ಧಾರವಾಡ: ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ ಎಂದು ಇಗಾಗಲೇ ಮನೆಗೆ ಕಳಿಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಪಕ್ಷದಿಂದ ರಾಜ್ಯದ ಜನರಿಗೆ ಭವಿಷ್ಯ ಇಲ್ಲ ಎಂದು ಧಾರವಾಡದಲ್ಲಿ ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಜಗದೀಶ್ ಶೆಟ್ಟರ್, ಕಾಂಗ್ರೆಸ್‍ಗೆ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಭವಿಷ್ಯ ಇಲ್ಲ. ರಾಹುಲ್ ಗಾಂಧಿ ಅವರಂಥ ಫೇಸ್ ಇಟ್ಟುಕೊಂಡು ಹೊರಟಿದ್ದಾರಲ್ಲ, ಅದಕ್ಕೆ ಅವರಿಗೆ ಭವಿಷ್ಯ ಇಲ್ಲ. ಡಿಕೆಶಿಯವರನ್ನು ಕೆಪಿಸಿಸಿ ಅಧ್ಯಕ್ಷ ಮಾಡಿದ್ದಾರೆ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ, ಅದಕ್ಕೆ ನಾನು ಏನೂ ಹೇಳಲ್ಲ ಎಂದರು.

ಇದೇ ವೇಳೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ ವಿಚಾರವಾಗಿ ಮಾತನಾಡಿ, ಈಗಾಗಲೇ ಕೃಷಿ ಸಚಿವರು ಈ ಬಗ್ಗೆ ಸಭೆ ಮಾಡಿದ್ದಾರೆ. ಧಾರವಾಡ ಜಿಲ್ಲೆ ಮಾತ್ರವಲ್ಲ ಈ ಭಾಗದ 3-4 ಜಿಲ್ಲೆಗಳಲ್ಲಿ ಎಫೆಕ್ಟ್ ಆಗಿದೆ. ಕಳಪೆ ಬಿತ್ತನೆ ಬೀಜ ವಿಷಯವಾಗಿ ಕ್ಯಾಬಿನೆಟ್ ಸಭೆಯಲ್ಲಿ ಸಮಾಲೋಚನೆ ಮಾಡುತ್ತೇವೆ ಎಂದು ಶಟ್ಟರ್ ಹೇಳಿದರು. ಬೀಜ ನಾಟದ ರೈತರಿಗೆ ಪರಿಹಾರ ಕೊಡಬೇಕಿದೆ. ಬೀಜದ ಕಂಪನಿಯವರೇ ಪರಿಹಾರ ಕೊಡಬೇಕಾಗುತ್ತದೆ. ಈ ಕುರಿತು ಕೃಷಿ ಸಚಿವರು ಮತ್ತು ಕೃಷಿ ಅಧಿಕಾರಿಗಳ ಜೊತೆ ಚರ್ಚಿಸುತ್ತೇವೆ. ನಷ್ಟಕ್ಕೊಳಗಾದ ರೈತರಿಗೆ ಯಾವ ರೀತಿ ಪರಿಹಾರ ಕೊಡಬೇಕು ಎಂಬ ನಿರ್ಧಾರ ಮಾಡುತ್ತೇವೆ ಎಂದರು.
Laxmi News 24×7