Breaking News

ಶಾರ್ಜಾಗೆ ವಾಪಸ್ಸಾಗಿರುವುದು ರಾಜಸ್ತಾನ ರಾಯಲ್ಸ್​ಗೆ ನೆರವಾಗಲಿದೆಯೇ?

Spread the love

ಗೆಲ್ಲುವುದನ್ನು ಮರೆತಂತಿರುವ ರಾಜಸ್ತಾನ ರಾಯಲ್ಸ್ ಮತ್ತು ಗೆಲ್ಲುವುದನ್ನು ಅಭ್ಯಾಸ ಮಾಡಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇಂಡಿಯನ್ ಪ್ರಿ ಮೀಯರ್ ಲೀಗ್ 13 ನೇ ಅವೃತಿಯ 23 ನೇ ಪಂದ್ಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿಂ ದು ನಡೆಯಲಿದೆ . ರಾಯಲ್ಸ್​ಗೆ ಇವತ್ತು ಅನುಕೂಲವಾಗಬಹುದಾದಸಂಗತಿಯೆಂದರೆ ಅದು ಶಾರ್ಜಾಗೆ ವಾಪಸ್ಸಾಗಿರುವುದು.

ನಿಮಗೆ ಗೊತ್ತಿರುವ ಹಾಗೆ, ಈ ಮೈದಾನದಲ್ಲಿ ತಾನಾಡಿದ ಮೊದಲೆರಡು ಪಂದ್ಯಗಳನ್ನು ಸ್ಟಿವೆನ್ ಸ್ಮಿತ್​ನ ಅವರ ತಂಡ ಸುಲಭವಾಗಿ ಗೆದ್ದಿತ್ತು. ಆದರೆ. ನಂತರ, ದುಬೈ ಮತ್ತು ಅಬು ಧಾಬಿಯಲ್ಲಿ ಆಡಿದ ಮೂರು ಪಂದ್ಯಗಳನ್ನು ಕೊಲ್ಕತಾ ನೈಟ್​ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳಿಗೆ ಸೋತು ಕಂಗಾಲಾಯಿತು.

  ಅತ್ತ , ದೆಹಲಿ ತಾನಾಡಿರುವ 5 ಪಂದ್ಯ ಗಳಲ್ಲಿ 4 ಗೆದ್ದು ಕೇವಲ ಒಂದರಲ್ಲಿ ಮಾತ್ರ ಸೋತು ಪಾಯಿಂಟ್ಸ್ ಟೇಬಲ್​ನಲ್ಲಿ ಎರಡನೇ ಸ್ಥಾನದಲ್ಲಿದೆ . ಟೀಮಿನ ನಾಯಕ ಶ್ರೇಯಸ್ ಅಯ್ಯರ್ , ವೈಯಕ್ತಿಕವಾಗಿ ರನ್ ಗಳಿಸುವದರೊಂದಿಗೆ ಟೀಮನ್ನು ಸಹ ಅದ್ಭುತವಾಗಿ ಲೀಡ್ ಮಾಡುತ್ತಿದ್ದಾರೆ . ಈ ಆವೃತಿಯಲ್ಲಿ ಇದುವರೆಗೆ 181 ರನ್ ಗಳಿಸಿರುವ ಶ್ರೇಯಸ್ , ಟಾಪ್ ಸ್ಕೋರರ್​ಗಳ ಪೈಕಿ ಆರನೇ ಸ್ಥಾನದಲ್ಲಿದ್ದಾರೆ .

ಈ ಟೂರ್ನಮೆಂಟ್​ನಲ್ಲಿ ಡೆಲ್ಲಿ ಉಳಿದ ಟೀಮುಗಳಿಗಿಂತ ಹೆಚ್ಚು ಸಮತೋಲನ ಕೂಡಿದೆಯೆಂದರೆ ಉತ್ಪ್ರೇಕ್ಷೆಯೆನಿಸದು . ಬ್ಯಾಟಿಂಗ್​ನಲ್ಲಿ ಟಾಪ್ ಆರ್ಡರ್ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ . ಓಪನರ್ ಶಿಖರ್ ಧವನ್ ಅವರಿಂದ ದೊಡ್ದ ಪ್ರಮಾಣದ ಕಾಂಟ್ರಿಬ್ಯೂಷನ್​ಗಳು ಬರುತ್ತಿಲ್ಲವಾದರೂ ಉಪಯುಕ್ತ ಕಾಣಿಕೆಗಳನ್ನು ನೀಡುತ್ತಿದ್ದಾರೆ . ಆದರೆ ಅವ ರ ಜೊತೆಗಾರ ಪೃಥ್ವಿ ಶಾ ಭರ್ಜರಿ ಫಾರ್ಮ್​ನಲ್ಲಿದ್ದು ಈಗಾಗಲೇ ಎರಡು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ರಿಷಭ್ ಪಂತ್ ಫಾರ್ಮ್ ಕಂಡುಕೊಂಡಿರುವುದು ಶ್ರೇಯಸ್ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ. ಶಿಮ್ರೊನ್ ಹೆಟ್ಮೆಯರ್​ರಿಂದ ಬಹಳಷ್ಟು ನಿರೀಕ್ಷಿಸಲಾಗುತ್ತಿದೆ ಅದರೆ, ಕೆರೀಬಿಯನ್ ಆಟಗಾರ ಈ ಸೀಸನ್​ನಲ್ಲಿ ಇನ್ನೂ ಟೇಕಾಫ್ ಆಗಿಲ್ಲ.

  ಆಸ್ಟ್ರೇಲಿಯಾದ ಆಮದು ಮಾರ್ಕಸ್ ಸ್ಟಾಯ್ನಿಸ್ ತನ್ನ ಉಪಯುಕ್ತತೆಯನ್ನು ಪ್ರತಿ ಗೇಮ್​ನಲ್ಲೂ ಸಾಬೀತು ಮಾಡುತ್ತಿದ್ದಾರೆ . ಸ್ಪಿನ್ನರ್ ಅಮಿತ್ ಮಿಶ್ರಾ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲವಾದ್ದರಿಂದ ಇವತ್ತಿನ ಪಂದ್ಯದಲ್ಲಿ ಅಕ್ಸರ್ ಪಟೇಲ್ ಆಡುವುದು ನಿಶ್ಚಿತ . ಟೀಮಿನ ಏಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜೊತೆ ನೇಪಾಳದ ಸಂದೀಪ್ ಲಮಿಚಾನೆ ಅವರನ್ನು ಸಹ ಇವತ್ತು ಆಡಿಸಬಹುದು .

12 ವಿಕೆಟ್​ಗಳೊಂದಿಗೆ ಸದ್ಯಕ್ಕೆ ಪರ್ಪಲ್ ಕ್ಯಾಪ್​ನ ಒಡೆಯರಾಗಿರುವ ಕಗಿಸೊ ರಬಾಡ ಎಂದಿನಂತೆ ಡೆಲ್ಲಿಗೆ ವೇಗದ ಬೌಲಿಂಗ್ ಆಕ್ರಮಣದ ನೇತೃತ್ವವಹಿಲಿದ್ದಾರೆ . ಇಶಾಂತ್ ಶರ್ಮ ಲಯ ಕಳೆದುಕೊಂಡವರಂತೆ ಭಾಸವಾಗುತ್ತಿದೆಯಾದರೂ ಇಂದು ಆಡಬಹುದು .

  ಮತ್ತೊಂದೆಡೆ , ಬ್ಯಾಟಿಂಗ್ ವೈಫಲ್ಯಗಳು ಹಾಗೂ ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ರಾಜಸ್ತಾನಗೆ ಇವತ್ತು ಸೋಲಿನ ಸರಪಳಿಯಿಂದ ಕಳಚಿಕೊಳ್ಳಲೇಬೇಕಿದೆ . ಆರಂಭ ಆಟಗಾರ ಸಂಜು ಸ್ಯಾಮ್ಸನ್ ಶಾರ್ಜಾದಲ್ಲಾಡಿದ ಪಂದ್ಯಗಳಲ್ಲಿ ತೋರಿದ ಅಸಾಮಾನ್ಯ ಸ್ಟ್ರೋಕ್ ಪ್ಲೇಯನ್ನು ಪುನರಾವರ್ತಿಸುವಲ್ಲಿ ವಿಫಲರಾಗಿದ್ದಾ   ರೆ . ಅದೇ ಮಾತು ನಾಯಕ ಸ್ಮಿತ್​ಗೂ ಅನ್ವಯಿಸುತ್ತದೆ . ಶಾರ್ಜಾಗೆ ಹೊರತಾದ ಪಿಚ್​ಗಳಲ್ಲಿ ಕೇವಲ ಜೊಸ್ ಬಟ್ಲರ್ ಮಾತ್ರ ತಮ್ಮ ಖ್ಯಾತಿಗೆ ತಕ್ಕ ಆಟವಾಡುತ್ತಿದ್ದಾರೆ .

ಸತತವಾಗಿ ನೀರಸ ಬ್ಯಾಟಿಂಗ್ ಪ್ರದರ್ಶನಗಳನ್ನು ನೀಡುತ್ತಿರುವ ರಾಬಿನ್ ಉತ್ತಪ್ಪ ಸ್ಥಾನಕ್ಕೆ ಇಂದು ಡೇವಿಡ್ ಮಿಲ್ಲರ್ ಬರಬಹುದು . ಯುವ ಆಟಗಾರ ಯಶಸ್ಚೀ ಜೈಸ್ವಾಲ್ ಇನ್ನೂ ಫೈರ್ ಮಾಡುತ್ತಿಲ್ಲ . ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್ ಭರವಸೆ ಮೂಡಿಸುತ್ತಿದ್ದಾರೆ . ರಾಹುಲ್ ತೆವಾಟಿಯ ಕಿಂಗ್ಸ್ ಎಲೆವೆನ್ ಪಂಜಾಬ್ ತಂಡದ ಶೆಲ್ಡನ್ ಕಾಟ್ರೆಲ್ ಅವರ ಒಂದು ಓವರ್​ನಲ್ಲಿ 5 ಸಿಕ್ಸರ್​ಗಳನ್ನು ಚಚ್ಚಿದ್ದು ಒಂದು ಫ್ಲೂಕ್​ವೆನ್ನುವ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ . ಅವರು ಬೌಲಿಂಗ್ ಆಲ್​ರೌಂಡರ್ ಎನ್ನುವುದು ನಿಜವೇ ; ಆದರೆ , ರಾಯಲ್ಸ್ ಟೀಮು ಅವರಿಂದ ಬ್ಯಾಟಿಂಗ್​ನಲ್ಲೂ ಚಿಕ್ಕಪುಟ್ಟ ಕಾಣಿಕೆಗಳನ್ನು ನಿರೀಕ್ಷಿಸುತ್ತಿದೆ . ಕನ್ನಡಿಗ ಶ್ರೇಯಸ್ ಗೋಪಾಲ್ ಸಹ ಕಳಪೆ ಪ್ರದರ್ಶನಗಳನ್ನು ನೀಡುತ್ತಿದ್ದಾರೆ .

ಜೊಫ್ರಾ ಆರ್ಚರ್ , ಕಾರ್ತಿಕ್ ತ್ಯಾಗಿ ಮತ್ತು ಜಯದೇವ್ ಉನಾಡ್ಕಟ್ ಅವರನ್ನೊಳಗೊಂಡ ರಾಯಲ್ಸ್ ವೇಗದ ದಾಳಿ ಫಾರ್ಮೈಡೆಬಲ್ ಅನಿಸುತ್ತದಾದರೂ , ಒಂದು ಯುನಿಟ್ ಆಗಿ ಕ್ಲಿಕ್ಕಾಗುತ್ತಿಲ್ಲ .

ಸ್ಯಾಮ್ಸನ್ ಮತ್ತು ಸ್ಮಿತ್ ಇಂದು ಸಿಡಿದೆದ್ದರೆ ಮಾತ್ರ ರಾಯಲ್ಸ್ ಟೀಮಿನ ದಿಶೆ ಬದಲಾಗಬಹುದು .


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ