Breaking News

ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ  ಮಧ್ಯೆ ಮತ್ತೆ ಕದನ…?…

Spread the love

ಬೆಳಗಾವಿ:  ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ  ಮಧ್ಯೆ ಮತ್ತೆ ಕದನ ಆರಂಭವಾಯಿತೋ ಎನ್ನಲಾಗುತ್ತಿದೆ.

ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯ ಬಳಿಕ  ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಸಿದ್ದಾರೆ.

ಸಭೆಯಲ್ಲಿ ನೀರು ಶುದ್ಧೀಕರಣ ಘಟಕದ ಬಗ್ಗೆ ಚರ್ಚೆ ನಡೆಯುವಾಗ ಸಚಿವ ಸುರೇಶ ಅಂಗಡಿಮಧ್ಯಪ್ರವೇಶಿಸಿ, ಅದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಚಾರದ ಕಾರ್ಯಕ್ರಮ, ಫೋಟೊ ಹಾಕಿಕೊಂಡ ಕಾರ್ಯಕ್ರಮ ಎಂದರು.

ಇದಕ್ಕೆ ಸಿಟ್ಟಾದ ಶಾಸಕಿ, ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜಕೀಯ ಮಾಡುವುದು ಬೇಡ. ಆರೋಪ-ಪ್ರತ್ಯಾರೋಪ ಬೇಡ. ಪೆಟ್ರೋಲ್ ಪಂಪಲ್ಲಿ, ಸಿಲಿಂಡರುಗಳ ಮೇಲೆ ಫೋಟೊ ಹಾಕಿಕೊಳ್ಳುವವರು ಯಾರು ಎಂದು ಗೊತ್ತಿದೆ ತಿರುಗೇಟು ನೀಡಿದರು.
ಸಭೆ ಬಳಿಕ ಸಚಿವ ರಮೇಶ ಜಾರಕಿಹೊಳಿ ಈ ಕುರಿತು ಪ್ರತಿಕ್ರಿಯಿಸಿ, ಆ ಶಾಸಕರಿಗೆ ಅನುಭವದ ಕೊರತೆ ಇದೆ. ಹೀಗಾಗಿ ಹಾಗೆಲ್ಲ ಮಾತನಾಡುತ್ತಾರೆ.  ‘ಕೊಚ್ಚೆಗೆ ಕಲ್ಲು ಹಾಕಿದರೆ ಏನಾಗುತ್ತದೆ ?’ ಎಂದು ಸಚಿವರು ಶಾಸಕರನ್ನು ಕೊಚ್ಚೆಗೆ ಹೋಲಿಸಿದರು.  ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ ಎಂದು ಹೇಳುವ ಮೂಲಕ ಗ್ರಾಮೀಣ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಬಾವುಟ್ ಹಾರಿಸಲು ಪ್ಲ್ಯಾನ್ ಹಾಕಲಾಗಿದೆ ಎಂಬ ಸುಳಿವು ನೀಡಿದ್ದಾರೆ.


Spread the love

About Laxminews 24x7

Check Also

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಟಭಟನೆ.

Spread the love ಹುಕ್ಕೇರಿ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ