Breaking News

ರೋಗ ನಿರೋಧ ಶಕ್ತಿ ಹೆಚ್ಚಿಸುವಂತಹ ವಿಶೇಷವಾದಂತಹ ಅಕ್ಕಿಯೊಂದು ತಯಾರಾಗುತ್ತಿದೆ………

Spread the love

ತುಮಕೂರು: ಇಡೀ ದೇಶವೇ ಮಹಾಮಾರಿ ಕೊರೊನಾ ವೈರಸ್‍ನಿಂದ ತತ್ತರಗೊಂಡಿದೆ. ಇದುವರೆಗೂ ಕೊರೊನಾ ವೈರಸ್‍ಗೆ ಸೂಕ್ತವಾದ ಔಷಧಿ ಸಿಗಲಿಲ್ಲ. ಸದ್ಯಕ್ಕೆ ತುಮಕೂರು ಜಿಲ್ಲೆಯ ರೈಸ್ ಮಿಲ್ ಒಂದರಲ್ಲಿ ವಿಶೇಷವಾದಂತಹ ಅಕ್ಕಿಯೊಂದು ತಯಾರಾಗುತ್ತಿದೆ. ಈ ಅಕ್ಕಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತಿದೆ.

ಆಯುರ್ವೇದಿಕ್ ರೈಸ್ ಎಂದು ಇದರ ಹೆಸರು. ನೈಸರ್ಗಿಕವಾದಂತಹ ವಸ್ತುಗಳನ್ನು ಈ ಅಕ್ಕಿಯಲ್ಲಿ ಬೆರೆಸಿ ತಯಾರು ಮಾಡಲಾಗುತ್ತದೆ. ಈ ರೈಸ್ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲಿದೆ ಎನ್ನಲಾಗಿದೆ. ಪ್ರಮುಖವಾಗಿ ಈ ಅಕ್ಕಿ ಸೇವಿಸಿದರೆ ಕ್ಯಾನ್ಸರ್ ಗುಣಮುಳವಾಗುವುದರ ಜೊತೆಗೆ ಕೊರೊನಾ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ ಎಂದು ರೈಸ್ ಮಿಲ್ ಮಾಲಿಕ ಶ್ರೀಧರ್ ಬಾಬು ಅಭಿಪ್ರಾಯಪಟ್ಟಿದ್ದಾರೆ.

ಆಯುರ್ವೇದಿಕ್ ರೈಸ್ ಮಾರುಕಟ್ಟೆಗೆ ಬಿಡುಗಡೆಯಾದರೆ ಉಳಿದೆಲ್ಲಾ ರೈಸ್‍ಗಿಂತ ಕೇವಲ 50 ಪೈಸೆ ಹೆಚ್ಚು ಬೆಲೆ ಕೊಡಬೇಕಾಗುತ್ತದೆ. ಕೇವಲ ಕ್ಯಾನ್ಸರ್‍ಗೆ ಅಷ್ಟೇ ಅಲ್ಲಾ ಸಕ್ಕರೆ ಖಾಯಿಲೆಗೂ ಮದ್ದಾಗಿದೆ. ಪೈಬರ್ ಅಂಶ ಸೇರಿರುವ ರೈಸ್ ಈ ಮಿಲ್‍ನಲ್ಲಿ ರೆಡೆಯಾಗಿ ಕಳೆದ ಮೂರು ವರ್ಷದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ ಎಂದು ಶ್ರೀಧರ್ ಬಾಬು ಹೇಳಿದರು.

ಮಲೇಷಿಯಾ, ಆಸ್ಟ್ರೇಲಿಯಾ, ಸರ್ಜಾ ಸರ್ಕಾರಗಳು ಸಪ್ತಗಿರಿ ಮಿಲ್‍ನ ಔಷಧಿ ಗುಣವುಳ್ಳ ರೈಸ್‍ಗಳಿಗೆ ಬೇಡಿಕೆ ಇಟ್ಟಿವೆ. ಜೊತೆಗೆ ವಿದೇಶದಲ್ಲೂ ಫ್ಯಾಕ್ಟರಿ ಮಾಡಲು ಆಹ್ವಾನಿಸಿವೆ. ಈ ನಡುವೆ ಸಚಿವ ಗೋಪಾಲಯ್ಯ ಸಪ್ತಗಿರಿ ಫ್ಯಾಕ್ಟರಿಗೆ ಭೇಟಿ ಕೊಟ್ಟು ವಿಶೇಷತೆಗಳನ್ನು ತಿಳಿದುಕೊಂಡಿದ್ದಾರೆ.

ಜಪಾನ್ ಟೆಕ್ನಾಲಜಿ ಉಳ್ಳಂತಹ ವಿಶ್ವದ ಮೊದಲ ವಿಟಿಎ20 ಸಟಾಕಿ ರೈಸ್ ಪ್ಲಾಂಟ್ ಇದಾಗಿದ್ದು, ಹಲವು ವಿಶೇಷ ರೈಸ್ ತಯಾರಿಸಬಲ್ಲ ಸಾಮಥ್ರ್ಯ ಇದೆ. ಹಾಗಾಗಿ ರೋಗ ನಿರೋಧ ಶಕ್ತಿ ಹೆಚ್ಚಿಸುವಂತಹ ರೈಸ್ ರೆಡಿ ಮಾಡಿ ಕೊರೊನಾದಂತಹ ರೋಗ ನಿಯಂತ್ರಣಕ್ಕೆ ಸಪ್ತಗಿರಿ ರೈಸ್ ಮಿಲ್ ಟಿಂ ಅಣಿಯಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ರೈಸ್ ತಯಾರು ಮಾಡಿ ಮೈಸೂರಿನ ಸಿಎಫ್‍ಟಿಆರ್‍ಐ ಲ್ಯಾಬ್‍ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಲ್ಯಾಬ್‍ನಿಂದ ಅನುಮೋದನೆಗೊಂಡರೆ ಈ ರೈಸ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

 


Spread the love

About Laxminews 24x7

Check Also

ರಾಮತೀರ್ಥ ನಗರದಲ್ಲಿ ಸುರೇಶ ಯಾದವ ಫೌಂಡೇಶನ್ ದಿಂದ ಹೋಳಿ ಆಚರಣೆ

Spread the love ರಾಮತೀರ್ಥ ನಗರದಲ್ಲಿ ಸುರೇಶ ಯಾದವ ಫೌಂಡೇಶನ್ ದಿಂದ ಹೋಳಿ ಆಚರಣೆ ಬೆಳಗಾವಿಯ ರಾಮತೀರ್ಥ ನಗರದ ಸುರೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ