Breaking News

ಜಿಲ್ಲಾ ವಾಲ್ಮೀಕಿ ಸಮಿತಿಯಿಂದ ತುರ್ತು ಸಭೆ

Spread the love

ಯಾದಗಿರಿ:ವಾಟ್ಸಪ್ಪಿನಲ್ಲಿ ಜಗತ್ತಿಗೆ ರಾಮಾಯಣದಂತಹ ಶ್ರೇಷ್ಠ ಗ್ರಂಥವನ್ನು ನೀಡಿ ಶ್ರೀರಾಮಚಂದ್ರನೆಂಬ ಪುರುಶೋತ್ತಮನನ್ನು ಪ್ರಪಂಚಕ್ಕೆ ಪರಿಚಯಿಸಿದ ಶ್ರೇಷ್ಠಕವಿ ಶ್ರೀ ಮಹರ್ಷಿ ವಾಲ್ಮೀಕಿ ಋಷಿಗಳ ಭಾವಚಿತ್ರಕ್ಕೆ ಕೆಲ ಕಿಡಿಗೇಡಿಗಳು ಅವಮಾನ ಮಾಡಿರುವುದರ ಹಿನ್ನೆಲೆಯಲ್ಲಿ ತುರ್ತುಸಭೆಯನ್ನು ಕರೆಯಲಾಗಿತ್ತು.ಯಾದಗಿರಿಯ ಜಿಲ್ಲಾ ವಾಲ್ಮೀಕಿ ಭವನದಲ್ಲಿ ಜಿಲ್ಲಾ ಸಮಿತಿಯಿಂದ ಈ ಸಭೆ ಕರೆಯಲಾಗಿತ್ತು.13/09/2020ರಂದು ಜಿಲ್ಲೆಯ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕರೆಯಲಾದ ಈ ಸಭೆಯಲ್ಲಿ ಜಿಲ್ಲೆಯ ವಾಲ್ಮೀಕಿ ಸಮುದಾಯದ ಗಣ್ಯರು ಭಾಗವಹಿಸಿದ್ದರು.

ಘಟನೆ:ಕಳೆದ 12/03/2020 ರಂದು ಯಾರೋ ದುಷ್ಕರ್ಮಿಗಳು ಮಹರ್ಷಿ ವಾಲ್ಮೀಕಿ ಗುರುಗಳ ಭಾವಚಿತ್ರವನ್ನು ಅಶ್ಲೀಲವಾಗಿ ಚಿತ್ರಿಸಿ ವಾಟ್ಸಪ್ಪಿನಲ್ಲಿ ಹರಿಬಿಟ್ಟಿದ್ದರು.ಇದೇ ರೀತಿ ಚಿತ್ರನಟ ಸುದೀಪರ ಭಾವಚಿತ್ರಗಳನ್ನೂ ಅಶ್ಲೀಲವಾಗಿ ಚಿತ್ರಿಸಲಾಗಿತ್ತು.ಇದೊಂದು ವಾಲ್ಮೀಕ ಜನಾಂಗವನ್ನು ಅವಹೇಳನ ಮಾಡುವ ತಂತ್ರವಾಗಿದ್ದು ಇದರ ವಿರುದ್ಧ ಹೋರಾಟ ರೂಪಿಸುವ ಹಿನ್ನೆಲೆಯಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು.

 

ಈ ಕುರಿತು ಮಾತನಾಡಿದ ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ ಮಗದಂಪೂರ “ಯಾದಗಿರಿ ಪೋಲೀಸ್‌ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿ ಎಫ್‌ಐಆರ್‌ ದಾಖಲಿಸಿಲಾಗಿದೆ.ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು.ಬುಡಕಟ್ಟು ಜನಾಂಗಗಳಿಗೆ ಯಾವುದೇ ವಿಷಯದಲ್ಲಿ ಅವಮಾನ ಮಾಡುವುದು ಜಾತಿ ನಿಂಧನೆಯ ಅಡಿಯಲ್ಲಿ ಬರುತ್ತಿದ್ದು ದುಷ್ಕರ್ಮಿಗಳ ವಿರುದ್ಧ ಜಾತಿ ನಿಂಧನೆ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು”ಎಂದು ಪೋಲಿಸರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಸಭೆಯ ವಿವರಗಳು:ಸಬೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಮತ್ತು ಹೋಬಳಿ ಹಾಗೂ ಗ್ರಾಮ ಘಟಗಳ ವಾಲ್ಮೀಕಿ ಸಮುದಾಯದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಿದರು.ಮತ್ತು ಸಮುದಾಯದ ಚಿಂತಕರು ಲೇಖಕರು ಮಾತನಾಡಿ ಈ ಕುರಿತು ಸಂವಿಧಾನಾತ್ಮಕ ಚಿಂತನೆಗಳನ್ನು ಮತ್ತು ವಿಚಾರಗಳನ್ನು ಮಂಡಿಸಿದರು.ಅಂತಿಮವಾಗಿ 16/09/2020ರಂದು ಜಿಲ್ಲೆಯ ಹಳೆಯ ತಹಸೀಲ ಕಾರ್ಯಾಲಯದಿಂದ ಜಿಲ್ಲಾ ಆಡಳಿತಭವನದವರೆಗೆ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು.ಈ ಮೂಲ ಜಿಲ್ಲೆಯ ಸಮಸ್ತ ವಾಲ್ಮೀಕಿ ಸಮುದಾಯಕ್ಕೆ ಕರೆ ನೀಡಿ ಪ್ರತಿಭಟನೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದುಷ್ಕರ್ಮಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸಲು ಸರ್ಕಾರಕ್ಕೆ ಒತ್ತಾಯಿಸುವ ಕರೆ ಕೊಡಲಾಯಿತು.


Spread the love

About Laxminews 24x7

Check Also

ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ನಿವೃತ್ತ ಶಿಕ್ಷಕನ ಹತ್ಯೆ

Spread the loveಬೆಂಗಳೂರು, (ಡಿಸೆಂಬರ್ 03): ಸುದೀರ್ಘ ಸೇವೆಯ ಬಳಿಕ ನಿವೃತ್ತಿಯಾಗಿದ್ದ ಶಿಕ್ಷಕರೊಬ್ಬರು ಕನಸಿನ ಮನೆ ಕಟ್ಟಲು ಹಣ ಡ್ರಾ ಮಾಡಿಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ