ಬೆಳಗಾವಿಯ ಕೆಎಲ್‍ಎಸ್ ಸಂಸ್ಥೆಯ ಗೋಗಟೆ ತಾಂತಿಕ ವಿದ್ಯಾಲಯದಲ್ಲಿ ಇಂಜನೀಯರಿಂಗ್ ಜಾಗ್ರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ಕೆಎಲ್‍ಎಸ್ ಸಂಸ್ಥೆಯ ಗೋಗಟೆ ತಾಂತ್ರಿಕ ವಿದ್ಯಾಲಯದಲ್ಲಿ ದಿನಾಂಕ 26 ರಂದು ರವಿವಾರ ಪಿಯು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಎಂಜನೀಯರಿಂಗ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಕೆಎಲ್‍ಎಸ್ ಗೋಗಟೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಂತ ಕಿತ್ತೂರ್ ಅಭಿಯಂತರರಿರುವುದೇ ಸಮಸ್ಯೆಗಳನ್ನು ಪರಿಹಾರ ಮಾಡಲು. ಸಮಾಜಕ್ಕೆ ಉತ್ತಮ ಸುಲಭ ಜೀವನ ನೀಡಲು. ಹಾಗಾಗಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯಕ್ಕಾಗಿ ಉತ್ತಮ ಕಾಲೇಜನ್ನು ಆಯ್ಕೆ ಮಾಡಬೇಕು. ನಂತರ ಉತ್ತಮ ವಿಭಾಗದ ಆಯ್ಕೆ ಮುಖ್ಯ. ಉತ್ತಮ ಕಾಲೇಜು ಉತ್ತಮ ಅವಕಾಶಗಳನ್ನು ಹಾಗೂ ಕಲೆಯನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪಿಜಿ ಕೋರ್ಸಗಳಲ್ಲಿ ಉತ್ತಮ ಆಯ್ಕೆ ಮುಂದೆ ಉತ್ತಮ ಭವಿಷ್ಯವನ್ನು ರೂಪಿಸುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ನೋಡಲ್ ಆಫಿಸರ್ ರಾಜು ಬಸಣ್ಣವರ್, ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ಡಾ, ಎಂಎಸ್ ಪಾಟೀಲ್, ಡಾ. ಸೂರ್ಯಕುಮಾರ್ ಖನಾಯ್, ರಶ್ಮಿ ಆಡೂರ್, ಡಾ. ಜಾನ್ಹವಿ ಕಾರೇಕರ್, ಒಳಗೊಂಡಂತಡ 300 ಜನ ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.