Breaking News

ಹುಬ್ಬಳ್ಳಿ

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸೌರಶಕ್ತಿ ಬಲ

ಹುಬ್ಬಳ್ಳಿ: ವಾಣಿಜ್ಯ ‌ನಗರಿ ಹುಬ್ಬಳ್ಳಿ ವಿಮಾನ ‌ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ‌. ಇದರ ಭಾಗವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣ ಸೌರಶಕ್ತಿ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. ನಿಲ್ದಾಣದಲ್ಲಿ ಅಳವಡಿಸಲಾಗಿರುವ ಸೋಲಾರ್ ಪ್ಲಾಂಟ್ ಮೂಲಕ ನಿತ್ಯ 8 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ದೇಶದ ಮೊದಲ ವಿಮಾನ ನಿಲ್ದಾಣದ ಎಂಬ ಖ್ಯಾತಿಗೆ ಪಾತ್ರವಾಗಿದೆ.ಇಲ್ಲಿ ಸೌರಶಕ್ತಿ ಘಟಕ 2022ರಲ್ಲಿಯೇ ಸ್ಥಾಪಿಸಲ್ಪಟ್ಟಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಯಾವುದೇ ನಿಲ್ದಾಣದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ವಿದ್ಯುತ್ ಉತ್ಪಾದಿಸುವ …

Read More »

ನೇಹಾ ಹಿರೇಮಠ ಕೊಲೆ ಆರೋಪಿಗೆ ಜಾಮೀನು ತಿರಸ್ಕಾರ: ಆ‌ಗಸ್ಟ್​​ 6ಕ್ಕೆ ವಿಚಾರಣೆ ಮುಂದೂಡಿಕೆ

ಹುಬ್ಬಳ್ಳಿ: ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್ ಖೊಂಡೋನಾಯ್ಕ್​​​ಗೆ ಜಾಮೀನು ನಿರಾಕರಿಸಿದೆ. ನೇಹಾ ಕೊಲೆ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಇವತ್ತಿಗೆ ಕಾಯ್ದಿರಿಸಲಾಗಿತ್ತು. ಇಂದು ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ನೇಹಾ ಹಿರೇಮಠ ಪರ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಮಹೇಶ ವೈದ್ಯ, ವಕೀಲ ರಾಘವೇಂದ್ರ ಮುತ್ಗೀಕರ ವಾದ ಮಂಡಿಸಿದರು. ಫಯಾಜ್ ಪರವಾಗಿ ಝಡ್ ಎಂ ಹತ್ತರಕಿ ವಾದ …

Read More »

ಮತಗಳ್ಳತನ ಆರೋಪ: 1 ವರ್ಷ ಕತ್ತೆ ಕಾಯುತ್ತಿದ್ರಾ? ಅಂತಾ ರಾಹುಲ್, ಕಾಂಗ್ರೆಸ್​ಗೆ ಜೋಶಿ ಪ್ರಶ್ನೆ

ಧಾರವಾಡ, ಆಗಸ್ಟ್​ 02: ಲೋಕಸಭಾ ಚುನಾವಣೆಯ (Loksabha Election) ಸಂದರ್ಭದಲ್ಲಿ ಕರ್ನಾಟಕದಲ್ಲಿ ‘ಮತಗಳ್ಳನ’ ಆಗಿದೆ ಎಂಬ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರ (Rahul Gandhi) ಆರೋಪವನ್ನು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಯವರು (Pralhad Joshi) ತೀವ್ರವಾಗಿ ಖಂಡಿಸಿದ್ದಾರೆ. ಲೋಕಸಭೆ ಚುನಾವಣೆ ನಡೆದು ಒಂದು ವರ್ಷ ಕಳೆದಿದೆ. ಒಂದು ವರ್ಷದವರೆಗೆ ನೀವು ಕತ್ತೆ ಕಾಯುತ್ತಿದ್ರಾ? ಎಂದು ವಾಗ್ದಾಳಿ ಮಾಡಿದರು. ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರು ನಿಮಗೆ …

Read More »

ಧಾರವಾಡದಲ್ಲಿ ನೀರಿನ ಟ್ಯಾಂಕರ್ ಸ್ಕೂಟಿ ಚಾಲಕನ ಮೇಲೆ ಪಲ್ಟಿ, ಸ್ಕೂಟಿ ಚಾಲಕ ಸಾವು….ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಧಾರವಾಡದಲ್ಲಿ ನೀರಿನ ಟ್ಯಾಂಕರ್ ಸ್ಕೂಟಿ ಚಾಲಕನ ಮೇಲೆ ಪಲ್ಟಿ, ಸ್ಕೂಟಿ ಚಾಲಕ ಸಾವು….ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಬ್ರೇಕ್ ಫೇಲ್ ಆಗಿದ್ದ ನೀರಿನ ಟ್ಯಾಂಕರ್ ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಮೊದಲು ಟಿಪ್ಪರ್‌ಗೆ ಡಿಕ್ಕಿ ಹೊಡೆದು ಆನಂತರ ಸ್ಕೂಟಿ ಮೇಲೆ ಪಲ್ಟಿಯಾದ ಪರಿಣಾಮ, ಸ್ಕೂಟಿ ಚಾಲಕ ಸಾವನ್ನಪ್ಪಿರುವ ಘಟನೆ ಧಾರವಾಡದ ತೇಜಸ್ವಿನಗರ ಬ್ರಿಡ್ಜ್ ಮೇಲೆ ಬುಧವಾರ ಸಂಜೆ ಸಂಭವಿಸಿದೆ. ಹುಬ್ಬಳ್ಳಿ ಆನಂದನಗರದ ನಿವಾಸಿ ಹನುಮಂತ (50) ಎಂಬ ವ್ಯಕ್ತಿಯೇ …

Read More »

ಧಾರವಾಡದಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಏಕಾಏಕಿ ಬಿದ್ದ ಮರ

ಧಾರವಾಡದಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಏಕಾಏಕಿ ಬಿದ್ದ ಮರ….ಧಾರವಾಡ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ತಪ್ಪಿದ ಅನಾಹುತ ಚಲಿಸುತ್ತಿದ್ದ ಆಟೊ ಮೇಲೆ ಬೃಹತ್ ಮರವೊಂದು ಏಕಾಏಕಿ ಬಿದ್ದಿದ್ದು, ಚಾಲಕ ಹಾಗೂ ಆಟೊದಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆ ಪ್ರಾಣಾಪಾಯದಿಂದ ಪಾರಾದ ಘಟನೆ ಧಾರವಾಡದ ಸುಭಾಷ ರಸ್ತೆಯಲ್ಲಿ ಸಂಭವಿಸಿದೆ. ಧಾರವಾಡದ ಸುಭಾಷ ರಸ್ತೆಯ ಮೂಲಕ ಆಟೊ ತೆರಳುತ್ತಿತ್ತು. ಈ ವೇಳೆ ರಸ್ತೆಯ ಪಕ್ಕ ಇದ್ದ ಮರ ಏಕಾಏಕಿ ಚಲಿಸುತ್ತಿದ್ದ ಆಟೊ ಮೇಲೆಯೇ ಬಿದ್ದಿದೆ. …

Read More »

ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇಂದು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿರುವ ಆದಿಕವಿ ಪಂಪ್ ಸ್ಮಾರಕ ಭವನದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಿದರು.

ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇಂದು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿರುವ ಆದಿಕವಿ ಪಂಪ್ ಸ್ಮಾರಕ ಭವನದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಿದರು. ಈ ಸಂದರ್ಭದಲ್ಲಿ, ಅವರು ನಾಗರಿಕರಿಂದ ವಿವಿಧ ದೂರುಗಳು ಮತ್ತು ಸಮಸ್ಯೆಗಳನ್ನು ಆಲಿಸಿದರು. ಗಮನಾರ್ಹವಾಗಿ, ಸಚಿವರು ಕೆಲವು ದೂರುಗಳನ್ನು ಸ್ಥಳದಲ್ಲೇ ಪರಿಹರಿಸುವ ಮೂಲಕ ನಾಗರಿಕರಿಗೆ ಪರಿಹಾರ ನೀಡಿದರು.ಅಣ್ಣಿಗೇರಿ ಮತ್ತು ಅದರ ಸುತ್ತಮುತ್ತಲಿನ ಸಾವಿರಾರು ನಾಗರಿಕರು ಈ ಸಭೆಯಲ್ಲಿ ಭಾಗವಹಿಸಿ ಸಚಿವರ ಮುಂದೆ …

Read More »

ಹುಬ್ಬಳ್ಳಿಯಲ್ಲಿ ಏರೋ‌ಸ್ಪೇಸ್ ಪಾರ್ಕ್ ಸ್ಥಾಪನೆಗೆ ಹೆಚ್ಚಿದ ಒತ್ತಡ

ಹುಬ್ಬಳ್ಳಿ : ದೇವನಹಳ್ಳಿ ಬಳಿ ಚನ್ನರಾಯಪಟ್ಟಣ ಭೂಸ್ವಾಧೀನವನ್ನು ರಾಜ್ಯ ಸರ್ಕಾರ ಕೈಬಿಟ್ಟಿದ್ದು, ಉದ್ದೇಶಿತ ಏರೊಸ್ಪೇಸ್ ಪಾರ್ಕ್ ಅನ್ನು ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿಯಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂಬ ಕೂಗು ಜೋರಾಗಿ ಕೇಳಿ ಬಂದಿದೆ. ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಏರೋಸ್ಪೇಸ್ ಪಾರ್ಕ್​ನ್ನು ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ-ಧಾರವಾಡದಲ್ಲಿ ಆರಂಭಿಸುವುದರಿಂದ ಕರ್ನಾಟಕದ ಉತ್ತರ ಭಾಗದ ಅಭಿವೃದ್ಧಿಗೆ ಪೂರಕವಾಗಲಿದೆ. ಇದರಿಂದ ಸಾವಿರಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗಗಳು ದೊರೆತು ವಿಶೇಷವಾಗಿ ಇಂಜಿನಿಯರಿಂಗ್ ತಾಂತ್ರಿಕ …

Read More »

ಸ್ವಚ್ಛ ನಗರಿ: ಹುಬ್ಬಳ್ಳಿ-ಧಾರವಾಡಕ್ಕೆ ದೇಶದಲ್ಲಿ 34ನೇ ಸ್ಥಾನ; ರಾಜ್ಯಕ್ಕೆ ದ್ವಿತೀಯ

ಹುಬ್ಬಳ್ಳಿ: ಸ್ವಚ್ಛ ಭಾರತ್ ಮಿಷನ್‌ನಡಿ ಕೇಂದ್ರೀಯ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸಿದ ಸ್ವಚ್ಛ ಸರ್ವೇಕ್ಷಣ-2025ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಗಣನೀಯ ಸಾಧನೆ ಮಾಡಿದ್ದು, ರಾಜ್ಯದ ಎರಡನೇ ಸ್ವಚ್ಚ ನಗರ ಎಂಬ ಕೀರ್ತಿಗೆ ಪಾತ್ರವಾಗಿದೆ. ಹುಬ್ಬಳ್ಳಿ-ಧಾರವಾಡ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ ನಗರಗಳ ಪೈಕಿ ಕರ್ನಾಟಕದಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದೆ. ರಾಷ್ಟ್ರಮಟ್ಟದಲ್ಲಿ ಕಳೆದ ವರ್ಷ 87ನೇ ಸ್ಥಾನದಲ್ಲಿದ್ದ ಅವಳಿನಗರ 2025ರಲ್ಲಿ 34ನೇ ಸ್ಥಾನಕ್ಕೆ ಏರಿದೆ. ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ ತ್ಯಾಜ್ಯ …

Read More »

ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ರಾಮನಾಥಪುರಂವರೆಗೆ ಸಂಚಾರ

ಹುಬ್ಬಳ್ಳಿ, ಜುಲೈ 15: ದಕ್ಷಿಣ ರೈಲ್ವೆಯಲ್ಲಿನ ಕಾರ್ಯಾಚರಣೆಯ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು, 07355/07356 ಸಂಖ್ಯೆಯ ಎಸ್ಎಸ್ಎಸ್ ಹುಬ್ಬಳ್ಳಿ – ರಾಮೇಶ್ವರಂ – ಎಸ್ಎಸ್ಎಸ್ ಹುಬ್ಬಳ್ಳಿ (Hubballi-Rameswaram Train) ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲಿನ ಸಂಚಾರದ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ (South Western Railway). ಈ ವಿಶೇಷ ರೈಲು ತನ್ನ ಹಿಂದಿನ ನಿಗದಿತ ನಿಲ್ದಾಣವಾದ ರಾಮೇಶ್ವರಂ ಬದಲಿಗೆ ರಾಮನಾಥಪುರಂನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ ಮತ್ತು ಅಲ್ಲಿಂದಲೇ ವಾಪಸ್​ …

Read More »

ಹಣಕಾಸಿನ ವಿಚಾರವಾಗಿ ಕಂಠಿಗಲ್ಲಿಯಲ್ಲಿ ಇತ್ತೀಚೆಗೆ ನಡೆದ ಚಾಕು ಇರಿತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾನೆ.

ಧಾರವಾಡ: ಹಣಕಾಸಿನ ವಿಚಾರವಾಗಿ ಕಂಠಿಗಲ್ಲಿಯಲ್ಲಿ ಇತ್ತೀಚೆಗೆ ನಡೆದ ಚಾಕು ಇರಿತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾನೆ. ರಾಘವೇಂದ್ರ (ರಾಜು) ಗಾಯಕವಾಡ ಮೃತರು. ಕಳೆದ ಗುರುವಾರ ಧಾರವಾಡದ ಕಂಠಿಗಲ್ಲಿಯಲ್ಲಿ‌ ಚಾಕು ಇರಿತ ನಡೆದಿತ್ತು. ಹಣಕಾಸಿನ ವಿಚಾರವಾಗಿ ಯುವಕ ರಾಜು ಗಾಯಕವಾಡನಿಗೆ ಮಲ್ಲಿಕ್ ಎಂಬಾತ ಚಾಕುವಿನಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ರಾಜುನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ. …

Read More »