಸಾ ಪಟ್ಟಿ, ಮಹಾರಾಷ್ಟ್ರ ಕೇಸರಿ ಸಿಖಂದರ್ ಶೇಖರ್‌ ಸೇರಿ 82 ಜೋಡಿಗಳು ಟೂರ್ನಿಯಲ್ಲಿ ಸೆಣಸಲಿವೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.   ‘ವಿಜೇತರಿಗೆ ಪ್ರಥಮ ಬಹುಮಾನ ₹12 ಲಕ್ಷ, ದ್ವಿತೀಯ ₹8 …

Read More »

ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ – ಧಾರವಾಡ ಅರ್ಧ ದಿನ ಬಂದ್!

ಧಾರವಾಡ: ಇಡೀ ದೇಶದ ಗಮನ ಸೆಳೆದಿರುವ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಖಂಡಿಸಿ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಇನ್ನೊಂದೆಡೆ ಮುಸ್ಲಿಂ ಸಮುದಾಯ ಧಾರವಾಡದಲ್ಲಿ ಅರ್ಧ ದಿನ ಸ್ವಯಂ ಪ್ರೇರಿತ ಬಂದ್‌ಗೆ ಕರೆ ಕೊಟ್ಟಿದೆ. ಎಂಸಿಎ ವಿದ್ಯಾರ್ಥಿ ನೇಹಾ ಹತ್ಯೆ ಖಂಡಿಸಿ ಹುಬ್ಬಳ್ಳಿ-ಧಾರವಾಡಗಳಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಶಾಸಕ ಮಹೇಶ್ ಟೆಂಗಿನಕಾಯಿ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಯಲಿದೆ. ಶಾಸಕ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಧಾರವಾಡದಲ್ಲಿ …

Read More »

ನೇಹಾ ಹತ್ಯೆ ಖಂಡಿಸಿ ಮುಸ್ಲಿಂ ಸಮುದಾಯದ ಅಂಗಡಿ-ಮುಂಗಟ್ಟು ಬಂದ್‌: ಮೌನ ಮೆರವಣಿಗೆ

ಧಾರವಾಡ : ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯ ಆರೋಪಿ ಫಯಾಜ್‌ಗೆ ಶೀಘ್ರ ಕಠಿನ ಶಿಕ್ಷೆ ಕೊಡಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲುವ ಉದ್ದೇಶದಿಂದ ಸ್ವಯಂ ಪ್ರೇರಿತವಾಗಿ ಏ.22 ರಂದು ಮುಸ್ಲಿಂ ಸಮುದಾಯ ಹುಬ್ಬಳ್ಳಿ-ಧಾರವಾಡದಲ್ಲಿ ಅಂಗಡಿ-ಮುಂಗಟ್ಟು ಬಂದ್‌ ಮಾಡಿ ಮೌನ ಮೆರವಣಿಗೆ ಮಾಡಲು ಧಾರವಾಡದ ಅಂಜುಮನ್‌ ಇ-ಇಸ್ಲಾಂ ಸಂಸ್ಥೆಯಿಂದ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್‌ ತಮಟಗಾರ ಹೇಳಿದರು‌. ಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 22ರಂದು ಬೆಳಗ್ಗೆ 10 …

Read More »