Breaking News

ಬೆಳಗಾವಿ ಜಿಟಿಟಿಸಿಗೆ ‘ಉತ್ಕೃಷ್ಟ ಕೇಂದ್ರ’ ಸ್ಥಾನ

Spread the love

ಬೆಳಗಾವಿ: ಇಲ್ಲಿನ ಉದ್ಯಮಬಾಗ್‌ನಲ್ಲಿರುವ ಜಿಟಿಟಿಸಿ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ)ಗೆ ಉತ್ಕೃಷ್ಟ ಕೇಂದ್ರದ ಸ್ಥಾನಮಾನ ದೊರೆತಿದೆ.

’25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಶೇ 100ರಷ್ಟು ಉದ್ಯೋಗ ದೊರೆಯುವಂತಹ ಕೌಶಲ ಆಧಾರಿತ ಕೋರ್ಸ್‌ಗಳನ್ನು ಇಲ್ಲಿ ನಡೆಸಲಾಗುತ್ತಿದೆ. ಇದನ್ನು ಆಧರಿಸಿ ಸ್ಥಾನಮಾನ ದೊರೆತಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಸಜ್ಜುಗೊಳಿಸುವ ಉದ್ದೇಶ ಕೇಂದ್ರದ್ದಾಗಿದೆ. ಉತ್ಕೃಷ್ಟ ಕೇಂದ್ರದ ಸ್ಥಾನಮಾನದಿಂದ ತರಬೇತಿ ನೀಡುವ ಪ್ರಕ್ರಿಯೆಯು ಮತ್ತಷ್ಟು ಉನ್ನತ ಮಟ್ಟಕ್ಕೇರಿದೆ. ಅಮೆರಿಕದ ಬೋಸ್ಟನ್‌ನ ಪಿಟಿಸಿ (ಪ್ಯಾರಾಮೆಟ್ರಿಕ್‌ ಟೆಕ್ನಾಲಜಿ ಕಾರ್ಪೊರೇಷನ್) ಕಂಪನಿಯು ರಾಜ್ಯದಲ್ಲಿ ಹೈಟೆಕ್‌ ತಂತ್ರಜ್ಞಾನ ಕೇಂದ್ರ ಆರಂಭಿಸಲು ಬೆಳಗಾವಿಯ ಜಿಟಿಟಿಸಿಯೂ ಆಯ್ಕೆಯಾಗಿದೆ.

ಎಕ್ಸಲೆನ್ಸಿ ಯೋಜನೆಯಂತೆ ಹೊಸ ಪ್ರಯೋಗಾಲಯ ಕೂಡ ಆರಂಭವಾಗಲಿದೆ’ ಎಂದು ಮಾಹಿತಿ ನೀಡಲಾಗಿದೆ.

ಇಲ್ಲಿ ವಿದ್ಯಾರ್ಥಿನಿಯರು ಕೂಡ ಪ್ರವೇಶ ಪಡೆಯುತ್ತಿದ್ದಾರೆ. ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ (ಡಿಟಿಡಿಎಂ) ಮತ್ತು ಡಿಪ್ಲೊಮಾ ಇನ್‌ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ (ಡಿಪಿಎಂ) ಈ ಕೇಂದ್ರದ ಮುಖ್ಯ ಕೋರ್ಸ್‌ಗಳಾಗಿವೆ. ಪ್ರವೇಶ ಪಡೆಯಲು ಸೆ. 28 ಕೊನೆಯ ದಿನಾಂಕವಾಗಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯವರು ಪ್ರವೇಶ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಮೊ: 91416 30309 ಸಂಪರ್ಕಿಸಬಹುದು.


Spread the love

About Laxminews 24x7

Check Also

ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿ ನೆಟ್ಟ ಮಕ್ಕಳು

Spread the love ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ