ಚಿಕ್ಕೋಡಿ: ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ ಜಾರಕಿಹೊಳಿ ಅವರು ಕೊರೋನಾ ಸೋಂಕು ಕುರಿತು ಜಾಗೃತಿ ಬಗ್ಗೆ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಯಾವ ರೀತಿ ನಾವು ಶ್ರಮಿಸಬೇಕು ಪಕ್ಷದ ಕಾರ್ಯಕರ್ತರು ಹೇಗೆಲ್ಲ ಸ್ಪಂದನೆ ನೀಡಬೇಕು ಎಂಬುದರ ಕುರಿತು ಇಲ್ಲಿನ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದರು.
ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತಾರತಮ್ಯ ಸಲ್ಲದು ಎಂದು ಹರಿಹಾಯ್ದರು.
ಕೇಂದ್ರ ಸರ್ಕಾರ ನೇರವಾಗಿ ವಿವಿಧ ಯೊಜನೆಗಳ ಫಲಾನುಭವಿಗಳಿಗೆ ಹಣ ನೀಡುವ ಬದಲು ರಾಜ್ಯ ಸರ್ಕಾರ ಮೂಲಕ ನೀಡಿದ್ದರೆ ಇನ್ನೂ ಪರಿಣಾಮಕಾರಿಯಾಗಿ ನೀಡಬಹುದಿತ್ತು. ಹಣ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಪರಿಹಾರ ಹಣ ನೀಡಲೂ ಕೂಡಾ ಲಾಕ್ ಡೌನ ಆಗಿದೆ ಎಂದು ಲೇವಡಿ ಮಾಡಿದ ಅವರು ಈಗ ಹಣ ಕೊಡದೇ ಹೊದರೆ ಮತ್ತೆ ಯಾವಾಗ ಕೊಡುತ್ತಾರೆ ಎಂದು ನಮಗೆ ತೀಳಿಯುತ್ತಿಲ್ಲ ಎಂದರು.
ಕೇಂದ್ರದಲ್ಲಿ ದೆಣಿಗೆ ರೂಪದಲ್ಲಿ ಸಂಗ್ರಹವಾದ 10 ಸಾವಿರ ಕೋಟಿಯಲ್ಲಿ ರಾಜ್ಯಕ್ಕೆ 500 ಕೋಟಿ ನೀಡಿದ್ದರೆ ಸದ್ಯ ಸಾಕಾಗಬಹುದು ಎಂದರು.
ಬೆಳೆ ಹಾನಿ, ಮಾಸ್ಕ್ , ಆಹಾರ ಕಿಟ್ ಹೀಗೆ ಇತರೆ ಪರಿಹಾರಗಳನ್ನು ನೀಡಿ ಸ್ಥಳಿಯ ಸಮಸ್ಯೆಗಳನ್ನು ಬಗೆಹರಿಸ ಬಹುದಾಗಿತ್ತು. ವಿಳಂಬ ಮಾಡುವುದು ಸರಿಯಲ್ಲ ಎಂದರು,
ರೈತರಿಗೆ ಹಾನಿಯಾದ ನಷ್ಟ ವನ್ನು ಸರ್ಕಾರ ನೀಡಬೇಕು . ರೈತರ ಬೆಳೆ ಹಾನಿಗೆ ರೈತರು ಖರ್ಚು ಮಾಡಿದ ಕನಿಷ್ಠ ಹಣವನ್ನಾದರು ಪರಿಹಾರವನ್ನಾಗಿ ನೀಡಲು ಒತ್ತಾಯಿಸುತ್ತೆವೆಂದರು ಸರ್ಕಾರ ಇದರಲ್ಲಿ ತಾರತಮ್ಯ ಮಾಡಬಾರದು ಎಂದರು.
ಲಾಕ್ ಡೌನ್ ನಿಂದ ರೈತರಿಗೆ, ಸಾರ್ವಜನಿಕರಿಗೆ ಆದ ಸಮಸ್ಯೆ ಅಭಿಪ್ರಾಯ ಸಂಗ್ರಹಿಸಿ ಕೆಪಿಸಿಸಿ ಅಧ್ಯಕ್ಷರು ಸರ್ಕಾರಕ್ಕೆ ಸಲಹೆ ಗಳನ್ನು ನೀಡುತ್ತಾರೆ ಅದೇ ರೀತಿ
ಕೈ ಕಾರ್ಯಕರ್ತರು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಸಹಕಾರ ನಿಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಆದಷ್ಟು ಮಟ್ಟಿಗೆ ಶಾಸಕರು ರೈತರ ಬೆಳೆದ ಬೆಳೆಗಳನ್ನು ಖರೀದಿ ಮಾಡಿ ಹಳ್ಳಿಯ ಜನರಿಗೆ ಕೊಡುವ ವ್ಯವಸ್ಥೆ ಮಾಡಬೇಕು. ರೈತರ ಕಷ್ಟಕ್ಕೆ ಸ್ಪಂದಿಸಿದಂತಾಗುತ್ತದೆ ಹಾಗೆ ಹಳ್ಳಿಯಜನರಿಗೆ ಸಹಾಯವಾಗುತ್ತದೆ ಎಂದರು.
ನಮ್ಮ ವ್ಯಾಪ್ತಿಯಲ್ಲಿ ನಾವು ಹೀಗೆ ಮಾಡುತ್ತಿದ್ದೆವೆ ಎಂದು ಸ್ಪಷ್ಟವಾಗಿ ತಿಳಿಸಿದರು ಇಂತಹ ಸಂದರ್ಭದಲ್ಲಿ ಯಾರು ರಾಜಕೀಯ ಮಾಡಬಾರದು ಎಲ್ಲರೂ ಕೂಡಿ ಶ್ರಮಿಸಬೇಕು ಎಂದರು.
ಇನ್ನೂ ಚಿಕ್ಕೋಡಿ ಚಿಂಚಲಿ,ರಾಯಬಾಗ ಪಟ್ಟಣಗಳಲ್ಲಿ ಆಹಾರ ಕೀಟ್ ವಿತರಣೆ ಮಾಡಿ ಜನರಿಗೆ ಕೊರೊನ್ ವೈರಸ್ ಬಗ್ಗೆ ಜಾಗ್ರತೆ ಮೂಡಿಸಿದರು
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಗಣೇಶ ಹುಕ್ಕೇರಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಮಹಾವೀರ ಮೊಹಿತೆ ಸೇರಿದಂತೆ ಕೈ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.