ವಿಜಯಪುರ: ಕೊರೊನಾ ರುದ್ರ ನರ್ತನದ ನಡುವೆ ಎಗ್ಗಿಲ್ಲದೇ ಮಾಂಸ ದಂಧೆ ನಡೆಯುತ್ತಿದೆ. ವಿಜಯಪುರ ನಗರದ ಗಾಂಧಿನಗರದಲ್ಲಿ ಮಾಂಸ ದಂಧೆ ಹಾಡಹಗಲೇ ಪ್ರಾರಂಭವಾಗಿದೆ.

ಮಧ್ಯ ವಯಸ್ಕ ಮಹಿಳೆ ಈ ಮಾಂಸ ದಂಧೆಯನ್ನು ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ. ವೇಶ್ಯಾವಾಟಿಕೆಗೆ ಮುಂಬೈ, ಪುಣೆಯಿಂದ ಯುವತಿಯರನ್ನು ಕರೆಸುತ್ತಿದ್ದಾಳೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಕುಟುಂಬಸ್ಥರು ಹೆಚ್ಚಾಗಿರುವ ಈ ಏರಿಯಾದಲ್ಲಿ ವೇಶ್ಯಾವಾಟಿಕೆ ನಡಸಬೇಡಿ ಅಂತಾ ಸ್ಥಳೀಯರು ಹೇಳಿದ್ರೆ, ನಾನು ದಂಧೆ ಮಾಡೋಳೆ ಏನ್ ಮಾಡ್ಕೋತಿರಿ ಮಾಡ್ಕೋಳಿ ಎಂದು ಧಮ್ಕಿ ಹಾಕಿದ್ದಾಳೆ.

ಮಹಿಳೆಯ ಕರಾಳ ಮಾಂಸದಂಧೆಯ ಚಿತ್ರಣವನ್ನು ಸ್ಥಳೀಯರೇ ಮೊಬೈಲಿನಲ್ಲಿ ಸೆರೆ ಹಿಡಿದು ಬಯಲು ಮಾಡಿದ್ದಾರೆ. ಸ್ಥಳೀಯರು ಮೊಬೈಲಿನಲ್ಲಿ ದೃಶ್ಯ ಸೆರೆಹಿಡಿಯುತ್ತಿರೋದನ್ನ ಗಮನಿಸಿದ ಕೆಲ ಮಾಂಸದಂಧೆಕೋರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆದಷ್ಟು ಬೇಗ ಪೊಲೀಸರು ಈ ಮಾಂಸದಂಧೆಗೆ ಬ್ರೇಕ್ ಹಾಕಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
Laxmi News 24×7